ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಲಯದ ಸಳ್ಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ, ವಿದ್ಯಾರ್ಥಿ ಸಂಸತ್ ಉದ್ಘಾಟನೆ, ಎಸ್.ಡಿ.ಎಂ.ಸಿ ಖಾಲಿಯಾದ ಸ್ಥಾನಗಳಿಗೆ ಆಯ್ಕೆ ಕಾರ್ಯಕ್ರಮ ಬುಧವಾರ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ಪ್ರೇಮ ಎಸ್. ನಾಯ್ಕ್ ವಹಿಸಿದ್ದರು. ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ಬಿಡಿ ಪುಸ್ತಕ ಹಿಡಿ” ಕಾರ್ಯಕ್ರಮದ ಅಂಗವಾಗಿ ಕನ್ನಡ, ಇಂಗ್ಲಿಷ್ ಸ್ಪಷ್ಟವಾದ ಓದುವಿಕೆ, ಗಣಿತದ ಲೆಕ್ಕಾಚಾರವನ್ನು ಪೋಷಕರ ಎದುರು ಮಾಡಿ ತೋರಿಸಲಾಯಿತು. ವಿದ್ಯಾರ್ಥಿ ಸಂಸತ್ ಉದ್ಘಾಟನೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಸಹ ಶಿಕ್ಷರಾದ ಉದಯ್ ಬೋಧಿಸಿದರು. ಪೋಷಕರ ಸಭೆಯಲ್ಲಿ ಖಾಲಿ ಆಗಿರುವ ಎಸ್.ಡಿ.ಎಂ.ಸಿ ಸದಸ್ಯರ ನೇಮಕ ಮಾಡಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಸುಬ್ಬಯ್ಯ ನಾಯ್ಕ್, ಉಪಾಧ್ಯಕ್ಷರನ್ನಾಗಿ ನಾಗರತ್ನ ಶೆಟ್ಟಿ ಆಯ್ಕೆಯಾದರು. ಈ ಹಿಂದಿನ ಎಸ್.ಡಿ.ಎಂ.ಸಿ ಅಧ್ಯಕ್ಷರು ಪುಷ್ಪ ನೀಡಿ ಸ್ವಾಗತಿಸಿದರು. ಪೋಷಕರಿಗೆ 2026-27ನೇ ಸಾಲಿನ ಮಕ್ಕಳಿಗೆ ಕಲಿಕೆ ಬಗ್ಗೆ ಹಾಗೂ ವಾಹನ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ್ ಪೋಷಕರ ಭಾಗವಹಿಸುವಿಕೆ ಶಾಲಾ ಪ್ರಗತಿ ಬಗ್ಗೆ ಪ್ರೋತ್ಸಾಹಕರ ಮಾತನಾಡಿ ಅಭಿನಂದಿಸಿದರು.
ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಪೂರ್ಣಿಮಾ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಕ್ಷತ್ರ ನಾಯ್ಕ್, ಭೂಸೇನೆ ಯೋಧರಾದ ಉಮೇಶ್ ಚಂದ್ರ ಶೆಟ್ಟಿ, ಕೊಲ್ಲೂರು ಸಿ.ಅರ್.ಪಿ ಶೈಲಜಾ, ಮುಖ್ಯ ಶಿಕ್ಷಕ ಎಂ.ನಾಗರಾಜ್ ಶೆಟ್ಟಿ, ಹಿರಿಯ ಸಹ ಶಿಕ್ಷಕರಾದ ಭಾಸ್ಕರ್ ನಾಯ್ಕ್, ಸುವರ್ಣ ವಿದ್ಯಾ ನಿಧಿಯ ಅಧ್ಯಕ್ಷರಾದ ಸುರೇಂದ್ರ ನಾಯ್ಕ್, ನೇತ್ರಾಡಿ ಉಪಸ್ಥಿತರಿದ್ದರು.
ಸಹ ಶಿಕ್ಷಕ ಸತೀಶ್ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿ ಮುಖ್ಯಶಿಕ್ಷಕರಾದ ನಾಗರಾಜ್ ಶೆಟ್ಟಿ ಸ್ವಾಗತಿಸಿದರು. ಹಿರಿಯ ಸಹ ಶಿಕ್ಷಕರಾದ ಭಾಸ್ಕರ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕರಾದ ಗಿರೀಶ್ ಜಿ.ಹೆಚ್. ಶೈಕ್ಷಣಿಕ ಮಾಹಿತಿ ನೀಡಿದರು. ಸಹಶಿಕ್ಷಕಿ ಗೀತಾ ಪ್ರಿಯ ವಂದಿಸಿದರು. ಶಿಕ್ಷಕರಾದ ಸಂತೋಷ್, ಸುಜಾತ, ಶ್ರೀಜಾ, ಸೌಮ್ಯ ಸಹಕರಿಸಿದರು.

















