Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಪಿಜಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನದ ಅಂಗವಾಗಿ ನಡೆದ ನಾಯಕತ್ವ ತರಬೇತಿ ಕಾರ್ಯಾಗಾರ ನಡೆಯಿತು. ಮುಖ್ಯ ಅತಿಥಿಯಾಗಿ ಖೋ ಖೋ ಆಟಗಾರ ಮಂಜುನಾಥ್ ಮಾತನಾಡಿ, ಸದಾ ಸಕಾರಾತ್ಮಕ ಚಿಂತನೆಯಿಂದ ಯುವಕರನ್ನು ಪ್ರೋತ್ಸಾಹಿಸಬೇಕು. ಹಾಗೆಯೇ, ಮಾನಸಿಕ ಹಾಗೂ ದೈಹಿಕ ಶಿಕ್ಷಣಕ್ಕೆ ಮಹತ್ವ ಕೊಡಬೇಕು. ಶಿಕ್ಷಣದ ಮೂಲಕ ಮಾನವೀಯತೆ ವಿಕಸನವಾಗುವುದಲ್ಲದೆ, ಧರ್ಮ ಮತ್ತು ವಿಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸಿದಾಗ ಲೌಕಿಕ ಸಂಪತ್ತು ವೃದ್ಧಿಗೊಳ್ಳುತ್ತದೆ. ವಿದ್ಯೆಯನ್ನು ಕಲಿತವರು ಬಡವರನ್ನು ನಿರ್ಲಕ್ಷ್ಯ ಮಾಡಿದರೆ ಅವರು ದೇಶ ದ್ರೋಹಿಗಳಿಗೆ ಸಮಾನ. ವ್ಯವಸಾಯವನ್ನು ಉದ್ಯೋಗವನ್ನಾಗಿಸಿ, ಕೃಷಿ ಕಾರ್ಮಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದರು. ಕಾರ್ಯಾಗಾರದ ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ ಕ್ರಿಕೆಟ್‌ಪಟು ವಿಷ್ಣುಚೈತನ್ಯ ಮಾತನಾಡಿ, ಉತ್ತಮ ಭವಿಷ್ಯಕ್ಕಾಗಿ ಜಾಗೃತಿ ಮೂಡಿಸಿ, ಯುವಜನತೆಯಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಚಾರಿತ್ರ್ಯ ನಿರ್ಮಾಣದ ಕಡೆಗೆ ಗಮನ ಹರಿಸುವಂತೆ ಮಾಡುವುದು ರಾಷ್ಟೀಯ ಯುವ ದಿನಾಚರಣೆಯ ಮುಖ್ಯ ಉದ್ದೇಶ. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿ ಜನಪದ ಕ್ರೀಡೆ ಕಂಬಳದಲ್ಲಿ ಕೋಣಗಳನ್ನು ಕೇವಲ 9.15 ಸೆಂಕೆಡುಗಳಲ್ಲಿ 100 ಮೀಟರ್ ಓಡಿಸಿರುವ ಬೈಂದೂರು ತಾಲೂಕಿನ ನಾಯ್ಕನಕಟ್ಟೆಯ ಯುವಕ ದಾಖಲೆ ನಿರ್ಮಿಸಿದ್ದಾರೆ. ಐಕಳ ಕಾಂತಾಂಬಾರೆ-ಬೂದಾಬಾರೆಯಲ್ಲಿ ನಡೆದ ಕಂಬಳದಲ್ಲಿ ವಿಶ್ವನಾಥ ದೇವಾಡಿಗ ಈ ದಾಖಲೆ ಮಾಡಿದ್ದಾರೆ. ಈ ಹಿಂದೆ ಸುರೇಶ್ ಶೆಟ್ಟಿ 100 ಮೀಟರ್ ದೂರವನ್ನು 9.37 ಸೆಕೆಂಡ್, ಶ್ರೀನಿವಾಸ ಗೌಡ 9.55 ಸೆಕೆಂಡ್, ಆನಂದ 9.57 ಸೆಂಕೆಡುಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದರು. ಶನಿವಾರ ನಡೆದ ಕಂಬಳದಲ್ಲಿ ಈ ಹೊಸ ದಾಖಲೆ ನಿರ್ಮಾಣವಾಗಿದೆ. ಕಂಬಳದ ಚಾನ್ಸ್ ಓಟದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ಅವರ ಬೊಳ್ಳ ಮತ್ತು ದೋನಿ ಕೋಣಗಳನ್ನು ವಿಶ್ವನಾಥ್ ಅವರು ಓಡಿಸಿದ್ದು 125 ಮೀ. ದೂರವನ್ನು 11.44 ಸೆಕೆಂಡುಗಳಲ್ಲಿ ಓಡಿದ್ದಾರೆ. ಈ ಸಮಯವನ್ನು 100 ಮೀ.ಗೆ ಹೋಲಿಕೆ ಮಾಡಿದರೆ 9.15 ಸೆಕೆಂಡ್ ಆಗಲಿದೆ. ಈ ಸುತ್ತು ಆಟೋ ಸ್ಟಾರ್ಟ್ ಮತ್ತು ಸೆನ್ಸಾರ್ ಮೂಲಕವೇ ನಿರ್ಧರಿಸಲಾಗಿದ್ದು, ಇದರಿಂದ ಹೊಸ ದಾಖಲೆದೆ ಸೇರ್ಪಡೆಯಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಂಗ ಸಂಸ್ಥೆಗಳಾದ ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಶಾಲೆ, ವಿ.ಕೆ. ಆರ್ ಹೈಸ್ಕೂಲ್, ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು ಮತ್ತು ಡಾ ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ 25 ವರ್ಷಗಳ ಕಾಲ ಕಛೇರಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದಿದ ಅಣ್ಣಪ್ಪ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಕಛೇರಿ ಮೇಲ್ವಿಚಾರಕರಾದ ಗಾಯತ್ರಿ ಶೇಟ್, ಸಿಬ್ಬಂದಿ ಸಂಘದ ಕಾರ್ಯದರ್ಶಿ ಸತೀಶ್ ಕಾಂಚನ್ ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕರುಗಳಾದ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕು. ಧನಶ್ರೀ ಮಾಧವ ಕಿಣಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ದಿನದಲ್ಲಿ ಯುವಕರಿಂದ ಹಾದಿ ತಪ್ಪುವ ಕೆಲಸಗಳಾಗುತ್ತಿದೆ. ಇತಂಹ ಕಾಲಘಟ್ಟದಲ್ಲಿ ಸಾರ್ವಜನಿಕರ ಸೇವೆಗಾಗಿ ಕರಾವಳಿ ಫ್ರೆಂಡ್ಸ್ ಎಂಬ ಯುವ ಸಂಘಟನೆ ಸಮಾಜಕ್ಕೆ ಮಾದರಿ ಕೆಲಸಗಳನ್ನು ನೀಡುವ ಮೂಲಕ ಬೀಚ್ ಗಾರ್ಡನ್ ಕೊಡುಗೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ಸಂಘಟನೆ ನಮ್ಮ ಭಾಗದ ದೊಡ್ಡ ಆಸ್ತಿ ಎಂದು ಬೀಜಾಡಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು. ಅವರು ಬೀಜಾಡಿ ಕರಾವಳಿ ಫ್ರೆಂಡ್ಸ್ ಇವರ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಅಂಗವಾಗಿ ದಾನಿಗಳ ಸಹಕಾರದಿಂದ ಕೊಡುಗೆಯಾಗಿ ನೀಡಿದ ಬೀಚ್ ಗಾರ್ಡನ್ ಉದ್ಘಾಟಿಸಿ ಮಾತನಾಡಿದರು. ಉದ್ಯಮಿ ಸುರೇಶ್ ಬೆಟ್ಟಿನ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಲಯ ಅರಣ್ಯಧಿಕಾರಿ ಲೋಹಿತ್ ಸಸಿನೆಟ್ಟು ವನಪಾರ್ಕ್‌ಗೆ ಚಾಲನೆ ನೀಡಿದರು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಳದ ಆಡಳಿತ ಮಂಡಳಿ ಮಾಜಿ ಸದಸ್ಯ ಅಶೋಕ್ ಪೂಜಾರಿ ವಡ್ಡಿನಮನೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯ ಶೇಖರ ಚಾತ್ರಬೆಟ್ಟು, ಕುಂದಾಪುರ ಸನ್‌ರೈಸ್ ರೋಟರಿ ಅಧ್ಯಕ್ಷೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹೊಸ ದೆಹಲಿಯ ಭಾರತೀಯರ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ರಜನಿ ನಾವಡ ಉತ್ತೀರ್ಣರಾಗಿದ್ದಾರೆ. ಕುಂದಾಪುರದ ಯಜ್ಞ ಪಿ. ಮಯ್ಯ ಅವರಲ್ಲಿ ಆರ್ಟಿಕಲ್ ಶಿಪ್ ತರಬೇತಿ ಪಡೆದಿರುವ ಇವರು ಕುಂದಾಪುರದ ರಮೇಶ್ ನಾವಡ ಮತ್ತು ಜಯಂತಿ ನಾವಡ ಇವರ ಪುತ್ರಿಯಾಗಿರುತ್ತಾರೆ .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪೇಟೆಯ ಮುಖ್ಯ ರಸ್ತೆಗೆ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಹೆಸರಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಕುಂದಾಪುರ ಪುರಸಭಾ ಅದ್ಯಕ್ಷರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ. ಕುಂದಾಪುರದ ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕೆನ್ನುವ ಬೇಡಿಕೆಯನ್ನು ಹಲವಾರು ಬಾರಿ ಈ ಹಿಂದೆ ಸಲ್ಲಿಸಲಾಗಿತ್ತು ಇದೀಗ ಕುಂದಾಪುರ ಪೇಟೆಯ ಮುಖ್ಯ ರಸ್ತೆಗೆ ಗಣ್ಯರ ಹೆಸರಿಡುವ ಪ್ರಸ್ತಾವನೆ ಪುರಸಭೆಯ ಮುಂದಿದ್ದು ತಾಲೂಕಿನಲ್ಲಿರುವ ಅಂಬೇಡ್ಕರ್ ಭವನವೊಂದು ಬಿಟ್ಟರೆ ಬೇರೆ ಯಾವುದೇ ಒಂದು ಸರಕಾರಿ ಸಂಸ್ಥೆಗಾಗಲಿ ರಸ್ತೆಗಾಗಲಿ ಈತನಕ ಅಂಬೇಡ್ಕರ್ ಹೆಸರಿಟ್ಟಿರುವ ಉದಾಹರಣೆಗಳೇ ಇಲ್ಲ ಆದ್ದರಿಂದ ಕುಂದಾಪುರ ಪೇಟೆಯ ಮುಖ್ಯ ರಸ್ತೆಗೆ ಸಂವಿಧಾನ ಶಿಲ್ಪಿ ಯ ಹೆಸರಿಡುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಆಗ್ರಹಿಸಲಾಗಿದೆ ಅಂಬೇಡ್ಕರ್ ಹೆಸರನ್ನು ಕಡೆಗಣಿಸಿ ಬೇರಾವುದೇ ಹೆಸರಿಡಲು ಮುಂದಾದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಈ ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ– 66ರಲ್ಲಿನ ಚತುಷ್ಪಥ ಕಾಮಗಾರಿಯ ಸ್ಥಿತಿ- ಗತಿಯನ್ನು ನೋಡಿದರೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆ ಕಂಪನಿ ಸರ್ಕಾರಗಳಿಗಿಂತಲೂ ಬಲವಾಗಿ ಬೆಳೆದಿದೆಯೇ ಎನ್ನುವ ಭಾವನೆ ಬಲವಾಗುತ್ತಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ದೊಡ್ಡ ವೈಫಲ್ಯದಿಂದಾಗಿ ಇಲ್ಲಿನ ಜನ ನಿತ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸ್ತ್ರಿ ಸರ್ಕಲ್‍ನಿಂದ ವಿನಾಯಕವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಬಸ್ರೂರು ಮೂರುಕೈ ಹಾಗೂ ಟಿ.ಟಿ ರಸ್ತೆಯ ಸಮೀಪ ನಿರ್ಮಾಣವಾಗಿರುವ ಅಂಡರ್ಪಾಸ್ ತೆರವು ಹಾಗೂ ಕೆಇಬಿ ಸಮೀಪದ ಬೊಬ್ಬರ್ಯನ ಕಟ್ಟೆ ಬಳಿ ಪಾದಚಾರಿ ಸಂಚಾರಕ್ಕಾಗಿ ಜೀಬ್ರಾ ಕ್ರಾಸಿಂಗ್ ನಿರ್ಮಾಣಕ್ಕೆ ಒತ್ತಾಯಿಸಿ ತಾಲ್ಲೂಕು ಡಿವೈಎಫ್ಐ ನೇತೃತ್ವದಲ್ಲಿ, ತಾಲ್ಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು ) ಹಾಗೂ ವಿವಿಧ ಸಂಘಟನೆಳು ಜತೆಯಾಗಿ ನಡೆಸಿದ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹದಲ್ಲಿ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನೋವಿಜ್ಞಾನ ವಿಭಾಗದ ವತಿಯಿಂದ ‘ಪರ್ಸನಲ್ ಎಫೆಕ್ಟಿವ್‌ನೆಸ್’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೈನ್ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ. ಶೈಲಜಾ ಶಾಸ್ತ್ರೀ ಮಾತನಾಡಿ, ನಾವು ಇನ್ನೊಬ್ಬರ ಮಾತಿಗೆ ಅವಲಂಬಿತರಾಗದೆ, ಸ್ವ ಆಲೋಚನೆಯಿಂದ ಕೆಲಸ ಮಾಡಿದಾಗ ಮಾತ್ರ ಸ್ವಾವಲಂಬಿಯಾಗಿ ಬೆಳೆಯಲು ಸಾಧ್ಯ ಎಂದರು. ಸ್ಟಾಂಡಿಂಗ್ ಟವರ್, ಮಾಸ್ಕ್ ಮೇಕಿಂಗ್, ಫ್ರೇಮಿಂಗ್ ಸ್ಕ್ವಾರ್, ಲಾಫರ್ ತೆರಪಿ ಎಂಬ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ‘ಪರ್ಸನಲ್ ಎಫೆಕ್ಟಿವ್‌ನೆಸ್’ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ನಾವು ಒಂದು ವಿಷಯದ ಬಗ್ಗೆ ಆಳವಾದ ಯೋಚನೆ, ಭರವಸೆ, ವಿಶ್ವಾಸವನ್ನು ಹೊಂದಿರಬೇಕು. ಮಾತ್ರವಲ್ಲದೇ ಒಳ್ಳೆಯ ಆಲೋಚನೆಗಳನ್ನು ಬೆಳೆಸಿಕೊಂಡು ಆ ಆಲೋಚನೆಗಳನ್ನು ಇನ್ನೊಬ್ಬರಿಗೆ ಹಂಚಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಆಡ್ರಿ ಪಿಂಟೊ, ಉಪನ್ಯಾಸಕರಾದ ಮೇಘಾ ಮನೋಜ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇವರ ಸಹಯೋಗದಲ್ಲಿ  ಕುಂದಾಪುರ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಎ.ವಿ. ಹಾಲ್‌ನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ ನಾರಾಯಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕುಂದಾಪುರ ವಕೀಲ ಟಿ. ಮಂಜುನಾಥ ಗಿಳಿಯಾರು, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ರೇಖಾ ವಿ. ಬನ್ನಾಡಿ ಉಪಸ್ಥಿತರಿದ್ದರು. ರೋಹಿಣಿ ಶರಣ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ ಆಸ್ಪತ್ರೆಗಳಲ್ಲಿ ಸ್ವಾಬ್ ಪರೀಕ್ಷೆ ಕಡಿಮೆಯಾಗುತ್ತಿದ್ದು, ಐಎಲ್‌ಐ, ವರದಿ ಸರಿಯಾಗಿ ನಿರ್ವಹಿಸದೇ ಇರುವ ಹಾಗೂ ಹೊರರೋಗಿ ವಿಭಾಗದ ನೋಂದಣಿಯನ್ನು ನಿರ್ವಹಿಸದ ಮತ್ತು ದರಪಟ್ಟಿಯನ್ನು ಪ್ರದರ್ಶಿಸದೇ ಇರುವ ಖಾಸಗಿ ಆಸ್ಪತ್ರೆಗಳ ಮಾನ್ಯತೆಯನ್ನು ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು. ಅವರು, ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಯವರ ಕಚೇರಿಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಖಾಸಗಿ ವೈದ್ಯಕೀಯ ನೊಂದಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಲಸಿಕೆಯನ್ನು ಎಲ್ಲಾ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲೆಯು ಎಲ್ಲಾ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಲಸಿಕಾ ಕಾರ್ಯಕ್ರಮದಲ್ಲಿಯೂ ಕೂಡ ಈ ಸ್ಥಾನವನ್ನು ಕಾಯ್ದುಕೊಳ್ಳುವಂತೆ ಅವರು ತಿಳಿಸಿದರು. ಖಾಸಗಿ ಕ್ಲಿನಿಕ್‌ಗಳಲ್ಲಿ ಕೋವಿಡ್‌ಗೆ ಸಂಬಂಧಿಸಿದ ಐಎಲ್‌ಐ, ವರದಿಗಳನ್ನು ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ಅವರನ್ನು ಸ್ವಾಬ್ ಪರೀಕ್ಷೆಗೆ ಒಳಪಡಿಸದೇ ಇದ್ದಲ್ಲಿ ಅಂತವರ ಕ್ಲಿನಿಕ್ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದರು. ಸಭೆಯಲ್ಲಿ ಡಿಹೆಚ್‌ಓ ಡಾ.…

Read More