ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಂಚಾರು ಗ್ರಾಮದ ತಾರೇಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ನಂಚಾರು ಗ್ರಾಮದ ಮಹೇಶ ನಾಯರಿ (53) ಎಂದು ಗುರುತಿಸಲಾಗಿದೆ.
ಅವರು ಮನೆಯ ಹತ್ತಿರದ ತೋಟಕ್ಕೆ ಹೋಗಿ ಕೆರೆಯ ಪಕ್ಕದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಅವರು ಆವರಣ ಗೋಡೆಯಿಲ್ಲದ ತೋಟದ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

















