ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಭಾರತೀಯರ ಜೀವನದಲ್ಲಿ ಅಂಚೆ ಇಲಾಖೆ ಒಂದು ಜೀವನಾಡಿ ಅಂತೆ. ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ ಹಾಗೂ ಮೊದಲು ಅಂಚೆ ತಲುಪಿಸುವ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದ್ದು, ಇಂದು ಸರ್ಕಾರಿ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅತ್ಯಂತ ಮಿತ ದರದಲ್ಲಿ ಸೇವೆಯನ್ನು ನೀಡಿ ನಮಗೆ ಒಂದು ನಂಬಿಕೆಯ ಸಂಸ್ಥೆ ಅಂಚೆ ಇಲಾಖೆ ಆಗಿದೆ ಎಂದು ಸಾಲಿಗ್ರಾಮ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ಹೇಳಿದರು.
ಅವರು ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಶ್ರೀ ಗುರು ಫ್ರೆಂಡ್ಸ್ ರಥ ಬೀದಿ ಸಾಲಿಗ್ರಾಮ ಹಾಗೂ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ವಿಭಾಗ ಅಂಚೆ ಅಧೀಕ್ಷಕ ಜಯರಾಮ್ ಶೆಟ್ಟಿ ಇವರು ಅಂಚೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು ಹಾಗೂ ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಭಾಗವಹಿಸಿ ತಮ್ಮ ಆಧಾರ ಕಾರ್ಡ್ ಸರಿಪಡಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷ ಸಚಿನ್ ಹೇರ್ಳೆ ವಹಿಸಿದ್ದರು.
ಸಾಲಿಗ್ರಾಮ ದೇಗುಲದ ಉಪಾಧ್ಯಕ್ಷ ಚಂದ್ರಶೇಖರ್ ಉಪಾಧ್ಯ, ಸದಸ್ಯರಾದ ತಾರನಾಥ ಹೊಳ್ಳ, ಕೂಟ ಮಹಾಜಗತ್ತು ಸಾಲಿಗ್ರಾಮ ಅಧ್ಯಕ್ಷ ಪಿ. ಚಂದ್ರಶೇಖರ್ ಹೊಳ್ಳ, ಶ್ರೀ ಗುರು ಫ್ರೆಂಡ್ಸ್ ರಥಬೀದಿ ಸಾಲಿಗ್ರಾಮ ಅಧ್ಯಕ್ಷ ಸಂಪತ್ ಕುಮಾರ್, ಯುವ ವೇದಿಕೆ ಗೌರವಧ್ಯಕ್ಷ ಪಿ. ವೈ. ಕೃಷ್ಣ ಪ್ರಸಾದ್ ಹೇರ್ಳೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ಜೀವನ ಕೆ. ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರು ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಎಲ್ಲಾ ಸದಸ್ಯರು ಭಾಗವಹಿಸಿದರು. ಯುವ ವೇದಿಕೆಯ ಕೋಶಾಧಿಕಾರಿ ಕೃಷ್ಣ ಕೆ. ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿ, ಐತಾಳ್ ಸ್ವಾಗತಿಸಿ, ಕಾರ್ಯದರ್ಶಿ ಸುಧೀಂದ್ರ ಐತಾಳ್ ವಂದಿಸಿದರು.

















