ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಜುಲೈ ಆವೃತ್ತಿಯಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ. ಬಿ.ಎಸ್.ಡಬ್ಲೂ, ಬಿ.ಲಿಬ್.ಐ.ಎಸ್.ಸ್ಸಿ. ಮತ್ತು ಎಲ್ಲಾ ಬಿ.ಎಸ್ಸಿ, ಸ್ನಾತಕೋತ್ತರ ಪದವಿಗಳಾದ ಎಂ.ಎ /ಎಂ.ಕಾಂ, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲೂö್ಯ, ಎಂ.ಲಿಬ್ ಐ.ಎಸ್.ಸ್ಸಿ ಮತ್ತು ಎಲ್ಲಾ ಎಂ.ಎಸ್ಸಿ ಪದವಿಗಳು ಮತ್ತು ಡಿಪ್ಲೋಮಾ, ಪಿ.ಜಿ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶಾತಿಯು ಆರಂಭವಾಗಿದ್ದು, ಆಸಕ್ತರು ಪ್ರಾದೇಶಿಕ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರೈಸ್ತ, ಜೈನ, ಭೌದ್ಧ, ಸಿಖ್ ಹಾಗೂ ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮಿತಿ ಇರುವವರು ಅಗತ್ಯ ದಾಖಾಲಾತಿ ಒದಗಿಸಿದಲ್ಲಿ ಉಚಿತ ಪ್ರವೇಶಾತಿಗೆ ಅವಕಾಶವಿರುತ್ತದೆ.
ಹೆಚ್ಚಿನ ವಿವರಗಳಿಗೆ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ಅನ್ನು ಅಥವಾ ಮೊ.ನಂ: 8197818807, 8970636111, 8431406150 ಹಾಗೂ 9449499139 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೆ.ಎಸ್.ಓ.ಯು ಉಡುಪಿ ಪ್ರಾದೇಶಿಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.











