ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ: ಅಭಿನಂದನಾ ಸಮಾರಂಭ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ತಮ್ಮ ಸಾರ್ಥಕ ಸೇವೆಯನ್ನು ಪೂರೈಸಿ ನಿವೃತ್ತಿ ಹೊಂದಿದ ಹಿಂದಿ ಶಿಕ್ಷಕಿ ಫೆಲ್ಸಿಯಾನ ಡಿ’ಸೋಜರವರನ್ನು ಸನ್ಮಾನಿಸಲಾಯಿತು. ಹಾಗೇಯೆ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿ ಸಾಧನೆ ಮಾಡಿದ ಶ್ರೇಯಾ ಮೇಸ್ತ, ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 9 ವಿದ್ಯಾರ್ಥಿಗಳಾದ ಅನನ್ಯ ಬಿ, ಶಶಿಕಾಂತ, ಅಮಿಷ, ಸಂಜಯ್, ಸ್ವಾತಿ,ಸಿಂಚನ ಬಿ , ಸುಶಾಂತ್, ಆದಿತ್ಯ, ಸ್ವಪ್ನ ಇವರೊಂದಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಗೌರವ ಪಡೆದ ಒಟ್ಟು 7 ವಿದ್ಯಾರ್ಥಿಗಳಾದ ಪ್ರೀತಿ, ರಶ್ಮಿತಾ, ಅನನ್ಯ, ಸ್ವಪ್ನ, ಅನ್ಸಿಟಾ, ರಶ್ಮಿತಾ, ರೂಪ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Call us

Click Here

ಮುಖ್ಯ ಅತಿಥಿಗಳಾದ ಭ. ವೈಲೆಟ್ ಮಾತನಾಡಿ ಹಿಂದಿ ಶಿಕ್ಷಕಿಯವರ ಅಮೂಲ್ಯ ಸೇವೆಯನ್ನು ಕೊಂಡಾಡಿದರು. ಈ ಸಂದರ್ಭ ಧರ್ಮಗುರುಗಳು ಆಶೀರ್ವಚನ ನುಡಿದರು. ಭ. ಡೋರಿನ್, ಜಾನ್ ಡಿ’ಸೋಜಾ, ಉಮೇಶ್ ಕರ್ಣಿಕ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ್, ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು. ಶಿಕ್ಷಕಿ ಶಾಂತಿ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು ಮತ್ತು ವಂದಿಸಿದರು.

Leave a Reply