ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇತ್ತೀಚಿಗೆ ಮಣಿಪಾಲದಲ್ಲಿ ನಡೆದ ಜಿಲ್ಲಾ ರೋಟರಿ ಇಂಟರ್ನ್ಯಾಷನಲ್ 3182, ವಲಯ – 4ರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪರಿಸರ ರಕ್ಷಕರನ್ನು ಸನ್ಮಾನಿಸುವ ’ನಿಸರ್ಗ ನಮನ-2026’ಕಾರ್ಯಕ್ರಮದಲ್ಲಿ ಕೋಟದ ಪರಿಸರಸ್ನೇಹಿ ಸಂಘಟನೆಯಾದ ಪಂಚವರ್ಣ ಯುವಕ ಮಂಡಲಕ್ಕೆ ವಿಶ್ವ ಪರಿಸರ ದಿನದ ನಿಸರ್ಗ ನಮನ-ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಕಳೆದ 29 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನ, ಹಸಿರು ಅಭಿಯಾನಗಳ ಮೂಲಕ ಗುರುತಿಸಿಕೊಂಡಿದೆ.ರಾಜ್ಯ ಸರಕಾರ ಇಂದಿರಾಪ್ರಿಯದರ್ಶಿನಿ ಪ್ರಶಸ್ತಿ ಸಹಿತ ಹಲವು ಸಂಘಸಂಸ್ಥೆಗಳು ಗುರುತಿಸಿ ಗೌರವಿಸಿದೆ.
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಪ್ರಮುಖರಾದ ಡಾ. ಭರತೇಶ್ ಆದಿರಾಜ್, ಅಮಿತ್ ಅರವಿಂದ್, ಡಾ. ಗಣೇಶ ಎ., ಜನಾರ್ದನ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.











