Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಎಸ್.ಐ.ಆರ್: ವಂಡ್ಸೆ ಗ್ರಾಮ ಪಂಚಾಯತ್‌ನಲ್ಲಿ ಮತದಾರರ ಸಹಾಯ ಕೇಂದ್ರ ಆರಂಭ
    ಊರ್ಮನೆ ಸಮಾಚಾರ

    ಎಸ್.ಐ.ಆರ್: ವಂಡ್ಸೆ ಗ್ರಾಮ ಪಂಚಾಯತ್‌ನಲ್ಲಿ ಮತದಾರರ ಸಹಾಯ ಕೇಂದ್ರ ಆರಂಭ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಕರ್ನಾಟಕ ರಾಜ್ಯದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಜೂ.30ರಿಂದ ಜು.29 ತನಕ ನಡೆಯಲಿದ್ದು ಮತಗಟ್ಟೆ ಮಟ್ಟದ ಅಧಿಕಾರಿ (ಬಿ.ಎಲ್.ಓ) ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಶನ್ ಫಾರ್ಮ್ ನ್ನು ನೀಡುತ್ತಿದ್ದಾರೆ.

    Click Here

    Call us

    Click Here

    ಎಲ್ಲಾ ಮತದಾರರರು ಜು.29ರೊಳಗೆ ಆ ಫಾರ್ಮ್ ತುಂಬಿಸಿ ವಾಪಾಸು ನೀಡಬೇಕಾಗಿದೆ. ಆ ಫಾರ್ಮ್ ನಲ್ಲಿ 2002ರ ಮತದಾರರ ಪಟ್ಟಿಯಲ್ಲಿನ ಅವರ ವಿವರಗಳನ್ನು, 2002ರಲ್ಲಿ ಅವರ ಹೆಸರು ಇಲ್ಲದಿದ್ದರೆ ಅವರ ತಂದೆ, ತಾಯಿ, ಅಜ್ಜ, ಅಜ್ಜಿ ಯಾರೊಬ್ಬರ ವಿವರವನ್ನಾದರೂ ತುಂಬಿಸಬೇಕಾಗಿದೆ. ಇದು ತುಂಬಿಸಲು ಎಲ್ಲಾ ಮತದಾರರಿಗೆ ಕಷ್ಟವಾಗುತ್ತಿದ್ದು  ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರರಿಗೆ ಕಷ್ಟವಾಗಬಾರದೆಂದು ಜು.3 ರಿಂದ ವಂಡ್ಸೆ ಗ್ರಾಮ ಪಂಚಾಯತ್‌ನಲ್ಲಿ ಮತದಾರರ ಸಹಾಯ ಕೇಂದ್ರ (ಎಸ್.ಐ.ಆರ್ ಹೆಲ್ಫ್ ಡೆಸ್ಕ್) ತೆರೆಯಲಾಗಿದೆ.

    ಇದು ರಜಾ ದಿನಗಳೂ ಸೇರಿದಂತೆ ವಾರದ ಏಳೂ ದಿನವೂ ಬೆಳಿಗ್ಗೆ 9.30 ರಿಂದ ಸಂಜೆ 6.30ರ ತನಕ ಕಾರ್ಯನಿರ್ವಹಿಸಲಿದ್ದು ಅರ್ಜಿ ತುಂಬಿಸಲು ಕಷ್ಟವಾಗುವ ಎಲ್ಲಾ ಮತದಾರರು ಎಸ್.ಐ.ಆರ್ ನೀಡಿರುವ ಎನ್ಯುಮರೇಶನ್ ಫಾರ್ಮ್, ಆಧಾರ್ ಕಾರ್ಡ್ ಮತ್ತು ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ತೆಗೆದುಕೊಂಡು ಬಂದರೆ ತಮಗೆ ಅರ್ಜಿ ತುಂಬಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ.

    ಅಲ್ಲದೆ ಈ ಸಹಾಯ ಕೇಂದ್ರದಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಇದುವರೆಗೆ ಆಗದೇ ಇದ್ದರೆ 2002ರ ಮತದಾರರ ಪಟ್ಟಿಯ ವಿವರವನ್ನು ಸಂಗ್ರಹಿಸಲು ಸಹಾಯ ಮಾಡಲಾಗುವುದು.  ಒಂದು ವೇಳೆ ಕರಡು ಮತದಾರರ ಪಟ್ಟಿಯಲ್ಲಿ ಆರ್ಹ ಮತದಾರರ ಹೆಸರು ಬಿಟ್ಟು ಹೋದಲ್ಲಿ ಉಪವಿಭಾಗಾಧಿಕಾರಿಗಳಿಗೆ ಅಪೀಲು ಸಲ್ಲಿಸಲು ಹಾಗೂ ಅದಕ್ಕೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ಸಹ ಈ ಹೆಲ್ಪ್ ಡೆಸ್ಕ್ ಸಹಾಯ ಮಾಡಲಿದೆ.

    ಈ ಮತದಾರರ ಸಹಾಯ ಕೇಂದ್ರದಲ್ಲಿ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ಸಂಜೀವಿನಿ ತಂಡದ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ (ಬಿ.ಎಲ್.ಎ)ಗಳು ಕಾರ್ಯ ನಿರ್ವಹಿಸಲಿದ್ದು ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.ಮುಂದೆ ಗ್ಯಾರಂಟಿ ಯೋಜನೆಗಳಿಗೆ ಮತದಾರರ ಗುರುತು ಪತ್ರವನ್ನು ಜೋಡಣೆ ಮಾಡಲಾಗುವುದರಿಂದ ಯಾವೊಬ್ಬ ಮತದಾರರು ಇದರಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಇದನ್ನು ಆರಂಭ ಮಾಡಲಾಗಿದೆ. ಅಗತ್ಯವಿರುವವರೆಲ್ಲರೂ ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.

    Click here

    Click here

    Click here

    Call us

    Call us

    ಮತದಾರರ ಸಹಾಯ ಕೇಂದ್ರ ಆರಂಭದ  ಸಂದರ್ಭದಲ್ಲಿ ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿ, ವಿ.ಕೆ ಶಿವರಾಮ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗೋವರ್ಧನ ಜೋಗಿ, ಮಾಜಿ ಸದಸ್ಯ ಉದಯ ಕೆ. ನಾಯ್ಕ್, ದೀಪಕ್ ಶೆಟ್ಟಿ, ವೆಂಕಟೇಶ್ ಶೆಟ್ಟಿ, ನಿರ್ಮಲಾ ಶೆಟ್ಟಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಶ್, ಬಿ.ಎಲ್.ಓಗಳಾದ ರಾಜು ಎನ್., ಪ್ರತಾಪ್ ಕುಮಾರ್ ಶೆಟ್ಟಿ, ಶ್ರೀಲಕ್ಷ್ಮೀ, ಸಂಜೀವಿನಿ ಸಂಘದ ಆಶಾರಾಣಿ, ನಯನ, ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೆಂಚನೂರು ಯಕ್ಷೋತ್ಸವ: ಅರ್ಹರಿಗೆ ಆರ್ಥಿಕ ನೆರವು

    03/07/2026

    ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಆಚರಣೆ

    03/07/2026

    ವಡ್ಡರ್ಸೆ ಶಕ್ತಿ ಕೇಂದ್ರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

    03/07/2026
    Leave A Reply Cancel Reply

    five × four =

    Call us

    Click Here

    Call us

    Call us

    Call us
    Highest Viewed Recently
    • ಎಸ್.ಐ.ಆರ್: ವಂಡ್ಸೆ ಗ್ರಾಮ ಪಂಚಾಯತ್‌ನಲ್ಲಿ ಮತದಾರರ ಸಹಾಯ ಕೇಂದ್ರ ಆರಂಭ
    • ಕೆಂಚನೂರು ಯಕ್ಷೋತ್ಸವ: ಅರ್ಹರಿಗೆ ಆರ್ಥಿಕ ನೆರವು
    • ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಆಚರಣೆ
    • ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಉತ್ತೀರ್ಣ
    • ವಡ್ಡರ್ಸೆ ಶಕ್ತಿ ಕೇಂದ್ರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.