ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಹಿಂದೂ ರುದ್ರಭೂಮಿಗೆ ತಮ್ಮಶಾಸಕ ನಿಧಿಯಿಂದ ಒಂದು ಹಂತದಲ್ಲಿ ಕಾರ್ಯನಿರ್ವಹಣೆಗೆ ಯೋಗ್ಯ ವಾತಾವರಣ ಕಲ್ಪಿಸಿದರೆ ಇನ್ನುಳಿದ ಅಭಿವೃದ್ಧಿಯನ್ನು ದಾನಿಗಳ ಸಹಕಾರ ಪಡೆದು ನಿರ್ಮಿಸಿಕೊಳ್ಳಬಹುದು ಎಂದು ಕುಂದಾಪುರ ವಿಧಾನಸಭಾ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು.
ಅವರು ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೋಡಿ ತಲೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಮ್ಮ ಶಾಸಕರ ಅನುದಾನದಡಿ ಹಿಂದೂ ರುದ್ರಭೂಮಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಗ್ರಾಮದ ಕೆಲ ಪ್ರದೇಶಕ್ಕೆ ಅನುಗುಣವಾಗಿ ಹಿಂದೂ ರುದ್ರಭೂಮಿ ಅಗತ್ಯ ಈ ದಿಸೆಯಲ್ಲಿ ಕೋಡಿ ತಲೆ ಗ್ರಾಮದ ಬಹುಕಾಲದ ಬೇಡಿಕೆಯ ರುದ್ರಭೂಮಿ ಕನಸು ಸಾಕಾರಗೊಂಡಂತ್ತಾಗಿದೆ ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶವಸಂಸ್ಕಾರದ ಸಿಲಿಕಾನ್ ಛೇಂಬರ್ ಅನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಮೇಶ್ ಪಿ.ಕೆ. ಉದ್ಘಾಟಿಸಿದರು.
ಅನುದಾನ ಒದಗಿಸಿದ ಶಾಸಕರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕೋಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಮಾಜಿ ಅಧ್ಯಕ್ಷೆ ಗೀತಾ ಖಾರ್ವಿ, ಮಾಜಿ ಸದಸ್ಯರಾದ ಕೃಷ್ಣ ಪೂಜಾರಿ, ಮಾಜಿ ಉಪಾಧ್ಯಕ್ಷ ಅಣ್ಣಪ್ಪ ಕುಂದರ್, ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷ ಚಂದ್ರ ಖಾರ್ವಿ, ಸ್ಥಳದಾನಿ ಮಂಜುನಾಥ್ ಖಾರ್ವಿ, ಸ್ಥಳೀಯರಾದ ದಾಸ ಖಾರ್ವಿ, ಸುದಿನ, ವಿಶ್ವನಾಥ ಖಾರ್ವಿ, ಗುತ್ತಿಗೆದಾರ ಉದಯ್ ಕಾಂಚನ್, ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಿಜೆಪಿ ಸ್ಥಳೀಯ ಮುಖಂಡ ಸುಧೀರ್ ಕುಮಾರ್ ನಿರೂಪಿಸಿ, ವಂದಿಸಿದರು.
















