ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ರಂದು ನಡೆದ (CISCE) ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಈ ಪಂದ್ಯಾವಳಿಯಲ್ಲಿ ಶಾಲೆಯ 17 ವರ್ಷದ ಬಾಲಕಿಯರ ತಂಡವು ಚಾಂಪಿಯನ್ ಆಗಿ (ಪ್ರಥಮ ಸ್ಥಾನ) ಹೊರಹೊಮ್ಮಿದೆ. ಹಾಗೆಯೇ, 17 ವರ್ಷದೊಳಗಿನ ಬಾಲಕರ ತಂಡವು ರನ್ನರ್-ಅಪ್ (ದ್ವಿತೀಯ ಸ್ಥಾನ) ಪಡೆದು ಗಮನಾರ್ಹ ಸಾಧನೆ ಮಾಡಿದೆ.

ಶಾಲೆಯ ವಿದ್ಯಾರ್ಥಿಗಳಾದ ವಿಕಾಸ್ ಸಿ.ಕೆ, ಶಂಭು ಬಿ, ಈರಣ್ಣ ಕೆ. ಪತ್ತಾರ್, ಶ್ರೇಯಸ್ ಸಿ, ಸುವಾಸ್ ಎಸ್ ಜಿ, ಸಿದ್ಧಾರ್ಥ್ ವೈ.ಸಿ., ಪ್ರತುಲ್ ಎಸ್. ಶೆಟ್ಟಿ, ಸಂಕೇತ್ ಆರ್ ಬಿ, ಸಂಪತ್ ಎಸ್ ಕೆ, ಪ್ರಸನ್ನ ಆರ್ ಜೆ, ವೇದಿತ್, ವೇದಾಂತ್ ವಿ. ಎಸ್ ಈ ವಿದ್ಯಾರ್ಥಿಗಳು ಸೀನಿಯರ್ (U-17) ಬಾಲಕರ ವಿಭಾಗದಲ್ಲಿ ಶಾಲಾ ತಂಡದಲ್ಲಿ ಭಾಗವಹಿಸಿದ್ದರು.
ತನಿಷ್ಕಾ ವಿ ಮೇತ್ರಿ, ಮಾಣಿಕ್ಯ ಎ ಎಸ್, ವಿಜಯಲಕ್ಷ್ಮಿ ಹೆಚ್., ದೀಕ್ಷಾ ಕೆ.ಸಿ., ಪ್ರಗತಿ ಎನ್ ಜಿ, ಸಂಪ್ರೀತಾ ಬಿ ಆರ್, ನವ್ಯ ಐ ಎಮ್, ಸನ್ನಿಧಿ ಪಿ ಎ, ಆದ್ಯಾ ಶೆಟ್ಟಿ, ಯಶಸ್ವಿನಿ ಎಸ್., ಪ್ರಗತಿ ರಾಣಿ ಎಸ್., ಶಿವಾನಿ ಎಸ್ ಕೆ, ಈ ವಿದ್ಯಾರ್ಥಿನಿಯರು ಸೀನಿಯರ್ (U-17) ಬಾಲಕಿಯರ ವಿಭಾಗದಲ್ಲಿ ಶಾಲಾ ತಂಡದಲ್ಲಿ ಭಾಗವಹಿಸಿದ್ದರು.
ಶಾಲೆಯ ಪ್ರಾಂಶುಪಾಲರು ಮತ್ತು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಆದ ಶರಣ ಕುಮಾರ ಈ ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರು ಹಾಗೂ ತರಬೇತುದಾರರ ಶ್ರಮವನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ಶ್ಲಾಘನೀಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ತರಬೇತುದಾರರು ಹರ್ಷ ವ್ಯಕ್ತಪಡಿಸಿದ್ದಾರೆ.
















