ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಲ್ಲುಕೋರೆ ಹೊಂಡಕ್ಕೆ ಬಿದ್ದು ಯುವಕ ಮೃತಪಟ್ಟ ಘಟನೆ ಗುರುವಾರ ಸಾಹೇಬ್ರಕಟ್ಟೆ ಸಮೀಪ ಗರಿಕೇಮಠದಲ್ಲಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿ ತಮಿಳುನಾಡು ಮೂಲದ ಅರುಣ್ (30) ಎಂದು ಗುರುತಿಸಲಾಗಿದೆ
ಅವರು ಯಡ್ತಾಡಿ ಗ್ರಾಮದ ಗರಿಕೆಮಠದಲ್ಲಿ ಬಶಿರ್ ಮತ್ತು ಶರತ್ ಶೆಟ್ಟಿ ಅವರು ನಡೆಸುವ ಶಿಲೆಗಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಸಂಬಂಧಿಯೋರ್ವರನ್ನು ನೋಡಲು ಬಂದಿದ್ದರು. ಆಗ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿ ಮೃತಪಟ್ಟಿರುತ್ತಾರೆ. ಕಲ್ಲುಕೋರೆ ತುಂಬಾ ಆಳವಿದ್ದ ಕಾರಣ ಶವವನ್ನು ಈಶ್ವರ ಮಲೈ ಅವರನ್ನು ಕರೆಸಲಾಯಿತು. ಅವರು ಶವವನ್ನು ಮೇಲೆತ್ತಿದರು.
ಬ್ರಹ್ಮಾವರ ಪೊಲೀಸ್ ಠಾಣೆ ಉಪನಿರೀಕ್ಷಕ ಅಶೋಕ್ ಮಲಬಾಗಿಲು ಹಾಗೂ ತಂಡದವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಮೃತರ ಸಂಬಂಧಿ ತಂಗವೇಲು ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.










