ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದಲ್ಲಿ ಜರುಗಿದ ಉಡುಪಿ ಜಿಲ್ಲಾ ಸಮಸ್ತ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಮಹಾ ಸಭೆಯಲ್ಲಿ ಸಂಘದ 2022 -24ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೋಟೇಶರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಉಪ ಪ್ರಾಂಶುಪಾಲರಾದ ಚಂದ್ರಶೇಖರ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅರೆಶಿರೂರು ಮೂಕಾಂಬಿಕಾ ದೇವಳ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ. ಶಿವರಾಮ, ಉಪಾಧ್ಯಕ್ಷರಾಗಿ ಸುಮನಾ ಕಲ್ಯಾ, ರೂಪಾ ಕಿಣಿ ಅಲೆವೂರು, ಮಂಜು ಕಾಳಾವರ, ಜತೆ ಕಾರ್ಯದರ್ಶಿಯಾಗಿ ಕೃಷ್ಣ ಅಡಿಗ ಕುಂದಾಪುರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರುಣಾಕರ ಶೆಟ್ಟಿ ಬಿದ್ಕಲಕಟ್ಟೆ, ಜಯಶೀಲ ಶೆಟ್ಟಿ ಕೋಡಿ, ರಾಘವೇಂದ್ರ ಶೇರೆಗಾರ್ ಗಂಗೊಳ್ಳಿ, ರಮೇಶ ಕುಮಾಲ ಆವರ್ಸೆ, ಮಂಜುನಾಥ ನಾಯ್ಕ್ ಚೇರ್ಕಾಡಿ, ಪ್ರೀತಿ ರೇಖಾ ಹೇರಾಡಿ, ಮಂಜುನಾಥ ಎಸ್. ಹಕ್ಲಾಡಿ, ನಾಗರಾಜ ಭಟ್ ಕೊಲ್ಲೂರು, ಚಂದ್ರ ಶೆಟ್ಟಿ ಹೊಸೂರು, ರೂಪರೇಖಾ ಮಣಿಪುರ, ನಟರಾಜ ಉಪಾಧ್ಯ ಇನ್ನಂಜೆ, ಸಂಧ್ಯಾ ಉಡುಪಿ, ದಿವಾಕರ ಮರಕಾಲ ಹೆಬ್ರಿ, ಉಷಾ ಪಡಿವಾಳ ಹಿರಿಯಂಗಡಿ, ಅಪರ್ಣಾ ಆಚಾರ್ ಹೆಬ್ರಿ, ಪ್ರಕಾಶ್ ರಾವ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್ ಆಲ್ಬಂ ವೀಡಿಯೋ ಮೂಲಕ ಜನಮನ್ನಣೆ ಗಳಿಸಿದ್ದ ಟೀಮ್ ಕಲತ್ವ ಸಿರಿ ಪ್ರೊಡಕ್ಷನ್ಸ್, ಇದೀಗ ಮ್ಯೂಸಿಕಲ್ ಫಿಲಂ ಮೂಲಕ ಕಥೆಯೊಂದನ್ನು ಹೇಳಲು ಸಜ್ಜಾಗಿದೆ. ‘ಸಾಗರಿಕ’ ಎಂಬ ಕನ್ನಡ ಮ್ಯೂಸಿಕಲ್ ಫಿಲ್ಮ್ ಮೂಲಕ ಮತ್ತೆ ರಂಜಿಸಲು ಬಂದಿರುವ ತಂಡ ಈಗಾಗಲೇ ಆಡಿಯೋ ಬಿಡುಗಡೆಗೊಳಿಸಿದ್ದು ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಚೊಚ್ಚಲ ನಿರ್ದೇಶನದ ಹೊಣೆ ಹೊತ್ತಿರುವ ಮನೀಶ್ ಮೊಯ್ಲಿ ಈ ಬಾರಿ ಸಾಹಿತ್ಯ ಹಾಗೂ ನಿರ್ದೇಶನವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆ. ಪಿ. ಮಿಲನ್ ಈ ಮ್ಯೂಸಿಕಲ್ ಫಿಲಂಗಾಗಿ ಹಾಡಿದ್ದಾರೆ. ರವಿರಾಜ್ ಪೂಜಾರಿ ಹಾಗೂ ರಶ್ಮಿ ಭಟ್ ಇದರಲ್ಲಿ ನಟಿಸಿದ್ದಾರೆ. ಸಚಿನ್ ಶೆಟ್ಟಿ ಮಾರ್ಕೆಟಿಂಗ್ ಅಡ್ಡ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಮ್ಯೂಸಿಕಲ್ ಫಿಲಂಗೆ ಸಚಿನ್ ಶೆಟ್ಟಿ ನಿರ್ಮಾಪಕರಾಗಿದ್ದಾರೆ. ಈ ಮ್ಯೂಸಿಕಲ್ ಫಿಲಂ ಈಗಾಗಲೇ ಬೆಂಗಳೂರಿನ ಸುಚಿತ್ರ ಫಿಲಂ ಅಕಾಡಮಿಯಲ್ಲಿ ಸತತವಾಗಿ 3 ಪ್ರಿಮಿಯರ್ ಶೋ ಪ್ರದರ್ಶನ ಕಂಡು ಜನರ ಮೆಚ್ಚುಗೆಯನ್ನ ಪಡೆದಿದೆ. ಶೀತಲ್ ಎಸ್.ಎಂ ಅವರ ಹಿನ್ನಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ತಾಲೂಕು ಆಡಳಿತ, ಸರಕಾರಿ ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಸೋಮವಾರ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಮಾತನಾಡಿ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮತ್ತು ಯುವಕರು ಮುಂದಾಗಬೇಕು. ಕುತೂಹಲಕ್ಕಾಗಿ ಯಾರೊಬ್ಬರೂ ಮಾದಕ ದ್ರವ್ಯ ಬಳಸಬಾರದು. ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಮಾಡುವುದು ನಾಗರಿಕ ಸಮಾಜದ ಕರ್ತವ್ಯ. ಖಿನ್ನತೆಯಿಂದ ಮಾನಸಿಕ ದುಃಖ ಉಂಟಾಗಿ ವ್ಯಕ್ತಿಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಮಾದಕ ವಸ್ತುಗಳಿಂದ ಮನು?ನ ಅಂಗಾಂಗಳಿಗೆ ತಲುಪಿ ಮನ? ಅದಕ್ಕೆ ಮದ್ಯಪಾನಕ್ಕೆ ದಾಸನು ಆಗುತ್ತಾನೆ. ಮದ್ಯಪಾನ, ಮಾದಕ ದ್ರವ್ಯಗಳ ಸೇವನೆಯಂತಹ ದುಶ್ಚಟಗಳು ಖಿನ್ನತೆಗೆ ಕಾರಣವಾಗಬಹುದು ಹೀಗಾಗಿ ಸಮೂಹ ಸನ್ನಡತೆ ಮೈಗೂಡಿಸಿಕೊಳ್ಳಬೇಕು ಎಂದರು. ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ಗ್ರಾಮದ ನೆರೆ ಹಾನಿ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಅವರು ಮಂಗಳವಾರ ಭೇಟಿ ನೀಡಿ, ನೆರೆ ಸಂತ್ರಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣದಿಂದ ಸುರಕ್ಷತಾ ಕ್ರಮ ಮತ್ತು ಮುಂಜಾಗ್ರತೆ ತೆಗೆದುಕೊಳ್ಳುವಂತೆ ತಿಳಿಸಿದ್ದು, ಪರಿಹಾರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಶಿರೂರು ಗ್ರಾಮದ ಚಿಲುಮೆ, ಪೇಟೆ ಮುಂತಾದೆಡೆ ನದಿ ತೊರೆಗಳು ತುಂಬಿ ಹರಿದಿದ್ದು ಒಮ್ಮೆಲ್ಲೆ ನೀರು ಏರಿದ ಪರಿಣಾಮ ಪೇಟೆ, ಕೆಸರಕೋಡಿ, ಹಡವಿನಕೋಣೆ, ಕುಂಬಾರಕೇರಿ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಡುವರಿ ಸೇರಿದಂತೆ ಬಹುತೇಖ ಭಾಗ ಜಲಾವೃತಗೊಂಡಿತ್ತು. ಶಿರೂರು ಕುಂಬಾರಕೇರಿಯಲ್ಲಿ ಎರಡು ಮನೆ ಕುಸಿದಿದೆ. ಕಳುಹಿತ್ಲುವಿನಲ್ಲಿ ಇಪ್ಪತ್ತಕ್ಕೂ ಅಧಿಕ ದೋಣಿ ನಾಪತ್ತೆಯಾಗಿದೆ. ಹಡವಿನಕೋಣೆಯಲ್ಲಿ ಬಹುತೇಖ ದೋಣಿಯ ಹೊಸ ಬಲೆಗಳು ನದಿ ಪಾಲಾಗಿದೆ. ಇಪ್ಪತ್ತೈದಕ್ಕೂ ಅಧಿಕ ಮನೆ ಜಲಾವೃತಗೊಂಡಿದೆ. ನಿರೋಡಿಯಲ್ಲಿ ಎಂಟು ಹಸುಗಳು ನೀರುಪಾಲಾಗಿದೆ. ಎರಡು ಮನೆ ಕುಸಿಯುವ ಭೀತಿ ಇದೆ ಎದುರಾಗಿತ್ತು. ಬೈಂದೂರು ತಾಲೂಕಿನಲ್ಲಿ 216.4…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಅ.2: ಗಿರಿಜಾ ಗ್ರೂಫ್ ಆಫ್ ಕನ್ಸರ್ನ್ಸ್ ನ ಅಂಗ ಸಂಸ್ಥೆಯಾದ ಫಿಸಿಯೋಕೇರ್’ನಲ್ಲಿ ಮೂರು ದಿನಗಳ ಕಾಲ ಉಚಿತ ಸಮಾಲೋಚನೆ ಮತ್ತು ಮಾಹಿತಿ ಶಿಬಿರ 5 ಆಗಸ್ಟ್ 2022 ರಿಂದ 7 ಆಗಸ್ಟ್ 2022ರ ತನಕ ಬೆಳಿಗ್ಗೆ 10-00 ರಿಂದ ಸಂಜೆ 5-00 ಗಂಟೆಯ ವರೆಗೆ ನಡೆಯಲಿದೆ. ಉಡುಪಿಯ ಮಿತ್ರ ಆಸ್ಪತ್ರೆಯ ಬಳಿ ವಾದಿರಾಜ ಕಾಂಪ್ಲೆಕ್ಸ್’ನಲ್ಲಿ ಇರುವ ನಮ್ಮ ಫಿಸಿಯೋಕೇರ್ ಸೆಂಟರಿನಲ್ಲಿ ಈ ಉಚಿತ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ. ವಿಳಾಸಫಿಸಿಯೋಕೇರ್ನೆಲಮಹಡಿವಾದಿರಾಜ ಕಾಂಪ್ಲೆಕ್ಸ್ಮಿತ್ರಾ ಹಾಸ್ಪಿಟಲ್ ಬಳಿ, ಉಡುಪಿPhone : 9686291685 (ರವೀಂದ್ರ ಕೆ ಶೆಟ್ಟಿ, ಸಿಎಂಡಿ ಗಿರಿಜಾ ಗ್ರೂಪ್ ಆಫ್ ಕಾನ್ಸರ್ನ್ಸ್., ಉಡುಪಿ)
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.2: ಬೈಂದೂರು ತಾಲೂಕಿನಲ್ಲಾದ ಭಾರಿ ಮಳೆಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಸೋಮವಾರ ಮಧ್ಯಾಹ್ನ ಆರಂಭಗೊಂಡ ವರುಣನ ಆರ್ಭಟ ರಾತ್ರಿವೇಳೆ ಹೆಚ್ಚಾಗಿದ್ದು ಬೈಂದೂರು ತಾಲೂಕಿನ ವಿವಿಧ ಭಾಗಗಳಲ್ಲಿ ನೆರೆ ಕಾಣಿಸಿಕೊಂಡಿತ್ತು. ಅಧಿಕ ಮಳೆಗೆ ಮೇಘಸ್ಟೋಟ ಕಾರಣವಿರಬಹುದು ಎನ್ನಲಾಗಿದೆ. ಮರವಂತೆ, ಕೊಲ್ಲೂರು ತನಕವೂ ನಿರಂತರ ಮಳೆಯಾಗಿದ್ದರೆ, ಬೈಂದೂರು ಶಿರೂರು ಭಾಗದಲ್ಲಿ ಮೇಘಸ್ಟೋಟದ ಕಾರಣದಿಂದ ಹೆಚ್ಚಿನ ಮಳೆಯಾಗಿದೆ. ಶಿರೂರು ಗ್ರಾಮದಲ್ಲಿ ಹೆಚ್ಚಿನ ಹಾನಿ:ನಿರಂತರ ಮಳೆಯಿಂದಾಗಿ ಶಿರೂರು ಗ್ರಾಮದ ಕರಾವಳಿ ರಸ್ತೆ, ಕೆಳಪೇಟೆ ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಶಿರೂರು ಕರಾವಳಿ, ಹಡವಿನಕೋಣೆ, ಕೆಳಪೇಟೆ ಮೊದಲಾದೆಡೆಯ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 9 ಮನೆಗಳು ಸಂಪೂರ್ಣ ಕುಸಿದಿದೆ. ಶಿರೂರು ಕರಾವಳಿಯ 20ಕ್ಕೂ ಅಧಿಕ ದೋಣಿಗಳು ಸಮುದ್ರಪಾಲಾಗಿದೆ. 8ಕ್ಕೂ ಅಧಿಕ ಜಾನುವಾರುಗಳು, ಒಂದು ಬೈಕ್ ನೀರುಪಾಲಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಶಿರೂರು ಗ್ರಾಮವೊಂದರಲ್ಲೇ 5 ಕೋಟಿಗೂ ಅಧಿಕ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ:ಬೆಳಿಗ್ಗೆ 3 ಗಂಟೆಯಿಂದಲೇ ಬೈಂದೂರು ಅಗ್ನಿಶಾಮಕದಳದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.2: ಭಾರಿ ಮಳೆಯ ಹಿನ್ನೆಲೆಯಲ್ಲಿ ಇಂದು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಶಾಲಾ-ಕಾಲೇಜುಗಳಿಗೆ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ:► ಭಾರಿ ಮಳೆಗೆ ತತ್ತರಿಸಿದ ಶಿರೂರು ಗ್ರಾಮ. ಬೈಂದೂರು ತಾಲೂಕಿನ ಹಲವೆಡೆ ಜಲಾವೃತ – https://kundapraa.com/?p=61097 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಅ.2: ಸೋಮವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಪ್ರದೇಶಗಳು ಜಲಾವೃತವಾಗಿದೆ. ಶಿರೂರು ಗ್ರಾಮದ ಕೆಳಪೇಟೆ, ಕರಾವಳಿ ಭಾಗದಲ್ಲಿ ಸಂಪೂರ್ಣ ನೀರು ತುಂಬಿಕೊಂಡಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಕೆಳಪೇಟೆಯ ಹೊಳೆ ತುಂಬಿ ಹರಿಯುತ್ತಿದ್ದು ಹತ್ತಿರದ ಮನೆಗಳಿಗೂ ನೀರು ನುಗ್ಗಿದೆ. ತೇಲಿ ಹೋದ ದೋಣಿ, ಜಾನುವಾರು:ಅನಿರೀಕ್ಷಿತ ನೆರೆಯಿಂದಾಗಿ ಜಾನುವಾರುಗಳು ನೀರಿನಲ್ಲಿ ತೇಲಿಹೋದ ಘಟನೆಯೂ ನಡೆದಿದೆ. ಕರಾವಳಿ ಭಾಗದಲ್ಲಿ ನಿಲ್ಲಿಸಲಾಗಿದ್ದ ದೋಣಿಗಳು ಸಮುದ್ರಪಾಲಾಗಿರುವ ಘಟನೆಯೂ ನಡೆದಿದೆ. ಮನೆಯ ಸಮೀಪ ನಿಲ್ಲಿಸಿದ್ದ ಕಾರೊಂದು ನೆರೆಯಿಂದಾಗಿ ಮುಳುಗಿಹೋಗಿದೆ. ರಕ್ಷಣಾ ಕಾರ್ಯಚರಣೆ:ಅಗ್ನಿಶಾಮಕ ದಳದ ಸಿಬ್ಬಂದಿಗಳು ಶಿರೂರಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸ್ಥಳೀಯರು ನೆರವಾಗುತ್ತಿದ್ದಾರೆ. ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ. ಬೈಂದೂರು ಕೊಲ್ಲೂರು ರಸ್ತೆ ಸಂಚಾರ ಅಸ್ತವ್ಯಸ್ಥ:ನಿರಂತರ ಮಳೆಯಿಂದಾಗಿ ಬೈಂದೂರು ಕೊಲ್ಲೂರು ರಸ್ತೆಯ ಮಯ್ಯಾಡಿ-ತಗ್ಗರ್ಸೆ ಭಾಗದ ನದಿಪಾತ್ರಗಳಲ್ಲಿ ಪ್ರವಾಹ ಉಂಟಾಗಿದ್ದು, ರಸ್ತೆಯ ಮೆಲೆಯೇ ರಭಸವಾಗಿ ನೀರು ಹರಿಯುತ್ತಿದೆ. ದೊಡ್ಡ ವಾಹನ ಹೊರತುಪಡಿಸಿ ಕಾರು, ರಿಕ್ಷಾ, ಬೈಕ್ಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.01: ಮುಂದಿನ 5 ದಿನಗಳ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಗಸ್ಟ್ 2ರಿಂದ ಅಗಸ್ಟ್ 6ರ ತನಕ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಸಂದರ್ಭ ಮೀನುಗಾರರರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.01: ರಾಜ್ಯಸಭೆಯ ನೂತನ ಸದಸ್ಯರಾದ ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕುಂದಾಪುರ, ಬೈಂದೂರು ವಲಯದ ವತಿಯಿಂದ ಗೌರವಿಸಲಾಯಿತು. ಛಾಯಾಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಡೆಯವರು ಆಧುನಿಕ ತಂತ್ರಜ್ಞಾನದಿಂದ ಛಾಯಾಗ್ರಾಹಕರು ಸವಾಲಿಗೊಳಗಾಗಿದ್ದು ಆ ಸವಾಲನ್ನು ಮೀರಿ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಎಲ್ಲಾ ಛಾಯಾಗ್ರಾಹಕರಿಗೂ ಭಗವಂತನ ಅನುಗ್ರಹ ಸದಾಕಾಲವೂ ಇರಲಿ ಎಂದರು. ಈ ಸಂದರ್ಭ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷರಾದ ಆನಂದ ಬಂಟ್ವಾಳ್, ಕುಂದಾಪುರ-ಬೈಂದೂರು ವಲಯ ಅಧ್ಯಕ್ಷರಾದ ದೊಟ್ಟಯ್ಯ ಪೂಜಾರಿ, ಸಲಹಾ ಸಮಿತಿ ಅಧ್ಯಕ್ಷರಾದ ನಾಗರಾಜ್ ರಾಯಪ್ಪನಮಠ, ಪ್ರಧಾನ ಕಾರ್ಯದರ್ಶಿ ಸುರೇಶ್ ಜಮದಗ್ನಿ, ಅಮೃತ್ ಬೀಜಾಡಿ, ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.
