ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಕೋಟ ಶಿವರಾಮ ಕಾರಂತರ ಶಿಷ್ಯೆ, ದಿ. ಮಾಲಿನಿ ಮಲ್ಯರ ಸಂಸ್ಮರಣಾ ಕಾರ್ಯಕ್ರಮವು ಡಾ. ಶಿವರಾಮ ಕಾರಂತ ಸ್ಟಡಿ ಮತ್ತು ಸಂಶೋಧನಾ ಸೆಂಟರ್ “ಮಾನಸ” ಸಾಲಿಗ್ರಾಮದಲ್ಲಿ ಗಣ್ಯರ ಸಮ್ಮುಖದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಗೆಳೆಯರ ಬಳಗದ ಕೆ. ತಾರಾನಾಥ ಹೊಳ್ಳ, ಪುಷ್ಪನಮನಗೈದು, ಡಾ. ಕಾರಂತರ ನೆನಪು ಕಾಡಿನ ಹಸಿರು ಇರುವವರೆಗೂ ಸಮುದ್ರದ ಶಬ್ದ ನಿಲ್ಲುವವರೆಗೂ, ಪಣ ತೊಟ್ಟು ಕಾರ್ಯಕ್ರಮ ಯಶಸ್ವೀಯಾಗಿನಿರ್ವಹಿಸಿ, ಸರ್ವರ ಪ್ರಶಂಸೆಗೆ ಪಾತ್ರರಾದ ಧೀಮಂತ ಮಹಿಳೆ ಮಾಲಿನಿ ಮಲ್ಯರಾಗಿದ್ದಾರೆ ಎಂದರು.
ಸಭೆಯಲ್ಲಿ ಗಣ್ಯರು ಮಲ್ಯರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಬಿ.ಎಂ ಗುರುರಾಜ ರಾವ್, ಕಾರ್ಯದರ್ಶಿ ನಾರಾಯಣ ಆಚಾರ್ಯ ಟ್ರಸ್ಟಿನ ವಿಶ್ವಸ್ಥರಾದ ನಾರಾಯಣ ಶೆಣೈ, ಸಂದೀಪ್ ಶೆಟ್ಟಿ, ಕೆ. ಪಂಜು ಪೂಜಾರಿ, ಉದ್ಯಮಿ ಮಾದವ ಪೈ, ಪ್ರಸನ್ನ ಉರಾಳ ಹಾಗೂ ಸಂಗೀತಾ, ರಂಜನಿ ಉಪಸ್ಥಿತರಿದ್ದರು.










