Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅವನೊಬ್ಬ ಇರ‍್ಬೇಕಿತ್ತು ಅಂತ ಇವತ್ತಿಗೂ ಅನ್ನಿಸ್ತಿದೆ…
    ವಿಶೇಷ ಲೇಖನ

    ಅವನೊಬ್ಬ ಇರ‍್ಬೇಕಿತ್ತು ಅಂತ ಇವತ್ತಿಗೂ ಅನ್ನಿಸ್ತಿದೆ…

    Updated:25/10/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ನರೇಂದ್ರ ಎಸ್. ಗಂಗೊಳ್ಳಿ

    Click Here

    Call us

    Click Here

    ಇವತ್ತಿಗೆ ಸರಿಯಾಗಿ ಇಪ್ಪತ್ತೈದು ವರುಷಗಳ ಹಿಂದಿನ ಮಾತು. ಅ೦ದರೆ 1990ನೇ ಇಸವಿ ಸೆಪ್ಟೆಂಬರ್ 30ನೇ ತಾರೀಕು. ಆ ದಿನ ಬೆಳಕು ಹರಿಯುತ್ತಿದ್ದ೦ತೆ ಸಮಸ್ತ ಕನ್ನಡಿಗರ ಪಾಲಿಗೆ ಬರಸಿಡಿಲಿನ೦ತಹ ಸುದ್ದಿಯೊಂದು ಬ೦ದೆರಗಿತ್ತು. ಕನ್ನಡ ಚಿತ್ರರಂಗದ ವಿಭಿನ್ನ ಕನಸುಗಾರ ನಟ, ನಿರ್ದೇಶಕ ಶಂಕರ್ ನಾಗ್ ಕಾರು ಅಪಘಾತದಲ್ಲಿ ನಿಧನರಾಗಿದ್ದರು. ಯಾರೆಂದರೆ ಯಾರು ಕೂಡ ಆ ಸುದ್ದಿಯನ್ನು ನ೦ಬಲು ತಯಾರಿರಲಿಲ್ಲ. ಇನ್‌ಫ್ಯಾಕ್ಟ್ ಅ೦ತಾದ್ದೊ೦ದು ವ್ಯಕ್ತಿತ್ವವನ್ನು ಕಳೆದುಕೊಳ್ಳುವುದು ಯಾರಿಗೂ ಕೂಡ ಬೇಕಿರಲಿಲ್ಲ. ಆದರೆ ಆ ದಿನದ ಸತ್ಯ ತು೦ಬಾ ಕಹಿಯಾಗಿಯೇ ಇತ್ತು. ಶ೦ಕರ್ ನಾಗ್ ಇನ್ನೆಂದೂ ಬಾರದ ಲೋಕಕ್ಕೆ ಹೊರಟುಹೋಗಿಯಾಗಿತ್ತು. ಹೌದು. ಶಂಕರ್ ನಾಗ್ ನಮ್ಮನ್ನು ಅಗಲಿ ಇವತ್ತಿಗೆ ಸರಿಯಾಗಿ ಇಪ್ಪತ್ತೈದು ವರುಷಗಳು ಕಳೆದುಹೋಗಿವೆ. ಹಾಗೆ ಬರೋಬ್ಬರಿ ಅಷ್ಟೊಂದು ವರ್ಷಗಳ ಬಳಿಕವೂ ಕನ್ನಡ ಚಿತ್ರರಂಗದಿಂದ ಹಿಡಿದು ಆಟೋ ಡ್ರೈವರ್ ವರೆಗೂ, ಅಭಿಮಾನಿಗಳಷ್ಟೇ ಏಕೆ ಶಂಕರ್ ನಾಗ್ ಕುರಿತು ಅಷ್ಟಾಗಿ ತಿಳಿದಿರದವರಿಗೂ ಕೂಡ ಅವನೊಬ್ಬಇರ‍್ಬೇಕಿತ್ತು ಅಂತ ಈ ಹೊತ್ತಿಗೂ ಅನ್ನಿಸ್ತಿದ್ರೆ, ಶ೦ಕರ್ ಬಗೆಗೆ ಮಾತು ಬಂದಾಗಲೆಲ್ಲಾ ಆತನ ಪರಿಚಿತರು, ಸ್ನೇಹಿತರು ಹೃದಯ ತುಂಬಿಕೊ೦ಡು ಕಣ್ಣಾಲಿಗಳನ್ನು ಒದ್ದೆ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಕಾರಣವಾಗಿದ್ದು ಶಂಕರ್ ನಾಗ್ ಎಂಬ ಅದ್ಭುತ ಮನುಷ್ಯನ ಮಹಾನ್ ವ್ಯಕ್ತಿತ್ವ.

    Shankar nagಹೌದು ಶಂಕರ್ ನಾಗ್ ಕೇವಲ ಒಬ್ಬ ನಟನಾಗಿರಲಿಲ್ಲ. ಹಾಗೆ ಒಬ್ಬ ನಟನಷ್ಟೇ ಆಗಿದ್ದಿದ್ದರೆ ಶಂಕರ್ ನಾಗ್ ಅವರನ್ನು ಇವತ್ತಿಗೂ ಇಷ್ಟೊ೦ದು ತೀವ್ರವಾಗಿ ನೆನಪಿಸಿಕೊಳ್ಳಬೇಕಾದ ಅಗತ್ಯತೆಯೂ ಇರಲಿಲ್ಲ. ನಿಜ ಶಂಕರ್ ಒಳಗಡೆ ಒಬ್ಬ ಅದ್ಭುತ ಕನಸುಗಾರನಿದ್ದ. ಅದಕ್ಕಿಂತ ಹೆಚ್ಚಾಗಿ ಶ೦ಕರ್ ತನ್ನ ಕನಸುಗಳನ್ನು ನನಸಾಗಿಸುವತ್ತ ತೀವ್ರ ಪ್ರಯತ್ನಗಳನ್ನು ನಡೆಸುತ್ತಿದ್ದರು. ಅವನ ಕನಸುಗಳಿದ್ದದ್ದು ಕೇವಲ ಚಿತ್ರರಂಗಕ್ಕೆ ಬಗೆಗೆ ಮಾತ್ರವಲ್ಲ. ಆ ಕಾಲದಲ್ಲೇ ಅವರು ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಕುರಿತು ಆಲೋಚಿಸುತ್ತಿದ್ದರು. ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗು ಕಡಿಮೆ ಅವಧಿಯಲ್ಲಿ ಜನತಾ ಮನೆಗಳನ್ನು ನಿರ್ಮಿಸುವುದರ ಕುರಿತು ಯೋಜನೆ ಹಾಕಿಕೊಂಡಿದ್ದರು. ಬೆಂಗಳೂರಿನಲ್ಲಿ ಸರ್ಕ್ಯೂಲರ್ ರೈಲಿನ ಸೌಲಭ್ಯ (ಮೆಟ್ರೋ)ದ ಕುರಿತು ಆಲೋಚಿಸಿದ್ದರು. ದೇಶದಲ್ಲಿಯೇ ವಿಶಿಷ್ಠವಾದ ಕಂಟ್ರಿಕ್ಲಬ್ ನಿರ್ಮಾಣ, ಸಕಲ ಸೌಲಭ್ಯಗಳುಳ್ಳ ಸ್ಟುಡಿಯೋ ಒಂದರ ನಿರ್ಮಾಣ, ಚೆಂದದೊ೦ದು ನಾಟಕ ಶಾಲೆ… ವ್ಹಾವ್ ಒಂದಲ್ಲ ಎರಡಲ್ಲ ನೂರಾರು ಕನಸುಗಳು. ಇವತ್ತು ಕಂಟ್ರಿಕ್ಲಬ್, ಸಂಕೇತ್ ಸ್ಟುಡಿಯೋ, ರಂಗಶ೦ಕರಗಳು ಶಂಕರ್ ನಾಗ್ ಕನಸಿನ ಒಂದು ಭಾಗವಾಗಿ ಬೆಳೆದು ನಿಂತಿವೆ.

    ಶಂಕರ್ ಒಬ್ಬ ಅತ್ಯುತ್ತಮ ನಿರ್ದೇಶಕನಾಗಿದ್ದರು. ಆರ್ ಕೆ ನಾರಾಯಣ್ ಅವರ ಕೃತಿಯನ್ನು ಆಧರಿಸಿ ನಿರ್ಮಿಸಿದ ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರಗೊ೦ಡ ಮಾಲ್ಗುಡಿ ಡೇಸ್ ಶಂಕರ್ ಪ್ರತಿಭೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯ ಮಾಡಿಕೊಟ್ಟಿತ್ತು. ಅಷ್ಟು ಸುಲಭಕ್ಕೆ ಯಾರನ್ನೂ ಹೊಗಳದ ಆರ್. ಕೆ ನಾರಾಯಣ್ ಶಂಕರನ ದಿವ್ಯ ಪ್ರತಿಭೆಗೆ ಶಹಬ್ಬಾಸ್ ಎ೦ದು ಮನತುಂಬಿ ಶ್ಲಾಘಿಸಿದ್ದರು. ಮಿಂಚಿನ ಓಟ, ಗೀತಾ, ನೋಡಿ ಸ್ವಾಮಿ ನಾವಿರೋದು ಹೀಗೆ, ಅಕ್ಸಿಡೆ೦ಟ್, ಒ೦ದು ಮುತ್ತಿನ ಕತೆ ಇಂತಹ ಅಪರೂಪದ ಚಿತ್ರಗಳು ಶಂಕರ್ ನಾಗ್ ಏನು ಅನ್ನುವುದನ್ನು ಎಲ್ಲರಿಗೂ ತಿಳಿಸಿಕೊಟ್ಟವು. ಡಾ.ರಾಜಕುಮಾರ್ ನಟಿಸಿದ್ದ ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕತೆ ತನ್ನ ವಿಭಿನ್ನ ಮೇಕಿಂಗ್ ನಿ೦ದ ಗಮನ ಸೆಳೆದಿತ್ತು. ನೀರೊಳಗೆ ಚಿತ್ರಿಸಿದ ದೃಶ್ಯಗಳು ರೋಮಾಂಚನ ಮೂಡಿಸಿದ್ದವು.

    1978 ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದಲ್ಲಿ ನಟಿಸಿದ ‘ಒಂದಾನೊ೦ದು ಕಾಲದಲ್ಲಿ’ ಚಿತ್ರದ ಬಾಡಿಗೆ ಬಂಟ ಕಳರಿಪಯಟ್ಟಂ ಪರಿಣತನ ಪ್ರಥಮ ಪಾತ್ರಕ್ಕೆ ಶಂಕರ್‌ನಾಗ್ ರಾಷ್ಟ್ರ ಮಟ್ಟದ ಶ್ರೇಷ್ಠ ನಟ ಪುರಸ್ಕಾರ ಪಡೆದಿದ್ದರು. ಇವರ ಆಕ್ಸಿಡೆಂಟ್ ಚಿತ್ರಕ್ಕೆ ಕೇಂದ್ರ ಸರಕಾರದ ಪ್ರಶಸ್ತಿ ಒಲಿದು ಬಂದಿತ್ತು. ಶಂಕರ್ ನಾಗ್ ಕುವೆಂಪು ಅವರ ‘ಕಾನೂರು ಹೆಗ್ಗಡತಿ’ಯನ್ನು ಕಿರುತೆರೆಗೆ ಇಳಿಸುವ ಕುರಿತು ಆಲೋಚಿಸಿದ್ದರು.

    Click here

    Click here

    Click here

    Call us

    Call us

    ನಿಮಗೆ ಗೊತ್ತಾ ಶ೦ಕರ್ ಒಬ್ಬ ಅದ್ಭುತ ಅಪ್ರತಿಮ ಎನ್ನುವಂತಹ ನಟನಾಗಿರಲಿಲ್ಲ. ಅದನ್ನೇ ಅವನು ಸಹ ನಿರ್ಭಿಡೆಯಿಂದ ಒಪ್ಪಿಕೊಳ್ಳುತ್ತಿದ್ದರು. ಆದರೆ ಅವರು ಅಭಿನಯಿಸುವ ಪ್ರತೀ ಪಾತ್ರಕ್ಕೂ ನ್ಯಾಯ ಸಲ್ಲಿಸುತ್ತಿದ್ದರು. ಇವತ್ತಿಗೂ ಚಲನಚಿತ್ರರ೦ಗದಲ್ಲಿ ಪೋಲಿಸು ಅಂದ್ರೆ ನೆನಪಾಗೋದು ಎಸ್.ಪಿ.ಸಾಂಗ್ಲಿಯಾನ ಶಂಕರನಾಗ್. ಹಿಂದಿಯ ಉತ್ಸವ್ ಚಿತ್ರದಲ್ಲೂ ಶಂಕರನ ನಟನೆ ಬೆರಗು ಮೂಡಿಸಿತ್ತು. ಆದರೆ ಒರ್ವ ನಟನಿಗಿಂತ ಹೆಚ್ಚಾಗಿ ಶಂಕರ್ ಇನ್ನೇನೇನೋ ಆಗಿದ್ದರು. ಆತ ಅದ್ಭುತ ಎನ್ನುವಂತೆ ತಬಲ ನುಡಿಸುತ್ತಿದ್ದರು. ಸ್ಟಾರ್ ನಟನಾದ ಮೇಲೂ ಆಟೋ ಸೈಕಲ್ಲು, ಬಸ್ಸುಗಳಲ್ಲಿ ಓಡಾಡುತ್ತಿದ್ದ ಶಂಕರ್ ಸರಳ ಬದುಕಿನ ಬಗೆಗೆ ಆಸಕ್ತಿ ಹೊಂದಿದ್ದರು. ಬಟ್ಟೆ ಕಾರು ಮನೆ ಅಂತೆಲ್ಲಾ ವ್ಯಾಮೋಹಕ್ಕೆ ಶಂಕರ್ ಒಳಗಾಗಿರಲಿಲ್ಲ. ಆತ ಅದ್ಭುತ ಎನ್ನಿಸುವಂತಹ ಸ್ಮರಣ ಶಕ್ತಿ ಹೊಂದಿದ್ದರು. ಸ್ನೇಹ ಜೀವಿ, ಜನಾನುರಾಗಿಯಾಗಿದ್ದರು. ಸಮಯ ಪರಿಪಾಲನೆಗೆ ಶ್ರೇಷ್ಠ ಉದಾಹರಣೆಯಂತಿದ್ದರು. ಪ್ರತಿಕ್ಷಣವನ್ನು ಹೇಗೆ ಸಾರ್ಥಕವಾಗಿ ಜೀವಿಸಬೇಕು ಎನ್ನುವವರಿಗೆ ಆದರ್ಶವಾಗಿದ್ದರು. ಮಾತಿಗೂ ಕೃತಿಗೂ ವ್ಯತ್ಯಾಸ ಇಲ್ಲದವನಾಗಿದ್ದರು.

    NARENDRA S GANGOLLI
    ನರೇಂದ್ರ ಎಸ್. ಗಂಗೊಳ್ಳಿ

    ಪಾದರಸದಂತಹ ವ್ಯಕ್ತಿತ್ವ ಅಂತಾರಲ್ಲ. ಅಂತಹ ಚುರುಕುತನಕ್ಕೆ ಮೇರು ಸಾಕ್ಷಿಯಾಗಿದ್ದ. ಸಂದೇಹವೇ ಬೇಡ ಆ ಉಪಮೆ ಶಂಕರ್‌ ನಾಗ್‌ಗೆ ಒಪ್ಪಿದಷ್ಟು ಬೇರೆಯವರಿಗೆ ಒಪ್ಪಲಾರದು ಅನ್ನೋದು ಆವರನ್ನು ಹತ್ತಿರದಿದ೦ದ ಬಲ್ಲ ಎಲ್ಲರ ಮಾತು. ಶಂಕರ್ ಉತ್ತಮ ವಾಗ್ಮಿಯಾಗಿದ್ದರು. ಮಾಡುವ ಪ್ರತೀ ಕೆಲಸದಲ್ಲೂ ಪರ್‌ಫೆಕ್ಷನ್ ಇರಬೇಕು ಅಂತ ಬಯಸುತ್ತಿದ್ದರು. ಅವರು ಸಮಸ್ತ ಆಟೋ ಡ್ರೈವರ್ ಗಳ ಪಾಲಿಗೆ ಶಂಕರ್‌ನಾಗ್ ಎಂದೂ ಮರೆಯದ ಹೀರೋ ಆಗಿದ್ದರು. ಇವತ್ತಿಗೂ ಬೆಂಗಳೂರು ಸೇರಿದಂತೆ ಕರ್ನಾಟಕದ ಸಹಸ್ರಾರು ಊರುಗಳಲ್ಲಿನ ಆಟೋಗಳಲ್ಲಿ ಶಂಕರ್ ಭಾವಚಿತ್ರಗಳು ನಗುತ್ತಿರುವುದನ್ನು ನೋಡಿದರೆ ಶಂಕರ್ ಇಲ್ಲೇ ಇದ್ದಾರೆನ್ನಿಸುತ್ತೆ. ಸಂಸಾರದ ವಿಷಯಕ್ಕೆ ಬ೦ದರೆ ಶಂಕರ್ ಅನುರೂಪ ಗಂಡನಾಗಿದ್ದರು. ಆದರ್ಶ ಅಪ್ಪನಾಗಿದ್ದರು. ಅಣ್ಣ ಅನ೦ತ್‌ಗೆ ಸೂಪರ್ ಅನ್ನುವಂತ ತಮ್ಮನಾಗಿದ್ದರು. ಎಂತವರನ್ನೂ ಒಂದೇಟಿಗೆ ಸೆಳೆಯಬಲ್ಲ ಆಕರ್ಷಕ ವ್ಯಕ್ತಿತ್ವ ಶಂಕರನಾಗರರದ್ದು. ಹಾಗಾಗೆ ಆತ ಹೃದಯಕ್ಕೆ ಹತ್ತಿರವಾಗುತ್ತಾನೆ. ಡಾ. ರಾಜಕುಮಾರ್ ಶಂಕರ ನಾಗ್ ಬಗೆಗೆ ಆಡಿದ ಒಂದು ಮಾತು ಸಾಕು ಶಂಕರ್ ನಾಗ್ ಹೇಗಿದ್ದರು ಅನ್ನೋದಕ್ಕೆ. ಶಂಕರ್ ಯಾವತ್ತೂ ಯಾರ ಬಗೆಗೂ ಕೆಟ್ಟದಾಗಿ ಮಾತನಾಡಿದವನಲ್ಲ. ಆತನ ಬಗೆಗೂ ಯಾರೂ ಕೆಟ್ಟ ಮಾತನಾಡಿದ್ದನ್ನು ನಾನು ಕೇಳಿಲ್ಲ. ನಿಜಕ್ಕೂ ಆತ ಒ೦ದು ಆದರ್ಶ ಎಂದಿದ್ದರು.

    ಒಂದ೦ತೂ ಸತ್ಯ. ಇವತ್ತಿಗೆ ಶಂಕರ್ ನಾಗ್ ಇರುತ್ತಿದ್ದಲ್ಲಿ ಕನ್ನಡ ಚಿತ್ರರ೦ಗ ಸಾಗುವ ಹಾದಿಯೇ ಬೇರೆ ಇರುತ್ತಿತ್ತು. ಅದರ ಇತಿಹಾಸದಲ್ಲಿ ಅದೆಷ್ಟು ಮೈಲುಗಲ್ಲುಗಳು ಸೇರಲ್ಪಡುತ್ತಿದ್ದವೋ! ಹೌದು ಇಪ್ಪತ್ತೈದು ವರುಷಗಳಲ್ಲ ಸಹಸ್ರಾರು ಸಂವತ್ಸರಗಳೇ ಕಳೆದರೂ ಶಂಕರ್ ನೆನಪುಗಳು ಯಾವತ್ತೂ ಮಾಸುವುದಿಲ್ಲ. ಆರುಂಧುತಿ ನಾಗ್‌ರವರು ಪತಿಯ ಕನಸುಗಳನ್ನು ನನಸಾಗಿಸುವ ದಿಸೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊ೦ಡಿದ್ದಾರೆ. ಅವರ ಬಗೆಗೆ ಹೇಳಹೊರಟರೆ ಅದೊಂದು ಅದ್ಭುತ ಬರಹವಾದೀತು.

    [quote bgcolor=”#ffffff” arrow=”yes”]ಕೊನೆಗೊಂದು ಮಾತು: ಜೀವನ ಒಂದೇ ಇರುವುದರಿ೦ದ ಅದನ್ನು ಆದಷ್ಟು ಚೆನ್ನಾಗಿ ಅನುಭವಿಸಬೇಕು. ಸತ್ತ ಮೇಲೆ ನಿದ್ದೆ ಮಾಡಲು ಬೇಕಾದಷ್ಟು ಸಮಯ ಇದ್ದೇ ಇದೆ ಎನ್ನುತ್ತಿದ್ದ ಶಂಕರ್ ಮಾತು ಎಂತವರನ್ನೂ ಬಡಿದೆಬ್ಬಿಸುವ೦ತಾದ್ದು. ಎಲ್ಲರ ಬದುಕಿಗೊಂದು ಕ್ರಿಯಾಶೀಲ ಆದರ್ಶವನ್ನು ಬಿಟ್ಟುಹೋದ ಶಂಕರನಾಗ್ ಎನ್ನೋ ಅಧ್ಬುತ ವ್ಯಕ್ತಿತ್ವಕ್ಕೆ ಚಿರ ನಮನಗಳಿರಲಿ.
    [/quote]

    Like this:

    Like Loading...

    Related

    narendra s gangolli Shankarnag ನರೇಂದ್ರ ಎಸ್. ಗಂಗೊಳ್ಳಿ ಶಂಕರ್ ನಾಗ್
    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

    06/09/2024

    ಭಾರತ ಬಜೆಟ್-23 ಮುನ್ನೋಟ: ಆರ್ಥಿಕ ಕುಸಿತದ ಭೀತಿಯ ನಡುವೆ ಭಾರತೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಸವಾಲು

    01/02/2023

    ಉದ್ಯೋಗ ಸಂದರ್ಶನದ ತಯಾರಿಗೆ ಒಂದಿಷ್ಟು ಟಿಪ್ಸ್

    01/01/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d