ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮುಂಗಾರು ಮಳೆ ಸಿನೆಮಾ ಖ್ಯಾತಿಯ ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್ ಸಾಲಿಗ್ರಾಮ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನದ ದೇವರ ದರ್ಶನ ಪಡೆದರು.

ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ ಕಾರಂತರು ಗಣೇಶರಿಗೆ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಿ. ಚಂದ್ರಶೇಖರ ಉಪಾಧ್ಯ ಹಾಗೂ ಆಡಳಿತ ಮಂಡಳಿಯ ಸದಸ್ಯ ಕೆ. ತಾರಾನಾಥ ಹೊಳ್ಳ, ಕೂ ಮ ಜ ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷ ಪಿ. ಚಂದ್ರಶೇಖರ ಹೊಳ್ಳ,ಬ್ರಾಹ್ಮಣ ಸಭಾ ಸಾಲಿಗ್ರಾಮದ ಅಧ್ಯಕ್ಷ ಪಟ್ಚಾಭಿ ರಾಮಚಂದ್ರ ಸೋಮಯಾಜಿ, ಕಾರ್ಯದರ್ಶಿ ರಾಜರಾಮ ಐತಾಳ ಉಪಸ್ಥಿತರಿದ್ದರು.











