ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ.ರಾ.ಅ.ಪ. ಗುತ್ತಿಗೆ ವಿದ್ಯುತ್‌ದಾರರ ಸಂಘದಿಂದ ಸರ್ವ ಸದಸ್ಯರ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜನ್ಮ ದಿನದ ಪ್ರಯುಕ್ತ ಹುಂಚಾರುಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಮಹಾತ್ಮ ಗಾಂಧಿಜೀ ಹಾಗೂ ಶಾಸ್ತ್ರಿಜೀ ಅವರ ಪುತ್ತಲಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ ಉಡುಪಿ ಜಿಲ್ಲಾ ಉಪದ್ಯಕ್ಷರು ಶ್ರೀಕಾಂತ ಶೆಣ್ಯ್, ರಾಜ್ಯ ಸಮಿತಿಯ ಸದಸ್ಯ ಪ್ರಭಾಕರ್ ರಾವ್, ಅದ್ಯಕ್ಷರಾದ ಶೇಖರ್ ಪೂಜಾರಿ, ಉಪಾದ್ಯಕ್ಷರಾದ ಜಯಂತ ಶೆಟ್ಟಿ ಅಜ್ರಿ , ಕಾರ್ಯದರ್ಶಿ ವಿಜಯಕುಮಾರ್ ಗೋವಿಂದ, ಖಚಾoಚಿ ರಾಮಕ್ರಿಷ್ಣ ಆಚಾರ್ ಹಾಗೂ ಹಾಜರಿದ್ದ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಂತರ ಸಂಘದ ಕಚೇರಿಯಲ್ಲಿ ಮಾಸಿಕ ಸಾಮಾನ್ಯ ಸಭೆ ನಡೆಯಿತು.