ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಶನಿವಾರ 1146 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 6 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 636, ಕುಂದಾಪುರ, ಬೈಂದೂರು ತಾಲೂಕಿನ 246, ಕಾರ್ಕಳ, ಹೆಬ್ರಿ ತಾಲೂಕಿನ 255 ಮಂದಿಗೆ ಹಾಗೂ ಹೊರ ಜಿಲ್ಲೆಯ 9 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 1146 ಪ್ರಕರಣಗಳಲ್ಲಿ 235 ಸಿಂಟಮಿಕ್ ಹಾಗೂ 911 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 21 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 1125 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 75 ವರ್ಷದ ವೃದ್ಧ, 63 ವರ್ಷದ ವೃದ್ಧ, 46 ವರ್ಷದ ಮಹಿಳೆ, 65 ವರ್ಷದ ವೃದ್ಧ, 35 ವರ್ಷದ ಮಹಿಳೆ, 35 ವರ್ಷದ ಪುರುಷ, 87 ವರ್ಷದ ವೃದ್ಧೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 1496 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅರಬ್ಬೀ ಸಮುದ್ರದಲ್ಲಿ ಉಂಟಾದ ತೌಕ್ತೇ ಚಂಡಮಾರುತದಿಂದಾಗಿ ಉಡುಪಿ ಜಿಲ್ಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿರುವ ಪರಿಣಾಮ ಸಮುದ್ರ ತೀರದಲ್ಲಿ ಕಡಲ್ಕೋರೆತ, ನದಿ ತಟದಲ್ಲಿ ನೆರೆಯ ಹಾವಳಿ ಹೆಚ್ಚಿದೆ. ಶನಿವಾರ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ 3 ಮನೆಗಳಿಗೆ, 5 ತಾತ್ಕಾಲಿಕ ಶೆಡ್, ಬ್ರಹ್ಮಾವರ ತಾಲೂಕಿನಲ್ಲಿ 4 ಮನೆಗಳಿಗೆ ಹಾಗೂ ಉಡುಪಿ ತಾಲೂಕಿನಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದೆ. ಕಾಪು ತಾಲೂಕಿನಲ್ಲಿ ವಿದ್ಯುತ್ ತಂತಿ ಗಾಳಿಗೆ ಬಿದ್ದು ವಿದ್ಯುತ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮರಗಳು ಧರೆಗೆ ಊರುಳಿರುವುದರಿಂದ ಅಲ್ಲಲ್ಲಿ ರಸ್ತೆ ಬಂದ್ ಆಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ► ತೌಕ್ತೇ ಚಂಡಮಾರುತದ ಅಬ್ಬರ: ಹೆಚ್ಚಿದ ಕಡಲ್ಕೋರೆತ, ನದಿ ತೀರದ ಪ್ರದೇಶದಲ್ಲಿ ನೆರೆ – https://kundapraa.com/?p=48195 . ಪುನರ್ವಸತಿ: ಬೈಂದೂರು ತಾಲೂಕಿನಲ್ಲಿ ಕಡಲ ತೀರದ 4 ಕುಟುಂಬಗಳನ್ನು ಉಪ್ಪುಂದ ಜೂನಿಯರ್ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ, ನೆರೆ ಹಾವಳಿ ಹೆಚ್ಚಿರುವ ಪ್ರದೇಶದ ಕುಟುಂಬದವರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕುಂದಾಪುರ ತಾಲೂಕಿನ 7…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ’ತೌಕ್ತೇ ಚಂಡಮಾರುತದ ಪರಿಣಾಮ ಶನಿವಾರ ಬಿರುಸಿನ ಗಾಳಿ ಮಳೆ ಮತ್ತು ಪ್ರಬಲ ಕಡಲ್ಕೊರೆತ ಮುಂದುವರೆದಿದೆ. ಚಂಡಮಾರುತ ಪ್ರಭಾವ ಈ ಭಾಗದ ಕರಾವಳಿ ತೀರದುದ್ದಕ್ಕೂ ತಟ್ಟಿದೆ. ಕಡಲ ಅಲೆಗಳ ರುದ್ರನರ್ತನ ಮನೆ, ಮೀನುಗಾರಿಕಾ ದೋಣಿಗಳಿಗೆ ಅಪಾರ ಹಾನಿ ಉಂಟು ಮಾಡಿದೆ. ಹೊಸಾಡು ಗ್ರಾಮದ ಕಂಚುಗೋಡು ಪರಿಸರದಲ್ಲಿ ಕಡಲ್ಕೊರೆತದ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಕಂಚುಗೋಡು ಶ್ರೀ ರಾಮ ಮಂದಿರದ ಸಮೀಪದ ನಿವಾಸಿ ಕೊಲ್ಲೂರು ಸಂಜೀವ ಖಾರ್ವಿ ಮನೆಯ ವಠಾರದಲ್ಲಿದ್ದ ಸುಮಾರು 15ಕ್ಕೂ ಮಿಕ್ಕಿ ತೆಂಗಿನ ಮರಗಳು ಉರುಳಿ ಬಿದ್ದು ಸಮುದ್ರ ಪಾಲಾಗಿದ್ದು, ಇವರ ವಾಸ್ತವ್ಯದ ಮನೆ ಸಮುದ್ರ ಪಾಲಾಗುವ ಸಾಧ್ಯತೆ ಇದೆ. ಇದೇ ಪರಿಸರದಲ್ಲಿ ಕಡಲ ತೀರದ ಸನಿಹದಲ್ಲಿರುವ ಸುಮಾರು 10 ಕ್ಕೂ ಮಿಕ್ಕಿ ಮೀನುಗಾರರ ಮನೆಗಳು ಕಡಲ್ಕೊರೆತದ ಭೀತಿ ಎದುರಿಸುತ್ತಿದೆ. ತೀರದಲ್ಲಿ ನಿಲ್ಲಿಸಿದ್ದ ಎರಡು ದೋಣಿಗಳಿಗೂ ಹಾನಿಯಾಗಿದೆ. ► ತೌಕ್ತೇ ಚಂಡಮಾರುತದ ಅಬ್ಬರ: ಹೆಚ್ಚಿದ ಕಡಲ್ಕೋರೆತ, ನದಿ ತೀರದ ಪ್ರದೇಶದಲ್ಲಿ ನೆರೆ -…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಮೇ15: ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಶುಕ್ರವಾರ ರಾತ್ರಿಯಿಂದ ತಾಲೂಕಿನ ಹಲವೆಡೆ ಮಳೆಯಾಗುತ್ತಿದ್ದು, ಒಂದೆಡ ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನೊಂದೆಡೆ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ಕಡಲ್ಕೊರೆತದ ಅಬ್ಬರ ಇಂದು ಹೆಚ್ಚಾಗಿದ್ದು ಸಮುದ್ರ ತೀರದ ನಿವಾಸಿಗಳಿಗೆ ಆತಂಕ ಉಂಟುಮಾಡಿದೆ. ಕುಂದಾಪುರ ತಾಲೂಕಿನ ಕೋಡಿ ಭಾಗದಲ್ಲಿ ಸಮುದ್ರದ ತಡೆಗೋಡೆಯ ತನಕ ನೀರು ಅಪ್ಪಳಿಸುತ್ತಿದೆ. ಬೈಂದೂರು ತಾಲೂಕಿನ ಕಂಚುಗೋಡು, ಮರವಂತೆ, ಮಡಿಕಲ್, ದೊಂಬೆ ಭಾಗದಲ್ಲಿ ಕಡಲ್ಕೋರೆತ ಹೆಚ್ಚಿದ್ದು ಹತ್ತಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ತೀರ ಪ್ರದೇಶದಲ್ಲಿದ್ದ ಕೆಲವು ಮೀನುಗಾರಿಕಾ ಶೆಡ್’ಗಳಿಗೂ ಹಾನಿ ಉಂಟಾಗಿದೆ. ಸಮುದ್ರ ತೀರ ಪ್ರದೇಶದಲ್ಲಿ ಕಡಲಕೊರೆತ ಹೀಗೆಯೇ ಮುಂದುವರಿದರೆ ಮೀನುಗಾರಿಕಾ ರಸ್ತೆ, ಶೆಡ್ ಹಾಗೂ ಮನೆಗಳಿಗೆ ಹಾನಿಯಾಗುವ ಅಪಾಯವಿದೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಯಡ್ತರೆ ದುರ್ಮಿ, ತಾರಾಪತಿ, ಅಳವೆಕೋಡಿ ಭಾಗದಲ್ಲಿಯೂ ನೆರೆ ಉಂಟಾಗಿದ್ದು, ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದೆ. ಸುಬ್ಬರಾಡಿ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ ಸಲುವಾಗಿ ನದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕರೋನಾ ಮಹಾಮಾರಿ ಹಾಗೂ ದೇಶಕ್ಕೆ ಎದುರಾಗಿರುವ ಆರೋಗ್ಯ ಆಪತ್ತಿನಿಂದ ರಕ್ಷಣೆ ಮಾಡುವಂತೆ ಪ್ರಾರ್ಥಿಸಿ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕೆಗೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ವಿಶೇಷ ಚಂಡಕಾ ಯಾಗ ಪೂಜೆಯನ್ನು ಸಂಕಲ್ಪಿಸಿಕೊಂಡರು. ಬಳಿಕ ಶ್ರೀ ಆದಿ ಶಂಕರಾಚಾರ್ಯರರ ಸರ್ವಜ್ಞ ಪೀಠವನ್ನು ದರ್ಶನ ಮಾಡಿ ಪೂಜೆ ಸಲ್ಲಿಸಿ ಅಲ್ಲಿಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದು ಮತ್ತು ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ವ್ಯವಸ್ಥಾಪನಾ ಸಮಿತಿಯಿಂದ ಪರಿಶೀಲಿಸಲಾಯಿತು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರುಗಳಾದ ಜಯಾನಂದ ಹೋಬಳಿದಾರ್, ಗಣೇಶ್ ಕಿಣಿ ಬೆಳ್ವೆ, ಕೆ.ಪಿ. ಶೇಖರ್, ಸಂಧ್ಯಾ ರಮೇಶ್, ರಾಮಚಂದ್ರ ಅಡಿಗ, ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ ಹಾಗೂ ದೇವಳದ ಸಿಬ್ಬಂದಿಗಳು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯ ಮೀನುಗಾರಿಕಾ ಹೊರಬಂದರಿನ ಉತ್ತರ ಭಾಗದಲ್ಲಿ ಮಂಗಳವಾರ ಆರಂಭವಾಗಿ ಗುರುವಾರದ ವರೆಗೆ ಏರುಗತಿಯಲ್ಲಿ ಸಾಗಿದ ಕಡಲ್ಕೊರೆತ, ಶುಕ್ರವಾರ ಗಂಭೀರ ಸ್ವರೂಪ ತಾಳಿದೆ. ಈ ಮೂರು ದಿನಗಳಲ್ಲಿ ಸಮುದ್ರದ ಉಬ್ಬರದ ಅಲೆಗಳು 350 ಮೀಟರು ಉದ್ದದ ದಂಡೆಯ 4 ಮೀಟರು ಅಗಲದ ಭೂಭಾಗವನ್ನು ಕಡಲಿಗೆ ಸೇರಿಸಿವೆ. ಈ ಸ್ಥಳದಲ್ಲಿದ್ದ ಸುಮಾರು ನೂರು ತೆಂಗಿನ ಮರಗಳು ಕಡಲಿಗೆ ಉರುಳಿವೆ. ಇಲ್ಲಿರುವ ಮೀನುಗಾರರ ವಸತಿ ಪ್ರದೇಶದ ಜೀವನಾಡಿಯಾಗಿರುವ ಕರಾವಳಿ ಮಾರ್ಗದ 2 ರಿಂದ 8 ಅಡಿ ಅಂತರದಲ್ಲಿ ಅಲೆಗಳು ಅಪ್ಪಳಿಸುತ್ತಿವೆ. ರಾತ್ರಿ ಹೊತ್ತಿಗೆ ಅಲೆಗಳ ಆರ್ಭಟ ಹೆಚ್ಚಲಿದ್ದು, ಆಗ ರಸ್ತೆ, ಅದರ ಬದಿಯಲ್ಲಿರುವ ವಿದ್ಯುತ್ ಲೈನ್ ಕುಸಿಯುವ ಸಾಧ್ಯತೆ ಇದೆ. ಶನಿವಾರ ಮತ್ತು ಭಾನುವಾರ ’ತೌಕ್ತಿ’ ಚಂಡ ಮಾರುತ ಇಲ್ಲಿಗೆ ಅಪ್ಪಳಿಸಿದರೆ ರಸ್ತೆಯ ಜತೆಗೆ ಅದರ ಪೂರ್ವದಲ್ಲಿರುವ 25 ಮೀನುಗಾರರ ಮನೆಗಳು ಅಪಾಯಕ್ಕೆ ಸಿಲುಕಲಿವೆ ಎಂದು ಮೀನುಗಾರರು ಭೀತಿ ವ್ಯಕ್ತಪಡಿಸುತ್ತಿದ್ದಾರೆ. ಬುಧವಾರ ಭಾಗಶ: ಕುಸಿದಿದ್ದ ಪಕ್ಕುಮನೆ ದಿನಕರ ಖಾರ್ವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 1220 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 3 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 472, ಕುಂದಾಪುರ, ಬೈಂದೂರು ತಾಲೂಕಿನ 540, ಕಾರ್ಕಳ, ಹೆಬ್ರಿ ತಾಲೂಕಿನ 205 ಮಂದಿಗೆ ಹಾಗೂ ಹೊರ ಜಿಲ್ಲೆಯ 3 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 1220 ಪ್ರಕರಣಗಳಲ್ಲಿ 250 ಸಿಂಟಮಿಕ್ ಹಾಗೂ 970 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 19 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 1201 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 81 ವರ್ಷದ ವೃದ್ಧೆ, 53 ವರ್ಷದ ಪುರುಷ, ಕುಂದಾಪುರದ 78 ವರ್ಷದ ವೃದ್ಧ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 706 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 7619 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 3095 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರೂರು, ಕಿರಿಮಂಜೇಶ್ವರ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಶುಕ್ರವಾರ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಭೇಟಿ ನೀಡಿ ಆಸ್ಪತ್ರೆಗಳ ಸ್ಥಿತಿ, ಬಾಕಿ ಇರುವ ವಾಕ್ಸಿನೇಷನ್ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ವೈದಾಧಿಕಾರಿಗಳಿಂದ ಪಡೆದುಕೊಂಡದರು. ಈ ವೇಳೆ ಅವರು ಮಾತನಾಡಿ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ದು ಕೋವಿಡ್ ನಿಯಂತ್ರಣಕ್ಕಾಗಿ ಸರಕಾರದ ನಿರ್ದೇಶನಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲರ್ಯಗಳ ಕೊರತೆ ಹಾಗೂ ಸಿಬ್ಬಂದಿಗಳ ಕೊರತೆಯಿಂದಾಗಿ ಅವರ ಮೇಲೆ ಒತ್ತಡ ಹೆಚ್ಚಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಎದುರಿಸಲು ಸಾಕಷ್ಟು ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಬೈಂದೂರು ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಇದ್ದು ಇದನ್ನು ನಿವಾರಿಸುವ ಜೊತೆಗೆ ಮೂರನೇ ಅಲೆಯನ್ನು ಎದುರಿಸುವ ಸಲುವಾಗಿ ಬೈಂದೂರು ತಾಲೂಕಿಗೆ ಪ್ರತ್ಯೇಕವಾದ ಕೋವಿಡ್ ಆಸ್ಪತ್ರೆಯನ್ನು ಸಿದ್ಧಪಡಿಸಿಕೊಳ್ಳುವ ಅವಶ್ಯಕತೆ ಇದ್ದು, ಜಿಲ್ಲಾಡಳಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಗುರುವಾರ 892 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 6 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 222, ಕುಂದಾಪುರ, ಬೈಂದೂರು ತಾಲೂಕಿನ 314, ಕಾರ್ಕಳ, ಹೆಬ್ರಿ ತಾಲೂಕಿನ 349 ಮಂದಿಗೆ ಹಾಗೂ ಹೊರ ಜಿಲ್ಲೆಯ 7 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 892 ಪ್ರಕರಣಗಳಲ್ಲಿ 121 ಸಿಂಟಮಿಕ್ ಹಾಗೂ 771 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 17 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 875 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 75 ವರ್ಷದ ವೃದ್ಧ, 65 ವರ್ಷದ ವೃದ್ಧ, 62 ವರ್ಷದ ವೃದ್ಧೆ, 51 ವರ್ಷದ ಮಹಿಳೆ, 55 ವರ್ಷದ ಮಹಿಳೆ, ಕುಂದಾಪುರದ 38 ವರ್ಷದ ಮಹಿಳೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 730 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 7108 ಕೋವಿಡ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು(6 ರಿಂ 10ನೇ ತರಗತಿ)ಗಳಿಗೆ ವಾರ್ಷಿಕ ರೂ.10,000/-ರಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡುವ ಸಲುವಾಗಿ ಅರ್ಹ ಕ್ರೀಡಾಪಟುಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು 2020-21ನೇ ಸಾಲಿನಲ್ಲಿ ಮಾಧ್ಯಮಿಕ/ಪ್ರೌಢಶಾಲಾವಿದ್ಯಾರ್ಥಿಯಾಗಿರಬೇಕು. ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೊಂದಾಯಿತ ಕ್ರೀಡಾ ಸಂಸ್ಥೆಗಳು ಎಪ್ರಿಲ್ 1 , 2020 ರಿಂದ ಮಾರ್ಚ್ 31, 2021 ರವರೆಗೆ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸಿದ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಬಾಗವಹಿಸಿರಬೇಕು. ರಾಷ್ಟ್ರೀಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು,…
