ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಮಣೂರು ಸ್ನೇಹಕೂಟ, ಶ್ರೀರಾಮ ಭಜನಾ ಮಂಡಳಿ ಮಣೂರು, ಸ್ತೋತ್ರ ಪಠಣ ಸಂಘ ಮಣೂರು ಮತ್ತು ಮಣೂರು ಪರಿಸರದ ಮಹಿಳೆಯರಿಂದ ಅಧಿಕ ಜೇಷ್ಠ ಮಾಸ (ಪುರುಷೋತ್ತಮ ಮಾಸ)ದ ಪ್ರಯುಕ್ತ ಶ್ರೀ ಲಕ್ಷ್ಮಿ ಶೋಭಾನ ಪಠಣ ಹಾಗೂ ಹರಿನಾಮ ಸಂಕೀರ್ತನೆ ಕಾರ್ಯಕ್ರಮ ಗುರುವಾರ ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ಹಮ್ಮಿಕೊಂಡಿತು.
ಮಹಾಲಿಂಗೇಶ್ವರ ದೇವಸ್ಥಾನದ ಹೇರಂಭ ಕಲಾ ವೇದಿಕೆಯಲ್ಲಿ ಅಧಿಕಮಾಸದ ನಾಲ್ಕು ವಾರಗಳಲ್ಲಿ ನಡೆಸಲಾದ ಈ ವಿಶೇಷ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವನ್ನು ಮಣೂರು ದೇಗುಲದ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಉಪಸ್ಥಿತಿಯಲ್ಲಿ ಸಂಪನ್ನಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ನೇಹಕೂಟದ ಅಧ್ಯಕ್ಷ ಭಾರತಿ ವಿ ಮಯ್ಯ ಅವರು ಅಧಿಕ ಮಾಸದ ಬಗ್ಗೆ ಮಾಹಿತಿಯನ್ನು ನೀಡಿದರು.ಇದೇ ವೇಳೆ ದೇಗುಲದ ವತಿಯಿಂದ ಭಾಗವಹಿಸಿದ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿತು.
ಸಂಘದ ಮುಖ್ಯಸ್ಥೆ ಭಾರತಿ ಮಯ್ಯ ಅವರಿಗೆ ದೇವಸ್ಥಾನದ ವತಿಯಿಂದ ಸ್ಮರಣೆಕೆಯನ್ನು ನೀಡಿ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಅಚ್ಯುತಹಂದೆ, ಸುಫಲ ಶೆಟ್ಟಿ ಹಾಗೂ ಊರ ಪ್ರಮುಖರಾದ ನರಸಿಂಹ ಮಧ್ಯಸ್ಥ ಹಾಗೂ ವಿಷ್ಣುಮೂರ್ತಿಮಯ್ಯ ಉಪಸ್ಥಿತರಿದ್ದರು.

















