ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ದನಕ್ಕೆ ಕಟ್ಟಿದ್ದ ಹಗ್ಗ ಕುತ್ತಿಗೆಗೆ ಸಿಕ್ಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಡ್ಕಲ್ ಗ್ರಾಮದ ಹೆದ್ದಾರಿ ಮನೆ ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಮೂಕಾಂಬು (61) ಎಂದು ಗುರುತಿಸಲಾಗಿದೆ.
ಅವರು ಜೂ.6ರಂದು ಮಧ್ಯಾಹ್ನ ಮನೆಯ ದನದ ಕುತ್ತಿಗಗೆ ಬಳ್ಳಿಯನ್ನು ಕಟ್ಟಿ ಮೇಯಲು ಕರೆದುಕೊಂಡು ಹೋಗುತಿದ್ದರು. ಆಗ ಎರಡು ದನವು ಗುದ್ದಾಡಿದಾಗ, ಕೈಯಲ್ಲಿದ್ದ ದನಕ್ಕೆ ಕಟ್ಟಿದ್ದ ಹಗ್ಗ ಮೂಕಾಂಬು ಅವರ ಕುತ್ತಿಗೆಗೆ ಸಿಲುಕಿತ್ತು.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಜಿಲ್ಲಾ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















