ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬೀಜಾಡಿ ಗ್ರಾಮದ ಶ್ರೀ ನಂದಿಕೇಶ್ವರ ದೇವಸ್ಥಾನದ ಘಂಟೆಯನ್ನು ಕಳವು ಮಾಡಿದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಘಂಟೆಯನ್ನು ಯಾರೋ ಕಳ್ಳರು ಕಳವು ಮಾಡಲು ಬಂದಾಗ ಆ ದೇವಸ್ಥಾನ ಸಮೀಪದ ಮನೆಯ ನಿವಾಸಿ ಗಣೇಶ್ ಅವರು ತಮ್ಮ ಶ್ರೇಯಸ್ ಹಾಗೂ ಧೀರಜ್ ಅವರೊಂದಿಗೆ ತೆರಳಿ ನೋಡಿದ್ದಾರೆ. ಆಗ ಒಬ್ಬ ವ್ಯಕ್ತಿ ಘಂಟೆಯನ್ನು ಹಿಡಿದುಕೊಂಡು ಓಡಿ ಹೋಗಿದ್ದಾನೆ. ಸ್ವಲ್ಪ ದೂರದಲ್ಲಿ ನಿಂತಿದ್ದ ಕಾರಿನ ಬಳಿ ಇವರೆಲ್ಲ ತೆರಳಿದಾಗ ಆ ಕಾರಿನಲ್ಲಿ ಕುಳಿತ ವ್ಯಕ್ತಿ ಕಾರನ್ನು ಇವರ ಮೇಲೆ ಹತ್ತಿಸಲು ಪ್ರಯತ್ನಿಸಿದ್ದ ಎನ್ನಲಾಗಿದೆ.
ಅನಂತರ ಊರವರೆಲ್ಲ ಮಾಹಿತಿ ತಿಳಿದು, ಕಾರಿನ್ನ ಗುರುತು ಪತ್ತೆ ಹಚ್ಚಿದ್ದು, ಈ ವೇಳೆ ಕಾರಿನಲ್ಲಿದ್ದವ ಮುಜಾಹಿದ್ ಹಾಗೂ ಘಂಟೆ ಕದ್ದು ಓಡಿದವ ಸಫಾದ್ ಎಂದು ತಿಳಿದು ಬಂದಿದೆ.
ಈ ಆರೋಪಿಗಳು ಘಂಟೆಯನ್ನು ಕಳ್ಳತನ ಮಾಡಿದ್ದಲ್ಲದೆ, ಹಿಡಿಯಲು ಬಂದವರ ಮೇಲೆ ಕಾರನ್ನು ಹಾಯಿಸಿ, ಸಾಯಿಸಲು ಪ್ರಯತ್ನಿಸಿದ್ದಾರೆ ಎಂದು ಗಣೇಶ್ ಬೀಜಾಡಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















