ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ವಿದ್ಯಾರ್ಥಿಗಳು ಬಾಲ್ಯದಲ್ಲಿ ಶಿಸ್ತು, ಸಂಯಮ ಹಾಗೂ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾಗಿರುವ ಸುಕೇಶ ಶೆಟ್ಟಿ ಹೊಸಮಠ ಹೇಳಿದರು.
ಅವರು 2026-27ನೇ ಸಾಲಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ, ಅರೆಶಿರೂರು-ಗೋಳಿಹೊಳೆ ಇಲ್ಲಿನ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಅರೆಶಿರೂರು ಸ.ಹಿ.ಪ್ರಾ.ಶಾಲೆಯ ಇಲ್ಲಿನ ಮುಖ್ಯ ಶಿಕ್ಷಕಿ ಲಕ್ಷ್ಮಿ ಅವರು ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ದಿನಕರ ನಾಯ್ ಬಿ.ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿ, ಶ್ರೀ ದೇವಳದಿಂದ ಉಚಿತವಾಗಿ ನೀಡಿದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ, ಪ್ರೇಮ ಸಾಹಿತ್ಯ ಕ್ಷೇತದಲ್ಲಿ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು. ಕೊಲ್ಲೂರು ಶ್ರೀ ದೈವಳದಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿರುವ ಸುಮಾರು 2.05ಲಕ್ಷ ಮೌಲ್ಯದ ಪಠ್ಯ ಹಾಗೂ ನೋಟ್ ಪುಸ್ತಕಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಅಡುಗೆ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿದ ನಾಗು ಗೌಡ್ತಿ ಹಾಗೂ ಸವಿತಾ ಪೈ ಅವರನ್ನು ಶಾಲಾ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು.
ವಿದ್ಯಾರ್ಥಿ ಸರಕಾರದ ಮಾರ್ಗದರ್ಶಿ ಅಧ್ಯಾಪಕ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೀವ ಶೆಟ್ಟಿ ಪ್ರಸ್ತಾಪಿಸಿದರು. ಶಾಲಾ ಮುಖ್ಯಮಂತ್ರಿ ಸಾಧನ್ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕರಾದ ರತ್ನಾಕರ ದೇವಾಡಿಗ ನಿರೂಪಿಸಿ, ಭಾಸ್ಕರ್ ಭಟ್ ಸ್ವಾಗತಿಸಿ, ಉದಯ ನಾಯ್ಕ ವಂದಿಸಿದರು.
ಶಿಕ್ಷಕರಾದ ಪ್ರಶಾಂತ್ ಶ್ಯಾನುಭಾಗ್, ರಾಮಚಂದ್ರ ಆರ್.ಎ. ಆಶಾಲತಾ ಹಾಗೂ ಸಿಬ್ಬಂದಿಗಳಾದ ಮೋಹನ, ಮಾಲತಿ ಸಮಾರಂಭದ ಇತರ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಿದರು.
















