ಗಂಗೊಳ್ಳಿ: ಕಳೆದ ಹಲವು ತಿಂಗಳಿನಿಂದ ಕಾಡುತ್ತಿರುವ ಮತ್ಸ್ಯಕ್ಷಾಮವನ್ನು ನಿವಾರಿಸುವಂತೆ ಹಾಗೂ ಹೇರಳ ಮತ್ಸ್ಯಸಂಪತ್ತಿಗಾಗಿ ಪ್ರಾರ್ಥಿಸಿ ಇಂದು ಗಂಗೊಳ್ಳಿಯ ಬಂದರು ಪ್ರದೇಶದಲ್ಲಿ ಮೀನುಗಾರ ಮಹಿಳಾ ಕಾರ್ಮಿಕರು ವಿಶೇಷ ಸಮುದ್ರ ಪೂಜೆ ಹಾಗೂ ಗಂಗಾ ಪೂಜೆ ನೆರವೇರಿಸಿದರು. ಕಳೆದ ಹಲವು ತಿಂಗಳಿನಿಂದ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆ ಇಲ್ಲದೆ ಸ್ತಬ್ಧಗೊಂಡಿದೆ. ದೋಣಿಗಳು, ಬೋಟುಗಳು ದಡ ಸೇರಿರುವುದರಿಂದ ಮೀನುಗಾರರು ಮೀನುಗಾರಿಕೆ ಇಲ್ಲದೆ ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೇರಳ ಮತ್ಸ್ಯ ಸಂಪತ್ತು ದೊರೆಯುವಂತಾಗಲಿ ಆ ಮೂಲಕ ಮೀನುಗಾರರ ಜೀವನ ಉತ್ತಮವಾಗಲಿ ಎಂದು ಮಹಿಳಾ ಮೀನುಗಾರರು ಶ್ರೀದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
Author: ನ್ಯೂಸ್ ಬ್ಯೂರೋ
ಬೈಂದೂರು: ರಂಗಭೂಮಿ (ರಿ.) ಉಡುಪಿ ಇವರ ಆಶ್ರಯದಲ್ಲಿ ಜರುಗಿದ 36ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಲಾವಣ್ಯ (ರಿ.) ಬೈಂದೂರು ತಂಡವು ರಾಜೇಂದ್ರ ಕಾರಂತ ಬೆಂಗಳೂರು ಇವರು ರಚಿಸಿದ ಮುದ್ದಣ್ಣನ ಪ್ರಮೋಷನ್ ಪ್ರಸಂಗ ನಾಟಕವನ್ನು ಪ್ರದರ್ಶಿಸಿ ತೃತೀಯ ಬಹುಮಾನವನ್ನುಗಳಿಸಿದೆ. ಇತ್ತೀಚೆಗೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಕಲಾವಿದರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಬೈಂದೂರು: ಕೇವಲ ಬಾಹ್ಯ ಮೆರಗನ್ನು ನೀಡುವ, ಮಾನಸಿಕ ಸಂತೋಷವನ್ನು ನೀಡದ ಸಂಸ್ಕೃತಿ ಪಾಶ್ಚಾತ್ಯ ದೇಶಗಳಲ್ಲಿ ಬೆಳೆದು ಬಂದಿದೆ. ಭಾರತೀಯ ಸಂಸ್ಕೃತಿಯಲ್ಲಿನ ಸಭ್ಯತೆ, ಮನಸ್ಸನ್ನು ಸಂಸ್ಕರಿಸುವ ಚಿಕಿತ್ಸಕ ಗುಣವನ್ನು ಅಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಸಯ್ಯದ್ ಜಮಿರುಲ್ಲಾ ಷರೀಫ್ ಹೇಳಿದರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಇದರ 16ನೇ ವರ್ಷದ ಸಂಭ್ರಮ ’ಸುರಭಿ ಜೈಸಿರಿ’ಯಲ್ಲಿ ಅವರು ಸಮಾರೋಪ ನುಡಿಗಳನ್ನಾಡಿ ಮನಸ್ಸನ್ನು ತಿದ್ದುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯವ ಸಂಸ್ಕೃತಿಗೆ ಹತ್ತಾರು ಮುಖಗಳಿವೆ. ಅದು ಕಲೆ, ಸಾಹಿತ್ಯ, ಸಂಗೀತ, ನೃತ್ಯದ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಈ ಒಂದಾದರೂ ಪ್ರಕಾರದಲ್ಲಿ ತೊಡಗಿಸಿಕೊಂಡು ನನ್ನನ್ನು ನಾವು ಸಂಸ್ಕರಿಸಿಕೊಳ್ಳುವುದರೊಂದಿಗೆ ಸಂಸ್ಕೃತಿಯ ಉಳಿವಿಗೂ ಕಾರಣರಾಗಬೇಕಿದೆ ಎಂದರು. ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಗಣೇಶ್ ಕೊರಗ, ಸುರಭಿಯ ನಿರ್ದೇಶಕ ಸುಧಾಕರ ಪಿ., ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು. ವಿಶ್ವಮಾನ್ಯ ಕನ್ನಡಿಗ…
ಕುಂದಾಪುರ: ಮುಂಬರುವ ತಾಪಂ. ಜಿಪಂ ಚುನಾವಣೆಗೆ ಬಿಜೆಪಿ ಈಗಾಗಲೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜಿಪಂ.ನಲ್ಲಿ ಪುನ: ಅಧಿಕಾರಕ್ಕೇರುವ ಪ್ರಯತ್ನ ಪಕ್ಷದಲ್ಲಿ ನಡೆಯುತ್ತಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಕ್ಷೇತ್ರ ಮಟ್ಟದಿಂದ ಶಿಫಾರಸ್ಸುಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಮಟ್ಟದ ಸಮಿತಿ ಪರಿಶೀಲನೆ ನಡೆಸಿ ರಾಜ್ಯ ಸಮಿತಿಗೆ ಕಳುಹಿಸಿಕೊಡಲಿದೆ. ಹೀಗಾಗಿ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆ ನಡೆಸುತ್ತಿದ್ದು ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮುಖ್ಯಮಂತ್ರಿ, ಸಂಸದ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಮತ್ತು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಅನುದಾನದಲ್ಲಿ ಸುಮಾರು 7.5ಲಕ್ಷ ರೂ. ವೆಚ್ಚದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಜ್ಜಾಡಿ ಗ್ರಾಮ ಪಂಚಾಯತ್‌ನ ಕೊಡಪಾಡಿ ಮುಖ್ಯರಸ್ತೆಯಿಂದ ಶ್ರೀ ಗುಹೇಶ್ವರ ದೇವಸ್ಥಾನದವರೆಗಿನ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ…
ಬೈಂದೂರು: ಜೇನು ಸಾಕಾಣಿಕೆ ಕೃಷಿಯ ಅವಿಭಾಜ್ಯ ಅಂಗ. ದೈನಿಂದಿನ ಬಿಡುವಿನ ಸಮಯದಲ್ಲಿ ಜೇನು ಕೃಷಿ ಮಾಡಿದರೆ ಕುಟುಂಬದ ಆರ್ಥಿಕ ವ್ಯವಸ್ಥೆಯೂ ಕೂಡಾ ಹೆಚ್ಚುತ್ತದೆ. ಅಲ್ಲದೇ ಮಹಿಳೆಯರೂ ಕೂಡಾ ಇದರಲ್ಲಿ ತೊಡಗಿಸಿಕೊಳ್ಳಬಹುದು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಪಿ. ಚಿದಂಬರ್ ಹೇಳಿದರು. ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಶ್ರೀ ಮಹಿಷಾಸುರ ಮರ್ಧಿನಿ ಸಭಾಭವನದಲ್ಲಿ ತಾಲೂಕು ಪಂಚಾಯತ್ ಕುಂದಾಪುರ, ತೋಟಗಾರಿಕೆ ಇಲಾಖೆ ಮತ್ತು ರಾಜ್ಯ ವಲಯ ಯೋಜನೆಯ ಜಂಟಿ ಆಶ್ರಯದಲ್ಲಿ ನಡೆದ ರೈತರಿಗೆ ಜೇನುಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೇನುಹುಳುಗಳು ಆಹಾರಕ್ಕಾಗಿ (ಮಕರಂದ) ಹೂವುಗಳನ್ನು ಅರಸುತ್ತಾ ಸುಮಾರು 3-4ಕಿ.ಮಿ ವರೆಗೆ ಸಾಗುತ್ತದೆ. ಪ್ರತಿದಿನ ಬೆಳಗ್ಗೆ 6ರ ಸಮಯದಲ್ಲಿ ಕೆಲಸ ಪ್ರಾರಂಭಿಸುವ ಇವುಗಳಿಗೆ ವಿಶ್ರಾಂತಿ ಎಂಬುದಿಲ್ಲ. ಪರಾಗಸ್ಪರ್ಷವನ್ನು ಜೇನುಹುಳುಗಳಂತೆ ಇತರೇ ಹುಳುಗಳಿಂದ ಸಾಧ್ಯವಾಗದು. ಪರಾಗ ಸ್ಪರ್ಷವಾಗದ ಹೂವುಗಳು ಬಿದ್ದುಹೋಗುತ್ತವೆ. ಇದು ಅಧ್ಬುತ ಶಕ್ತಿ, ಶಿಸ್ತು ಮತ್ತು ಸಮಯಪಾಲನೆಯ ಗುಣಗಳನ್ನು ಅಳವಡಿಸಿಕೊಂಡಿದೆ. ತನ್ನ ಕಾಯಕದ ಹೊರತಾಗಿ ಬೇರೆನೂ ಯೋಚಿಸದೆ ಕೆಲಸ ಪರಿಪೂರ್ಣಮಾಡಿ ಮುಗಿಸುವ ಹಾಗೂ ಮನುಷ್ಯರಿಗೂ…
ದೃಶ್ಯ ಕಾವ್ಯ ತಂಡ ಪ್ರಥಮ – ಭಾಷ್ ಲಲಿತಾಕಲಾ ಸಂಘ ತಂಡ ದ್ವಿತೀಯ ಮುಂಬಯಿ: ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯು ಆಯೋಜಿಸಿದ್ದ 20ನೇ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆಯು ತೆರೆ ಕಂಡಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿ ‘ಸೂರ್ಯಾಸ್ತದಿಂದ ಸೂರ್ಯೋದಯದ ವರೆಗೆ’ ನಾಟಕ ಪ್ರದರ್ಶಿಸಿದ ದೃಶ್ಯ ಕಾವ್ಯ ತಂಡ ಬೆಂಗಳೂರು ಪ್ರಥಮ ಸ್ಥಾನ ಗಳಿಸಿತು. ‘ಪದ್ಮಪಾಣಿ’ ನಾಟಕ ಪ್ರದರ್ಶಿಸಿದ ಭಾಷ್ ಲಲಿತಾಕಲಾ ಸಂಘ ಬೆಂಗಳೂರು (ಸಮನ್ವಯ) ತಂಡವು ದ್ವಿತೀಯ ಸ್ಥಾನ ಮತ್ತು ‘ಅರಗಿನ ಬೆಟ್ಟ’ ನಾಟಕ ಪ್ರದರ್ಶಿಸಿದ ಭೂಮಿಕಾ ಹಾರಾಡಿ (ಉಡುಪಿ) ತಂಡವು ತೃತಿಯ ಬಹುಮಾನ ತನ್ನದಾಗಿಸಿತು. ಕಳೆದ ಮಾಟುಂಗ ಪಶ್ಚಿಮದಲ್ಲಿನ ಸಂಘದ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಚಂದನವಾಹಿನಿ ಕಾರ್ಯಕ್ರಮ ನಿರ್ಮಾಪಕ, ನಾಡಿನ ಪ್ರಸಿದ್ಧ ಕವಿ ಶ್ರೀಸುಬ್ಬು ಹೊಲೆಯಾರ್ ಅಧ್ಯಕ್ಷತೆಯಲ್ಲಿ ನಾಟಕೋತ್ಸವ ಸ್ಪರ್ಧಾ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹೆಸರಾಂತ ರಂಗ ನಿರ್ದೇಶಕ ವಸಂತ ಬನ್ನಾಡಿ ಮತ್ತು ಸಂಘದ ಗೌರವ ಕೋಶಾಧಿಕಾರಿ ಬಿ.ಜಿ ನಾಯಕ್ ವಿಜೇತ ತಂಡಗಳಿಗೆ ಬಹುಮಾನ…
ಗಂಗೊಳ್ಳಿ: ವಿವೇಕಾನಂದರನ್ನು ಒಂದು ಧರ್ಮದ ರಾಯಭಾರಿಯಂತೆ ಮಾತ್ರ ನೋಡುವುದು ಮೂರ್ಖತನ. ಕುವೆಂಪುರವರು ಹೇಳಿದಂತೆ ಅವರು ವಿಶ್ವಸನ್ಯಾಸಿ. ಅವರು ಮಾನವೀಯತೆಯ ನೆಲೆಯಲ್ಲಿ ಧರ್ಮವನ್ನು ಪ್ರತಿಪಾದಿಸಿದ ಶ್ರೇಷ್ಠ ವಿಶ್ವಮಾನವ. ಎಂದು ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅವರು ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ವಿವೇಕಧಾರೆ ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ವಿವೇಕಾನಂದರು ಹೇಳಿದಂತೆ ಅಂಧಾನುಕರಣೆ ಸರಿಯಲ್ಲ. ಅನುಕರಣೆ ಎನ್ನುವುದು ಅವನತಿಯ ಚಿಹ್ನೆ, ಹಾಗಾಗಿ ಎಲ್ಲಾ ಮಹಾತ್ಮರ ವಿಚಾರಗಳನ್ನು ಅಧ್ಯಯನ ಮಾಡಿ ನಮ್ಮದೇ ಆದ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅಂತರಾಷ್ಟ್ರೀಯ ಖ್ಯಾತಿಯ ವೇಯ್ಟ್ ಲಿಫ್ಟರ್ ಕೆನರಾ ಬ್ಯಾಂಕ್ ಗಂಗೊಳ್ಳಿಯ ಉಪ ಪ್ರಬಂಧಕರಾದ ಅಶೋಕ್ ಅವರು ದೀಪ ಬೆಳಗಿಸಿ ವಿವೇಕ ಸಪ್ತಾಹವನ್ನು ಉದ್ಘಾಟಿಸಿದರು.ಆಂಗ್ಲಭಾಷಾ ಉಪನ್ಯಾಸಕ ಥಾಮಸ್ ಪಿ.ಎ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಆಶಾ ಪ್ರಾರ್ಥಿಸಿದರು. ತಿರುಮಲೇಶ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಮನಿಷಾ ಪೂಜಾರಿ ಕಾರ‍್ಯಕ್ರಮ ನಿರೂಪಿಸಿದರು.ಯಶಸ್ವಿ ಧನ್ಯವಾದ ಅರ್ಪಿಸಿದರು.
ಕುಂದಾಪ್ರ ಡಾಟ್ ಕಾಂ. ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಹವಾ ಸಾಮಾನ್ಯವಾದುದಲ್ಲ! ಎಲ್ಲೆಡೆಯೂ ಅವರದ್ದೊಂದು ಸಣ್ಣ ಪ್ರಭಾವ ಕಾಣಿಸಿಕೊಳ್ಳುತ್ತೆ ಅನ್ನೊದು ಮತ್ತೊಮ್ಮೆ ಸಾಬೀತಾಗಿದೆ. ಇತ್ತಿಚಿಗೆ ತೆರೆಕಂಡ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರದಲ್ಲೂ ಹುಚ್ಚಾ ವೆಂಕಟ್ ಶೈಲಿ ಜೋರಾಗಿಯೇ ಸದ್ದು ಮಾಡಿದೆ. ಚಿತ್ರದ ಒಂದು ಸನ್ನಿವೇಶದಲ್ಲಿ ನಟಿ ಅಮೂಲ್ಯಾಗೆ ಚಿಕ್ಕ ಹುಡುಗಿಯೊಬ್ಬಳು ಅವಾಜ್ ಹಾಕುವ ದೃಶ್ಯ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಿದೆ. ಮುದ್ದು ಹುಡುಗಿ ಹುಚ್ಚಾ ವೆಂಕಟ್ ಶೈಲಿಯಲ್ಲಿ ಮಾತನಾಡಿರುವ ರೀತಿ ಪ್ರೇಕ್ಷಕರು ಬಿದ್ದು ಬಿದ್ದು ನಗುವಂತೆ ಮಾಡಿದೆ. ಅಂದ ಹಾಗೆ ಕವಿರಾಜ್ ನಿರ್ದೇಶನದ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿ. ಈಗ ಒಮ್ಮೆ ಕೆಳಗಿನ ವೀಡಿಯೋ ಪ್ಲೇ ಮಾಡಿ ನೋಡಿ… Download our Mobile App for Android phone- https://play.google.com/store/apps/details?id=com.kundapra.news
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಐದನೇ ಪರ್ಯಾಯೋತ್ಸವದ ಅಂಗವಾಗಿ ಕುಂದಾಪುರ ತಾಲೂಕಿನ ಭಕ್ತರು ಅಪಾರ ಪ್ರಮಾಣದ ಹೊರೆಕಾಣಿಕೆ ಸಲ್ಲಿಸಿದ್ದಾರೆ. ಇದರ ನಡುವೆ ತಾಲೂಕಿನ ಮೂಡುಗೋಪಾಡಿಯ ಮುಸ್ಲಿಂ ಬಂಧುಗಳೂ ಸಹ ಹೊರೆ ಕಾಣಿಕೆಯನ್ನು ಸಲ್ಲಿಸುವ ಮೂಲಕ ಧರ್ಮ ಸೌಹಾರ್ದತೆಯನ್ನು ಮೆರೆದಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಉಡುಪಿ ಜಿಲ್ಲೆಯ ಮುಸ್ಲಿಂ ಸಂಘಟನೆಗಳು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವ ಕುರಿತಂತೆ ಇತ್ತಿಚಿಗೆ ತಿಳಿಸಿತ್ತು. ಅದರಂತೆ ಮೂಡುಗೋಪಾಡಿ ಮಸೀದಿಯ ಪರವಾಗಿ ಪರ್ಯಾಯಕ್ಕೆ ಹೊರೆಕಾಣಿಕೆ ಸಲ್ಲಿಸಲಾಯಿತು. ಧರ್ಮವೈಷಮ್ಯಗಳೇ ವಿಜೃಂಭಿಸುವ ಕಾಲಘಟ್ಟದಲ್ಲಿ ಮುಸ್ಲಿಂ ಬಂಧುಗಳ ಈ ಸೌಹಾರ್ದ ನಡೆ ಧರ್ಮ ಸಹಿಷ್ಟುಗಳ ಮೆಚ್ಚುಗೆಗೆ ಪಾತ್ರವಾಯಿತು. ಗೋಪಾಡಿಯ ಮುಸ್ಲಿಂ ಸಮುದಾಯದ ಮುಖಂಡರಾದ ಬಿ. ಎ. ಮೊಹಮ್ಮದ್, ಅದಮ್ ಸಾಹೆಬ್, ಬಿ.ಎಂ. ಹಂಝಾ, ರಫಿಕ್, ಅಬ್ದುಲ್ ಖಾದರ್, ಸಿದ್ದಿಕ್ ಹೊರೆಕಾಣಿಕೆ ಸಲ್ಲಿಕೆಯ ನೇತೃತ್ವ ವಹಿಸಿದ್ದರು. ಕುಂದಾಪುರ ಡಿಎಸ್ಪಿ ಮಂಜುನಾಥ ಶೆಟ್ಟಿ ಎಸ್ಐ ನಾಸಿರ್ ಹುಸೆನ್, ಗೋಪಾಡಿ ಗ್ರಾ.ಪಂ ಉಪಾಧ್ಯಕ್ಷ ವೈಲೆಟ್ ಬರೆಟ್ಟೊ,…
ಬೈಂದೂರು: ಎಲ್ಲೊ ಇರುವವರನ್ನು ನಮ್ಮವರು ಎಂದು ಒಪ್ಪಿಕೊಳ್ಳುವ, ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಹುಟ್ಟಿಸಬಲ್ಲ ಶಕ್ತಿ ಇರುವುದು ಸಂಸ್ಕೃತಿಗೆ ಮಾತ್ರ. ಭೌಗೋಳಿಕ ಸೀಮಾರೇಖೆ, ರಾಜಕೀಯ ಯಾವುದೂ ಕೂಡ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಕಟ್ಟಿಕೊಡಲಾರವು. ಸಂಸ್ಕೃತಿಯಲ್ಲಿ ಮಾತ್ರ ಈ ಭಾಂದವ್ಯ ಕಾಣಲು ಸಾಧ್ಯ. ಈ ಭಾಂದವ್ಯ ಅಳಿದರೇ ಒಂದು ಎಂಬ ಭಾವನೆಗೆ ಧಕ್ಕೆ ಬರಲಿದೆ ಎಂದು ಹಿರಿಯ ವಿಮರ್ಶಕ ಎ. ಈಶ್ವರಯ್ಯ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಇದರ 16ನೇ ವರ್ಷದ ಸಂಭ್ರಮ ’ಸುರಭಿ ಜೈಸಿರಿ’ಯಲ್ಲಿ ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿ ಅನಾದಿ ಕಾದಿಂದಲೂ ಬಂದ ಈ ಸಾಂಸ್ಕೃತಿಕ ಪರಂಪರೆಯನ್ನು, ಸಂಸ್ಕೃತಿಯ ಮೂರ್ತರೂಪವಾದ ಕಲೆ ಸಾಹಿತ್ಯ ಸಂಗೀತ ಮುಂತಾದವುಗಳ ಮೂಲಕ ಉಳಿಸಿಕೊಳ್ಳುವುದು ನಮ್ಮ ಮುಂದಿನ ಸವಾಲು. ಆ ಕೆಲಸವನ್ನು ಮಾಧ್ಯಮಗಳೋ, ಸಾಂಸ್ಕೃತಿಕ ಚಿಂತಕರೋ ಮಾಡುತ್ತಾರೆಂಬ ಭ್ರಮೆ ಬೇಡ. ಕಲಾ ಸಂಸ್ಥೆಗಳಲ್ಲಿ ಇಂತಹ ಚಿಂತನೆ ಮೊಳೆತು ಸಂಸ್ಕೃತಿಯ ಉಳಿವಿನ ಕೆಲಸ ಸುಗಮವಾಗಲಿ ಎಂದು ಆಶಿಸಿದರು. ಕಲೆಯ ವಿಕಾಸವಾಗುವುದರೊಂದಿಗೆ ತನ್ನ ಮೂಲರೂಪವನ್ನು ಉಳಿಸಿಕೊಳ್ಳಬೇಕು. ಬದಲಾವಣೆಗಾಗಿ…
