ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ 10.83 ಲಕ್ಷ ರೂ. ಪಡೆದು ವಂಚನೆ ಎಸಗಿದ ಘಟನೆ ಸಾಸ್ತನದಲ್ಲಿ ಸಂಭವಿಸಿದೆ. ಅಭಿಷೇಕ್ ಪ್ರಕರಣ ಆರೋಪಿ.
ಸಾಸ್ತಾನ ಐರೋಡಿ ಗ್ರಾಮದ ಯುವತಿ ವರ್ಷಾಗೆ (23) ಅಭಿಷೇಕ್ ಹಲವು ಸಮಯದಿಂದ ಪರಿಚಯವಿದ್ದು, ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ 2025ರ ಅಕ್ಟೋಬರ್ 31ರಿಂದ 2026ರ ಮೇ.28ರ ವರೆಗೆ ವಿವಿಧ ಹಂತಗಳಲ್ಲಿ ಯುವತಿಯ ಬ್ಯಾಂಕ್ ಖಾತೆ, ಫೋನ್ ಪೇ ಹಾಗೂ ಗೂಗಲ್ ಪ್ ಮೂಲಕ ಒಟ್ಟು 10,83,000 ಹಣವನ್ನು ಪಡೆದುಕೊಂಡಿದ್ದಾನೆ ಎಂದು ದೂರಲಾಗಿದೆ.
ಹಣ ಪಡೆದ ಬಳಿಕ ಸರಕಾರಿ ಉದ್ಯೋಗ ಒದಗಿಸದೆ ನಡೆದ ಹಣವನ್ನೂ ಹಿಂದಿರುಗಿಸದೆ ವಂಚನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಕೆಲಸ ಕೊಡಿಸುವಂತೆ ಅಥವಾ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















