ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಮತ್ತು ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಕಟಪಾಡಿ ಪಡುಕುತ್ಯಾರು, ಆನೆಗುಂದಿ ಗುರು ಸೇವಾ ಪರಿಷತ್ ಕೋಟ ಮಂಡಲದ ಪದ ಪ್ರದಾನ ಸಮಾರಂಭ ಇತ್ತೀಚಿಗೆ ಚೇಂಪಿ ವಿಶ್ವಕರ್ಮ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಪ್ರವೀಣ್ ಆಚಾರ್ಯ ಗುರು ಜ್ಞಾನದ ದೀಪ, ಗುರುಗಳಿಗೆ ಗೌರವ ಸಲ್ಲಿಸುವುದು, ನಮ್ಮ ಸಂಸ್ಕೃತಿ, ನಮ್ಮ ಕರ್ತವ್ಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ಆನೆಗುಂದಿ ಗುರು ಸೇವಾ ಪರಿಷತ್ ಕೋಟ ಮಂಡಲದ ಅಧ್ಯಕ್ಷ ಎಸ್. ಬಿ. ರಾಘವೇಂದ್ರ ಆಚಾರ್ಯ ದೇವಿ ಪಾತ್ರಿಗಳು ಸಾಲಿಗ್ರಾಮ ವಹಿಸಿದ್ದರು.
ಪದ ಪ್ರದಾನವನ್ನು ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಸುಬ್ರಾಯ ಆಚಾರ್ಯ ನೆರವೇರಿಸಿಕೊಟ್ಟರು. ಶುಭಾಶಂಶನೆಯನ್ನು ವೇದಮೂರ್ತಿ ಲಕ್ಷ್ಮೀಕಾಂತ ಶರ್ಮ ಚೇಂಪಿ ಗೈದರು.
ನಿತ್ಯ ಜೀವನದಲ್ಲಿ ವಿಜ್ಞಾನ ಎನ್ನುವ ವಿಷಯದ ಕುರಿತು ಮಾಹಿತಿಯನ್ನು ರೇಖಿ ತಜ್ಞ ಕಾರ್ಕಡ ನಾರಾಯಣ ಆಚಾರ್ಯ ನೀಡಿದರು.
ಇದೇ ವೇಳೆ ನೂತನ ಅಧ್ಯಕ್ಷರಾಗಿ ಕೆ. ರಮೇಶ ಆಚಾರ್ ಚೇಂಪಿ ಮತ್ತು ಅವರ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಅಧಿಕಾರ ವಹಿಸಿಕೊಂಡರು.
ಮಾತೃ ಸಂಸ್ಥೆ ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾ ಜೋದ್ಧಾರಕ ಸಂಘ ಸಾಲಿಗ್ರಾಮಕ್ಕೆ ಅಡುಗೆ ಪಾತ್ರೆಗಳನ್ನು ವಿತರಣೆ,ಕಟಪಾಡಿ ಗುರುಮಠದ ಮೇಲ್ ಚಾವಣಿ ನವೀಕರಣದ ಕಾರ್ಯಕ್ಕೆ ಚೆಕ್ ಮೂಲಕ ಹಣವನ್ನು ಹಸ್ತಾಂತರ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ, ಕಟಪಾಡಿ ಪಡುಕುತ್ಯಾರು ಇದರ ಅಧ್ಯಕ್ಷ ಗಣೇಶ ಆಚಾರ್ಯ, ಕೆಮ್ಮಣ್ಣು, ಕೋಟ ಶ್ರೀ ವಿರಾಡ್ವಿ ಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಗೌರವಾಧ್ಯಕ್ಷ ಜನಾರ್ಧನ ಆಚಾರ್ಯ ಚೇಂಪಿ, ಆನೆಗುಂದಿ ಗುರು ಸೇವಾ ಪರಿಷತ್ ಕೋಟ ಮಂಡಲ ನೂತನ ಅಧ್ಯಕ್ಷ ಕೆ. ರಮೇಶ ಆಚಾರ್ಯ ಚೇಂಪಿ, ಸಂಚಾಲಕ ಎ. ಗಣೇಶ ಆಚಾರ್ಯ, ಕಾರ್ಯದರ್ಶಿ ಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ವಿಶ್ವ ಜ್ಯೋತಿ ಮಹಿಳಾ ಬಳಗದ ಪ್ರೇಮಾ ಆಚಾರ್ಯ, ಸರಸ್ವತಿ ಆಚಾರ್ಯ, ಹೇಮಾ ಆಚಾರ್ಯ, ಭಾರತಿ ಆಚಾರ್ಯ, ಜ್ಯೋತಿ ಆಚಾರ್ಯ ಮಾಡಿದರು.ಕಾರ್ಯಕ್ರಮವನ್ನು ಕಾರ್ಯದರ್ಶಿ ನಾಗೇಂದ್ರ ಆಚಾರ್ಯ ನಿರೂಪಿಸಿ, ಜೊತೆ ಕಾರ್ಯದರ್ಶಿ ನಾಗರಾಜ ಆಚಾರ್ಯ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣಯ್ಯ ಆಚಾರ್ಯ ವಂದಿಸಿದರು.

















