ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋವಿಡ್ನ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ವೈದ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಪ್ರತಿಯೊಬ್ಬ ನಾಗರಿಕನು ಕೂಡ ಸ್ವಯಂ ಜಾಗೃತಿ ವಹಿಸುವ ಅಗತ್ಯತೆ ಇವತ್ತು ಇದೆ. ವಿವಿಧತೆಯಲ್ಲಿ ಏಕತೆ ಎನ್ನುವ ಧ್ಯೇಯದಡಿಯಲ್ಲಿ ವಿಭಿನ್ನ ಸಮಾಜಮುಖಿ ಕಾರ್ಯಕ್ರಮಗಳನ್ನು ಸೌಹಾರ್ದ ಸಹಕಾರಿ ಮಾಡುತ್ತಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕ ಮಂಜುನಾಥ ಎಸ್.ಕೆ. ಹೇಳಿದರು. ಕುಂದಾಪುರ ಸೌಹಾರ್ದ ಕ್ರೆಡಿಟ್ ಕೊ-ಅಪರೇಟಿವ್ ಲಿ., ಕುಂದಾಪುರ ವತಿಯಿಂದ ಕೋವಿಡ್-19 ಇದರ ಸಾಮಾಜಿಕ ಕಳಕಳಿ ಪ್ರಯುಕ್ತ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಜರ್ ಡಿಸ್ಪೆಂಸರ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರಿನ ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ ವಹಿಸಿದ್ದರು. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೆಶ್ವರ್, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೊ-ಅಪರೇಟಿವ್ ಲಿ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋರೋನಾ ಪಾಸಿಟಿವ್ ಪ್ರಕರಣಗಳನ್ನು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರ್ತಕರು ಹಾಗೂ ಸಾರ್ವಜನಿಕರ ಹಿತ ರಕ್ಷಣೆಗಾಗಿ ಜುಲೈ.13 ರಿಂದ ಜುಲೈ.31 ತನಕ ಕುಂದಾಪುರ ಪುರಸಭಾ ವ್ಯಾಪ್ತಿಯ ಎಲ್ಲ ಅಂಗಡಿಗಳು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲಿದ್ದು, ಆ ಬಳಿಕ ಮೆಡಿಕಲ್, ಹಾಲು, ಹೋಟೆಲ್ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಲಾಗುತ್ತಿದೆ. ಕುಂದಾಪುರದ ಶೆರೋನ್ ಹೋಟೆಲ್ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕುಂದಾಪುರದ ಸಮಾನ ಮನಸ್ಕ ವರ್ತಕರು ಈ ನಿರ್ಣಯ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ವ್ಯಾಪಾರಸ್ಥ ರಾಧಾಕೃಷ್ಣ ಅವರು ಮಾತನಾಡಿ ಕೊರೊನಾ ಸಮುದಾಯಿಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಸುಮಾರು 150 ಹೆಚ್ಚು ಮಂದಿ ಸಮಾನ ಮನಸ್ಕ ವ್ಯಾಪಾರಸ್ಥರು ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೂ ಮೊದಲು ಎಲ್ಲ ಅಂಗಡಿಗಳಿಗೂ ಭೇಟಿ ಕೊಟ್ಟು ಮನವಿ ಮಾಡಿದ್ದೇವೆ. ಸ್ವಯಂ ಪ್ರೇರಿತ ಬಂದ್ಗೆ ಎಲ್ಲರ ಬೆಂಬಲ ಸಿಕ್ಕಿದೆ ಎಂದವರು ಹೇಳಿದರು. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿರೂರು ಗ್ರೀನ್ವ್ಯಾಲಿ ನ್ಯಾಶನಲ್ ಸ್ಕೂಲ್ನ ಹತ್ತನೇ ತರಗತಿ ವಿದ್ಯಾರ್ಥಿನಿ ಶರ್ಮದಾ ಪೂಜಾರಿ ಐಸಿಎಸ್ಇ ಪರೀಕ್ಷೆಯಲ್ಲಿ 484 (ಶೆ. 96.8) ಅಂಕದೊಂದಿಗೆ ತೇರ್ಗಡೆ ಹೊಂದಿದ್ದು, ಶಾಲೆಗೆ ಟಾಪರ್ ಆಗಿದ್ದಾರೆ. ಶರ್ಮದಾ ಎಸ್ಸಿಡಿಸಿಸಿ ಬ್ಯಾಂಕ್ ಕುಂದಾಪುರ ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ ಹಾಗೂ ಶಾಂತಲಾ ದಂಪತಿಗಳ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಮಳೆಯಾಶ್ರಿತ ಭತ್ತವನ್ನು ಗ್ರಾಮ ಪಂಚಾಯತ್ ಮಟ್ಟಕ್ಕೆ ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚಿಸಲಾಗಿದೆ. ಮುಂಗಾರು ಹಂಗಾಮಿಗೆ ಅಧಿಸೂಚಿತ ಬೆಳೆಯ ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ಜುಲೈ 31 ದಿನಾಂಕವಾಗಿದೆ. ಬೆಳೆ ಸಾಲ ಪಡೆಯದ ರೈತರು ಪಹಣಿ ಪತ್ರ, ಖಾತೆ/ಪುಸ್ತಕ, ಕಂದಾಯ ರಸೀದಿ ಮತ್ತು ಆಧಾರ್ ಸಂಖ್ಯೆಗಳನ್ನು ಒದಗಿಸಿ ಸ್ಥಳೀಯ ಸಾಲ ನೀಡುವ ವಾಣಿಜ್ಯ ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳು, ಸಾರ್ವಜನಿಕ ಸೇವಾ ಕೇಂದ್ರ ವಿಮಾ ಸಂಸ್ಥೆಗಳನ್ನು ಸಂಪರ್ಕಿಸಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ವಿಮಾ ಮೊತ್ತ ಪ್ರತೀ ಹೆಕ್ಟೇರ್ ಗೆ ರೂ.55000 ಗಳಾಗಿದ್ದು, ವಿಮಾ ಕಂತಿನ ದರ ಪ್ರತೀ ಹೆಕ್ಟೇರ್ ಗೆ ರೂ.1100 ಆಗಿದೆ. ಬೆಳೆ ವಿಮಾ ಯೋಜನೆಯಿಂದ ರೈತರಿಗೆ ಪ್ರಯೋಜನಗಳು ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾಮಾನ ವೈಪರೀತ್ಯಗಳಾದ ಹೆಚ್ಚಿನ ಮಳೆ ಮುಳುಗಡೆ, ಧೀರ್ಘಕಾಲ ತೇವಾಂಶ ಕೊರತೆ , ತೀವ್ರ ಬರಗಾಲ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಂಗಳೂರು ಲಯನ್ಸ್ ಕ್ಲಬ್ನ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಸರಕು ಸಾಗಣೆ ಗುತ್ತಿಗೆದಾರರಾದ ರಮೇಶ ಕೆ. ಕುಂದರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ವಿಲ್ಫೈಡ್ ಮೆನೆಜಿಸ್ ಮತ್ತು ಖಜಾಂಜಿಯಾಗಿ ಕೆ.ರಮೆಶ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಥಮ ಉಪಾಧ್ಯಕ್ಷರಾಗಿ ಮ್ಯಾಥಿವ್ ಜೋಸೆಫ್, ದ್ವಿತೀಯ ಉಪಾಧ್ಯಕ್ಷರಾಗಿ ರಜತ್ ಹೆಗ್ಡೆ ಆಯ್ಕೆಯಾಗಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಏಕಗವಾಕ್ಷಿ ಯೋಜನೆಯಡಿ ರಾಜ್ಯ ಮಟ್ಟದ ಪುಸ್ತಕ ಆಯ್ಕೆಗಾಗಿ 2020ನೇ ಸಾಲಿನ ಜನವರಿ 1 ರಿಂದ ಜೂನ್ 30 ರವರೆಗೆ ಪ್ರಥಮ ಮುದ್ರಣವಾಗಿ ಪ್ರಕಟವಾದ ಸಾಹಿತ್ಯ, ಸ್ವರ್ಧಾತ್ಮಕ ಪಠ್ಯ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ ಮತ್ತು ಭಾರತೀಯ ಇತರ ಭಾಷೆಯ ಗ್ರಂಥಗಳ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳಿAದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಕೋವಿಡ್-19 ಹಿನ್ನೆಲೆ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು, ಇಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆ ಬೆಂಗಳೂರಿನ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಇಲ್ಲಿ ಜುಲೈ 30 ರೊಳಗೆ ಪುಸ್ತಕಗಳನ್ನು ಕಾಪಿರೈಟ್ ಮಾಡಿಸುವುದು. ಕಾಪಿರೈಟ್ ಮಾಡಿಸಿದ ಪುಸ್ತಕದ ಒಂದು ಪ್ರತಿಯನ್ನು ಅರ್ಜಿಯೊಂದಿಗೆ ಜುಲೈ 31 ರೊಳಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ಡಾ. ಅಂಬೇಡ್ಕರ್ ವೀಧಿ, 4ನೇ ಮಹಡಿ, ಬೆಂಗಳೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿವಿಧ ಸೇವೆಗಳಿಗಾಗಿ ಸೇವಾ ಸಿಂಧು ವೆಬ್ ಸೈಟ್ನಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಯುವಕ/ಯುವತಿ/ಸಂಘ/ಕ್ಲಬ್ ಗಳ ನೊಂದಣಿಗಾಗಿ ಅರ್ಜಿ,ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ, ಏಕಲವ್ಯ ಪ್ರಶಸ್ತಿ, , ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗಾಗಿ ಸೇವಾ ಸಿಂಧುವೆಬ್ ಸೈಟ್ https://sevasindhu.karnataka.gov.in ನಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ರೋಶನ್ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ಉಡುಪಿ ಜಿಲ್ಲೆ (0820-2521324, 94808-86467) ಇವರನ್ನು ಸಂಪರ್ಕಿಸಲು ಕೋರಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: 2020-21 ನೇ ಸಾಲಿನ ಪರಿಶಿಷ್ಟ ವರ್ಗದ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ಹೆಚ್ಚಿನ ತರಬೇತಿ ಪಡೆಯಲು 2 ವರ್ಷದ ತರಭೇತಿ ಅವಧಿಗೆ ಮಾಸಿಕ ರೂ.10000/- ಹಾಗೂ ಕಾನೂನು ವೃತ್ತಿಗೆ ಸಂಬAಧಿಸಿದ ಪುಸ್ತಕಗಳಿಗೆ ತರಬೇತಿ ಅವಧಿಯಲ್ಲಿ ರೂ 5,000/- ನೀಡುವ ಬಗ್ಗೆ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆದಾಯ ಮಿತಿರೂ 2,00,000/-ದೊಳಗಿರಬೇಕು. ಅರ್ಜಿ ಪ್ರತಿಯನ್ನು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ ಜಿಲ್ಲಾ ಸಂಕಿರ್ಣ ,ಬಿ ಬ್ಲಾಕ್ ,ಎರಡನೇ ಮಹಡಿ,ರಜತಾದ್ರಿ ,ಮಣಿಪಾಲ ಈ ಕಛೇರಿಯಿಂದ ಪಡೆದು ಜುಲೈ 31 ರೊಳಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ 0820-2574814 ಸಂಪರ್ಕಿಸಬಹುದು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.9ರ ಶುಕ್ರವಾರ 34 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇಂದು 673 ನೆಗೆಟಿವ್: ಈ ತನಕ ಒಟ್ಟು 21,409 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 17,508 ನೆಗೆಟಿವ್, 1,477 ಪಾಸಿಟಿವ್ ಬಂದಿದ್ದು, 2,424 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 673 ನೆಗೆಟಿವ್, 34 ಪಾಸಿಟಿವ್ ಬಂದಿದೆ. ಒಟ್ಟು 1261 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 250 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 1,477 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,224 ಮಂದಿ ಬಿಡುಗಡೆಯಾಗಿದ್ದು, 250 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕರ್ನಾಟಕ ಸರಕಾರ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ ಉಡುಪಿ, ತಾಲೂಕು ಆಯುಷ್ ಘಟಕ ಕುಂದಾಪುರ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಮತ್ತು ಗೀತಾನಂದ ಫೌಂಡೇಶನ್ ಕೋಟ ಇವರ ಸಹಯೋಗದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಆಯುಷ್ ಔಷಧಿ ವಿತರಣಾ ಕಾರ್ಯಕ್ರಮ ಗಂಗೊಳ್ಳಿಯ ಪೊಲೀಸ್ ಠಾಣೆಯಲ್ಲಿ ಗುರುವಾರ ಜರಗಿತು. ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ಅವರು ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧಿಗಳು ಸಹಕಾರಿಯಾಗುತ್ತದೆ. ಹಿಂದಿನಿಂದ ಪೂರ್ವಜರು ಬಳಸುತ್ತಿದ್ದ ಗಿಡಮೂಲಿಕೆ ಔಷಧಿಗಳು, ಆಯುರ್ವೇದ ಔಷಧಿಗಳನ್ನು ಸೇವಿಸುವುದರಿಂದ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿ, ಕೋವಿಡ್-೧೯ ವೈರಸ್ನಿಂದ ರಕ್ಷಣೆ ಪಡೆಯಲು ಸಹಾಯವಾಗುತ್ತದೆ. ಕರೋನಾ ತಡೆಗಟ್ಟುವ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೇಂದ್ರ ಆಯುಷ್ ಸಚಿವಾಲಯ ಅನುಮೋದಿತ ಆಯುಷ್ ಔಷಧಿಗಳನ್ನು ಕರೋನಾ ವೈರಸ್ ನಿರ್ಮೂಲನೆಯಲ್ಲಿ ಮುಂಚೂಣಿಯಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ವಿತರಿಸಲಾಗುತ್ತಿದ್ದು, ಇದರ…
