ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಖಿಲ ಕರ್ನಾಟಕ ಸೌಂದರ್ಯ ತಜ್ಞರ ಸಂಘ ಉಡುಪಿ ಕುಂದಾಪುರ ವಲಯದ ಮಹಿಳಾ ದಿನಾಚರಣೆಯನ್ನು ಸಾಲಿಗ್ರಾಮದ ಹೊಸ ಬದುಕು ಆಶ್ರಮದಲ್ಲಿ ಅಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ವಲಯ ಅಧ್ಯಕ್ಷ ರೇಖಾ.ಆರ್. ಆಚಾರ್ಯ ವಹಿಸಿದ್ದರು. ಆಶ್ರಮದ ನಿವಾಸಿಗಳಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು.

ಮುಖ್ಯ ಅಭ್ಯಾಗತರಾಗಿ ಜಿಲ್ಲಾ ಅಧ್ಯಕ್ಷೆ ಸುನಿತಾ ಗಣೇಶ್, ಕಾರ್ಯದರ್ಶಿ ಸಂಧ್ಯಾ ದಿನೇಶ್, ಕೋಶಾಧಿಕಾರಿ ಗೀತಾ ದಯಾನಂದ್, ಸ್ಥಾಪಕ ಕಾರ್ಯದರ್ಶಿ ವೇದಾ ಸುವರ್ಣ, ಜಿಲ್ಲಾ ಕೋರ್ ಕಮಿಟಿ ಸದಸ್ಯರಾದ ದಾಕ್ಷಾಯಿಣಿ ಆಶ್ರಮದ ವ್ಯವಸ್ಥಾಪಕಿ ರಾಜಶ್ರೀ ಹಾಗೂ ಕುಂದಾಪುರ ವಲಯ ಕೋಶಾಧಿಕಾರಿ ಮಾಲತಿ, ಪಿ.ಆರ್. ಓ ಸುನೀತಾ ಶೆಟ್ಟಿ ಹಾಗೂ ಜಿಲ್ಲಾ ಮಾಜಿ ಅಧ್ಯಕ್ಷೆ ಕಿಶ್ವರ್ ಜಹಾನ್, ಬೈಂದೂರು ವಲಯ ಅಧ್ಯಕ್ಷೆ ಭಾರತಿ ಶೆಟ್ಟಿ ಕಾರ್ಯದರ್ಶಿ ಶಾಂತ,ಸಂಘದ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಲಯ ಕಾರ್ಯದರ್ಶಿ ಪ್ರಮಿಳ ಪುತ್ರನ್ ನಿರೂಪಿಸಿದರು. ಆಶ್ರಮದ ಮುಖ್ಯಸ್ಥ ವಿನಯಚಂದ್ರ ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.










