ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನಲ್ಲಿ ಇತ್ತೀಚೆಗೆ ನೆಡೆದ ’ಕೆಂಚನೂರು ಯಕ್ಷೋತ್ಸವʼದಲ್ಲಿ ಸಂಗ್ರಹವಾದ ಉಳಿಕೆ ಮೊತ್ತದಿಂದ ಕೆಂಚನೂರು ಗ್ರಾಮದಲ್ಲಿ ಆರ್ಥಿಕವಾಗಿ ಅರ್ಹ ಫಲಾನುಭವಿಗಳಿಗೆ ಧನಸಹಾಯ ವಿತರಿಸಲಾಯಿತು.
ಫಲಾನುಭವಿಗಳಾದ ಸೂರಜ್ ಆಚಾರ್ಯ, ದೀಪಿಕಾ, ಗೋಪಾಲ್ ಮೊಗವೀರ ಕೆಂಚನೂರು, ರಾಜು ಗಾಣಿಗ ಹೆಮ್ಮಾಡಿ ಅವರಿಗೆ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಕೆಂಚನೂರು ಯಕ್ಷೋತ್ಸವದ ರೂವಾರಿ ರವಿ ಗಾಣಿಗ ಮಲ್ಲಾರಿ, ಕೆಂಚನೂರು ಆರ್ಥಿಕ ನೆರವು ವಿತರಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್. ಸುಧೀರ್ ಶೆಟ್ಟಿ ಕೆಂಚನೂರು, ಸುಬ್ಬಣ್ಣ ಶೆಟ್ಟಿ ಕೆಂಚನೂರು, ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೀವ್ ಶೆಟ್ಟಿ ಕೆಂಚನೂರು, ಜೈನುದ್ದೀನ್ ಶೆಟ್ರಕಟ್ಟೆ, ಗುಂಡು ಶೆಟ್ಟಿ ಕೆಂಚನೂರು ಉಪಸ್ಥಿತರಿದ್ದರು.
ಸಮಾಜಮುಖಿ ಕಾರ್ಯಕ್ಕೆ ಸಹಕರಿಸಿದ ದಾನಿಗಳಾದ ರವಿ ಗಾಣಿಗ ಮಲ್ಲಾರಿ – ಕೆಂಚನೂರು ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು.
















