ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೈಂಟ್ ಥೋಮಸ್ ಶಾಲೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಸಮಾರಂಭ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪುತ್ತೂರು ಧರ್ಮ ಪ್ರಾಂತ್ಯದ ಧರ್ಮ ಗುರುಗಳಾದ ವಂದನಿಯ ಬಿಷಪ್ ಗಿವರ್ಗಿಸ್ ಮಾರ್ ಮಕೋರಿಯಸ್ ಅವರು ಮಾತನಾಡಿ ನಮ್ಮ ಸಂಸ್ಥೆಗಳು ಕೇವಲ ವಿದ್ಯಾ ಸಂಸ್ಥೆಗಳಲ್ಲ ಬದಲಾಗಿ ವಿದ್ಯಾ ದೇಗುಲಗಳಾಗಿ ಬದಲಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಅರಿತು ಜೊತೆ – ಜೊತೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕ್ರತಿಗಳ ಬಗ್ಗೆ ಅರಿತಿರಬೇಕು. ಸಂಕಷ್ಟದ ಸಮಯದಲ್ಲಿ ಸಂಸ್ಥೆ ಮಕ್ಕಳಿಗೆ ವಿವಿಧ ಸ್ಥರದಲ್ಲಿ ಉತ್ತಮ ಶಿಕ್ಷಣವನ್ನು ನೀಡಿದೆ ಮುಂದೆ ಬರುವ ದಿನಗಳಲ್ಲಿ ನಮ್ಮ ಎಲ್ಲಾ ಸಂಸ್ಥೆಗಳು ಇನ್ನಷ್ಟೂ ಎತ್ತರಕ್ಕೆ ಸಾಗಲಿದೆ ಎಂದು ಹಾರೈಸಿದರು. ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ ಬದಲಾಗುತ್ತಿರುವ ಕಾಲದಲ್ಲಿ ಮಕ್ಕಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ. ಒಂದು ನಿರ್ದಿಷ್ಟ ಗುರಿಯೆಡೆಗೆ ಸಾಗುವಾಗ ತಮ್ಮ ಪ್ರಯತ್ನ ಕೂಡ ಉತ್ಕೃಷ್ಟವಾಗಿರಬೇಕು ಹಾಗೆ ಪಾಲಕರು ಕೂಡ ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಿವೃತ್ತ ಸೈನಿಕ, ಲೇಖಕ ಬೈಂದೂರು ಚಂದ್ರಶೇಖರ ನಾವಡ ಅವರ ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್’ ಕೃತಿ ಲೋಕಾರ್ಪಣೆ ಸಮಾರಂಭ ಭಾನುವಾರ ಉಪ್ಪುಂದ ರೈತಸಿರಿ ಸಭಾಭವನದಲ್ಲಿ ನಡೆಯಿತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ, ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ, ಉಪ್ಪುಂದ ಇದರ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ, ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್’ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಕೃತಿ ಪರಿಚಯಿಸಿದರು. ಸಾಹಿತಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ ರೋಟರಿ ಕ್ಲಬ್ ಬೈಂದೂರು ಇದರ ಅಧ್ಯಕ್ಷ ಡಾ ಪ್ರವೀಣ್ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸ್ನೇಹಿತರೊಂದಿಗೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಘಟನೆ ತಾಲೂಕಿನ ಸೋಮೇಶ್ವರ ಬೀಚ್ ಬಳಿ ನಡೆದಿದೆ. ಬವಳಾಡಿಯ ಮಂಜುನಾಥ ದೇವಾಡಿಗ ಎಂಬುವವರ ಪುತ್ರ ಶಶಿಧರ್ (22) ಮೃತ ದುರ್ದೈವಿ. ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಜೂರು ಗ್ರಾಮದ ಬವಳಾಡಿಯ ಶಶಿಧರ್ ಎಂಬ ಯುವಕ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೋಮೇಶ್ವರ ದೊಂಬೆ ನಡುವಿನ ಪ್ರದೇಶದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಅಲೆಗಳ ರಭಸಕ್ಕೆ ನಿಯಂತ್ರಣ ಕಳೆದುಕೊಂಡು ತೆರೆಯೊಂದಿಗೆ ತೇಲಿಹೊಗಿದ್ದಾರೆ. ಕೂಡಲೇ ಸ್ನೇಹಿತನೋರ್ವ ಆತನ ರಕ್ಷಣೆಗೆ ಧಾವಿಸಿ ಹಿಡಿದುಕೊಂಡರೂ, ದಡಕ್ಕೆ ತರಲು ಸಾಧ್ಯವಾಗದೇ ಸಹಾಯಕ್ಕಾಗಿ ಯಾಚಿಸಿದ್ದಾನೆ. ಸ್ಥಳೀಯರು ರೋಪ್ ಮೂಲಕ ಇಬ್ಬರನ್ನು ದಡಕ್ಕೆ ತಂದಿದ್ದಾರೆ. ಅಷ್ಟರಲ್ಲಾಗಲೇ ಶಶಿಧರ್ ಮೃತಪಟ್ಟಿದ್ದ ಎನ್ನಲಾಗಿದೆ. ಸೌಮ್ಯ ಸ್ವಭಾವದವನಾಗಿದ್ದ ಶಶಿಧರ್ ಒಂದು ವರ್ಷದ ಹಿಂದೆ ಪದವಿ ಮುಗಿಸಿದ್ದು ಸ್ವಲ್ಪ ಸಮಯ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿ ಸದ್ಯ ಊರಿನಲ್ಲಿಯೇ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಶಶಿಧರ್ ತಂದೆ, ತಾಯಿ ಹಾಗೂ ಸಹೋದರಿಯನ್ನು…
ಸುರದ್ರೂಪಿ ಯುವಕ ಈಗ ನಾಯಕ ನಟ | ಸಿನೆಮಾ ಕ್ಷೇತ್ರದ ಬಗ್ಗೆ ನೂರಾರು ಕನಸು ಹೊತ್ತ ಯುವ ವಕೀಲ, ಕುಂದಾಪುರದ ಹುಡುಗ ರಥೀಕ್ ಮುರ್ಡೇಶ್ವರ್ ಸಿನೆಮಾ – ಬದುಕಿನ ಪಯಣದ ಅನುಭವಗಳನ್ನು ಕುಂದಾಪ್ರ ಡಾಟ್ ಕಾಂ ಜೊತೆಗೆ ಹಂಚಿಕೊಂಡಿದ್ದಾರೆ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸಮಸ್ಯೆಗಳ ಬಗೆಗೆ ಸುದ್ದಿ ಪ್ರಕಟಿಸಿ ಸುದ್ದಿಯಾಗುವ ಬದಲು ಸಮಸ್ಯೆಯನ್ನು ಬಗೆಹರಿಸಿ ಸುದ್ದಿಯಾಗುವುದು ಶ್ರೇ? ಎಂದು ಹಿರಿಯ ಉಪಸಂಪಾದಕ ಮೋಹನ ದಾಸ್ ಮರಕಡ ಅಭಿಪ್ರಾಯಪಟ್ಟರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ಫೋರಂ ವತಿಯಿಂದ ನಡೆದ ವಿಶೇ? ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ’ಪತ್ರಕರ್ತರು ಹಾಗೂ ಸಾಮಾಜಿಕ ಹೊಣೆಗಾರಿಕೆ’ ವಿಷಯದ ಕುರಿತು ಮಾತನಾಡಿದರು. ಹೊಣೆಗಾರಿಕೆಯುಳ್ಳ ಪತ್ರಕರ್ತ ಸುದ್ದಿ ಪ್ರಕಟಣೆಯ ಬಳಿಕ ಸುದ್ದಿಯನ್ನು ಬೆಂಬಿಡದೆ ಪುನರ್ಪರಿಶೀಲಿಸಿ ಸಮಸ್ಯೆ ಬಗೆಹರಿದಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು ಹಾಗೂ ಅಂತವರಿಂದ ಮಾತ್ರ ಸಮಾಜಕ್ಕೆ ಅದ್ಬುತವಾದದ್ದನ್ನು ಕೊಡುಗೆ ನಿರೀಕ್ಷಿಸಬಹುದು ಎಂದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಬೇಕು ಹಾಗೂ ತನ್ನ ವೈಯಕ್ತಿಕ ನೆಲೆಯಲ್ಲಿ ಎಲ್ಲಾ ರೀತಿಯ ಮಾರ್ಗದರ್ಶನ, ಸಹಕಾರ ನೀಡುವುದಾಗಿ ತಿಳಿಸಿದರು. ಪತ್ರಿಕೋದ್ಯಮದಲ್ಲಿ ವಿಷಯವನ್ನು ಕೆಣಕುವುದು ಅನಿವಾರ್ಯ, ಆದರೆ ಭಾವನೆಯನ್ನು ಕೆಣಕುವುದು ಸಮಂಜಸವಲ್ಲ. ಸೂಕ್ಷ ಸಂಧರ್ಭಗಳಲ್ಲಿ ಅದು ಸಾವಿನ ಮನೆಯಾಗಿರಬಹುದು ಅಥವಾ ಅಪಘಾತದ ಕ್ಷಣವಾಗಿರಬಹುದು ಅಲ್ಲಿ ಮಾನವೀಯತೆಯೇ ಮುಖ್ಯವಾಗಿರುತ್ತದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಎಲ್ಲಾ ಧರ್ಮಗಳನ್ನು ಪ್ರೀತಿಸುವ ಹಿಂದು ಧರ್ಮ ಶ್ರೇಷ್ಠ ಧರ್ಮ. ನಮ್ಮ ದೇಶದ ಭವ್ಯ ಪರಂಪರೆ, ಸನಾತನ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಸನ್ನಿವೇಶ ಬಂದಿರುವುದು ಅತ್ಯಂತ ದುರದೃಷ್ಟಕರ. ಜಿಹಾದಿ ಶಕ್ತಿಗಳು ಪ್ರಪಂಚವನ್ನೇ ನಾಶ ಮಾಡುತ್ತಿದ್ದು, ನನ್ನ ದೇಶದಲ್ಲಿ ಕೂಡ ಇವರ ಅಟ್ಟಹಾಸ ಪ್ರಾರಂಭವಾಗಿದ್ದು, ಭಾರತವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರ ರೂಪಿಸಿದ್ದಾರೆ. ಇದರ ಒಂದು ಭಾಗವಾಗಿ ಹಿಂದು ಕಾರ್ಯಕರ್ತರ ಕೊಲೆಗಳು ನಡೆಯುತ್ತಿದೆ. ಸರಕಾರ ಇಂತಹ ಸಂಘಟನೆ ಹಾಗೂ ದೇಶ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಉದ್ಯಮಿ ರತ್ನಾಕರ ಶೆಟ್ಟಿ ಬಡಾಮನೆ ಆಗ್ರಹಿಸಿದರು. ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಹಿಂದು ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಗಂಗೊಳ್ಳಿ ಪೋಸ್ಟ್ ಆಫೀಸಿನ ಬಳಿ ಸೋಮವಾರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿಂಜಾವೇ ಮುಖಂಡ ಯಶವಂತ ಗಂಗೊಳ್ಳಿ, ದೇಶವನ್ನು ಇಸ್ಲಾಂ ದೇಶವನ್ನಾಗಿ ಮಾಡುವ ಪ್ರಯತ್ನಗಳು ಆರಂಭವಾಗಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಾವಲಂಭನೆಯ ಬದುಕು ರೂಪಿಸುವ ಜೊತೆಗೆ ಜನರಲ್ಲಿ ಉಳಿತಾಯದ ಮನೋಭಾವನೆ ಹೆಚ್ಚಿಸುವ ಉದ್ದೇಶದೊಂದಿಗೆ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ನ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ನ ನಾವುಂದ ಶಾಖೆ ನಾಲ್ಕು ವರ್ಷ ಪೂರೈಸಿದ ಅಂಗವಾಗಿ ನಾವುಂದ ಸ್ಕಂದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಹಕರ ವಿಶ್ವಾಸದೊಂದಿಗೆ ನಮ್ಮ ಸಂಸ್ಥೆ ಉತ್ತಮ ಆರ್ಥಿಕ ವ್ಯವಹಾರ ಹೊಂದಿರುವುದಲ್ಲದೇ ಪರಿಸರದ ವಿವಿಧ ಅಗತ್ಯತೆಗಳಿಗೆ ನೆರವಾಗುವ ಮೂಲಕ ಸಾಮಾಜಿಕ ಬದ್ಧತೆಯನ್ನು ಪಾಲಿಸಿಕೊಂಡು ಬಂದಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ಉಪಸ್ಥಿತರಿದ್ದರು. ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಉಪಾಧ್ಯಕ್ಷ ಎಂ. ವಿನಾಯಕ ರಾವ್ ಸ್ವಾಗತಿಸಿ, ಶಾಖಾ ಪ್ರಬಂಧಕ ಶ್ರೀನಿವಾಸ್ ಎಂ. ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಗೋಳಿಹೊಳೆ ಶಾಖಾ ಪ್ರಬಂಧಕ ರಾಘವೇಂದ್ರ ಸಹಕರಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶೇಷ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಹಾಗೂ ಪಾಲಕರ ಸಭೆ ಮಂಗಳವಾರ ನಡೆಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಶರತ್ಚಂದ್ರ ಶೆಟ್ಟಿ ಅವರು ವಿಶೇಷ ಮಕ್ಕಳ ಹಕ್ಕುಗಳು, ಪೋಷಕರ ಮತ್ತು ಸಂಸ್ಥೆಯ ಜವಾಬ್ದಾರಿಗಳ ಬಗ್ಗೆ ಹಾಗೂ ವಿಶೇಷ ಮಕ್ಕಳಿಗೆ ಕಾನೂನಿನಲ್ಲಿ ಇರುವ ಅವಕಾಶಗಳ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ವಕೀಲರಾದ ಟಿ. ಬಿ ಶೆಟ್ಟಿ ಮಾತನಾಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ವಕೀಲರ ಸಂಘದ ಅಧ್ಯಕ್ಷರಾದ ಸಳ್ವಾಡಿ ನಿರಂಜನ ಹೆಗ್ಡೆ, ವಕೀಲರಾದ ರಾಜು ಪೂಜಾರಿ, ಪಂಚಾಯತ್ ಸದಸ್ಯ ಜುಡಿತ್ ಮೆಂಡೋನ್ಸಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪ್ರೇಮ ಸ್ವಾಗತಿಸಿದರು .ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಶ್ರೃತಿ ವಂದಿಸಿದರು. ಸಹ ಶಿಕ್ಷಕಿ ದೀಪಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ನಮ್ಮ ನಾಡ ಒಕ್ಕೂಟ ಕುಂದಾಪುರ ಘಟಕ ಮತ್ತು ಜಮಾತುಲ್ ಮುಸ್ಲಿಮೀನ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ಮತ್ತು ಈ-ಶ್ರಮ್ ಕಾರ್ಡ್ ಶಿಬಿರವು ಅಂಜುಮನ್ ನೂರುಲ್ ಇಸ್ಲಾಮ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿಯಲ್ಲಿ ಜರುಗಿತು. ಮೌಲಾನಾ ಮೊಹಮ್ಮದ್ ಮುಝಮ್ಮಿಲ್ (ಖತೀಬರು, ಜಮಾತುಲ್ ಮುಸ್ಲಿಮೀನ್ ಗಂಗೊಳ್ಳಿ) ರವರ ಕಿರಾತ್ ಮೂಲಕ ಸಮಾರಂಭವನ್ನು ಪ್ರಾರಂಭಿಸಲಾಯಿತು. ಕುಂದಾಪುರ ಸರಕಾರಿ ತಾಲೂಕು ಆಸ್ಪತ್ರೆ, ಕುಂದಾಪುರ ಆರೋಗ್ಯ ಮಿತ್ರ ಸುಜನ್ಮಾಲ ಆಯುಷ್ಮಾನ್ ಕಾರ್ಡ್ ಉಪಯುಕ್ತತೆ ಮತ್ತು ಪ್ರಯೋಜನದ ಬಗ್ಗೆ ಸವಿವರವಾಗಿ ವಿವರಿಸಿದರು. ತಾಲೂಕು ಅಧ್ಯಕ್ಷ ದಸ್ತಗೀರ್ ಕಂಡ್ಲೂರ್ ರವರ ಅಧ್ಯಕ್ಷತೆ ವಹಿಸಿದ್ದರು. ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ, ಕುಂದಾಪುರ ಘಟಕದ ಸಂಘಟನಾ ಕಾರ್ಯದರ್ಶಿ ಮುಜಾಹಿದ್ ನಾಖುದಾ, ಜಮಾತುಲ್ ಮುಸ್ಲಿಮೀನ್ ಗಂಗೊಳ್ಳಿ ಇದರ ಅಧ್ಯಕ್ಷರಾದ ಪಿ.ಎಮ್. ಹಸನೈರ್, ಬಿ.ಎಸ್.ಎಫ್ ಫಿಶರೀಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಫೆ.02: ತಾಲೂಕಿನ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಎಂಬ್ಯಾಕ್’ಮೆಂಟ್ ಬಳಿ ಸಂಜೆ ನಡೆದ ಇನ್ನೋವಾ ಕಾರು ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಬೆಂಗಳೂರಿನ ಆರ್. ವಿಜಯ್ ಎಂಬುವವರ ಏಕೈಕ ಪುತ್ರ ಅಕ್ಷಯ್ (23) ಮೃತ ದುರ್ದೈವಿ. ಅಪಘಾತದಲ್ಲಿ ತೇಜಸ್ (24), ಹರ್ಷ (24), ಪವನ್ (23) ಗಾಯಗೊಂಡಿದ್ದಾರೆ. ಹೊನ್ನಾವರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರಿಗೆ ಕಿರಿಮಂಜೇಶ್ವರ ಎಂಬ್ಯಾಕ್’ಮೆಂಟ್ ಬಳಿ ಬೈಕ್ ಸವಾರ ಏಕಾಏಕಿ ಅಡ್ಡ ಬಂದಿದ್ದರಿಂದ ಇನ್ನೋವಾ ಚಾಲಕ ನಿಯಂತ್ರಣ ಕಳೆದುಕೊಂಡು ಡಿವೈಡರ್ ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ಡಿವೈಡರ್ ಹತ್ತಿ ಮತ್ತು ರಸ್ತೆಯಲ್ಲಿ ತಿರುಗಿ ನಿಂತಿತ್ತು. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅಕ್ಷಯ್ ತಲೆ ಹೊರಗೆ ಬಂದು ಕಂಬಕ್ಕೆ ಡಿಕ್ಕಿಯಾದ ಮುಖದ ಭಾಗಿ ಸಂಪೂರ್ಣ ಹಾನಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ನಾಲ್ವರು ಬಾಲ್ಯ ಸ್ನೇಹಿತರಾಗಿದ್ದು, ಸಹಪಾಠಿಗಳೂ ಆಗಿದ್ದರು. ತೇಜಸ್ ಎಂಬಾತನ ಇನ್ನೋವಾ ಕಾರಿನಲ್ಲಿ ಫೆ.26ರಂದು ಬೆಂಗಳೂರಿನಿಂದ ಹೊನ್ನಾವರಕ್ಕೆ…
