ಕುಂದಾಪುರ ಪುರಸಭೆ ಸಭೆಯಲ್ಲಿ ಮರಳಿನದ್ದೇ ಗದ್ದಲ, ಜಿಲ್ಲಾಧಿಕಾರಿ ಧೋರಣೆ ಬಗ್ಗೆ ಅಸಮಾಧಾನ

Call us

Call us

Call us

ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿರುವ ಮರಳು ಗಣಿಗಾರಿಕೆಗೆ ಪುರಸಭೆಯಿಂದ ನಿರಪೇಕ್ಷಣಾ ಪತ್ರ ಪಡೆಯದ ಹಾಗೂ ಅನಧಿಕೃತ ಮರಳು ಕಡುವುಗಳನ್ನು ನಿಷೇಧಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ವಾದವಿವಾದಗಳೆದ್ದಿತು.

Call us

Click Here

[quote bgcolor=”#ffffff” arrow=”yes” align=”right”]ಉಪಾಧ್ಯಕ್ಷ ಕುರ್ಚಿ ತ್ಯಜಿಸಿದ ಕಾಮಧೇನು
ಪುರಸಭಾ ಉಪಾಧ್ಯಕ್ಷ ನಾಗರಾಜ ಕಾಮಧೇನು ಸಭೆಯ ಆರಂಭದಲ್ಲಿ ಉಪಾಧ್ಯಕ್ಷರ ಖುರ್ಚಿಯಲ್ಲಿ ಕುಳಿತುಕೊಳ್ಳದೇ ಉಳಿದ ಸದಸ್ಯರುಗಳೊಂದಿಗೆ ಕುಳಿತಿದ್ದರು. ಅಧ್ಯಕ್ಷೆ ಕಲಾವತಿ ಉಪಾಧ್ಯಕ್ಷರ ಕುರ್ಚಿಯಲ್ಲೇ ಕುಳಿತುಕೊಳ್ಳುವಂತೆ ಕೇಳಿಕೊಂಡಾಗ, ಕಳೆದ ಬಾರಿಯ ನಾಮನಿರ್ದೇಶಿತ ಸದಸ್ಯೆ ದೇವಕಿ ಸಣ್ಣಯ್ಯ ಅವರು ತನಗೆ ಸಭೆಯಲ್ಲಿ ಅಗೌರವ ತೋರಿ ಮಾತನಾಡಿದ್ದಾರೆ. ಅವರು ಬಂದು ಕ್ಷಮೆ ಕೇಳುವವರೆಗೂ ತಾನು ಅಲ್ಲಿ ಕೂರುವುದಿಲ್ಲ ಎಂದು ಪಟ್ಟು ಹಿಡಿದರು. ಇವರಿಗೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸುರೇಶ್ ನಾಯಕ್ ಸಾಥ್ ನೀಡಿದರು. ಸಭೆಯಲ್ಲಿ ಗೈರು ಹಾಜರಿದ್ದ ದೇವಕಿ ಸಣ್ಣಯ್ಯ ಅವರು ಪತ್ರಮುಖೇನ ಕ್ಷಮಾಪಣೆ ಕೋರಿದ್ದರೂ ಸಭೆಯ ಮುಂದೆ ಬಂದು ಕ್ಷಮೆ ಕೋರಬೇಕು ಎಂದು ಕಾಮಧೇನು ಪಟ್ಟುಹಿಡಿದಾಗ ಪರಿಸ್ಥಿತಿ ತಿಳಿಗೊಳಿಸಲು 10 ನಿಮಿಷ ಸಭೆಯನ್ನು ಮುಂದೂಡಲಾಯಿತು.[/quote]

ಸಂಗಮ್ ಸೇತುವೆಯ ಬಳಿ ಹಾಗೂ ಕೋಡಿ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮರಳುಗಾರಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಪುರಸಭೆಯಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಂದೆ ಈ ಪ್ರದೇಶಗಳಲ್ಲಿ ಯಾವುದಾದರೂ ಅನಾಹುತಗಳಾದರೆ ಅದಕ್ಕೆ ಯಾರು ಹೊಣೆ ಎಂದು ಸದಸ್ಯ ರಾಜೇಶ್ ಕಾವೇರಿ ಅವರು ಪ್ರಶ್ನಿಸಿದ್ದಕ್ಕೆ, ಸದಸ್ಯ ಸಂದೀಪ್ ಖಾರ್ವಿ ಆಕ್ಷೇಪಿಸಿ ಕೋಡಿ ಭಾಗದಲ್ಲಿ ಮರಳುಗಾರಿಕೆ ನಿಷೇಧಿಸಿ ಆದರೆ ಆ ಕೂಡಲೇ ಅಲ್ಲಿನ ಹೂಳೆತ್ತುವ ಕೆಲಸ ಮಾಡಿಸಬೇಕು ಎಂದು ಆಗ್ರಹಿಸಿದಾಗ, ಸದಸ್ಯ ಮೋಹನದಾಸ್ ಶೆಣೈ ಮಾತನಾಡಿ ಕೋಡಿಯ ಮೀನುಗಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದಗಳಾಗುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿದ್ದು, ಅದರ ಆಧಾರದಲ್ಲಿಯೇ ಈ ಪ್ರಶ್ನೆಯನ್ನೆತ್ತಿದ್ದೇವೆ ಎಂದರು.

ಬಳಿಕ ಪುರಸಭೆಯ ಹಿರಿಯ ಸದಸ್ಯ ಮೋಹನದಾಸ್ ಶೆಣೈ ಎಲ್ಲಾ ಸದಸ್ಯರ ಪರವಾಗಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಬಳಿಕ ಉಪಾಧ್ಯಕ್ಷರ ಮನವೊಲಿಸುವಲ್ಲಿ ಯಶಸ್ವಿಯಾದರು. ಎಲ್ಲಾ ಸದಸ್ಯರ ಮಾತಿಗೆ ಬೆಲೆ ನೀಡಿ ಮತ್ತೆ ಉಪಾಧ್ಯಕ್ಷರ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿರುವುದಾಗಿ ಕಾಮಧೇನು ಹೇಳಿದರು.

ಸದಸ್ಯ ಶ್ರೀಧರ ಶೇರಿಗಾರ್ ಹಾಗೂ ಇತರ ಸದಸ್ಯರು ಮರಳುಗಾರಿಕೆಯಿಂದ ಪ್ರತಿಭಾರಿ ಸಭೆ ಹಾಳಾಗುವುದು ಬೇಡ. ಒಂದು ನಿರ್ಣಯ ಮಾಡಿ ಮರಳುಗಾರಿಕೆಯನ್ನು ನಿಲ್ಲಿಸಲು ಒಕ್ಕೊರಲಿನಿಂದ ತೀರ್ಮಾನಿಸಿ ಎಂದು ಹೇಳಿದಾಗ, ಸಭೆಯಲ್ಲಿದ್ದ ಬಹುಪಾಲು ಸದಸ್ಯರು ಬೆಂಬಲ ಸೂಚಿಸಿದರು.

Click here

Click here

Click here

Click Here

Call us

Call us

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ, ಈಗಾಗಲೇ ಒಂದು ಸರ್ವೆ ನಂಬರಿಗೆ ಪರವಾನಿಗೆ ಪಡೆದು ಬೇರೆ ಜಾಗದಲ್ಲಿ ಮರಳುಗಾರಿಕೆ ನಡೆಸುತ್ತಿರುವವರನ್ನು ಬಗ್ಗೆ ತನಿಕೆ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳೊಂದಿಗೆ ಸದರಿ ಪ್ರದೇಶಗಳಿಗೆ ತೆರಳಿ ಸರ್ವೇ ನಂಬರ್ ಗುರುತಿಸಿ, ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದರೇ ಅವುಗಳನ್ನು ನಿಲ್ಲಿಸಲಾಗುವುದು ತಿಳಿಸಿದರು.

ಮೋಹನದಾಸ್ ಶೆಣೈ ಅವರು ಮೊಬೈಲ್ ಟವರುಗಳಿಗೆ ಶುಲ್ಕ ವಿಧಿಸುವ ಆದೇಶ ಬಂದಿರುವ ಬಗ್ಗೆ ಪ್ರಶ್ನಿಸಿದಾಗ ಪುರಸಭಾ ವ್ಯಾಪ್ತಿಯಲ್ಲಿರುವ ಮೊಬೈಲ್ ಟವರುಗಳನ್ನು ಗುರುತಿಸುವ ಪ್ರಕ್ರಿಯೆ ನಡೆದಿದ್ದು, ಶೀಘ್ರವೇ ಅವುಗಳಿಗೆ ಶುಲ್ಕ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿಗಳು ಉತ್ತರಿಸಿದರು.

ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಅದಕ್ಕೊಂದು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸದಸ್ಯೆ ವಸಂತಿ ಸಾರಂಗ ಹೇಳಿದಾಗ, ನಾಯಿಗಳನ್ನು ವಧೆ ಮಾಡುವಂತಿಲ್ಲ. ಆದರೆ ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಬಹುದು, ಅದಕ್ಕೆ ಸದಸ್ಯರ ಕಡೆಯಿಂದ ನಿರ್ಣಯ ಮಾಡುವ ಅಗತ್ಯವಿದೆ. ಹುಚ್ಚುನಾಯಿಗಳಿಂದ ತೊಂದರೆಗೊಳಾಗುತ್ತಿದ್ದರೇ ಪುರಸಭೆಗೆ ತಿಳಿಸಿದಲ್ಲಿ ಅವುಗಳನ್ನು ಕೊಲ್ಲಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಉತ್ತರಿಸಿದರು.

[box type=”custom” bg=”#eded93″ radius=”6″ border=”#dd3333″]ಜಿಲ್ಲಾಧಿಕಾರಿ ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ

ಉಡುಪಿ ಜಿಲ್ಲಾಧಿಕಾರಿ ಡಾ. ವಿಶಾಲ್ ಅವರ ಸ್ಥಾನಕ್ಕೆ ನಮ್ಮ ಗೌರವವಿದೆ. ಆದರೆ ಅವರು ಆಡಳಿತ ವೈಖರಿ ಮಾತ್ರ ತೃಪ್ತಿ ತರುತ್ತಿಲ್ಲ ಎಂದು ಪುರಸಭಾ ಸದಸ್ಯರು ಆರೋಪಿಸಿದ್ದಾರೆ. ಮರಳುಗಾರಿಕೆಯ ಬಗ್ಗೆ ನಮ್ಮ ನಿರ್ಣಯವನ್ನು ಸ್ಪಷ್ಟವಾಗಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಜಿಲ್ಲಾಧಿಕಾರಿಯವರು ಬೇಜವಾಬ್ದಾರಿ ಮೆರೆದಿದ್ದಾರೆ. ಅವರು ಪುರಸಭೆ ಎನ್ನುವುದು ಚುನಾಯಿತ ಪ್ರತಿನಿಧಿಗಳಿಂದಾದ ಸಂಸ್ಥೆಯೆಂಬುದನ್ನು ಮರೆತಂತೆ ಕಾಣುತ್ತದೆ ಎಂದು ಆರೋಪಿಸಿದರು.[/box]

Town minicipality corporation general meeting sep TMC (2) Town minicipality corporation general meeting sep TMC (3) Town minicipality corporation general meeting sep TMC (4) Town minicipality corporation general meeting sep TMC (5)

Leave a Reply