ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೈಲಿನ ಬಾಗಿಲ ಬಳಿ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿರುವಾಗ ಆಕಸ್ಮಿಕವಾಗಿ ಆಯ ತಪ್ಪಿ ಬಿದ್ದು ಯುವಕ ಮೃತಪಟ್ಟ ಘಟನೆ ತಾಲೂಕಿನ ಕಿರಿಮಂಜೇಶ್ವರದಲ್ಲಿ ಸಂಭವಿಸಿದೆ.
ಕೊಲ್ಲಮ್ ಜಿಲ್ಲೆಯ ನಿವಾಸಿ ಸೇಪು ರಹೇಮಾನ್ (33) ಮೃತರು.
ಅವರು ಸಂಬಂಧಿಕರೊಂದಿಗೆ ಗೋವಾ ಮಡಗಾಂವ್‌ನಿಂದ ತ್ರಿವೆಂಡ್ರಮ್ ನಾರ್ತ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದು, ಮೊಬೈಲ್ ನಲ್ಲಿ ಮಾತಾಡಿಕೊಂಡು ಸೀಟಿನಿಂದ ಹೊರಗಡೆ ಬಂದು ಬಾಗಿಲ ಸಮೀಪ ಮಾತಾಡಿಕೊಂಡಿದ್ದಾಗ ಬೈಂದೂರು ಕಿರಿಮಂಜೇಶ್ವರದ ಹೈಸ್ಕೂಲ್ ಹತ್ತಿರ ಚಲಿಸುತ್ತಿದ್ದ ರೈಲಿನಿಂದ ಆಯ ತಪ್ಪಿ ಕೆಳಗೆ ಟ್ರಾಕ್ ಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










