ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬಸ್ರೂರು ಗ್ರಾಮದ ಶ್ರೀ ಕಾಳಿ ಭಜನಾ ಮಂಡಳಿಯ ಹತ್ತನೇ ತರಗತಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಿವೇದಿತಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ದಿನಕರ್ ಆರ್ ಶೆಟ್ಟಿ ಹಾಗೂ ಶ್ರೀ ಕಾಳಿ ಭಜನಾ ಮಂಡಳಿ ಅವರ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕಾರ್ಯಕ್ರಮವನ್ನು ವಿದ್ವಾನ್ ಮಾಧವ ಅಡಿಗ ಅವರುಉದ್ಘಾಟನೆ ಮಾಡಿದರು. ಅಧ್ಯಕ್ಷತೆಯನ್ನು ದಿನಕರ್ ಆರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಧಾಕೃಷ್ಣ ಶೆಟ್ಟಿ, ಶಿವರಾಮ ಪೂಜಾರಿ, ಬೇಬಿ ಶ್ರೀಕಾಂತ್ ಹಾಗೂ ಚಂದ್ರ ಪೂಜಾರಿ ಉಪಸ್ಥಿತರಿದ್ದರು. ಕೆ. ವಿಕಾಸ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.











