ಕುಂದಾಪ್ರ ಡಾಟ್ ಕಾಂ ಸುದ್ದಿ ಆಜೆಕಾರು: ಎರಡು ದಶಕಗಳ ಸಾರ್ಥಕ ಸಂಭ್ರಮ ಕಂಡು ಮುಂದುವರಿಯುತ್ತಿರುವ ಅಜೆಕಾರು ಆದಿಗ್ರಾಮೋತ್ಸವದ ಪ್ರತಿಷ್ಠಿತ ರಾಜ್ಯಮಟ್ಟದ ಆದಿಗ್ರಾಮೋತ್ಸವ ಗೌರವವನ್ನು ವಾಗ್ಮಿ ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಅವರಿಗೆ ಜನವರಿ 25 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರದಾನಿಸಲಿದ್ದಾರೆ ಎಂದು ಉತ್ಸವದ ರೂವಾರಿ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. ಕಲಾವಿದರಿಗೆ ಹಿರಿಯ ಸಾಧಕರಿಗೆ ನೀಡಲಾಗುವ ಅಜೆಕಾರು ಗ್ರಾಮ ಗೌರವಕ್ಕೆ ನಾದವೈಭವಂ ಉಡುಪಿ ವಾಸುದೇವ ಭಟ್ ಮತ್ತು ಸಮಾಜ ಸೇವಕ-ಉದ್ಯಮಿ ವಿಶ್ವನಾಥ ಶೆಣೈ ಅವರು ಪಾತ್ರರಾಗಲಿದ್ದಾರೆ. 17 ಮಂದಿಗೆ ಯುವ ಗೌರವ: ಯುವ ಗೌರವಕ್ಕೆ ನಾಡಿನ ವಿವಿದ ಕಡೆಯ ೧೭ ಮಂದಿ ಯುವ ಸಾಧಕರನ್ನು ಆಯ್ಕೆ ಮಾಡಲಾಗಿದೆ. ನಂದಾ ಪ್ರೇಮ್‌ಕುಮಾರ್-ಶಿಕಾರಿಪುರ, ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಮಂಗಳೂರು, ನಾಗರಾಜ ಗುರುಪುರ, ಮುಂಬಯಿ,ಜೆಸಿಂತಾ ಡಿಸೋಜಾ, ನಿಟ್ಟೆ, ಉಪನ್ಯಾಸಕಿ ಜ್ಯೋತಿ ಜ್ಯು.ಕಾಲೇಜ್, ಸುಜಾತ ಲಕ್ಷ್ಮಣ ಆಚಾರ್ಯ- ವರಂಗ, ಮಾಲಿನಿ.ಜೆ.ಶೆಟ್ಟಿ-ಹಿರ್ಗಾನ, ಸದಾನಂದ ಆಚಾರ್ಯ ನೂರಾಳಬೆಟ್ಟು, ಕಿಶೋರ್ ರೈ-ಉಜಿರೆ, ಡಾ.ರಕ್ಷಿತಾ ಕೋಟ್ಯಾನ್-…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದಿ. ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಇನ್ನಷ್ಟು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಲಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳ ನಿರಂತರ ಸಂಪರ್ಕದಲ್ಲಿರುವ ಉದ್ದೇಶದಿಂದ ವ್ಯವಸ್ಥಿತವಾಗಿ, ನಿಯಮಾವಳಿಗಳ ಅನುಸಾರ ಹಳೆ ವಿದ್ಯಾರ್ಥಿ ಸಂಘಕ್ಕೆ ಹೊಸ ರೂಪದೊಂದಿಗೆ ಸಕ್ರಿಯಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದು ಭಂಡಾರ್ಕಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ ಹೇಳಿದರು. ಅವರು ಕಾಲೇಜಿನಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಾಲೇಜಿನಲ್ಲಿ 1967ರಲ್ಲಿಯೇ ಹಳೆ ವಿದ್ಯಾರ್ಥಿ ಆರಂಭಗೊಂಡಿದ್ದರೂ ಕೂಡಾ ಕೆಲವು ಕಾರಣಾಂತರಗಳಿಂದ ಸ್ಥಗಿತಗೊಂಡಿತು. ಆ ನಂತರ ಪುನಃ ಅದಕ್ಕೆ ಆಗಿನ ಪ್ರಾಂಶುಪಾಲರಾಗಿದ್ದ ಡಾ|ಹೆಚ್.ಶಾಂತಾರಾಮ್ ಅವರು ಚಾಲನೆ ನೀಡಿದ್ದರು. ಮತ್ತೆ 1976ರಲ್ಲಿ ಕಾಮರ್ಸ್ ವಿಭಾಗದ ಮುಖ್ಯಸ್ಥರಾಗಿದ್ದ ಮೋಹನದಾಸ ಪೈ ಮತ್ತು ಡಾ|ರಾಮಮೋಹನ ಅವರ ಸಮರ್ಥ ನೇತೃತ್ವದಲ್ಲಿ ಸಕ್ರಿಯವಾಯಿತು. ಆನೇಕ ಮಂದಿ ಅಜೀವ ಸದಸ್ಯರನ್ನು ಒಟ್ಟು ಮಾಡಿ ಒಂದು ನಿಧಿಯನ್ನು ಸ್ಥಾಪಿಸಲಾಯಿತು. ಕಾಲ ಕ್ರಮೇಣ ಕಾಲೇಜಿನಲ್ಲಿ ಓದು ಮುಗಿಸಿ ಬಿಟ್ಟು ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಹಳೆ ವಿದ್ಯಾರ್ಥಿ ಸಂಘದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ರಜತ ಮಹೋತ್ಸವದ ಸಂಭ್ರಮದ 2ನೇ ದಿನ ಭಾನುವಾರ ಕಾರ್ಯಕ್ರಮದ ಅಂಗವಾಗಿ ಸ್ಮರನ ಸಂಚಿಕರ ಬಿಡುಗಡೆ ಮಾಜಿ ಅಧ್ಯಕ್ಷರಿಗೆ ಸನ್ಮಾನ, ಸಮಾರೋಪ ಸಮಾರಂಭ ಪ್ರತಿಭಾಪುರಸ್ಕಾರ, ವಿದ್ಯರ್ಥಿ ವೇತನ ವಿತರಣೆ ಕಾರ್ಯಕ್ರಮಗಳು ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆಯಿತು. ರಜತ ಮಹೋತ್ಸವದ ಸಂಬ್ರಮದ ನೆನಪಿಗಾಗಿ ಬೆಳ್ಳಿರಥ ಸ್ಮರಣ ಸಂಚಿಕೆಯನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷರಾದ ಕೃಷ್ಣಾನಂದ ಚಾತ್ರ ಬಿಡುಗಡೆಗೊಳಿಸಿ ಮಾತನಾಡುತ್ತಾ ಉಡುಪಿ ಜಿಲ್ಲೆಯಲ್ಲಿ ಬ್ರಾಹ್ಮಣ ಸಂಘಟನೆಯು ಉತ್ತಮವಾಗಿದ್ದು ಹಾಗೆಯೆ ಉಪ್ಪುಂದ ವಲಯವು ಕಳೆದ ೨೫ ವರ್ಷಗಳಿಂದಲೂ ಉತ್ತಮವಾಗಿ ಸಂಘಟನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದು. ಸಂಘಟನೆಗೆ ತನ್ನದೇ ವಿಶೇಷ ಕೊಡುಗೆ ನೀಡಿದ್ದು ಜಿಲ್ಲೆಯಲ್ಲಿಯೇ ಗೌರವಕ್ಕೆ ಪಾತ್ರವಾದ ವಲಯವಾಗಿರುತ್ತದೆ ಎಂದು ಹೇಳಿದರು. ಈ ಸಂದಂರ್ಭದಲ್ಲಿ ವಲಯದ ಮಾಜಿ ಅಧ್ಯಕ್ಷರುಗಳಾದ ಯು. ರಮೇಶ್ ವೈದ್ಯ ಹಿರಿಯಣ್ಣ ರಾವ್, ದೀಟಿ ಸೀತಾರಾಮ ಮಯ್ಯ, ಬಿ. ಗಣೇಶ್ ಮಯ್ಯ, ಹೆಚ್.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ದಶಮಾನೋತ್ಸವ ಸಂಭ್ರಮದಲ್ಲಿರುವ ಕಲಾಕ್ಷೇತ್ರ ಕುಂದಾಪುರ ಸಂಸ್ಥೆ ಆಯೋಜಿಸಿದ ಪ್ರಕಾಶ ಯಡಿಯಾಳ್ ಹಾಗೂ ಅವಿನಾಶ್ ಹೆಬ್ಬಾರ್ ಸಂಸ್ಮರಣೆಯ ಭಜನ್ ಸಂಧ್ಯಾ ಕಾರ್ಯಕ್ರಮ ಬೋರ್ಡ್ ಹೈಸ್ಕೂಲು ಬಯಲು ರಂಗಮಂದಿರದಲ್ಲಿ ಶನಿವಾರ ಜರುಗಿತು. ಉಸ್ತಾದ್ ಹುಮಾಯುನ್ ಹರ್ಲಾಪುರ್ ಶಿವಮೊಗ್ಗ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಜರುಗಿತು. ತಬಲದಲ್ಲಿ ವಿದ್ವಾನ್ ಅಕ್ಷಯ್ ಜೋಶಿ ಹುಬ್ಬಳ್ಳಿ, ಸಹಗಾಯನದಲ್ಲಿ ನಿಶಾದ್ ಹರ್ಲಾಪುರ್, ಹಾರ್ಮೊನಿಯಂನಲ್ಲಿ ವಿದ್ವಾನ್ ಭರತ್ ಹೆಗಡೆ ಶಿರಸಿ, ತಂಬೂರಿಯಲ್ಲಿ ದಿಲ್‌ಶಾದ್ ಹರ್ಲಾಪುರ್ ಸಹಕರಿಸಿದರು. ಪ್ರಕಾಶ ಯಡಿಯಾಳ್ ಹಾಗೂ ಅವಿನಾಶ್ ಹೆಬ್ಬಾರ್ ಅವರ ಭಾವಚಿತ್ರಕ್ಕೆ ಪುಪ್ಪ ಅರ್ಪಿಸಿದ ಖುಷಿ ಯಡಿಯಾಳ್, ಧ್ವನಿ ಯಡಿಯಾಳ್ ಅವ್ಯಕ್ತ ಹೆಬ್ಬಾರ್ ಹಾಗೂ ಅಲಕಾ ಹೆಬ್ಬಾರ್ ನುಡಿನಮನ ಸಲ್ಲಿಸಿದರು. ಚಕ್ರೇಶ್ ಯಡಿಯಾಳ್ ಕಲಾವಿದರನ್ನು ಗೌರವಿಸಿದರು. ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಕುಂದಾಪುರ ಪ್ರಸ್ತಾವಿಕ ಮಾತುಗಳನ್ನಾಡಿದರು. ಭಜನ್ ಸಂಧ್ಯಾಕ್ಕೂ ಮುನ್ನ ಸುಮುಖ ಆಚಾರ್ಯ ಅವರಿಂದ ಸಿತಾರ್ ವಾದನ ಜರುಗಿತು. ರಾಜೇಶ್ ಭಾಗವತ್ ತಬಲಾ ವಾದಕರಾಗಿ ಸಹಕರಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊಲ್ಲೂರಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್‌ನಲ್ಲಿ ಡಿ.೯ರಂದು ವಿಷ ಕುಡಿದ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಅವರು ದಂಪತಿಗಳಲ್ಲ ಬದಲಿಗೆ ಈವರಿಗೂ ಪ್ರತ್ಯೇಕ ವಿವಾಹವಾಗಿ ಮಕ್ಕಳಿದ್ದರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ರಾಜಕುಮಾರ್ ಹಾಗೂ ಸಂಗೀತಾ ಇಬ್ಬರೂ ಕೂಡ ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಂದೇ ಊರಿನವರು. ಮೃತ ರಾಜಕುಮಾರ್‌ಗೆ ಮೂರು ಮಕ್ಕಳಿದ್ದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗೀತಾಗೆ ಇಬ್ಬರು ಮಕ್ಕಳಿದ್ದಾರೆ. ರಾಜಕುಮಾರ್ ಆದಿ ಉಡುಪಿಯಗೆ ಕೂಲಿ ಕೆಲಸಕ್ಕಾಗಿ ಬರುತ್ತಿದ್ದ. ಆತನ ಪತ್ನಿ ಮಕ್ಕಳು ಕೊಯಮತ್ತೂರಿನಲ್ಲಿಯೇ ವಾಸವಿದ್ದಾರೆ. ಸಂಗೀತಳ ಪತಿ ಕೂಡ ಅದೇ ಊರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಕುಮಾರ್ ಮತ್ತು ಸಂಗೀತ ಇಬ್ಬರು ಪ್ರೇಮಿಗಳಾಗಿದ್ದು ಕೊಲ್ಲೂರಿಗೆ ಬರುವ ಮುನ್ನಾ ದಿನ ಊರು ಬಿಟ್ಟು ಇಲ್ಲಿಗೆ ಬಂದು ಬಸ್ಸಿನಲ್ಲಿ ವಿಷ ಸೇವಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಘಟನೆಯಲ್ಲಿ ರಾಜ್‌ಕುಮಾರ್ ಮೃತಪಟ್ಟಿದ್ದು, ಸಂಗೀತ ಚಿಕಿತ್ಸೆ ಪಡೆಯುತ್ತಿದ್ದಾಳೆ. ರಾಜ್‌ಕುಮಾರ್ ಬಲವಂತದಿಂದ ವಿಷ ಕುಡಿಸಿರುವ ಶಂಕೆ ಇದ್ದು ಘಟನೆಯ ಪೂರ್ಣ ಮಾಹಿತಿ ಇನ್ನಷ್ಟೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ. ವೈ. ರಾಘವೇಂದ್ರ ಅವರು ಇತ್ತಿಚಿಗೆ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ, ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು. ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ರೈಲು ನಿಲುಗಡೆಗೆ ಆದ್ಯತೆ ನೀಡುವಂತೆ ಅವರು ಮನವಿ ಸಲ್ಲಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೆ ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.
ಕುಂದಾಪುರ: ಮರವಂತೆ ಮಹಾರಾಜ ಸ್ವಾಮಿ ವರಾಹ(ಮಾರಸ್ವಾಮಿ) ದೇವಸ್ಥಾನದಲ್ಲಿ ನಡೆವ ವಿಶಿಷ್ಟ ಆಭಾರಿ ಸೇವೆ ಗುರುವಾರ ಸಂಪನ್ನವಾಯಿತು. ಕೃಷಿಕರು ಉತ್ತಮ ಮಳೆ, ಬೆಳೆಗೆ, ಮೀನುಗಾರರು ಸಮೃದ್ಧ ಮೀನುಗಾರಿಕೆ ನಡೆಯಬೇಕೆಂದು ಆಭಾರಿ ಹರಕೆ ಹೊತ್ತು ಸಾಮೂಹಿಕವಾಗಿ ಅದನ್ನು ಸಲ್ಲಿಸುವ ಪದ್ಧತಿ ಇಲ್ಲಿದೆ. ಅದರಂತೆ ನಾಡ, ಹಡವು ಮತ್ತು ಸೇನಾಪುರ ಗ್ರಾಮಗಳ ಕೃಷಿಕರು ಗುರುವಾರ ಸೇವೆ ಸಲ್ಲಿಸಿದರು. ಮೀನುಗಾರರು ಎಲ್ಲ ಸೇರಿ ಇದನ್ನು ನಡೆಸಿದರೆ, ಕೃಷಿಕರು ದೇಣಿಗೆ ಸಂಗ್ರಹಿಸಿ ಈ ಸೇವೆ ಸಲ್ಲಿಸುತ್ತಾರೆ. ಆಭಾರಿ ಸೇವೆಯ ಅಂಗವಾಗಿ ವೇದಮೂರ್ತಿ ಹಡನ ಗುಂಡಿ ಗೋಪಾಲಕೃಷ್ಣ ಪುರಾಣಿಕರ ಅಧ್ವರ್ಯದಲ್ಲಿ ಗಂಗಾಧರ ದೇವಸ್ಥಾ ನದಲ್ಲಿ ಈಶ್ವರನಿಗೆ ರುದ್ರಾಭಿಷೇಕ ನಡೆಸಲಾಯಿತು. ವರಾಹ ದೇವಸ್ಥಾನದಲ್ಲಿ ಚಂಡಿಕಾ ಹೋಮ, ವಿಷ್ಣು ಹೋಮ, ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆಗೆ ಸಿದ್ಧವಾದ ಅನ್ನದ ರಾಶಿಗೆ ಪೂಜೆ ಸಂದಿತು. ಬಳಿಕ ಹನ್ನೆರಡು ಹೆಡಿಗೆ ಅನ್ನವನ್ನು ವಾದ್ಯಘೋಷದ ನಡುವೆ ದೇವಸ್ಥಾನದ ಅಂಚಿನಲ್ಲಿರುವ ಸೌಪರ್ಣಿಕಾ ನದಿಗೆ ಒಯ್ದು ಬ್ರಾಹ್ಮಣರ ಮಂತ್ರೋಚ್ಛಾರಣೆ ಮತ್ತು ಭಕ್ತರ ಘೋಷದ ನಡುವೆ ನೀರಿಗೆ ಸುರಿಯಲಾಯಿತು. ಇಲ್ಲಿ ಅನಾದಿಕಾಲದಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೀರ್ಣೋದ್ಧಾರಗೊಳ್ಳುತ್ತಿರುವ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿಯ ಎಲ್ಲಾ ಗರಡಿಗಳಿಗಿಂತ ವಿಶಿಷ್ಟವಾಗಿ ನಿರ್ಮಾಣಗೊಂಡಿರುವ ಗರಡಿ ಶಿಲೆ ಹಾಗೂ ಕಾಷ್ಟಶಿಲ್ಪ ಸುಂದರವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ಸೂಚಿಸಿದರು. ಈ ಸಂದರ್ಭ ಯಡ್ತರೆ ಗ್ರಾಪಂ ಉಪಾಧ್ಯಕ್ಷ ನಾಗರಾಜ ಗಾಣಿಗ, ಸದಸ್ಯ ಉಮೇಶ್, ಆನಂದ ಶೆಟ್ಟಿ, ವೆಂಕಟರಮಣ, ಸ್ಥಳೀಯರಾದ ಎಸ್. ಮದನಕುಮಾರ್ ಉಪ್ಪುಂದ, ಸುರೇಶ್ ಹೋಬಳಿದಾರ್, ಮಂಜುನಾಥ ಪೂಜಾರಿ ತಗ್ಗರ್ಸೆ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ, ಉಪ್ಪುಂದ ಬಿಲ್ಲವ ಸಂಘದ ಗಣೇಶ್ ಪೂಜಾರಿ, ಶೇಖರ ಪೂಜಾರಿ, ಶಿರೂರು ಬಿಲ್ಲವ ಸಂಘದ ಚಿಕ್ಕು ಪೂಜಾರಿ, ರಘುರಾಮ ಪೂಜಾರಿ, ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವೆಂಕಟ ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚಲಿಸುವ ಬಸ್‌ನಲ್ಲಿಯೇ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ದಂಪತಿ ಹಾಗೂ ಮಗುವಿನ ಪೈಕಿ ಪತಿ ರಾಜಕುಮಾರ್ (35) ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆ ಗುರುವಾರ ರಾತ್ರಿ ಮೃತಪಟ್ಟಿದ್ದು, ಪತ್ನಿ ಸಂಗೀತಾ (28) ವೆನ್‌ಲಾಕ್ ಆಸ್ಪತ್ರೆ ತೀವ್ರ ನಿಗಾ ವಿಭಾಗದಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಮಗು ಉಡುಪಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚೇತಿರಿಸಿಕೊಳ್ಳುತಿದೆ ಎನ್ನಲಾಗಿದೆ. ಕೊಲ್ಲೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ನಲ್ಲಿ ಅವರು ವಿಷ ಸೇವಿಸಿದ್ದರು. ಗಂಭೀರ ಸ್ಥಿತಿಯಲ್ಲಿ ಇದ್ದ ದಂಪತಿ ಪ್ರಾಣ ಉಳಿಸುವ ಯತ್ನ ನಡೆಸಿದ ಬಸ್‌ನ ಚಾಲಕ ಹಾಗೂ ನಿರ್ವಾಹಕ ಇಬ್ಬರು ಕಟ್‌ಬೇಲ್ತೂರಿನಿಂದ ಕುಂದಾಪುರದವರೆಗೆ ಎಲ್ಲಿಯೂ ಬಸ್ ನಿಲುಗಡೆ ಮಾಡದೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತಂದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೊದಲು ಉಡುಪಿ ಅಜ್ಜರಕಾಡುವಿನ ಸರಕಾರಿ ಆಸ್ಪತ್ರೆಗೆ, ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷ ಸೇವನೆ ಮಾಡಿದ ದಂಪತಿ ತಮಿಳುನಾಡಿನ ಚಿನೈ ಮೂಲದವರಾಗಿದ್ದು ಕೂಲಿ ಕೆಲಸ ಮಾಡಲು ಉಡುಪಿ ಅಂಬಲಪಾಡಿಯಲ್ಲಿ ಕೆಲವು ದಿನಗಳಿಂದ…
ಕುಂದಾಪ್ರ ಡಾಟ್ ಕಾಂ’ ಸುದ್ದಿ ಕುಂದಾಪುರ: ಸಾಮಾಜಿಕವಾಗಿ ತುಳಿತಕ್ಕೊಳಗಾಗಿದ್ದ ಬಿಲ್ಲವ ಸಮಾಜ ರಾಷ್ಟ್ರೀಯತೆಯ ವಿಚಾರ ಬಂದಾಗ ಎಲ್ಲವನ್ನೂ ಮೆಟ್ಟಿ ನಿಂತು ರಾಷ್ಟ್ರಪ್ರೇಮೆ ಮೆರೆದಿರುವುದು ನಮ್ಮ ಸಮಾಜದ ಹೆಮ್ಮೆ. ಒಂದೇ ಜಾತಿ, ಒಂದೇ ಮತ ಎನ್ನುವ ಧ್ಯೇಯ ವಾಕ್ಯದೊಂದಿಗೆ ನಮ್ಮ ಗುರುಗಳಾದ ನಾರಾಯಣಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಿ ಬಂದಿದ್ದೇವೆ. ಸಮಾನತೆ, ಜಾತೀಯತೆ, ರಾಷ್ಟ್ರೀಯತೆಗೆ ಭಂಗವಾದಾಗ ಜೈಲಿಗೆ ಹೋಗಿ ಕೊಳೀತಾ ಇರುವವರು ಬಿಲ್ಲವರು. ಆದರೆ ಇದೇ ತತ್ವವನ್ನು ದುರುಪಯೋಗಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದ್ದು, ಹಿಂದೂ ಧರ್ಮವನ್ನು ಒಡೆದು ಆಳುವ ತಂತ್ರಕ್ಕೆ ಬಿಲ್ಲವ ಸಮಾಜದ ವಿರೋಧವಿದೆ ಎಂದು ಅಚ್ಯುತ್ ಅಮೀನ್ ಕಲ್ಮಾಡಿ ಹೇಳಿದರು. ಅವರು ಕುಂದಾಪುರದ ಪಾರಿಜಾತ ಹೊಟೇಲ್ ಸಭಾಂಗಣದಲ್ಲಿ ಜನವರಿ ೯ರಂದು ಹಮ್ಮಿಕೊಳ್ಳಲಾದ ಬಿಲ್ಲವ ಮುಸ್ಲಿಂ ಸ್ನೇಹ ಸಮಾವೆಶವನ್ನು ವಿರೋಧಿಸಿ ನಡೆಸಲಾದ ಸಮಾಲೋಚನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ದೇಶದಲ್ಲಿ ಇರುವ ವಿಭಿನ್ನ ಸಂಸ್ಕೃತಿಯೊಂದಿಗೆ ಬಿಲ್ಲವ ಸಮಾಜಕ್ಕೆ ಪ್ರತ್ಯೇಕವಾಗಿ ಸ್ನೇಹ ಸಮ್ಮಿಲನ ನಡೆಸುವ ಅಗತ್ಯ ಇನ್ನೂ ಬಂದಿಲ್ಲ. ಅದು ಬರುವುದಕ್ಕೂ ಬಿಡುವುದಿಲ್ಲ. ಗೋವಿನ ಆರಾಧಕಾರಾದ…
