Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲೂ ತಿರಂಗ ಹಾರಿಸುವ ನಿಟ್ಟಿನಲ್ಲಿ ಇಂದು ಕುಂದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜದ ಗಣ್ಯರಾದ ಎಸ್ ಎನ್ ಪಡಿಯಾರ್, ದಿನಕರ್ ಶೆಣೈ, ರಾಜೀವ್ ಶೆಟ್ಟಿ ಮನೆಗೆ ತೆರಳಿ ರಾಷ್ಟ್ರಧ್ವಜ ಹಸ್ತಾಂತರಿಸಿ, ಶುಭಕೋರಲಾಯಿತು. ಈ ಸಂದರ್ಭ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ, ಯುವಮೋರ್ಚಾ ಉಪಾಧ್ಯಕ್ಷ ಅಭಿಷೇಕ ಅಂಕದಕಟ್ಟೆ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೌರಭಿ ಪೈ, ಜಯಲಕ್ಷ್ಮೀ ಗಾಣಿಗ, ಕಾರ್ಯದರ್ಶಿ ರೋಹಿಣಿ ಪೈ, ಪುರಸಭಾ ಸದಸ್ಯೆ ಪುಷ್ಪಾ ಶೇಟ್ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕುಂಭಾಶಿ ವಿನಾಯಕ ನಗರದ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿನಾಯಕ ನಗರದಲ್ಲಿಯೇ ವಾಸವಿರುವ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ ಆರೋಪಿ. ಜುಲೈ 29ರಂದು ವಿನಾಯಕ ನಗರದ ನಿವಾಸಿ ಮಂಜುನಾಥ ಜೋಗಿ ಅವರ ಕುಟುಂಬ ಸಮೇತ ಪಂಡರಾಪುರ ಮತ್ತು ಶಿರಡಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಗೆ ತೆರಳಿದ್ದರು. ಈ ವೇಳೆ ಸುಭಾಶ್ಚಂದ್ರ ಆಚಾರ್ಯ ಮನೆಯ ಬಾಗಿಲನ್ನು ಒಡೆದು ಕಪಾಟಿನಲ್ಲಿರಿಸಿದ 27 ಗ್ರಾಂ ಚಿನ್ನಾಭರಣ ಮತ್ತು 13,500 ರೂ. ನಗದು ಹಣವನ್ನು ಕಳವು ಮಾಡಿದ್ದರು. ಇದೀಗ ಆರೋಪಿಯನ್ನು ಬಂಧಿಸಿರುವ ಪೋಲೀಸರು ಆತನಿಂದ 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್, 12 ಗ್ರಾಂ ತೂಕದ ಪೆಂಡೇಂಟ್ ಇರುವ ರೋಪ್ ಚೈನ್, 4 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ 1,610 ರೂ. ನಗದು ಸ್ವಾಧೀನವಡಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಸುಭಾಶ್ಚಂದ್ರ ಆಚಾರ್ ಮನೆ ಕಟ್ಟುತ್ತಿದ್ದು ಹಣಕ್ಕಾಗಿ ತನ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಮರವಂತೆ ಮಹಾರಾಜ ಶ್ರೀ ವರಹಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಕಳವು ಮಾಡಲು ಯತ್ನಿಸಿ ಬರಿಗೈಯಲ್ಲಿ ಮರಳಿದ್ದು, ದಂಪತಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದು, ಪತಿ ಜೈಲು ಪಾಲಾದರೆ, ಪತ್ನಿ ರಿಮ್ಯಾಂಡ್ ಹೋಮ್ ಸೇರಿದ್ದಾಳೆ. ಕಂಬದಕೋಣೆ ನಿವಾಸಿ ಕರುಣಾಕರ ದೇವಾಡಿಗ ಹಾಗೂ 17 ವರ್ಷ ವಯಸ್ಸಿನ ಆತನ ಪತ್ನಿ ಆರೋಪಿತರು. ಮಂಗಳವಾರ ಮಧ್ಯಾಹ ಪೂಜಾ ಕೆಲಸ ಮುಗಿಸಿ ಅರ್ಚರು ಗರ್ಭಗುಡಿಗೆ ಬಾಗಿಲು ಹಾಕಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಕರುಣಾಕರ ದೇವಾಡಿಗ ಹಾಗೂ ಆತನ ಪತ್ನಿ ದೇವಸ್ಥಾನಕ್ಕೆ ಭಕ್ತರಂತೆ ತೆರಳಿ ಕಳವು ಯತ್ನ ನಡೆಸಿದ್ದಾರೆ. ಮೊದಲು ಹೊರಗಡೆ ಇದ್ದ ದೇವರಿಗೆ ಕೈಮುಗಿದು ದೇವಸ್ಥಾನ ಪ್ರವೇಶಿಸಿ ಕಾಣಿಕೆ ಡಬ್ಬ ಒಡೆಯುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ನಂತರ ಗರ್ಭಗುಡಿಯನ್ನೂ ಪ್ರವೇಶಿಸಿ ಬರಿಗೈಯಲ್ಲಿ ಹಿಂದಕ್ಕೆ ಮರಳಿದ್ದಾರೆ. ಈ ಕೃತ್ಯ ದೇವಸ್ಥಾನ ಸಿಸಿಟಿವಿಯಲ್ಲಿ ದಾಖಲಾಗಿದೆ. ದೇವಸ್ಥಾನ ಕಳವು ಪ್ರತ್ನ ನಡೆಸಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ವ್ಯವಸಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ.ನಾಯಕ್ ದೂರು ನೀಡಿದ್ದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.11: ತಾಲೂಕಿನ ಕೊರ್ಗಿ ಗ್ರಾಮದ ದಬ್ಬೆಕಟ್ಟೆ ಕಾಡಿನಬೇರೆ ಬಳಿ ಶಾಲೆಯಿಂದ ಬಸ್ಸಲ್ಲಿ ಬರುವ ಮಗಳನ್ನು ಮನೆಗೆ ಕರೆದೊಯ್ಯಲು ನಿಂತಿದ್ದ ಮಹಿಳೆ ತಲೆಗೆ ರಾಡಿನಲ್ಲಿ ಹೊಡೆದ ಆಭರಣ ದೋಚಿದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಹೊಸಾಡು ನಿವಾಸಿ ಪ್ರವೀಣ್ (24) ಬಂಧಿತ ಆರೋಪಿ ಹಲ್ಲೆ ನಡೆಸಿ ದೋಚಿದ ಆಭರಣ ಗುಜ್ಜಾಡಿ ಸೊಸೈಟಿಯೊಂದರಲ್ಲಿ ಗಿರವಿ ಇಟ್ಟು 41 ಸಾವಿರ ನಗದು ಪಡೆದಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗುರುವಾರ ಸಂಜೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅಗಸ್ಟ್ 25ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ. ಅಗಸ್ಟ್ 5ರಂದು ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡ ದೇವಕಿ ಪೂಜಾರಿ ಎಂಬ ಮಹಿಳೆಯನ್ನು ಮಣಿಪಾಲ ಖಾಸಗಿ ಆಸ್ಪತ್ತೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಿಂದ ಚೇತರಿಸಿಕೊಂಡ ಮಹಿಳೆ ಇದೀಗ ಆಸ್ಪತ್ತೆಯಿಂದ ಬಿಡುಗಡೆ ಆಗಿದ್ದಾರೆ. ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಂಡ್ಕೂರು ಎಸ್ಸೈ ನಿರಂಜನ ಗೌಡ ಮತ್ತು ಸಿಬ್ಬಂದಿ ಆರೋಪಿ ಬಂಧಿಸಿದ್ದಾರೆ. ಕೃತ್ಯ ನಡೆಸುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.12: ಗ್ರಾಮ ಪಂಚಾಯತ್ ಮಾಜಿ ಸದಸ್ಯ ಇಬ್ರಾಹಿಂ ಸಾಹೇಬ್ ಹೈಕಾಡಿ (71) ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಆವರ್ಸೆ ಗ್ರಾಮ ಪಂಚಾಯತ್ ಮಾಜಿ ಸದ್ಯಸರಾಗಿ, ಉಡುಪಿ ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯರಾಗಿ ಹೈಕಾಡಿ ಮಸೀದಿಯ ಮಾಜಿ ಅಧ್ಯಕ್ಷರುರಾಗಿ, ಹೈಕಾಡಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಇಬ್ರಾಹಿಂ ಸಾಹೇಬ್ ಅವರು ಸೇವೆ ಸಲ್ಲಿಸಿದ್ದರು. ಮೃತರು ಐದು ಗಂಡು, ಮೂರು ಹೆಣ್ಣು ಮಕ್ಕಳುನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಬೈಂದೂರಿನ ಪ್ರಸಿದ್ಧ ಮೊಬೈಲ್ ಮಾರಾಟ ಸಂಸ್ಥೆ ‘ಪ್ರೀತಿ ಮೊಬೈಲ್ಸ್’ನಲ್ಲಿ (Preethi Mobiles Byndoor) ಮೊಬೈಲ್ ಪೋನ್ ಖರೀದಿಯ ಮೇಲೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಆಯ್ದ ಬ್ಯಾಂಡಿನ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಇನ್ನೊಂದು ಮೊಬೈಲ್ ಫೋನ್ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಪ್ರತೀ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬ್ಲೂಟೂತ್ ನೆಕ್ ಬ್ಯಾಂಡ್, ಪವರ್ ಬ್ಯಾಂಕ್, ಸ್ಮಾರ್ಟ್ ವಾಚ್ ಉಚಿತವಾಗಿ ಪಡೆಯಿರಿ. ಜೊತೆಗೆ FIRE BOLT SMART WATCH, MI SMART SPEAKER ಗಳ ಮೇಲೆ ಭರ್ಜರಿ ರಿಯಾಯಿತಿ. ಸ್ಮಾರ್ಟ್ ಫೋನ್’ಗಳನ್ನು ಸುಲಭ ಕಂತುಗಳಲ್ಲಿಯೂ ಖರೀದಿಸಬಹುದಾಗಿದೆ. ಈ ಆಫರ್ ಆಗಸ್ಟ್ 11 ರಿಂದ ಸಪ್ಟೆಂಬರ್ 30 ವರೆಗೆ ಮಾತ್ರ ಈ ಎಲ್ಲಾ ಆಫರ್ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಪ್ರೀತಿ ಮೊಬೈಲ್ಸ್ ಬೈಂದೂರುಪಂಚಾಯತ್ ಕಟ್ಟಡ, ಪೊಲೀಸ್ ಸ್ಟೇಷನ್ ಎದುರುಗಡೆ ಬೈಂದೂರುಮೊಬೈಲ್ – 8861087889

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾವುಂದದ ಹಿಂದೂ ಅಭ್ಯುದಯ ಸಂಘದ ಆಶ್ರಯದಲ್ಲಿ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶ್ರಾವಣ ಸಂಧ್ಯಾ ಕಾರ್ಯಕ್ರಮ ನಡೆಯಿತು. ಯಳಜಿತದ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಪ್ರಾರಂಭದಲ್ಲಿ ಯಳಜಿತದ ಶ್ರೀ ರಾಮಕೃಷ್ಣ ಕುಟೀರದ ಮಕ್ಕಳು ಚಂಡಿಕಾ ಪಾರಾಯಣದಲ್ಲಿ ಬರುವ ದೇವಿ ಸ್ತುತಿಗಳನ್ನು, ಸ್ಫುಟವಾಗಿ ಪಠಿಸಿದರು. ನಂತರ ಕಮಲಶಿಲೆಯ ಪೂರ್ಣಿಮಾ ಎನ್. ಭಟ್ ಅವರು ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ಅವುಗಳ ಮಹತ್ವ ದ ಬಗ್ಗೆ ಸಂಪ್ರದಾಯಿಕ ಹಾಡುಗಳನ್ನು ಹೇಳುತ್ತಾ ಸವಿವರವಾಗಿ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಯಳಜಿತದ ಶ್ರೀ ರಾಮಕೃಷ್ಣ ಕುಟೀರದ ವಿದ್ಯಾರ್ಥಿಗಳಿಂದ ಸುಮಧುರವಾದ ಭಕ್ತಿ ರಸಮಂಜರಿ ಕಾರ್ಯಕ್ರಮ, ಆಗಮಿಸಿದ ಎಲ್ಲರನ್ನು ಮಂತ್ರ ಮುಗ್ಧಗೊಳಿಸಿತು, ರೋಮಾಂಚನಗೊಳಿಸಿತು. ಕುಟುಂಬ ಸಮೇತ ಭಾಗವಹಿಸಿದ್ದ ಸಾರ್ವಜನಿಕರಲ್ಲಿ ಮೂರು ಕುಟುಂಬಗಳನ್ನು, ಅದೃಷ್ಟ ಚೀಟಿ ಎತ್ತುವುದರ ಮೂಲಕ ಆಯ್ಕೆಮಾಡಿ, ಅಭಿನಂದಿಸಲಾಯಿತು. ವಾಸುದೇವ ಗಾಣಿಗ, ಸುಬ್ಬಯ್ಯ ದೇವಾಡಿಗ ಮತ್ತು ಪ್ರಶಾಂತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿಜೆಪಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕುಂದಾಪುರ ಪೊಲೀಸ್ ಉಪ ನಿರೀಕ್ಷಕ ಸದಾಶಿವ ಗವರೋಜಿ ಹಾಗೂ ಠಾಣಾ ಸಿಬ್ಬಂದಿ ವರ್ಗದವರಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಿದರು. ಈ ಸಂದರ್ಭ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೌರಭಿ ಪೈ, ಜಯಲಕ್ಷ್ಮೀ ಗಾಣಿಗ, ಉಪಾಧ್ಯಕ್ಷೆ ಶ್ವೇತಾ, ನೇತ್ರಾವತಿ ಮಡಿವಾಳ, ಕಾರ್ಯದರ್ಶಿ ರೋಹಿಣಿ ಪೈ, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್, ಆಶಾಲತಾ ನಾಯಕ್, ಪುರಸಭೆ ಅಧ್ಯಕ್ಷರಾದ ವೀಣಾ ಭಾಸ್ಕರ್, ಸದಸ್ಯರಾದ ಶ್ವೇತಾ ಸಂತೋಷ್, ವನಿತಾ ಬಿಲ್ಲವ, ಪುಷ್ಪಾ ಶೇಟ್, ದಿವಾಕರ್ ಕಡ್ಗಿ, ಹಾಲಾಡಿ ಮಹಾಶಕ್ತಿ ಕೇಂದ್ರ ಮ.ಮೋ ಅಧ್ಯಕ್ಷೆ ದೀಪಿಕಾ ಶೆಟ್ಟಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಆ.10: ರೈತ ಸಂಪರ್ಕ ಕೇಂದ್ರದ ಮೂಲಕ ಕೃಷಿ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಸರಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ. ರೈತರು ಹಾಗೂ ಫಲಾನುಭವಿಗಳು ಸಕಾಲದಲ್ಲಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಬೈಂದೂರು ಕೃಷಿ ಅಧಿಕಾರಿ ಗಾಯತ್ರಿ ಹೇಳಿದರು. ಅವರು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಇದರ ವತಿಯಿಂದ ಕೃಷಿ ಇಲಾಖೆ ಸಹಯೋಗದೊಂದಿಗೆ ಸಂಘದ ಹೇರೂರು ಶಾಖೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ರೈತ ಸಂಪರ್ಕ ಕೇಂದ್ರದಲ್ಲಿ ಸಸ್ಯ ಸಂರಕ್ಷಣಾ ಯೋಜನೆಯಲ್ಲಿ ಕೀಟನಾಶಕಗಳು, ಮಣ್ಣಿನ ಸಂರಕ್ಷಣೆಗೆ ಬೇಕಾದ ಸುಣ್ಣ, ವಿವಿಧ ತಳಿತ ಭತ್ತದ ಬೀಜಗಳು, ರಸಗೊಬ್ಬರ ಪೂರೈಕೆಯನ್ನು ಕಾಲಕಾಲಕ್ಕೆ ಮಾಡಲಾಗುತ್ತದೆ. ಸೂಕ್ಷ್ಮ ನೀರಾವರಿ ಯೋಜನೆಯಡಿ ಕನಿಷ್ಠ ಒಂದು ಎಕರೆ ಆರ್‌ಟಿಸಿ ಹೊಂದಿರುವವರು ಇದರ ಪ್ರಯೋಜನ ಪಡೆಯಬಹುದು. ರೈತನ ಆಕಸ್ಮಿಕ ಸಾವಿಗೆ 2 ಲಕ್ಷದ ತನಕ ಪರಿಹಾರ ನೀಡುವ ಅವಕಾಶವಿದೆ. ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ಸಿಎಸ್‌ಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನದ ಹಬ್ಬವನ್ನು ಆಚರಿಸಲಾಯಿತು. ಬೈಂದೂರು ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಹಾಗೂ ಪದಾಧಿಕಾರಿಗಳಿಗೆ, ಬೈಂದೂರು ಆರಕ್ಷಕ ಠಾಣೆಯ ಸಿಬ್ಬಂದಿಗಳಿಗೆ,ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ರಾಖಿ ಕಟ್ಟುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಸುರೇಶ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಾಂತಿ ಖಾರ್ವಿ ಹಾಗೂ ದೀಪ ಶೆಟ್ಟಿ, ಮಹಿಳಾ ಮೋರ್ಚಾ ಉಪಾಧ್ಯಕ್ಷರ ಸರಸ್ವತಿ ನಾಯರ್ ಹಾಗೂ ಕಚೇರಿ ನಿರ್ವಾಹಕಿ ನಾಗಶ್ರೀ ಉಪಸ್ಥಿತರಿದ್ದರು.

Read More