ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೂನಿಯರ್ ಜೆಸಿ ಮತ್ತು ಲೇಡಿ ಜೆಸಿ ಸಮ್ಮೇಳನ ಸಿಂಧು ಇದರ ವತಿಯಿಂದ ಯಡ್ತರೆ ಜೆಎನ್‌ಆರ್ ಕಲಾ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ವಲಯ 15ರ ಜೆಸಿಐ ರೂರಲ್ ನ ಅಧ್ಯಕ್ಷರರಾದ ವಿನೋದ್ ಮೇಸ್ತ ಶಿರೂರ್ ಅವರಿಗೆ ಜೆಎಸಿ ಗೋಲ್ಡನ್ ಪ್ರೆಸಿಡೆಂಟ್ ಪ್ರಶಸ್ತಿ ಪಡೆದರು.
ಕಾರ್ಯಕ್ರಮದಲ್ಲಿ ವಲಯದ ಅಧ್ಯಕ್ಷ ಸಂತೋಷ ಶೆಟ್ಟಿ, ಜೆಎಸಿ ವಲಯ ಚೇರ್ ಮೇನ್ ಜಬ್ಬಾರ್ ಸಾಹಬೆ, ಜೆಎಸಿ ವಲಯದ ಪೂರ್ವ ಅಧ್ಯಕ್ಷೆ ಆಶಾ, ಶಂಬಾವಿ, ಉಪಾಧ್ಯಕ್ಷರರಾದ ಪ್ರದೀಪ್ ಶೆಟ್ಟಿ, ಬೈಂದೂರು ಸಿಟಿ ಜೆಸಿಎ ಅಧ್ಯಕ್ಷೆ ಚೈತ್ರ, ವಿವಿಧ ಘಟಕಗಳ ಅಧ್ಯಕ್ಷರು, ಪೂರ್ವ ಅಧ್ಯಕ್ಷರು ಸದಸ್ಯರು ಹಾಗೂ ಜೆಸಿಐ ಸದಸ್ಯರು ಹಾಜರಿದ್ದರು.











