ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಮೇ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತಾಲೂಕಿನ ಶಿರೂರು ಗ್ರಾಮದ ಆಶಿಶ್ ಶೆಟ್ಟಿ ತನ್ನ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾಗಿದ್ದಾರೆ.
ಶಿರೂರಿನಲ್ಲಿ ಜನಿಸಿದ ಆಶಿಶ್ ಶೆಟ್ಟಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಂಬೈ, ಪಿಯು ಶಿಕ್ಷಣವನ್ನು ಬೆಂಗಳೂರು ಹಾಗೂ ಬಿಕಾಂ ಪದವಿಯಲ್ಲಿ ಉಡುಪಿಯಲ್ಲಿ ಪಡೆದಿದ್ದರು. ಸಿಎ ಆರ್ಟಿಕಲ್‌ಶಿಪ್ಪನ್ನು ಮಂಗಳೂರಿನ ಸಿಎ ನಿತಿನ್ ಜೆ. ಶೆಟ್ಟಿ ಅವರಲ್ಲಿ ಪೂರೈಸಿದ್ದರು. ಹೆಚ್.ಯು.ಎಲ್‌ನಲ್ಲಿ ಇಂಡಸ್ಟ್ರಿಯಲ್ ಟ್ರೇನಿಂಗ್ ಪೂರ್ಣಗೊಳಿಸಿದ್ದರು.
ಶಿರೂರು ಹೊಸಮನೆ ಅನಿತಾ ಶೆಟ್ಟಿ ಅವರ ಪುತ್ರರಾದ ಆಶಿಶ್, ತನ್ನ 25ನೇ ವಯಸ್ಸಿಗೆ ಸಿಎ ಅಂತಿಮ ಪರೀಕ್ಷೆ ತೇರ್ಗಡೆಯಾಗಿದ್ದಾರೆ











