ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 120ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ನಿವೃತ್ತ ಅಧ್ಯಾಪಕ ಸದಾಶಿವ ಐತಾಳ್, ನಿವೃತ್ತ ಪ್ರಾಧ್ಯಾಪಕ ಎಮ್. ರತ್ನಾಕರ ಪೈ, ಶಂಕರ ನಾಗಪ್ಪ ಬಿಲ್ಲವ, ಭಾಗವತ ಸುಬ್ರಹ್ಮಣ್ಯ ನಾವುಡ, ಶಿಕ್ಷಕಿ ಸೌಜನ್ಯ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಅರ್ಥಧಾರಿ ಹೆಚ್. ಶಂಕರ ನಾಗಪ್ಪ ಬಿಲ್ಲವ, ಹೆಮ್ಮಾಡಿ ಹಾಗೂ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಚಂದನ್ ಅವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ಕೊನೆಗೆ ಶಂಕರ ನಾಗಪ್ಪ ಬಿಲ್ಲವರಿಂದ ಯಕ್ಷಗಾನ, ಜಾನಪದ ಏಕಪಾತ್ರಾಭಿನಯ ನಡೆಯಿತು.ಪಾರ್ವತಿಯವರಿಂದ ನಡೆದ ಸಂಗೀತ ಮನಸ್ಸಿಗೆ ಮುದ ನೀಡಿತು.
ದೇವಕಿ ಸುರೇಶ್ ಪ್ರಭು ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಉದಯ ಭಂಡಾರ್‌ಕಾರ್ ಹಟ್ಟಿಯಂಗಡಿ ಅವರು ಕಾರ್ಯಕ್ರಮ ನಿರೂಪಿಸಿದರು.

















