ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಸದಸ್ಯರ ಹುಟ್ಟುಹಬ್ಬಕ್ಕೆ ವಿನೂತ ಮಾದರಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಮಂಗಳವಾರ ಸದಸ್ಯ ಮಹೇಶ್ ಬೆಳಗಾವಿ ಇವರ ಹುಟ್ಟುಹಬ್ಬದ ಅಂಗವಾಗಿ ಮಣೂರು ಬಾಳೆಬೆಟ್ಟು ಪರಿಸರದ ಕ್ಯಾನ್ಸರ್ ಪಿಡಿತ ಬೇಬಿ ಎನ್ನುವಾಕೆಗೆ 15,600ರೂಗಳ ಒಟ್ಟುಗೂಡಿಸಿ ನೆರವವನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸ್ನೇಹಕೂಟದ ಅಧ್ಯಕ್ಷೆ ಭಾರತಿ ವಿ ಮಯ್ಯ, ಕೋಟ ಗ್ರಾ.ಪಂ ಮಾಜಿ ಸದಸ್ಯೆ ಶಾಂತಾ, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಉಪಾಧ್ಯಕ್ಷ ದಿನೇಶ್ ಆಚಾರ್, ಸಂಚಾಲಕ ಅಮೃತ್ ಜೋಗಿ, ಮಾಜಿ ಅಧ್ಯಕ್ಷ ಗಿರೀಶ್ ಆಚಾರ್, ಸದಸ್ಯ ಗಣೇಶ್ ಕಾಸನಗುಂದು, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಹುಟ್ಟುಹಬ್ಬ ಹಬ್ಬ ಆಚರಿಸಿಕೊಂಡ ಮಹೇಶ್ ಬೆಳಗಾವಿ ಮತ್ತಿತರರು ಇದ್ದರು.











