ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.4ರ ಶನಿವಾರ 19 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇಂದು 733 ನೆಗೆಟಿವ್: ಈ ತನಕ ಒಟ್ಟು 17,545 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 14,556 ನೆಗೆಟಿವ್, 1,277 ಪಾಸಿಟಿವ್ ಬಂದಿದ್ದು, 1,712 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 273 ನೆಗೆಟಿವ್, 16 ಪಾಸಿಟಿವ್ ಬಂದಿದೆ. ಒಟ್ಟು 1034 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 160 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,277 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1114 ಮಂದಿ ಬಿಡುಗಡೆಯಾಗಿದ್ದು, 160 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಗ್ರಾಮ ಪಂಚಾಯತ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಗಂಗೊಳ್ಳಿಯಲ್ಲಿ ಶನಿವಾರ ಜರಗಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವುದು, ಸಿಕ್ಕ ಸಿಕ್ಕಲ್ಲಿ ವಿಲೇವಾಡಿ ಮಾಡುವುದು ಕಾನೂನುಬಾಹಿರವಾಗಿದ್ದು ಇಂತಹ ಕೃತ್ಯ ನಡೆಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ತ್ಯಾಜ್ಯ ನಿರ್ವಹಣೆಗೆ ಗ್ರಾಮದಲ್ಲಿ ಎಸ್‌ಎಲ್‌ಆರ್‌ಎಂ ಘಟಕ ಕಾರ್ಯನಿರ್ವಹಿಸುತ್ತಿದ್ದು, ಜನರು ಸಹಕಾರ ನೀಡಬೇಕು ಎಂದು ಹೇಳಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಸಿ. ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಕಾರ್ಯದರ್ಶಿ ದಿನೇಶ ಶೇರುಗಾರ್, ಗ್ರಾಪಂ ಸದಸ್ಯರು, ಸಿಬ್ಬಂದಿಗಳು, ಎಸ್‌ಎಲ್‌ಆರ್‌ಎಂ ಘಟಕದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇಂದ್ರ ಜಂಟಿ ಕಾರ್ಮಿಕ ಸಂಘಟನೆಗಳ ದೇಶವ್ಯಾಪಿ ಪ್ರತಿಭಟನೆಯ ಕರೆಯ ಮೇರೆಗೆ ಬೈಂದೂರು ತಾಲ್ಲೂಕು ಸಿಐಟಿಯು ಕಾರ್ಮಿಕ ಸಂಘದ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಸಿಐಟಿಯು ಕಚೇರಿಯಲ್ಲಿ ಕಾರ್ಮಿಕರ ಪ್ರತಿಭಟನಾ ಸಭೆ ನಡೆಯಿತು. ಬೈಂದೂರು ತಾಲ್ಲೂಕು ಸಿಐಟಿಯು ಮುಖಂಡರಾದ ಗಣೇಶ್ ತೊಂಡೆಮಕ್ಕಿ, ವೆಂಕಟೇಶ್ ಕೋಣಿ ಸಭೆಯನ್ನುದ್ದೇಶಿಸಿ ಮಾತನಾಡಿ, ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ ಆರು ತಿಂಗಳ ವರೆಗೆ ಮಾಸಿಕ ರೂ.೭೫೦೦ ಕೊರೊನಾ ಪರಿಹಾರ ನೀಡಬೇಕು, ಎಲ್ಲ ಕಾರ್ಮಿಕರಿಗೆ ಕನಿಷ್ಠ ೬ ತಿಂಗಳು ಉಚಿತ ಪಡಿತರ ವಿತರಿಸಬೇಕು, ಕೇಂದ್ರ ನೌಕರರಿಗೆ ಮತ್ತು ಪಿಂಚಣಿದಾರಿಗೆ ತುಟ್ಟಿಭತ್ಯೆ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಕಾರ್ಮಿಕ ಕಾನೂನು ಬದಲಾವಣೆ, ವಿದ್ಯುತ್ ತಿದ್ದುಪಡಿ ಮಸೂದೆ-೨೦೨೦, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಕಾರ್ಪರೇಟ್ ಭೂಮಾಲೀಕರಿಗೆ ಅನುಕೂಲವಾಗುವ ರೈತ ವಿರೋಧಿ ನೀತಿ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗಳಿಗೆ ವಿರೋಧ ವ್ಯಕ್ತಪಡಿಸಿದರು. ಕೋವಿಡ್-೧೯ ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಬೇಕು, ಮುಂಚೂಣಿ ಕೊರೊನಾ ವಾರಿಯರ‍್ಸ್ ಸೇವೆ ಖಾಯಂಗೊಳಿಸಿ ಅವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ತಿರ್ಮಾನ ಕೈಗೊಂಡಂತೆ ಬೈಂದೂರು ಪಟ್ಟಣ ಪಂಚಾಯತ್ ಘೋಷಿಸಿದರೂ ಈ ವರೆಗೂ ರಾಜ್ಯ ಪತ್ರದಲ್ಲಿ ಅಧಿಸೂಚನೆ ಪ್ರಕಟಣೆ ಆಗಿಲ್ಲ. ಪಟ್ಟಣ ಪಂಚಾಯತ್‌ಗೆ ಅಗತ್ಯ ಕಾರ್ಯವನ್ನು ಶೀಘ್ರ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಬೈಂದೂರು ಶಾಸಕ ಬಿ ಎಮ್ ಸುಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಶಾಸಕರು ಪ್ರತಿಕ್ರಿಯಿಸಿ ಇನ್ನು ಕೆಲವೇ ದಿನಗಳಲ್ಲಿ ಸರಕಾರ ಅಧಿಸೂಚನೆ ಹೊರಡಿಸಲಿದೆ. ಅಲ್ಲದೇ ಅಗ್ನಿಶಾಮಕ ಠಾಣೆಗೆ ಬೈಂದೂರಿನಲ್ಲಿ ಈ ಹಿಂದೆ ಸ್ಥಳ ಗುರುತಿಸಿದ್ದು, ಶೀಘ್ರ ಆರಂಭಿಸುವುದು, ಮಿನಿವಿಧಾನ ಸೌಧ, ತಾಲೂಕು ಪಂಚಾಯತ್, ನ್ಯಾಯಾಲಯಗಳಿಗೆ ಸ್ಥಳವನ್ನು ಗುರುತಿಸಲಾಗಿದ್ದು ಎಲ್ಲಾ ಕೆಲಗಳು ಶೀಘ್ರ ಆಗಲಿದೆ ಎಂದು ಭರವಸೆ ನೀಡಿದ್ದಾರೆ. ಈ ನಿಯೋಗದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಗದೀಶ್ ಪಟವಾಲ್, ಕಾರ್ಯದರ್ಶಿ ಪ್ರಕಾಶ್ ಬೈಂದೂರು, ಸದಸ್ಯರಾದ ಸುಬ್ರಹ್ಮಣ್ಯ ಶೇಟ್, ನಾಗರಾಜ್ ಕಾರಂತ್ ಬಿ. ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.3ರ ಶುಕ್ರವಾರ 16 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇಂದು 273 ನೆಗೆಟಿವ್: ಈ ತನಕ ಒಟ್ಟು 16,498 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 13,823 ನೆಗೆಟಿವ್, 1,258 ಪಾಸಿಟಿವ್ ಬಂದಿದ್ದು, 1,417 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 273 ನೆಗೆಟಿವ್, 16 ಪಾಸಿಟಿವ್ ಬಂದಿದೆ. ಒಟ್ಟು 1034 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 151 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,258 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1104 ಮಂದಿ ಬಿಡುಗಡೆಯಾಗಿದ್ದು, 151 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕಿನ ಪಡುವರಿ ಗ್ರಾಮ ಪಂಚಾಯತ್ ಸಿಬ್ಬಂದಿಯೋರ್ವರಿಗೆ ಶುಕ್ರವಾರ ಕೋರೊನಾ ಪಾಸಿಟಿವ್ ದೃಢವಾಗಿದ್ದು, ಪಂಚಾಯತಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಗ್ರಾಮ ಪಂಚಾಯತಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಇಂದು ಪಾಸಿಟಿವ್ ದೃಢಪಟ್ಟಿದ್ದು, ಪಂಚಾಯತಿ ಸೀಲ್‌ಡೌನ್ ಮಾಡಿ ಎಲ್ಲಾ ಸಿಬ್ಬಂದಿಗಳಿಗೆ ಸಿಬ್ಬಂದಿಗಳಿಗೆ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಸೋಂಕಿತ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಸೋಂಕಿನ ಮೂಲ ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡುವ ಕಾರ್ಯದಲ್ಲಿ ಆರೋಗ್ಯ ಸಿಬ್ಬಂದಿಗಳು ನಿರತರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ. ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಪಂಚಾಯತಿಯನ್ನು ಸ್ಯಾನಿಟೈನ್ ಮಾಡಿ ಮೂರು ದಿನಗಳ ಬಳಿಕ ಪುನರಾರಂಭಿಸಲಾಗುತ್ತದೆ ಎನ್ನಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/ ಇದನ್ನೂ ಓದಿ: ► ಕುಂದಾಪುರ ತಾಲೂಕಿನ 44 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ – https://kundapraa.com/?p=39187 . ► ಬೈಂದೂರು ತಾಲೂಕಿನ 16 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ – https://kundapraa.com/?p=39183 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೂನ್‌ನಲ್ಲಿ ಅಧಿಕಾರಾವಧಿ ಮುಗಿದ ಕುಮದಾಪುರ ತಾಲ್ಲೂಕಿನ 44 ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜೂನ್ ೨೯ರಂದು ಆದೇಶ ಹೊರಡಿಸಿದ್ದಾರೆ. ಇವುಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಚುನಾವಣೆ ನಡೆಸಬೇಕು ಎಂಬ ವಿಧಿ ಇದೆಯಾದರೂ ಕೋವಿಡ್ -19 ಹರಡುತ್ತಿರುವ ಕಾರಣ ರಾಜ್ಯ ಚುನಾವಣಾ ಆಯೋಗವು ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಆ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ನೇಮಕಗೊಂಡ ಆಡಳಿತಾಧಿಕಾರಿಗಳು: ಆಲೂರು – ನಾಗೇಶ್ ನಾಯ್ಕ್, ಮುಖ್ಯೋಪಧ್ಯಾಯರು, ಆಲೂರು ಸರಕಾರಿ ಪ್ರೌಢಶಾಲೆ ಕೆರಾಡಿ – ಮಾಲತೇಶ್, ಸಹಾಯಕ ಅಭಿಯಂತರರು, ಸಿದ್ಧಾಪುರ ಚಿತ್ತೂರು, ವಂಡ್ಸೆ – ಮಮತಾ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ವಂಡ್ಸೆ ಹಕ್ಲಾಡಿ – ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಾಪುರ ತ್ರಾಸಿ, ಹೊಸಾಡು, ಇಡೂರು ಕುಂಜ್ಞಾಡಿ – ಪ್ರೀತಮ್, ಎಇ, ವರಾಹಿ ಸಿದ್ಧಾಪುರ ಗುಜ್ಜಾಡಿ – ಅಂಜನಾದೇವಿ ಪಿ., ಎ.ಡಿ, ಮೀನುಗಾರಿಕಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೂನ್‌ನಲ್ಲಿ ಅಧಿಕಾರಾವಧಿ ಮುಗಿದ ಬೈಂದೂರು ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜೂನ್ ೨೯ರಂದು ಆದೇಶ ಹೊರಡಿಸಿದ್ದಾರೆ. ಇವುಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಚುನಾವಣೆ ನಡೆಸಬೇಕು ಎಂಬ ವಿಧಿ ಇದೆಯಾದರೂ ಕೋವಿಡ್ -೧೯ ಹರಡುತ್ತಿರುವ ಕಾರಣ ರಾಜ್ಯ ಚುನಾವಣಾ ಆಯೋಗವು ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಆ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವ ವರೆಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ನೇಮಕಗೊಂಡ ಆಡಳಿತಾಧಿಕಾರಿಗಳು: ಶಿರೂರು, ಪಡುವರಿ ಮತ್ತು ಗೋಳಿಹೊಳೆ – ರಾಜಕುಮಾರ್, ಎಇಇ, ಬೈಂದೂರು ಎಂಜಿನಿಯರಿಂಗ್ ಉಪವಿಭಾಗ ಬಿಜೂರು ಮತ್ತು ಉಪ್ಪುಂದ – ಜಿ. ಬಿ. ಮಾದರ್, ಬೈಂದೂರು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಕೆರ್ಗಾಲು ಮತ್ತು ಹೇರೂರು – ಜ್ಯೋತಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೊಲ್ಲೂರು ಮತ್ತು ಜಡ್ಕಲ್ – ಅರವಿಂದ ಎಸ್. ಸುತ್‌ಗುಂಡಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕಾಲ್ತೋಡು ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.2ರ ಗುರುವಾರ 14 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇಂದು 256 ನೆಗೆಟಿವ್: ಈ ತನಕ ಒಟ್ಟು 15,630 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 13,450 ನೆಗೆಟಿವ್, 1,242 ಪಾಸಿಟಿವ್ ಬಂದಿದ್ದು, 938 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 256 ನೆಗೆಟಿವ್, 14 ಪಾಸಿಟಿವ್ ಬಂದಿದೆ. ಒಟ್ಟು 1012 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 149 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,242 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1090 ಮಂದಿ ಬಿಡುಗಡೆಯಾಗಿದ್ದು, 149 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇದನ್ನೂ ಓದಿ: ► ಕುಂದಾಪುರ ತಾಲೂಕಿನ 44 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ – https://kundapraa.com/?p=39187 . ► ಬೈಂದೂರು ತಾಲೂಕಿನ 16 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ -…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಜೂ.2: ಬುಧವಾರ ರಾತ್ರಿ ಕೋಟೇಶ್ವರ ಸಮೀಪದ ಕಟ್ಕರೆಯ ಪ್ರಸಿದ್ಧ ಮಹಾದೇವಿ ಕಾಳಿಕಾಂಬಾ ಅಮ್ಮನವರ ದೇವಸ್ಥಾನಕ್ಕೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹಾನಿ ಮಾಡಿರುವ ಘಟನೆ ನಡೆದಿದ್ದು, ಸೇಫ್ ಕುಂದಾಪುರ ಪ್ರಾಜೆಕ್ಟ್ ಸಿಬ್ಬಂದಿಯ ಸಮಯ ಪ್ರಜ್ನೆಯಿಂದ ತಪ್ಪಿದ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದ್ದ ಕಳ್ಳತನ ತಪ್ಪಿದೆ. ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಒಳಗಿನ ದೇವಿ ಮೂರ್ತಿಯ ಕೈಯಲ್ಲಿದ್ದ ಬೆಳ್ಳಿಯ ಖಡ್ಗ, ಪರಶು ಹಾಗೂ ಸಿ.ಸಿ ಟಿವಿ ಡಿವಿಆರ್, ಹಾರ್ಡ್ ಡಿಸ್ಕ್ ಕೂಡ ಕದ್ದೊಯ್ದಿದ್ದಾರೆ. ಬಾಗಿಲಿಗೆ ಅಳವಡಿಸಿದ ಬೆಳ್ಳಿ ಲೇಪನವನ್ನು ಕಿತ್ತು ತೆಗೆಯಲು ಯತ್ನಿಸಿದ್ದಾರೆ. ಕಳವಾದ ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ ರೂ. 25,000 ಆಗಿದ್ದು ಕಳ್ಳತನದ ವೇಳೆ 1.5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಗೈದಿದ್ದಾರೆ. ಕಳೆದ ಆರು ವರ್ಷಗಳ ಹಿಂದೆಯೂ ಇದೇ ದೇವಸ್ಥಾನದಲ್ಲಿ 10ಲಕ್ಷಕ್ಕೂ ಅಧಿಕ ನಗ-ನಗದು ಕಳವಾಗಿತ್ತು. ಸೇಪ್ ಕುಂದಾಪುರ ಪ್ರಾಜೆಕ್ಟ್‌ನಿಂದ ತಪ್ಪಿದ…
