ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಶುಕ್ರವಾರ ಸಡಗರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿಗಳು ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ಕೋವಿಡ್ ಮಾರ್ಗಸೂಚಿ ಇದ್ದ ಹಿನ್ನೆಲೆಯಲ್ಲಿ ಸರಳ ಆಚರಣೆ ನಡೆಯಿತು. ದೇವಳದ ರಥೋತ್ಸವದ ಸಂದರ್ಭ ಗರುಡ ದರ್ಶನ ಆಗುವುದು ವಾಡಿಕೆ. ಸಂಜೆಯ ರಥೋತ್ಸವಕ್ಕೆ ಚಾಲನೆ ಸಿಗುತ್ತಿರುವಂತೆಯೇ ಗರುಡ ದರ್ಶನ ಆಗಿದ್ದು ರಥಕ್ಕೆ ಎರಡು ಸುತ್ತು ಬಂದು ನಿರ್ಗಮಿಸುತ್ತದೆ. ಗರುಡದರ್ಶನ ವೀಕ್ಷಿಸಲು ಸಹಸ್ರಾರು ಭಕ್ತರು ನೆರೆದಿದ್ದು ಗರುಡ ರಥಕ್ಕೆ ಸುತ್ತು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ನ.18: ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಏ.26ರಂದು ಕೊಲ್ಲೂರು ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಕೆರಾಡಿ ಚಂದ್ರಶೇಖರ ಶೆಟ್ಟಿ ಆಯ್ಕೆಯಾಗಿದ್ದು, ಇದನ್ನು ಪ್ರಶ್ನಿಸಿ ಸಮಿತಿ ಸದಸ್ಯರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಧೀಶ ಕೃಷ್ಣ ಎಸ್.ದೀಕ್ಷಿತ್ ಆಯ್ಕೆ ಪ್ರಕ್ರಿಯೆ ರದ್ದುಗೊಳಿಸಿದ್ದಾರೆ. ಗಣೇಶ್ ಕಿಣಿ ಮಾ.24, ಚಂದ್ರಶೇಖರ ಶೆಟ್ಟಿ ಏ.15ರಂದು ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೂ ಅವರನ್ನು ಹಾಲಿ ಸಮಿತಿ ಸದಸ್ಯರೆಂದು ಪರಿಗಣಿಸಿ ಏ.26ರಂದು ನಡೆದ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿ, ಚಂದ್ರಶೇಖರ ಶೆಟ್ಟಿ ಅವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಸಮಿತಿ ಸದಸ್ಯರೇ ಅಲ್ಲದಿದ್ದವರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಕೊಲ್ಲೂರು ದೇವಸ್ಥಾನ ಅಧ್ಯಕ್ಷರ ಆಯ್ಕೆಗೆ ಮುನ್ನ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಮತ್ತು ಬೆಳ್ವೆ ಗಣೇಶ್ ಕಿಣಿ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದಸ್ಯರು ರಾಜೀನಾಮೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡಬಿದಿರೆ: ತುರ್ತು ಸಮಯದಲ್ಲಿ ಮಾತ್ರ ಇಂಗ್ಲೀಷ್ ಔಷಧಿಗೆ ಮೊರೆಹೋಗಿ ಉಳಿದ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮ ಬೀರದಿರುವ ನ್ಯಾಚುರೋಪಥಿ ವೈದ್ಯಕೀಯ ಸೇವೆ ಪಡೆಯುವುದು ಆರೋಗ್ಯಕ್ಕೆ ಉತ್ತಮವಾದದ್ದು ಎಂದು ಮಂಗಳೂರಿನ ಬೃಂದಾವನ ನೇಚರ್ ಕ್ಯೂರ್ ಹಾಗೂ ಯೋಗ ಕ್ಲಿನಿಕ್‌ನ ಹಿರಿಯ ನ್ಯಾಚುರೋಪಥಿ ವೈದ್ಯೆ ಡಾ. ಶಾರದಾ ಬಂಗೇರ ಅವರು ಹೇಳಿದರು. ಆಳ್ವಾಸ್ ಕಾಲೇಜಿನ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್, ಭಾರತ ಸರಕಾರದ ಆಯುಷ್ ಇಲಾಖೆ ಹಾಗೂ ಪುಣೆಯ ನ್ಯಾಶನಲ್ ಇನ್ಟಿಟ್ಯೂಟ್ ಆಫ್ ನ್ಯಾಚುರೋಪಥಿಯ ಸಂಯುಕ್ತ ಆಶ್ರಯದಲ್ಲಿ ರೋಗ ಮುಕ್ತ ಭಾರತ ಧ್ಯೇಯದೊಂದಿಗೆ ೪ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನು ಆಳ್ವಾಸ್ ಕಾಲೇಜಿನ ಮಿಜಾರ್ ಕ್ಯಾಂಪಸ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಂಡು ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿರುವ ಜಂಕ್ ಮಾಹಿತಿಗಳನ್ನು ಅನುಸರಿಸದೇ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಕೊಳ್ಳಬೇಕೆಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶೋರಿನ್ ರಿಯೂ ಕರಾಟೆ ಎಂಡ್ ಕೊಬುಡೊ ಅಸೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಇತ್ತೀಚಿಗೆ ನಡೆದ 18ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯ ಫೈಟ್ ವಿದ್ ಗೋಲ್ಡನ್ ಬ್ರೌನ್ ವಿಭಾಗದಲ್ಲಿ ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ದ್ವಿತೀಯ ಸ್ಥಾನವನ್ನು ಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾನೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿರುವ ಶ್ಯಾಮ್ ಗಂಗೊಳ್ಳಿಯ ಖ್ಯಾತ ಛಾಯಾಗ್ರಾಹಕ ಗಣೇಶ್ ಪಿ. ಪೂಜಾರಿ ಮತ್ತು ಮಾಲತಿ ದಂಪತಿಯ ಪುತ್ರ. ಕರಾಟೆಪಟು ಶಶಾಂಕ್ ಶೆಣೈ ಅವರಿಂದ ತರಬೇತಿಯನ್ನು ಪಡೆದಿದ್ದಾನೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ನ.15ರಿಂದ ಮೊದಲ್ಗೊಂಡು ನ.22ರ ತನಕ ಉತ್ಸವ ನಡೆಯಲಿದ್ದು, ನ.20ರಂದು ಶನಿವಾರ ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ ನಡೆಯಲಿದೆ. ಉತ್ಸವದ ಪುರ್ವಭಾವಿಯಾಗಿ ವಾರ್ಷಿಕ ಮನ್ಮಹಾ ರಥೋತ್ಸವಕ್ಕೆ ಧ್ವಜಾರೋಹಣ, ಧಾರ್ಮಿಕ ವಿಧಿವಿಧಾನದೊಂದಿಗೆ ಚಾಲನೆ ನೀಡಲಾಯಿತು. ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಪುಣ್ಯಾಹ ನಾಂದಿ, ಧ್ವಜ ವಾಹನ ಅದಿವಾಸ, ಅಸ್ತ್ರಹೋಮದೊಂದಿಗೆ ಇತರ ಧಾರ್ಮಿಕ ವಿವಿಧಾನಗಳೊಂದಿಗೆ ಕೊಡಿ ಮರವನ್ನು ಧ್ವಜಸ್ತಂಭಕ್ಕೆ ನಿಲ್ಲಿಸಿ ಸಿಂಹದ ಫೋಟೋವನ್ನು ಏರಿಸುವುದರೊಂದಿಗೆ ಹಾಗೂ ಧ್ವಜ ಬಲಿ ಮಾಡಿ ಉತ್ಸವಕ್ಕೆ ಚಾಲನೆ ಲಾಯಿತು. ತಂತ್ರಿ ಮಂಜುನಾಥ ಅಡಿಗೆ ಮಾರ್ಗದರ್ಶನದಲ್ಲಿ ವೇದಮೂರ್ತಿ ಶ್ರೀನಿವಾಸ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ನ.15ರಿಂದ ನ.19ರವರೆಗೆ ಧ್ವಜಾ ರೋಹಣೋತ್ಸವ, ಗಜಾರೋಹಣೋ ತೃವ, ಆಶ್ವಾರೋಹಣೋತ್ಸವ, ಮಯೂರ ವಾಹನೋತ್ಸವ, ಪುಷ್ಪಕ ಸಿಂಹಾರೋಹ ಹೋತ್ಸವ ಜರುಗಲಿದ್ದು, 21ರಂದು ಚೂರ್ಣೋತ್ಸವ ಹಾಗೂ 22ರಂದು ಧ್ವಜಾರೋಹಣ ನಗರೋತ್ಸವ ವೈಭವ ದಿಂದ ನಡೆಯಲಿದೆ. ಮನ್ಮಹಾ ರಥೋತ್ಸವ ಸಂದರ್ಭ ಉಪ್ಪುಂದ ಬಿಜೂರು ಪರಿಸರದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಪ್ರಥಮ ವ?ದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಆಳ್ವಾಸ್ ಆಗಮನ 2021-22ರ ಸರಣಿ ಕಾರ್ಯಕ್ರಮದ ಭಾಗವಾಗಿ, ಐದನೇ ದಿನ ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕ ಹಾಗೂ ಮನೋವೈದ್ಯ ಡಾ. ಪಿ. ವಿ. ಭಂಡಾರಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಜೀವನದಲ್ಲಿ ಒಳ್ಳೆಯ ಅಂಶಗಳನ್ನು ರೂಢಿಸಿಕೊಳ್ಳಲು ಬಾಹ್ಯವಾಗಿ ಹಾಗೂ ಆಂತರಿಕವಾಗಿ ಹೆಚ್ಚಿನ ಶ್ರಮದ ಅಗತ್ಯವಿದೆ. ನಮ್ಮ ಸ್ನೇಹಿತರ ಬಳಗದಿಂದ ನಾವು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು, ಹಾಗೂ ಅವನತಿಯ ದಾರಿಯನ್ನು ಹಿಡಿಯಲು ಸಾಧ್ಯ. ಆದ್ದರಿಂದ ನಮ್ಮ ಸಮೃದ್ಧಿಗಾಗಿ ‘ಸಬ್ಕಾ ಸುನನಾ, ದಿಲ್‌ಕಾ ಕರನ್’ ತತ್ವವನ್ನು ಅನುಸರಿಸಿದರೆ ಜೀವನ ಸುಖಕರವಾಗಿರಲು ಸಾಧ್ಯ ಎಂದರು. ಉಪನ್ಯಾಸದಲ್ಲಿ ಪರೀಕ್ಷಾ ಭಯ, ಸಾಮಾಜಿಕ ಆತಂಕ, ಖಿನ್ನತೆ, ಹೊಂದಾಣಿಕೆಯ ಸಮಸ್ಯೆ, ಕಾಲೇಜುಗಳು ಎದುರಿಸುತ್ತಿರುವ ಸವಾಲುಗಳು, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡಗಳು, ಈ ವಿಷಯದ ಅಗತ್ಯತೆ, ಅದನ್ನು ನಿರ್ವಹಿಸುವ ವಿಧಾನಗಳು, ಸವಾಲಿನ ಪರಿಹಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಕೋವಿಡ್ ನಿರೋಧಕ ಲಸಿಕೆಯೇ ಮದ್ದು, ಇದನ್ನು ಪ್ರತಿಯೊಬ್ಬರಿಗೂ ಮನೆ ಮನೆಗೆ ಭೇಟಿ ನೀಡಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಲಸಿಕಾ ಕಾರ್ಯಪಡೆಯ ಸಮನ್ವಯ ಸಮಿತಿಯ ಅಧ್ಯಕ್ಷರಾದ ಕೂರ್ಮಾರಾವ್ ಎಂ ಹೇಳಿದರು. ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಮನೆ ಮನೆ ಭೇಟಿ ಕೋವಿಡ್ ಲಸಿಕಾ ಅಭಿಯಾನ ಅನುಷ್ಠಾನ ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 2,95,375 ಮನೆಗಳಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ, ಕೋವಿಡ್ ನಿರೋಧಕ ಲಸಿಕೆ ಪಡೆಯದೇ ಇರುವವರ ವಿವರವನ್ನು ಪಡೆಯುವುದರ ಜೊತೆಗೆ ಅವರುಗಳು ಲಸಿಕೆ ಪಡೆಯುವಂತೆ ಅರಿವು ಮೂಡಿಸಿ, ಲಸಿಕೆ ನೀಡಬೇಕು ಎಂದರು. ಲಸಿಕಾ ಕಾರ್ಯಕ್ರಮವು ನವೆಂಬರ್ 16 ರಿಂದ ನವೆಂಬರ್ 30 ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿದ್ದು, ಸಾರ್ವಜನಿಕರು ಹಾಗೂ ಸಮುದಾಯ ಮುಖಂಡರು ಮನೆ ಮನೆ ಭೇಟಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಹಕರಿಸಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಗ್ರಾಮದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ ಕಾರ್ಯಕ್ರಮವು ನವೆಂಬರ್ 18ರಿಂದ 20ರ ವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಬಾರ್, ರೆಸ್ಟೋರೆಂಟ್ ಮತ್ತು ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟವನ್ನು ನವೆಂಬರ್ 18 ರ ಬೆಳಗ್ಗೆ 6 ರಿಂದ ನವೆಂಬರ್ 19ರ ರಾತ್ರಿ 12ರ ವರೆಗೆ ನಿಷೇಧಿಸಲಾಗಿದೆ. ಅಬಕಾರಿ ಕಾಯ್ದೆ 1965 ಕಲಂ 21 ರನ್ವಯ ಕುಂದಾಪುರ ಪೊಲೀಸ್ ಠಾಣಾ ಸರಹದ್ದಿನ ಕೋಟೇಶ್ವರ, ಹಂಗಳೂರು ಹಾಗೂ ಗೋಪಾಡಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಬಕಾರಿ ಸನ್ನದುಗಳನ್ನು ಮುಚ್ಚುವಂತೆ ಹಾಗೂ ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಚಿಲುಮೆ-2021(ಭರವಸೆಯ ತಂಗಾಳಿ) ಕಾರ್ಯಕ್ರಮದ ಚಿತ್ರಸಂತೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು. ಸುಮಾರು ೨೫೦ ಮಕ್ಕಳು ತಯಾರಿಸಿದ ಪೈಟಿಂಗ್ಸ್, ಕಲಾಕೃತಿಗಳ ಪ್ರದರ್ಶನ ನಡೆಯಿತು. ವಿಶೇಷ ಅಂಚೆ ಚೀಟಿ ಪ್ರದರ್ಶನ:ಕನ್ನಡ ನಾಡು ನುಡಿ ಪ್ರತಿಬಿಂಬಿಸುವ ಹಾಗೂ ಮಕ್ಕಳ ದಿನಾಚರಣೆಯ ವಿಶೇಷತೆ ಒಳಗೊಂಡ ಅಂಚೆ ಚೀಟಿ ಪ್ರದರ್ಶನವನ್ನು ಕಲ್ಯಾಣಪುರ ಶ್ರೀಲಕ್ಷ್ಮೀನಾರಾಯಣ ನಾಯಕ್ ಅವರು ಪ್ರದರ್ಶಿಸಿದರು. ಅಲ್ಲದೇ ವಿವಿಧ ದೇಶಗಳ ಅಂಚೆ ಚೀಟಿ, ಮತ್ತು ನಾಣ್ಯಗಳ ಪ್ರದರ್ಶನ ಹಾಗೂ ಭಾರತದಲ್ಲಿ ಬಿಡುಗಡೆಗೊಂಡಿರುವ ಹೊಸ ನಾಣ್ಯ ಆಕರ್ಷಿಸಿದವು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದ ಐತಿಹಾಸಿಕ ಶ್ರೀ ದೇವರ ವಾರ್ಷಿಕ ಜಾತೆ ಕೊಡಿಹಬ್ಬ ನ.19ರಂದು ನಡೆಯಲಿದ್ದು, ಹಬ್ಬದ ಧಾರ್ಮಿಕ ವಿಧಿಗಳು, ದೇವರ ಪುರಮೆರವಣಿಗೆ ಈಗಾಗಲೇ ಆರಂಭಗೊಂಡಿವೆ. ಹವಾಮಾನ – ವೈಪರೀತ್ಯದಿಂದಾಗಿ ಸುರಿಯುತ್ತಿರುವ ದೇವಳದ ಭಕ್ತರಿಗೆ ವ್ಯಾಪಾರಿಗಳಲ್ಲಿ ಹಬ್ಬದ ಉತ್ಸಾಹವನ್ನೇ ಕುಂದಿಸಿ ದಂತಿದೆ. ನ.12ರಿಂದ ಮೊದಲ್ಗೊಂಡು ಹಬ್ಬದ ಕಾರ್ಯಕ್ರಮಗಳು ನ.20ರವರೆಗೂ ನಡೆಯುತ್ತವೆ. ದೇವಳ ವ್ಯವಸ್ಥಾಪನಾ ಸಮಿತಿಯು ಪೂರ್ವ ತಯಾರಿಗಳನ್ನೂ ನಡೆಸಿದ್ದು, ಸರಕಾರದ ಮಾರ್ಗಸೂಚಿಗಳನ್ವಯ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸರಳ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿದೆ. ಸಾರ್ವಜನಿಕ ಭಕ್ತಾಭಿಮಾನಿಗಳೂ ಸರ್ಕಾರದ ಸೂಚನೆಯನ್ನು ಅನುಸರಿಸಿ ಸರಳ ಹಬ್ಬಾಚರಣೆಗೆ ಸಹರಿಸಬೇಕು ಎಂದು ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಉತ್ಸವಗಳ ವಿವಿರ: ನ.17ರಂದು ರಂಗೋತ್ಸವ, ಅಶ್ವವಾಹ ಸೋತ್ಸವ, ನ.18ರಂದು ಸಿಂಹವಾಹ ನೋತ್ಸವ, ನ.19ರಂದು ಬೆಳಿಗ್ಗೆ 11.50ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರ ಥೋತ್ಸವ ಜರುಗಲಿದೆ. ನ.20ರಂದು ಚೂರ್ಣೋತ್ಸವ ಅವಶೃತ ಸ್ನಾನ, ರಾತ್ರಿ ಮರ್ಕೋಡು, ಮಲ್ಯಾಡಿ, ಮತ್ತು ತೆಕ್ಕಟ್ಟೆ ನಾಡವರಿಂದ ಓಕುಳಿ ಸೇವೆ ನಡೆಯಲಿದೆ.…
