ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ದಾನದ 2021ನೇ ಸಾಲಿನ ವಾರ್ಷಿಕ ರಥೋತ್ಸವ ಕಾರ್ಯಕ್ರಮವು ನ. 18 ರಿಂದ 20ರ ತನಕ ನಡೆಯಲಿದ್ದು ಸಂಚಾರ ನಿಯಂತ್ರಣದ ದೃಷ್ಠಿಯಿಂದ ಪೊಲೀಸ್ ಇಲಾಖೆ ಭಕ್ತಾದಿಗಳ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ವಿವಿಧ ಸ್ಥಳಗಳನ್ನು ಗುರುತಿಸಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಗುರುತಿಸಿದ ವಿವಿಧ ಸ್ಥಳಗಳ ವಿವರ: ಗೋಪಾಡಿ, ಬೀಜಾಡಿಯಿಂದ ಬರುವ ವಾಹನಗಳಿಗೆ ಪ್ರಾಥಮಿಕ ಶಾಲಾ ಕ್ರಾಸ್ ಕೋಟೇಶ್ವರ ಕಾಳಾವರ, ಹಾಲಾಡಿ ಕಡೆಯಿಂದ ಬರುವ ವಾಹನಗಳಿಗೆ – ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕೋಟೇಶ್ವರ ( ದಿನೇಶ ಕಾಮತ್ ರವರ ಮನೆ ಬಳಿ) ಮತ್ತು ಶಂಕರ ಕಾಮತ್ ರವರ ಮನೆ ಬಳಿ ಕೋಟೇಶ್ವರ ಕುಂದಾಪುರ ಕಡೆಯಿಂದ ಬರುವ ವಾಹನಗಳಿಗೆ – ಗುರುಪ್ರಸಾದ ಹೋಟೇಲ್ ಬಳಿ ಕೋಟೇಶ್ವರ, ಆರ್ಯ ಹೋಟೇಲ್ ಬಳಿ ಕೋಟೇಶ್ವರ ಮತ್ತು ಸಹನಾ ಹೋಟೇಲ್ ಪಾರ್ಕಿಂಗ್ ಅಂಕದಕಟ್ಟೆ ಕೋಟೇಶ್ವರ. ಕುಂಭಾಶಿ, ತೆಕ್ಕಟೆ, ಉಡುಪಿಯಿಂದ ಬರುವ ವಾಹನಗಳಿಗೆ ಹೈಸ್ಕೂಲ್ ಬಳಿ ಕೋಟೇಶ್ವರ, ಕೋಸ್ಟಲ್ ಕ್ರೋನ್ ಕಾಂಪ್ಲೇಕ್ಸ್ ಬಳಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅವಿನಾಶ್ ಮೆಡಿಕಲ್ಸ್ ಮಾಲಿಕ, ರಂಗ ನಿರ್ದೇಶಕ, ಸಂಗೀತ ಭಾರತಿ ಟ್ರಸ್ಟಿನ ಸಂಚಾಲಕ, ಎ. ವೈಕುಂಠ ಹೆಬ್ಬಾರ್ (83) ನಿಧನರಾದರು. ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದ ಅವರು ಕುಂದಾಪುರದಲ್ಲಿ ಹಿಂದುಸ್ತಾನಿ ಸಂಗೀತವನ್ನು ಜನಪ್ರೀಯಗೊಳಿಸಲು ಬಹಳ ಶ್ರಮಿಸಿದವರು. ಮೃತರು, ಪತ್ನಿ, ಖ್ಯಾತ ವೈದ್ಯೆ ಛಾಯಾ ಹೆಬ್ಬಾರ್, ಪುತ್ರ ಆದರ್ಶ ಆಸ್ಪತ್ರೆಯ ಮುಖ್ಯಸ್ಥ, ಆದರ್ಶ ಹೆಬ್ಬಾರ್ ಹಾಗೂ ಪುತ್ರಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕನ್ನಡದಲ್ಲಿ ಮಕ್ಕಳು ಹಾಡಿ ಮುದಗೊಳ್ಳಬಹುದಾದ ಕವನಗಳು ಬೇಕಷ್ಟಿಲ್ಲ. ಶಿಕ್ಷಕರಾಗಿ ಮಕ್ಕಳ ಮನೋಧರ್ಮ ಅರಿತಿರುವ ಕೆ. ಮಹಾಬಲ ಅವರ ಎರಡನೆ ಮಕ್ಕಳ ಕವನ ಸಂಕಲನ ‘ಗಾನ ವನಸಿರಿ’ ಆ ನಿಟ್ಟಿನಲ್ಲಿ ಒಂದು ಉತ್ತಮ ಕೊಡುಗೆ ಎಂದು ನಿವೃತ್ತ ಉಪನ್ಯಾಸಕ ಪಿ. ಶೇಷಪ್ಪಯ್ಯ ಹೇಳಿದರು. ಜಿಲ್ಲಾ ಕನ್ನಡ-ತುಳು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭನುವಾರ ನಡೆದ ಸಮಾರಂಭದಲ್ಲಿ ಅವರು ಶಿಕ್ಷಕ ಮಹಾಬಲ ಕೆ. ಅವರ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಕೃತಿ ಪರಿಚಯಿಸಿದ ಖಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ, ಸಂಕಲನದಲ್ಲಿರುವ 70 ಕವನಗಳು ಸರಳ ಹಾಗೂ ಪ್ರಾಸಬದ್ಧವಾಗಿವೆ. ಮಕ್ಕಳು ಆಡುತ್ತ, ಕುಣಿಯುತ್ತ ಹಾಡಿ ಅವುಗಳ ಆಶಯ ಮತ್ತು ನೀತಿಯನ್ನು ಅರಿತು ಅಳವಡಿಸಿಕೊಳ್ಳಬಹುದಾಗಿದೆ. ಕವನಗಳು ಪ್ರಮುಖವಾಗಿ ಪ್ರಕೃತಿ, ಪ್ರಾಣಿ, ದೇಶ, ರೈತ, ಆದರ್ಶಕ್ತಿಗಳ ಕುರಿತಾಗಿವೆ. ವಿಷಯಗಳು ಹೊಸ ದೃಷ್ಟಿಕೋನದಿಂದ ಅಭಿವ್ಯಕ್ತವಾಗಿವೆ. ಮಕ್ಕಳ ಬಾಲ್ಯವನ್ನು ಮರುರೂಪಿಸುವ ಬಾಲಲೀಲೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾನೂನು ಸೇವಾ ಸಮಿತಿ ರಚನೆಯ ಹಿಂದಿನ ಉದ್ದೇಶ ಸಮಾಜದ ಕಟ್ಟಕಡೆ ಜನಗಿರಗೂ ನ್ಯಾಯ ಸಿಗಬೇಕು ಎನ್ನುವುದಾಗಿದೆ. ಮಹಿಳೆಯರು, ಮಕ್ಕಳು ನ್ಯಾಯದಿಂದ ವಂಚಿತರಾಗಬಾರದು ಎನ್ನುವ ಉದ್ದೇಶ ಕೂಡಾ ಇದರಲ್ಲಿದೆ ಎಂದು ಕುಂದಾಪುರ ಹಿರಿಯ ಸಿವಿಲ್ ನ್ಯಾಯಾದೀಶ ರಂಗೇಗೌಡ ಹೇಳಿದರು. ಅವರು, ಕುಂದಾಪುರ ತಾಲೂಕು ಕಾನೂನು ಸೇವಾ ಸಮಿತಿ, ಬಾರ್ ಅಸೋಸಿಯೇಶನ್, ತಾಲೂಕು ಆಡಳಿತ, ಕುಂದಾಪುರ ತಾಪಂ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಉಚಿತ ಕಾನೂನು ಅರಿವು ನೆರವು ಮಾಹಿತಿ ಸಮಾರೋಪ ಉದ್ಘಾಟಿಸಿ ಮಾತನಾಡಿದರು. ಉಡುಪಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ದೇವಿಂದ್ರ ಎಸ್. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ಮತ್ತು ಜೆಎಮ್ಎಫ್ಸಿ ನ್ಯಾಯಾಧೀಶ ದಿನೇಶ್ ಮುಗಳಿ, ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ನಾಗರತ್ನಮ್ಮ, ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ರಿ. ಕುಂಭಾಸಿ ಇದರ ಪ್ರವರ್ತಕ ಕೊರ್ಗಿ ವಿಠಲ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಂಕಲನ – 2021 ಕಾರ್ಯಕ್ರಮವು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ನಡೆಯಿತು. ಈ ಸಂದರ್ಭ ಹಿರಿಯ ಪತ್ರಕರ್ತ ಜಾನ್ ಡಿಸೋಜಾ, ಪ್ರಗತಿ ಪರ ಕೃಷಿಕ ಹೆರಿಯಣ್ಣ ಶೆಟ್ಟಿ ಯಡಾಡಿ ಮತ್ಯಾಡಿ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅವರನ್ನು ಗುರುತಿಸಿ ಸಮ್ಮಾನಿಸಲಾಯಿತು ಹಾಗೂ ಅಶಕ್ತರಿಗೆ ಅರ್ಥಿಕ ನೆರವು ನೀಡಲಾಯಿತು ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಸಮ್ಮಾನ ಸ್ವೀಕರಿಸಿ ಮಾತನಾಡಿ, ನಾವು ಮಾಡುವ ಕಾರ್ಯದಲ್ಲಿ ಉತ್ಸಾಹ ಮತ್ತು ಇನ್ನಷ್ಟು ಕಾರ್ಯ ಮಾಡಲು ಸೂಚನೆ ನೀಡಲು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುತ್ತವೆ. ಪ್ರಕೃತಿಯ ವೈಪರಿತ್ಯದ ನಡುವೆ ಯಕ್ಷಗಾನ ಕ್ಷೇತ್ರಕ್ಕೆ ಪ್ರಕೃತಿಯೇ ಪರೋಕ್ಷವಾಗಿ ಲಾಕ್ಡೌನ್ ನೀಡುತ್ತಿದೆ. ಕಲೆ ಮತ್ತು ಸಂಸ್ಕೃತಿಗಳೇ ಬದುಕಿಗೆ ಟಾನಿಕ್ ಇದ್ದ ಹಾಗೆ ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪೇಜಾವರ ಸ್ವಾಮಿ ಕುರಿತು ಅವಹೇಳನಕಾರಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖಾ ವಿರುದ್ದ ಕುಂದಾಪುರ ಬಿಜೆಪಿ ಯುವ ಮೋರ್ಚಾ ವತಿಯಿಂದ ಶಾಸ್ತ್ರಿ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸಮಿತಿ ಅಧ್ಯಕ್ಷ ಸುಪ್ರಸಾದ ಶೆಟ್ಟಿ, ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಪುರಸಭೆ ಸದಸ್ಯರಾದ ಪ್ರಭಾಕರ ವಿ., ರಾಘವೇಂದ್ರ ಖಾರ್ವಿ, ಮಾಜಿ ತಾಪಂ ಸದಸ್ಯ ರೂಪಾ ಪೈ. ಮುಂತಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಮಲ್ಯಾಡಿಯ ರಸ್ತೆಗಳಲ್ಲಿ ನಾಲ್ಕು ದಶಕಗಳ ಕಾಲ ಸಂಚರಿಸಿ, ಶೆಡ್ ಸೇರಿದ್ದ ಲಾರಿಯೊಂದು ಇದೀಗ ಧರ್ಮಸ್ಥಳದ ವಸ್ತು ಸಂಗ್ರಹಾಲಯವನ್ನು ಅಲಂಕರಿಸಿದೆ. ಮಂಜೂಷಾ ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಇನ್ನು ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯ ಶ್ರೀ ಮಹಾದೇವಿ ಪ್ರಸಾದ ಹೆಸರಿನ ಲಾರಿಯೂ ಕಾಣಸಿಗಲಿದೆ. ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ, ಉದ್ಯಮಿಯೂ ಆಗಿರುವ ಮಲ್ಯಾಡಿ ಶಿವರಾಮ ಶೆಟ್ಟಿ ಅವರು 1973ರ 12 10ಡಿ (ಟ್ವೆಲ್ ಟೆನ್ ಡಿ) ಮಾಡಲ್ ಲಾರಿಯನ್ನು ಕುಂದಾಪುರದ ಸಿಲ್ವೆಸ್ಟರ್ ಅಲ್ಮೆಡಾ ಅವರಿಂದ 1976ರಲ್ಲಿ ಖರೀಸಿದ್ದರು. ಮುಂದೆ 36 ವರ್ಷಗಳ ಕಾಲ ನಿರಂತರ ದುಡಿದ ಲಾರಿಯ ಸ್ಪೇರ್ಪಾರ್ಟ್ಸ್ ಸಿಗದ ಕಾರಣ ಶಿವರಾಮ ಶೆಟ್ಟಿ ಅವರು ಮನೆ ಮುಂದೆ ಶೆಡ್ ಮಾಡಿ ನಿಲ್ಲಿಸಿದ್ದರು. ಕೆಲ ಸಮಯದ ಹಿಂದೆ ಶಿವರಾಮ ಶೆಟ್ಟರ ಮನೆಯಲ್ಲಿ ಧರ್ಮಸ್ಥಳ ಮೇಳದ ಸೇವೆಯಾಟಕ್ಕಾಗಿ ಬಂದಿದ್ದ ಮೇಳದ ಮ್ಯಾನೇಜರ್ ಈ ಲಾರಿಯನ್ನು ಕಂಡು ಲಾರಿ ಪೋಟೋವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಕಳುಹಿಸಿ ಮಾಹಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಪ್ರಭ ಸಂಸ್ಥೆಯ ವತಿಯಿಂದ ಪ್ರತಿವರ್ಷ ಪ್ರದಾನ ಮಾಡಲಾಗುತ್ತಿರುವ ಕೋ.ಮ. ಕಾರಂತ ಪ್ರಶಸ್ತಿಗೆ ಮಾಜಿ ಶಾಸಕ, ಕರ್ನಾಟಕ 3ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ, ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಎ. ಗೋಪಾಲ ಕೃಷ್ಣ ಕೊಡ್ಗಿ ಅವರು ಆಯ್ಕೆಯಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಕ್ರಷ್ಣರಾಯ ಕೊಡ್ಗಿ ಅವರ ಪುತ್ರ ಎ.ಜಿ. ಕೊಡ್ಗಿ, ಕಳೆದ ಆರು ದಶಕದಲ್ಲಿ ಹಲವು ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಖ್ಯಾತ ಪತ್ರಕರ್ತ, ಸಾಹಿತಿ, ವಾಗ್ಮಿ ಕುಂದಾಪುರದ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ಪ್ರತಿ ವರ್ಷ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು. ಕೋಣಿ ಶಿವಾನಂದ ಕಾರಂತ ನೇತ್ರತ್ವದ ಸಮಿತಿ ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 23ರಂದು ಆದಿತ್ಯವಾರ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಸಂಘಟನೆಗಳು ಮುಂದೆ ಬಂದು ವೇದಿಕೆ ಕಲ್ಪಿಸಿಕೊಟ್ಟಾಗ ಸಣ್ಣ ಹಳ್ಳಿಯ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಂಡು ಮುಂದೊಂದು ದಿನ ಸಾಧನೆಯ ಹೆಜ್ಜೆಯನ್ನಿಡಲು ಸಾಧ್ಯ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವಿಕೆ ಪೋಷಕರಿಂದ ಆರಂಭವಾಗಲಿ ಎಂದು ಯುವವಾಹಿನಿ ರಿ. ಯಡ್ತಾಡಿ ಘಟಕದ ಅಧ್ಯಕ್ಷ ರಾಜು ಪೂಜಾರಿ ಅವರು ಹೇಳಿದರು. ಅವರು ಯುವವಾಹಿನಿ ರಿ. ಯಡ್ತಾಡಿ ಘಟಕದ ವತಿಯಿಂದ ಗುಲಾಬಿ ಪೂಜಾರ್ತಿ ಅವರ ಮನೆ ವಠಾರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಂದಿನ ಮಕ್ಕಳೇ ಮುಂದಿನ ಸುಶಿಕ್ಷಿತ ಸಮಾಜ ನಿರ್ಮಾಣದ ಶಿಲ್ಪಿಗಳು, ಅವರನ್ನು ಸುಂದರ ಶಿಲ್ಪಿಗಳನ್ನಾಗಿ ರೂಪಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಾರ್ಕೂರು ಸ್ವಾಗತ್ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಅವರು ಹೇಳಿದರು. ಈ ಸಂದರ್ಭದಲ್ಲಿ ನಡೂರು ಬ್ರಿಕ್ಸ್ನ ಮಾಲಕರಾದ ಸಂದೀಪ್ ಪೂಜಾರಿ, ಯುವವಾಹಿನಿಯ ಕಾರ್ಯದರ್ಶಿ ಅಜಿತ್ ಪೂಜಾರಿ, ಸಾಂಸ್ಕೃತಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಜಿ.ಪಿ.ಎಸ್ ಆಧಾರಿತ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಖಾಸಗಿ ನಿವಾಸಿಗಳ ಮೂಲಕ ಕೈಗ್ಗೊಳ್ಳಲಾಗಿದ್ದು, ಬೆಳೆ ಸಮೀಕ್ಷೆಯಲ್ಲಿ ನಮೂದಾದ ಬೆಳೆಗಳ ಬಗ್ಗೆ ರೈತರಿಗೆ ಆಕ್ಷೇಪಣೆ ಇದ್ದಲ್ಲಿ ಬೆಳೆ ದರ್ಶಕ್ ಮೊಬೈಲ್ ಆಪ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದ್ದು, Bele Darshak Karnataka – 2021-22 ಆಪ್ ಅನ್ನು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಂಡು ಅಥವಾ ರೈತರು ಲಿಖಿತವಾಗಿ ತಮ್ಮ ಆಕ್ಷೇಪಣೆಗಳನ್ನು ಕೃಷಿ, ಕಂದಾಯ ಹಾಗೂ ತೋಟಗಾರಿಕಾ ಇಲಾಖೆಗಳಲ್ಲಿಯು ಸಹ ಸಲ್ಲಿಸಬಹುದಾಗಿದೆ. ರೈತರಿಂದ ಸ್ವೀಕೃತವಾದ ಆಕ್ಷೇಪಣೆಗಳನ್ನು ಸಂಬಂಧಿಸಿದ ಗ್ರಾಮದ ಮೇಲ್ವಿಚಾರಕರಿಂದ ಪರಿಶೀಲಿಸಿ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
