ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಗುರುವಾರ ಕುಂದಾಪುರ ವಿಧಾನಸಭೆ ಕ್ಷೇತ್ರದ ಪ್ರಕ್ರಿಯೆಗೆ ಶಾಸಕ ಕಿರಣ್ ಕುಮಾರ ಕೊಡ್ಗಿ ಅವರ ನಿವಾಸದ ಮೂಲಕ ಚಾಲನೆ ನೀಡಲಾಯಿತು.
ಬಿಎಲ್‌ಒಗಳು ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಇ-ಆರ್ ಫಾರ್ಮ್ ಅನ್ನು ಭರ್ತಿ ಮಾಡಿಸಿ ಸ್ವೀಕರಿಸಿದರು.
ಈ ಸಂದರ್ಭ ಶಾಸಕರು ಮಾತನಾಡಿ, ಬಿಸಿಲು, ಮಳೆ ಲೆಕ್ಕಿಸದೆ ಮನೆಗೆ ಬರುವ ಬಿಎಲ್‌ಒ ಅವರಿಗೆ ಅಗತ್ಯವಿರುವ ದಾಖಲೆಗಳನ್ನು ನೀಡಿ. ಅವರೊಂದಿಗೆ ಸೌಜನ್ಯಯುತವಾಗಿ ಸಹಕರಿಸಿ. ಮತದಾರರ ಪಟ್ಟಿ ನಿಖರವಾಗಿರಲು ಸಹಕರಿಸುವಂತೆ ಮನವಿ ಮಾಡಿದರು.











