ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಉಡುಪಿ ಜಿಲ್ಲೆಯಲ್ಲಿ ನಮೂನೆ 50,53 ಹಾಗೂ 57 ರಡಿ ಸಲ್ಲಿಸಿರುವ ಅರ್ಜಿಗಳು ಉಪ ವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಿರುವ 88 ಬಗರ್ ಹುಕುಂ ಅರ್ಜಿಗಳು ತಂತ್ರಾoಶದಲ್ಲಿ ಅಳವಡಿಕೆ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಅವರು ಪ್ರಶ್ನೆ ಕೇಳಿದ್ದಾರೆ.
ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕಂದಾಯ ಸಚಿವರಾದ ಕೃಷ್ಣ ಬೈರೇ ಗೌಡ ಅವರು ಉಡುಪಿ ಜಿಲ್ಲೆಯಲ್ಲಿ ನಮೂನೆ 50,53,ಹಾಗೂ 57 ರಡಿ ಸಲ್ಲಿಸಿರುವ ಅರ್ಜಿಗಳು ಉಪ ವಿಭಾಗಾಧಿಕಾರಿಗಳು / ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಿ ಬಗರ್ ಹುಕುಂ ತಂತ್ರಾoಶದಲ್ಲಿ ಅಳವಡಿಕೆ ಆಗದೇ ಇದ್ದ 88 ಪ್ರಕರಣಗಳಲ್ಲಿ 10 ಪ್ರಕರಣಗಳು ತಂತ್ರಾoಶದಲ್ಲಿ ಅಳವಡಿಸಲು ಬಾಕಿ ಇರುತ್ತದೆ ಎಂದು ಉತ್ತರಿಸಿದ್ದಾರೆ.
ತಂತ್ರಾoಶದಲ್ಲಿ ಸೇರಿಸಲು ಬಾಕಿ ಇರುವ 471 ಅರ್ಹ ಅರ್ಜಿಗಳನ್ನು ಸೇರಿಸಲು ಒತ್ತಾಯ:
ನಮೂನೆ 50,53 ಹಾಗೂ 57 ರಲ್ಲಿ ಅರ್ಹ ಅಕ್ರಮ ಸಕ್ರಮ ಅರ್ಜಿಗಳು ಇದ್ದರೂ ಅಂತಹ ಅರ್ಜಿಗಳನ್ನು ತಂತ್ರಾoಶದಲ್ಲಿ ಸೇರಿಸಲು ಅವಕಾಶ ಕಲ್ಪಿಸಲು ಶಾಸಕರು ಕೇಳಿರುವ ಪೂರಕ ಪ್ರಶ್ನೆಗೆ ನಮೂನೆ 50,53 ಮತ್ತು 57 ರಡಿಯಲ್ಲಿ ಬಗರ್ ಹುಕುಂ ತಂತ್ರಾoಶದಲ್ಲಿ ಅಳವಡಿಸದೇ ಬಿಟ್ಟು ಹೋಗಿರುವ 471 ಅರ್ಜಿಗಳು ಬಾಕಿ ಇರುತ್ತದೆ. ತಂತ್ರಾoಶದಲ್ಲಿ ಗಣಕೀಕರಣಗೊಳಿಸಲು ಬಾಕಿ ಇರುವ ಅರ್ಜಿಗಳ ನೈಜತೆಯ ಕುರಿತು ಖುದ್ದಾಗಿ ಪರಿಶೀಲನೆ ನಡೆಸಿ ದೃಡೀಕರಿಸಿ ಸೂಕ್ತ ಕಾರಣಗಳನ್ನು ನಮೂದಿಸಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರರಿಗೆ ನಿರ್ದೇಶನವನ್ನು ನೀಡಲಾಗಿದೆ. ಈ ಎಲ್ಲಾ ಅರ್ಜಿಗಳ ನೈಜತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.










