ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯು ಬೈಂದೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಮತ್ತು ವಿಧಾನ ಪರಿಷತ್ ಸಭಾ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಬೈಂದೂರು ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯ ಚಟುವಟಿಕೆಯ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು. ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸಂತೋಷ ಪೂಜಾರಿ ಮುಕ್ಕೋಡು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಅಶೋಕ ಮೂರ್ತಿ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ಸಂಘಟನಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭ ಜಿಲ್ಲಾ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಅರುಣ್ ಬಾಣ, ಜಿಲ್ಲಾ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಮನೋಜ್ ಕರ್ಕೇರ, ಜಿಲ್ಲಾ ಉಪಾಧ್ಯಕ್ಷರಾದ ಆನಂದ ಖಾರ್ವಿ, ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯದರ್ಶಿನಿ ದೇವಾಡಿಗ, ಪ್ರಕಾಶ್ ಪೂಜಾರಿ ಜೆಡ್ಡು,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಸಾಧಾರಣ ಸಾಧನೆಗೈದು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾದ ಬಾಲ ಪ್ರತಿಭೆ ಕುಂದಾಪುರದ ಕೋಡಿಯ ಆರ್ಯನ್ ಎನ್. ಶೇರುಗಾರ್ ಅವರನ್ನು ಬೈಂದೂರಿನ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಬೆಂಗಳೂರಿನ ಶಾಸಕರ ಭವನದಲ್ಲಿ ಸನ್ಮಾನಿಸಿದರು. ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಸಾಧನೆಗೈದ ಬಾಲಕ ಮುಂದೆಯೂ ದೇಶಕ್ಕೆ ಕೀರ್ತಿ ತರುವಂತಹ ಸಾಧನೆ ಮಾಡಲಿ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹಾರೈಸಿದರು. ಈ ಸಂದರ್ಭ ಬಾಲಕನ ಪೋಷಕರಾದ ಅಂಜಲಿ ಹಾಗೂ ನಾಗೆಂದ್ರ ಕೋಟೆ ಉಪಸ್ಥಿತರಿದ್ದರು. ಇದನ್ನೂ ಓದಿ:► ಕುಂದಾಪುರ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮೂರು ವರ್ಷದ ಪೋರ ಆರ್ಯನ್ – https://kundapraa.com/?p=52163 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಧ್ಯ ಇಂಗ್ಲೆಂಡ್ನ ಪ್ರೆಸ್ಟನ್ ನಗರದಲ್ಲಿ ಈಚೆಗೆ ನಡೆದ 19ನೆಯ ದಕ್ಷಿಣ ಏಷಿಯಾ ಸಾಂಸ್ಕೃತಿಕ ಉತ್ಸವ ‘ಪ್ರೆಸ್ಟನ್ ಸಿಟಿ ಮೇಳ’ದಲ್ಲಿ ಇದೇ ಮೊದಲ ಬಾರಿಗೆ ಸೇರ್ಪಡೆಯಾದ ಯಕ್ಷಗಾನದ ಕಿರು ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು ಎಂದು ಹಗಲಿಡೀ ನಡೆದ ಮೇಳದ ಪ್ರೇಕ್ಷಕರಾಗಿದ್ದ ಅನಿವಾಸಿ ಕನ್ನಡಿಗ ಡಾ. ಲಕ್ಷ್ಮೀನಾರಾಯಣ ಗುಡೂರು ತಿಳಿಸಿದ್ದಾರೆ. ‘ಮೇಳ’ ಎಂಬ ಭಾರತೀಯ ಪರಿಕಲ್ಪನೆಯ ಈ ಬಹುಸಂಸ್ಕೃತಿಯ ಕಲಾ ಪ್ರದರ್ಶನದಲ್ಲಿ ಇಂಗ್ಲೆಂಡ್ನಲ್ಲಿ ನೆಲೆಸಿರುವ ದಕ್ಷಿಣ ಏಷಿಯಾ ಮೂಲದ ಹೆಸರಾಂತ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ, ವಾದ್ಯಗೋಷ್ಠಿ, ಸಿನಿಡಾನ್ಸ್, ಬಾಂಗ್ಡಾ ನೃತ್ಯ ಇತ್ಯಾದಿ ಪ್ರದರ್ಶನಗೊಳ್ಳುತ್ತವೆ. ಆರ್ಟ್ಸ್ ಕೌನ್ಸಿಲ್ ಆಫ್ ಇಂಗ್ಲೆಂಡ್ ಮತ್ತು ಪ್ರೆಸ್ಟನ್ ಸಿಟಿ ಕೌನ್ಸಿಲ್ ಪ್ರಾಯೋಜಕತ್ವದಲ್ಲಿ ಪ್ರತಿವರ್ಷ ಪ್ರೆಸ್ಟನ್ ನಗರದಲ್ಲಿ ನಡೆಯುವ ವೈವಿಧ್ಯಮಯ ಕಲೆಗಳ ಪ್ರದರ್ಶನ ನೋಡಲು ಏಷಿಯಾ ಮೂಲದವರಲ್ಲದೆ ಸ್ಥಳೀಯ ವಾಸಿಗಳಾದ ಆಂಗ್ಲರೂ ಬರುತ್ತಾರೆ. ಇಂಗ್ಲೆಂಡ್ನಲ್ಲಿ ದೀರ್ಘಕಾಲದಿಂದ ‘ಅನ್ನಪೂರ್ಣ ಇಂಡಿಯನ್ ಡಾನ್ಸ್’ ಸಂಸ್ಥೆಯನ್ನು ನಡೆಸುತ್ತಿರುವ ಕುಂದಾಪುರ ಮೂಲದ ಹಿರಿಯ ಕಲಾವಿದೆ ಶಾಂತಾ ರಾವ್…
ತುಂಬಾ ಚಿಕ್ಕ ಪ್ರಾಯದವರಿಗೆ ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಆಗುತ್ತಿರುವುದನ್ನು ಕೇಳುತ್ತಿದ್ದೇವೆ. ಹೀಗೆ ಹೃದಯಾಘಾತಕ್ಕೆ ಒಳಗಾಗುವವರು ಆರೋಗ್ಯಕರ ಆಹಾರ ಶೈಲಿ ಪಾಲಿಸುತ್ತಿರುತ್ತಾರೆ, ಕೆಲವರು ಜಿಮ್ಗೆ ಹೋಗಿ ಕಟ್ಟುಮಸ್ತಾದ ದೇಹವನ್ನು ಹೊಂದಿರುತ್ತಾರೆ. ಆದರೂ ಹೃದಯಾಘಾತದವಾಗುತ್ತಿದೆ. ಹೀಗೆ ಚಿಕ್ಕ ಪ್ರಾಯದವರಲ್ಲಿ ಈ ರೀತಿ ಹೃದಯಾಘಾತ ಉಂಟಾಗಲು ಕಾರಣವೇನು? ಎಂಬ ಪ್ರಶ್ನೆಗೆ ಇಂಡಿಯಾ ಟುಡೇಯೊಂದಿಗಿನ ಸಂದರ್ಶನದಲ್ಲಿ ಡಾ. ಅಂಬುಜ್ ರಾಯ್ ಕೆಲವೊಂದು ಅಂಶಗಳನ್ನು ವಿವರಿಸಿದ್ದಾರೆ. ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಎಲ್ಲಾ ಮಾಡಿದರೂ ಹೃದಯಾಘಾತ ಏಕೆ ಬರುತ್ತಿದೆ? ನಾವು ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಹಾಗೂ ದಿನಾ ಸ್ವಲ್ಪ ವ್ಯಾಯಾಮ ಮಾಡಬೇಕು. ಆದರೆ ಅದರ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಬೇಕು. ಅನೇಕ ಜನರಿಗೆ ಅತ್ಯಧಿಕ ಮಾನಸಿಕ ಒತ್ತಡದಿಂದಾಗಿ ಹೃದಯಾಘಾತ ಉಂಟಾಗುತ್ತಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಹೆಚ್ಚಿನವರು ತುಂಬಾ ಹೊತ್ತು ಕೆಲಸ ಮಾಡುತ್ತಾರೆ, ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುವುದೇ ಇಲ್ಲ ಈ ಕಾರಣದಿಂದಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ. ವಂಶವಾಹಿಯಾಗಿಯೂ ಕಂಡು ಬರುತ್ತಿದೆ ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿಬೆಂಗಳೂರು: ವಿಧಾನ ಪರಿಷತ್ ಸಭಾ ನಾಯಕರಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ ಸಭಾಪತಿಗೆ ಬಸವರಾಜ ಹೊರಟ್ಟಿ ಅವರಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನದಿ ನೀರಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಯೂ ನೀರುಪಾಲಾದ ಘಟನೆ ನಾಡ ಗ್ರಾಮದ ಚುಂಗಿಗುಡ್ಡೆಯಲ್ಲಿ ನಡೆದಿದೆ. ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಅವರ ಪತ್ನಿ ರೊಸಾರಿಯಾ (35) ಹಾಗೂ ಮಗ ಶಾನ್ (11) ಸಾವಿಗೀಡಾದ ದುರ್ದೈವಿಗಳು. ಚುಂಗಿಗುಡ್ಡೆಯ ನದಿ ಪಕ್ಕದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬಾಲಕ ನೀರಿಗೆ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ತಾಯಿ ರೊಸಾರಿಯಾ ತಕ್ಷಣವೇ ನದಿಗೆ ಧುಮುಕಿದ್ದಾರೆ. ಆದರೆ ನೀರಿನ ಸೆಳವಿಗೆ ಸಿಕ್ಕ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ. ಪ್ರಕರಣ ನಡೆದ ಸ್ಥಳದಲ್ಲೇ ಪುತ್ರ ಶಾನ್ ಮೃತದೇಹ ಸಿಕ್ಕಿದ್ದರೂ, ತಾಯಿಯ ಶವಕ್ಕಾಗಿ ದೋಣಿ ಬಳಸಿ ಜಾಲಾಡಿದ್ದು, ಮರವಂತೆ ಬಳಿ ಮೃತದೇಹ ಪತ್ತೆಯಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಸರ್ವಪಲ್ಲಿ ರಾಧಾಕೃ?ನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ., ಸರ್ವಪಲ್ಲಿ ರಾಧಾಕೃಷ್ಣನ್ ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದ್ದು, ಮುಂದಿನ ತಲೆಮಾರಿನ ಯುವ ಜನಾಂಗಕ್ಕೆ ಉತ್ತಮ ಮಾರ್ಗ, ಭವ್ಯ ಭವಿ? ರೂಪಿಸುವ ಜವಾಬ್ದಾರಿಯ ಶಿಕ್ಷಕರದ್ದಾಗಿದೆ ಎಂದರು. ಶಿಕ್ಷಕರಾದ ಅಶೋಕ ದೇವಾಡಿಗ, ಫಿಲೋಮಿನಾ ಫೆರ್ನಾಂಡಿಸ್, ಚಂದ್ರಕಲಾ ಮತ್ತು ಅಕ್ಷತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಲಯ ಸೇನಾನಿ ಕೆ. ರಾಮನಾಥ ನಾಯಕ್ ಶುಭ ಹಾರೈಸಿದರು. ರೋಟರಿ ಸದಸ್ಯರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಕೃ? ಪೂಜಾರಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮಧ್ಯಪ್ರದೇಶದ ಮೊರೆನಾದ ಶಿವ್ಸ್ ಮ್ಯೂಸಿಕಲ್ ಅಕಾಡೆಮಿ ವತಿಯಿಂದ ನಡೆದ ಆನ್ಲೈನ್ ಕೊಳಲುವಾದನ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಅವರು, ಗಂಗೊಳ್ಳಿಯ ಖ್ಯಾತ ಛಾಯಾಗ್ರಾಹಕ ಗಣೇಶ್ ಪಿ. ಪೂಜಾರಿ ಮತ್ತು ಮಾಲತಿ ದಂಪತಿಯ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಾವುಂದದ ಗರಡಿಬೆಟ್ಟಿನ ನಿವಾಸಿ ಮುತ್ತು ಪೂಜಾರಿ ಅವರ ಪುತ್ರಿ ಯಶೋಧ ಪೂಜಾರಿ ಅವರು ಕಿಡ್ನಿ ಹಾಗೂ ಹೃದಯ ವೈಪಲ್ಯದಿಂದ ಬಳುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಹಣ ಹೊಂದಿಸಲು ದಾನಿಗಳ ನೆರವಿನ ಅಗತ್ಯವಿದೆ. ಸದ್ಯ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ವಾರಕ್ಕೆ ಎರಡು ಬಾರಿ ಡಯಾಲಿಸಿಸ್ನ ಅಗತ್ಯವಿದೆ. ಹೆಚ್ಚಿನ ಚಿಕಿತ್ಸೆಗೆ ಸುಮಾರು ಎರಡು ಲಕ್ಷ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ಮಗುವಿನ ತಾಯಿಯಾಗಿರುವ ಯಶೋಧ ಅವರು ಕಡು ಬಡತನದ ಜೀವನ ಸಾಗಿಸುತ್ತಿದ್ದಾರೆ. ಚಿಕಿತ್ಸೆಗೆ ಹೆಚ್ಚಿನ ಹಣವನ್ನು ಭರಿಸಲು ಸಾಧ್ಯವಾಗದೇ ಇರುವುದರಿಂದ ದಾನಿಗಳ ನೆರವಿನ ಮೊರೆ ಹೋಗಿದ್ದಾರೆ. ಯಶೋಧ ಪೂಜಾರಿ ಅವರಿಗೆ ಸಹಾಯ ಮಾಡಲಿಚ್ಚಿಸುವವರು,ಕೆನರಾ ಬ್ಯಾಂಕ್ ನಾವುಂದಉಳಿತಾಯ ಖಾತೆ ಸಂಖ್ಯೆ: 01732200077345ಐಎಫ್ಎಸ್ಸಿ ಕೋಡ್: CNRB0010173ಗೂಗಲ್ ಫೇ: 9535677194
ತಮ್ಮ ಆರೋಗ್ಯ ಹಾಗೂ ಸೌಂದರ್ಯ ಕಡೆಗೆ ಮದುವೆಗೂ ಮೊದಲು ವಿಶೇಷ ಗಮನ ಹರಿಸುವ ಹೆಣ್ಣುಮಕ್ಕಳು ಬರಬರುತ್ತಾ ಕೆಲಸ ಕುಟುಂಬದ ಒತ್ತಡದಿಂದಾಗಿ ಆ ಬಗ್ಗೆ ಗಮನಹರಿಸುವುದನ್ನು ಕಡಿಮೆ ಮಾಡುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು ಭವಿಷ್ಯದಲ್ಲಿ ಅವರಿಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಕೆಲಸ ಹಾಗೂ ಕುಟುಂಬದ ನಿರ್ವಹಣೆಯ ಬಗ್ಗೆ ಆರೋಗ್ಯ ಕಾಳಜಿ ವಹಿಸುವುದಕ್ಕಾಗಿ ಕೆಲವೊಂದು ಟಿಪ್ಸ್ ಇಲ್ಲಿದೆ. ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡಬೇಡಿ:ಮನೆಯಲ್ಲಿ ಅಡುಗೆ, ಒರೆಸುವುದು, ತೊಳೆಯುವುದು ಅಂತ ನೂರೆಂಟು ಕೆಲಸ ಇರುತ್ತದೆ. ಅವುಗಳೆನ್ನೆಲ್ಲಾ ಒಟ್ಟಿಗೆ ಮಾಡಿ ಮುಗಿಸಿ ಬಿಡಬೇಕೆಂದು ನಿಮಗೆ ಅನಿಸುತ್ತದೆ, ಆದರೆ ಜೊತೆಗೆ ಮಾಡಬೇಡಿ ಹಾಗೇ ಮಾಡಿದರೆ ತುಂಬಾನೇ ಸುಸ್ತಾಗುವಿರಿ. ಸ್ವಲ್ಪ ಕೆಲಸ ಮಾಡಿ ಒಂದು ಅರ್ಧ ತಾಸು ವಿಶ್ರಾಂತಿ ತೆಗೆದು ನಂತರ ಮತ್ತೆ ಕೆಲಸ ಮುಂದುವರೆಸಿ. ವಿಶ್ರಾಂತಿ ತೆಗೆದುಕೊಳ್ಳಿ:ನಾನು ಕೆಲಸ ಮಾಡದೆ ಕೂತರೆ ಬೇರೆಯವರು ನನ್ನ ತಪ್ಪು ತಿಳಿಯುತ್ತಾರೆ ಎಂಬ ಆತಂಕ ಬೇಡ. ನಿಮಗೆ ವಿಶ್ರಾಂತಿ ಬೇಕು ಅನಿಸಿದಾಗ ಆರಾಮವಾಗಿ ಕೂತು ಇಷ್ಟವಾಗಿದ್ದನ್ನು ತಿಂದು ನಂತರ ಕೆಲಸ…
