ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಡಿ ಗ್ರಾಮ ಪಂಚಾಯತ್ ಕೋಡಿ, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಇವರ ನೇತೃತ್ವದಲ್ಲಿ ಪಂಚವರ್ಣ ಸಂಘಟನೆ ಕೋಟ, ಗೀತಾನಂದ ಪೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ ಸಂಯೋಜನೆಯೊಂದಿಗೆ 3ನೇ ವರ್ಷದ ಪರಿಸರ ಸ್ನೇಹಿ ಹಸಿರುಹೆಜ್ಜೆ ಅಭಿಯಾನ ಕೋಡಿ ಕನ್ಯಾನ ಸತೀಶ್ ತಿಂಗಳಾಯ ಅವರ ಮನೆಯಿಂದ ಚಾಲನೆ ನೀಡಲಾಯಿತು.
ಕೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ಮೆಂಡನ್ ಮತ್ತು ಎಪಿಎಂಸಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ. ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಕುಮಾರಿ ಸರಸ್ವತಿ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರಗಿತು.
ಕೋಡಿ ವ್ಯಾಪ್ತಿಯ ವಿವಿಧ ಮನೆಗಳಿಗೆ ತೆರಳಿ ಗಿಡದ ಮಹತ್ವ ತಿಳಿಸಿ ನೆಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಪ್ರೀತಿ ಎಸ್., ಸಹಾಯಕಿ ಸಂಗೀತಾ, ಸಂಜೀವಿನಿ ಎಲ್.ಸಿ.ಆರ್.ಪಿ. ಸುಮಿತ್ರ, ಕೃಷಿಸಖಿ ತನುಜಾ, ಎಸ್.ಎಲ್.ಆರ್.ಎಂ. ಘಟಕದ ಸಿಬ್ಬಂದಿ ಕಿರಣ್ ಪುತ್ರನ್ ಹಾಗೂ ಸ್ಥಳೀಯರಾದ ಗೀತಾ ಉಪಸ್ಥಿತರಿದ್ದರು.











