ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿಯ ಬ್ಯಾರೀಸ್ ವಿದ್ಯಾಸಂಸ್ಥೆಯ ಕೋಟೆ ಮನ್ಸೂರ್ ಕೋಟೆ ಮತ್ತು ಅವರ ತಂಡದಿಂದ ಆಯೋಜಿಸಲಾದ ಕೋಟೆ ಫ್ರೆಂಡ್ಸ್ ಕ್ರಿಕೆಟರ್ಸ ಕೋಡಿ ಫ್ರೆಂಡ್ಸ್ ಟ್ರೋಫಿ 2020-21ರ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅಥಿತಿಯಾಗಿ ಆಗಮಿಸಿದ ಮಂಗಳೂರು ಭಾಗದ ಶಾಸಕರಾದ ಜನಾಬ್ ಯು. ಟಿ ಖಾದರ್ ಮಾತನಾಡುತ್ತಾ ಯುವಕರು ಹೆಚ್ಚಿನ ಸಮಯವನ್ನು ಕ್ರೀಡೆಯಲ್ಲಿ ಕಳೆಯುವುದರಿಂದ ಕ್ರೀಡಾಭಿಮಾನವು ದೇಶದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ರಕ್ಷಿಸಲು ಪ್ರೇರಣೆಯಾಗುತ್ತದೆ.ಆದ್ದರಿಂದ ಕ್ರೀಡೆಯ ಮೂಲಕವೂ ಕೂಡ ಸೌಹಾರ್ದತೆ ನಮ್ಮ ಬದುಕಾಗಬೇಕು ಎಂದರು. ತಾಯಿಯ ಗರ್ಭದಲ್ಲಿ ಮಕ್ಕಳಾಗಿ ನಂತರ ಪರಿಸರ ದಲ್ಲಿ ಬೆಳೆಯುವ ನಾವು ಯಾವ ಕ್ಷಣದಲ್ಲಾದರೂ ಮಣ್ಣಲ್ಲಿ ಮಣ್ಣಾಗುವವರು. ಆದ್ದರಿಂದ ಎಲ್ಲರೂ ಸೌಹಾರ್ದತೆಯಿಂದ ಬದುಕಿ ಬಾಳೋಣ ಎಂದರು. ಬ್ಯಾರೀಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಸಯ್ಯಾದ್ದ್ ಮಹಮ್ಮದ್ ಬ್ಯಾರೀ, ಕೃಷ್ಣಾನಂದ ಹೆಗ್ಡೆ ಟ್ರಸ್ಟೀ ಜನಪ್ರತಿನಿಧಿ ಸೇವಾ ಟ್ರಸ್ಟ್ ರಿ.ಕೋಟೇಶ್ವರ, ಪ್ರತಿಪಾಡಿ ನ್ಯಾಷನಲ್ ಕೌನ್ಸಿಲ್ ಜೆಡಿಎಸ್ ಸದಸ್ಯರಾದ ಜನಾಬ್ ಹೈದರ್, ಉತ್ತರ ಕನ್ನಡ ಜನತಾದಳ ಮುಖಂಡರಾದ ಇನಾಯ್ತುಲ್ಲಾ ಶಭಾನಂಧಾರೀ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದದ ಸಹಯೋಗದಲ್ಲಿ ನಡೆಯುತ್ತಿರುವ 36ನೇ ರಾಜ್ಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ 287 ಅಂಕಗಳೊದಿಗೆ, 33 ಚಿನ್ನ, 29 ಬೆಳ್ಳಿ ಹಾಗೂ 35 ಕಂಚಿನ ಪದಕಗಳೊಂದಿಗೆ ಆಳ್ವಾಸ್ ಕ್ರೀಡಾಪಟುಗಳು ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ ಸಮಗ್ರ ಚಾಂಪಿಯನ್‌ಶಿಪ್‌ಗೆ ಭಾಜನವಾಗಿದೆ. ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ 90 ಅಂಕಗಳೊದಿಗೆ ದ್ವಿತೀಯ ಹಾಗೂ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್ 84 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿವೆ. ಕ್ರೀಡಾಕೂಟದ ಮೂರನೇ ದಿನದ ಅಥ್ಲೆಟಿಕ್ ಒಟ್ಟು 18 ಇವೆಂಟ್‌ಗಳು ನಡೆದಿವೆ. ಮೂರು ದಿನದ ಚಾಂಪಿಯನ್ಶಿಪ್ನಲ್ಲಿ ಒಟ್ಟು 6 ಕೂಟ ದಾಖಲೆಗಳು ದಾಖಲಾಗಿದ್ದು, ಮೂರನೇ ದಿನ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ನ ರಮ್ಯಶ್ರೀ ಜೈನ್ ಜಾವೆಲಿನ್ ಥ್ರೋನಲ್ಲಿ 44.54 ಮೀ. (39.50 ಮೀ- ಹಳೆಯ ದಾಖಲೆ) ದೂರ ದಾಖಲಿಸಿ ಹೊಸ ಕೂಟ ದಾಖಲೆ ಬರೆದಿದ್ದಾರೆ. ಪದಕಗಳ ವಿವರ: ಪ್ರಥಮ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್(287 ಅಂಕಗಳು) ಚಿನ್ನ-33 ಬೆಳ್ಳಿ-29…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕ ಸಾರಥ್ಯದಲ್ಲಿ ಶ್ರೀ ವಿನಾಯಕ ಯುವಕ ಮಂಡಲ ರಿ. ಸಾಬ್ರಕಟ್ಟೆ – ಯಡ್ತಾಡಿ ಸಹಕಾರದಲ್ಲಿ ನಡೆಯುವ ಬ್ರಹ್ಮಾವರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಹಗ್ಗಿನ ಹನಿ – 2021 (ಗುರುತಿನ ಅನುಸಂಧಾನ) ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಸಂಶೋಧಕ ಬಾಬು ಶಿವಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಜ.24ರಂದು ಸಾಬ್ರಕಟ್ಟೆ ಮಹಾತ್ಮ ಗಾಂಧಿ ಫ್ರೌಡ ಶಾಲೆಯಲ್ಲಿ ಸಮ್ಮೇಳನ ವಿವಿಧ ಗೋಷ್ಠಿ, ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಬ್ರಹ್ಮಾವರ ತಾಲೂಕು ಕ.ಸಾ.ಪ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಂಧ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಲು ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಮತ್ತು ಇನ್ನಿತರ ಸಾಧನಗಳನ್ನು ಒಳಗೊಂಡ ತಲಾ 25,000 ರೂ.ಗಳ ಬ್ರೈಲ್ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅಂಧ ವಿದ್ಯಾರ್ಥಿಗಳ ವಿಕಲತೆಯ ಪ್ರಮಾಣ ಶೇ.40 ಅಥವಾ ಅದಕ್ಕಿಂತ ಹೆಚ್ಚಾಗಿರುವ, ಎಸ್.ಎಸ್.ಎಲ್.ಸಿ ಹಾಗೂ ನಂತರದ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ, ರಾಜ್ಯದಲ್ಲಿ ಕನಿಷ್ಠ 10 ವರ್ಷಗಳ ನಿವಾಸಿಯಾಗಿರುವವರು, ಸಂಬಂಧಪಟ್ಟ ಶಾಲಾ ಕಾಲೇಜುಗಳ ಮುಖ್ಯಸ್ಥರಿಂದ ಶಿಕ್ಷಣ ಪಡೆಯುತ್ತಿರುವ ಬಗ್ಗೆ ದೃಢೀಕರಣ ಒದಗಿಸಬೇಕು. ಅರ್ಜಿ ಸಲ್ಲಿಸಲು ಫೆಬ್ರವರಿ 6 ಕೊನೆಯ ದಿನ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 0820-2574810/811 ಅಥವಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ತಳಮಹಡಿ, ಸಿಂಡಿಕೇಟ್ ಬ್ಯಾಂಕ್ ಹತ್ತಿರ, ಜಿಲ್ಲಾ ಪಂಚಾಯತ್ ವಿಭಾಗ, ರಜತಾದ್ರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ ಇವರ ಆಶ್ರಯದಲ್ಲಿ ವಲಯದ ಶಿಕ್ಷಕರ ಗುರುಸ್ಪಂದನ ಕಾರ್ಯಕ್ರಮವು ಇಲ್ಲಿನ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಂ.ಮುಂದಿನಮನಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕರ ಸಂಘದ ಅಧ್ಯಕ್ಷರಾದ ಶೇಖರ್ ಪೂಜಾರಿ ವಹಿಸಿ ಮಾತನಾಡಿ,, ಇಲಾಖೆಯ ಸಮನ್ವಯದೊಂದಿಗೆ ಶಿಕ್ಷಕ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಶಿಕ್ಷಕ ಬಂಧುಗಳ ಸಹಕಾರ ಅಗತ್ಯ ಎಂದು ಹೇಳಿದರು. ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಜನಾರ್ದನ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರು ತಮ್ಮ ಸೇವಾ ಪುಸ್ತಕ ದಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಸ್ಪಷ್ಟ ಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ರವೀಂದ್ರ ಶ್ಯಾನುಭಾಗ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮೇನೇಜರ್ ಎಡ್ವಿನ್ ಫೆರ್ನಾಂಡಿಸ್ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಧ.ಮಂ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರಾದ ರಾಜು ಮಯ್ಯಾಡಿ, ಬೈಂದೂರು ಶಿಕ್ಷಣ ಸಂಯೋಜಕ ಚಂದ್ರ ದೇವಾಡಿಗ, ಸಿ.ಆರ್.ಪಿ.ಗಳಾದ ರಾಘವೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಹಿಳಾ ಉದ್ಧೇಶಿತ ಆಯವ್ಯಯದಡಿ ಪತ್ರಿಕೋದ್ಯಮ ಪದವಿ/ಸ್ನಾತಕೋತ್ತರ ಪದವೀಧರ ಮಹಿಳೆಯರು ವೃತ್ತಿಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹತ್ತು ತಿಂಗಳ ಅಪ್ರೆಂಟಿಸ್ ತರಬೇತಿಯನ್ನು ಹಮ್ಮಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಉಡುಪಿ ಜಿಲ್ಲಾ ಕಚೇರಿಯಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಮೆರಿಟ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಪ್ರತಿ ಅಪ್ರೆಂಟಿಸ್‌ಗೆ ಮಾಹೆಯಾನ ರೂ. 15 ಸಾವಿರ ರೂಪಾಯಿ ಸ್ಟೈಫಂಡ್ ನೀಡಲಾಗುವುದು. ಇಲಾಖೆಯ ಕ್ಷೇತ್ರ ಪ್ರಚಾರ ಕಾರ್ಯಗಳಲ್ಲಿ, ಸುದ್ದಿ ಸಂಗ್ರಹ, ರಚನೆ ಹಾಗೂ ವಿಶೇಷ ಲೇಖನ ರಚನೆಗಳಲ್ಲಿ ತರಬೇತಿ ನೀಡಲಾಗುವುದು. ಅಭ್ಯರ್ಥಿಗಳು ಪತ್ರಿಕೋದ್ಯಮದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನ್ನಡ ಭಾಷೆಯ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 40 ವರ್ಷದೊಳಗಿರಬೇಕು. ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಸ್ನಾತಕೋತ್ತರ ಪದವಿ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ ಹಾಗೂ ಇನ್ನಿತರ ಪೂರಕ ದಾಖಲೆಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕನಾ೯ಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ 2020-21 ನೇ ಸಾಲಿನಲ್ಲಿ ನಡೆಸಲಾದ ಭರತನಾಟ್ಯ ಶಾಸ್ತ್ರೀಯ ನೃತ್ಯದ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬೈಂದೂರು ಸುರಭಿ ಸಂಸ್ಥೆಯ ಭರತನಾಟ್ಯ ವಿಭಾಗದ ಎಲ್ಲಾ ವಿದ್ಯಾಥಿ೯ಗಳೂ ಅತ್ಯುತ್ತಮ ಅಂಕದೊಂದಿಗೆ ತೇಗ೯ಡೆ ಹೊಂದಿ 100% ಫಲಿತಾಂಶ ದೊಂದಿಗೆ 6 ವಿದ್ಯಾಥಿ೯ನಿಯರು ಅತಿ ಹೆಚ್ಚು ಅಂಕದೊಂದಿಗೆ ವಿಶಿಷ್ಟ ದಜೆ೯(ಡಿಸ್ಟಿಂಗ್ಷನ್)ಯಲ್ಲಿಪಾಸಾಗಿದ್ದು ಸಂಸ್ಥೆಯ ಎಲ್ಲಾ ವಿದ್ಯಾಥಿ೯ನಿಯರಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಇವರೆಲ್ಲರೂ ನೃತ್ಯ ಗುರುಗಳಾದ ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಇವರ ಶಿಷ್ಯೆಯರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಭಾವಂತ ಹಿರಿಯ ಲೇಖಕಿ ಕೆ. ಶಾರದಾ ಭಟ್ ಅವರಿಗೆ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸಮಾರಂಭ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರ, ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿ ಪಡೆಯಲು ನಡೆಯುವ ಹೋರಾಟಗಳನ್ನು ನಾವು ಗಮನಿಸುತ್ತಿದ್ದೇವೆ. ಇಂತಹ ಕಾಲದಲ್ಲಿ ಸಮರ್ಥರು ಗೌರವಕ್ಕೆ ಪಾತ್ರರಾದರೆ ಸಂತೋಷವಾಗುತ್ತದೆ. ಕುಂದಪ್ರಭ ಸಂಸ್ಥೆ ಕೋ.ಮ.ಕಾರಂತ ಪ್ರಶಸ್ತಿ ಸಮರ್ಥರಿಗೆ ನೀಡುತ್ತಾ ಬಂದು ಪ್ರಶಸ್ತಿಯ ಗೌರವ ಹೆಚ್ಚಿಸಿದೆ. ಮಾಧ್ಯಮದ ಮಂದಿ ಸುದ್ಧಿ ಜಾಹಿರಾತು ಸಂಗ್ರಹದೊಂದಿಗೆ ನಿಜವಾಗಿ ಸಾಧನೆ ಮಾಡಿದವರನ್ನು ಬೆಳಕಿಗೆ ತರಬೇಕು, ಪ್ರೋತ್ಸಾಹಿಸಬೇಕು. ಗುಣಮಟ್ಟ ಇದ್ದಲ್ಲಿ ಗೌರವ ಇರುತ್ತದೆ. ನಮ್ಮ ಕ್ಯಾಂಪ್ಕೊ ಸಹ, ವಿಸ್ತರಣೆಯೊಂದಿಗೆ ಗುಣಮಟ್ಟ ಉಳಿಸಿಕೊಳ್ಳುವಲ್ಲಿ ಜಾಗೃತಿ ವಹಿಸುತ್ತದೆ. ಕುಂದಾಪುರ ಪರಿಸರದಲ್ಲಿಯೂ ಇನ್ನೊಂದು ಕೇಂದ್ರ ಸ್ಥಾಪನೆಗೆ ಚಿಂತಿಸಲಾಗಿದೆ ಎಂದು ಹೇಳಿದರು. ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಡಾ. ಎನ್.ಆರ್.ಆಚಾರ್ಯ ಸ್ಮಾರಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂದಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020 ಜಾರಿಗೆ ಬಂದಿದ್ದು, ಈ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಜೊತೆಗೆ ಕಾಯ್ದೆಯ ಉಲ್ಲಂಘನೆ ನಡೆಯದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ. ಚಾವ್ಹಾಣ್ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ಕಾಯ್ದೆಯ ವ್ಯಾಪ್ತಿಯಲ್ಲಿ ಹಸು , ಕರು, ಎತ್ತು , ಹೋರಿಗಳನ್ನು ಸೇರಿಸಲಾಗಿದ್ದು, 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳು ಒಳಗೊಂಡಿದ್ದು, ಕಾಯ್ದೆಯನ್ನು ಮೊದಲ ಬಾರಿ ಉಲ್ಲಂಘಿಸಿದವರಿಗೆ 3 ರಿಂದ 6 ವರ್ಷ ಮತ್ತು 500000 ದಿಂದ 5 ಲಕ್ಷದವರಗೆ ದಂಡ ಮತ್ತು ಎರಡನೇ ಬಾರಿ ಉಲ್ಲಂಘಿಸುವವರಿಗೆ 10 ಲಕ್ಷದವರೆಗೆ ದಂಡ ಹೆಚ್ಚಿಸಲಾಗಿದ್ದು, ಜಾನುವಾರುಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮತ್ಸ್ಯ ಸಂಪತ್ತನ್ನು ಬಳಸಿಕೊಳ್ಳುವ ಮೂಲಕ ಮೀನುಗಾರಿಕೆಗೆ ಸಹಕಾರಿಯಾಗುವ ಉದ್ಯಮ ಈ ಭಾಗಕ್ಕೆ ಅಗತ್ಯವಾಗಿದೆ. ಬಲಿತ ಮೀನುಗಳನ್ನು ಬಳಸಿಕೊಂಡು, ಮೀನುಗಾರಿಕೆಗೆ ಆಶ್ರಯವಾಗುವ ಈ ಉದ್ಯಮ ಯಶಸ್ವಿಯಾಗಿ ಬೆಳೆಯಲಿ. ಗೋವಿಂದ ಬಾಬು ಪೂಜಾರಿಯವರಲ್ಲಿನ ಪರಿಶ್ರಮ, ಶೃದ್ದೆಯು ಅವರನ್ನು ಯಶಸ್ಸಿನೆಡೆಗೆ ಕೊಂಡೊಯ್ಯಲಿದೆ ಎಂದು ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಮತ್ಸ್ಯ ಬಂಧನ ಪ್ರೈವೆಟ್ ಲಿಮಿಟೆಡ್ ವತಿಯಿಂದ ನಿರ್ಮಾಣವಾಗುವ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಮತ್ಸ್ಯಬಂಧನ ಮೀನಿನ ಮೌಲ್ಯವರ್ಧಿತ ಖಾದ್ಯಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಜೂನ್‌ನಲ್ಲಿಯೇ ಬಿಡುಗಡೆಗೊಳಿಸಿದ್ದಾರೆ. ಮೀನಿನ ಖಾದ್ಯಗಳ ಮಾರುಕಟ್ಟೆ ವ್ಯವಸ್ಥೆಗೆ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಿಕೊಂಡರೆ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು. ಇವತ್ತು ರಾಜ್ಯದ ಮೂರು ಜಿಲ್ಲೆಗಳಲ್ಲಿ ಕಡಲ ಮೀನುಗಾರಿಕೆ ನಡೆಯುತ್ತದೆ. 27 ಜಿಲ್ಲೆಗಳಲ್ಲಿ ಒಳನಾಡು ಮೀನುಗಾರಿಕೆ ನಡೆಯುತ್ತದೆ.…
