Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವೀಡಿಯೋ ಏಳೇಳು ಜನ್ಮನೂ ಹುಟ್ಟಿ ಬರೋ ಹಾಗಿದ್ರೆ ಯೋಧನ ಹೆಂಡತಿಯಾಗಿ ಹುಟ್ಟಿ ಬರಲು ಇಷ್ಟ ಪಡ್ತೆನೆ. ಹೀಗೆ ಆತ್ಮಸ್ಥೈರ್ಯದಿಂದ ಹೇಳಿದವರು ಭಾರತದ ಹುತಾತ್ಮ ಯೋಧ ಲ್ಯಾನ್ಸ್ ಹನುಮಂತಪ್ಪ ಕೊಪ್ಪದ ಅವರ ಮಡದಿ ಮಾದೇವಿ ಕೊಪ್ಪದ. ತಮ್ಮ ಮಗಳನ್ನು ಸೈನ್ಯಕ್ಕೆ ಸೇರಿಸುವುದೇ ನನ್ನ ಗುರಿ ಎಂದಿದ್ದ ಈ ದಿಟ್ಟ ಮಹಿಳೆ ಬೈಂದೂರಿನ ಉಪ್ಪುಂದದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತುಗಳಿವು. ಕೆಳಗಿನ ವೀಡಿಯೋ ನೋಡಿ. ಕುಂದಾಪ್ರ ಡಾಟ್ ಕಾಂ ವೀಡಿಯೋ

Read More

ಕುಂದಾಪುರ: ಹುಟ್ಟಿದ ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ವಿಶೇಷತೆ ಅಡಗಿರುತ್ತದೆ. ಆಟ ಪಾಠ ಮೊದಲಾದ ಚಟುವಟಿಕೆಗಳಿಂದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಬಹುದಾಗಿದೆ. ಅವರ ಆಸಕ್ತಿಯ ಕ್ಷೇತ್ರದಲ್ಲಿ ತೋರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಸಾಧನೆಯ ಹಾದಿಯಲ್ಲಿ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಲು ಪ್ರೇರಣೆ ಸಿಕ್ಕಂತಾಗುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಹೇಳಿದರು ಅವರು ಜಿಲ್ಲಾ ಪಂಚಾಯತ್ ಸಾರ್ವಜಿನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘ ಮತ್ತು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಿನಕರ ಆರ್. ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ರೋಟರಿ ಕ್ಲಬ್ ಕುಂದಾಪುರ ಸೌತ್…

Read More

ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲೆಯಾಗಿ ಕವಿತಾ ಎಮ್ ಸಿ ಅವರು ಕಳೆದ ಮಂಗಳವಾರ ಅಧಿಕಾರ ವಹಿಸಿಕೊಂಡರು.ಮಾಜಿ ಪ್ರಾಂಶುಪಾಲರಾದ ಆರ್ ಎನ್ ರೇವಣ್‌ಕರ್ ಕವಿತಾರಿಗೆ ಪುಷ್ಪ ಗುಚ್ಛವನ್ನು ನೀಡುವ ಮುಖೇನ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ನಾಗರಾಜ ಶೆಟ್ಟಿ, ವೆಂಕಟೇಶ ಮೂರ್ತಿ, ಸುಜಯೀಂದ್ರ ಹಂದೆ,ಸುಗುಣ ಆರ್, ಶಾಲೆಟ್ ಲೋಬೊ,ಕೃಷ್ಣ ಗುಜ್ಜಾಡಿ,ನರೇಂದ್ರ ಎಸ್ ಗಂಗೊಳ್ಳಿ, ಕಛೇರಿ ಸಿಬ್ಬಂದಿಗಳಾದ ಭಾಸ್ಕರ ಎಚ್ ಜಿ, ರಾಜೀವ ,ಯಮುನಾ,ನಮಿತಾ ಮತ್ತು ಶ್ರೀಧರ ಗಾಣಿಗ ಉಪಸ್ಥಿತರಿದ್ದರು.ಕಾಲೇಜಿನ ಆಡಳಿತ ಮಂಡಳಿ ನೂತನ ಪ್ರಾಂಶುಪಾಲರನ್ನು ಅಭಿನಂದಿಸಿದೆ. ವರದಿ: ನರೇಂದ್ರ ಎಸ್ ಗಂಗೊಳ್ಳಿ.

Read More

ಹಳ್ಳಿಹೊಳೆ: ಆಧುನಿಕ ಶಿಕ್ಷಣ ಪದ್ಧತಿಯನ್ನು ಹಳ್ಳಿಹೊಳೆಯಂತಹ ತೀರಾ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಅಳವಡಿಸಿಕೊಂಡು ಪರಿಸರದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶವನ್ನು ಕಲ್ಪಿಸಿರುವುದು ಪ್ರಶಂಸನೀಯ. ಉತ್ತಮ ತಂತ್ರಜ್ಞಾನದಿಂದ ಗುಣಮಟ್ಟದ ಶಿಕ್ಷಣ ಉಪಯುಕ್ತ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದ್ದು, ವಿಧ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಲಿ ಉತ್ತಮ ಶಿಕ್ಷಣದಿಂದ ಉತ್ತಮ ಭವಿಷ್ಯ ನಮ್ಮದಾಗುತ್ತದೆ ಎಂದು ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು. ಅವರು  ರೋಟರಿ ಕ್ಲಬ್ ಕುಂದಾಪುರ ವತಿಯಿಂದ ಹಳ್ಳಿಹೊಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡಮಾಡಿದ ಇ ಲರ್ನಿಂಗ್ ಕಿಟ್ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು. ದಾನಿ ಅಮೇರಿಕಾದ ಸುಧೀರ ಕನ್ನಂತ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡು, ಸ್ವಾಭಿಮಾನದ ಬದುಕನ್ನು ರೂಪಿಸಿಕೊಂಡು ಊರು ಹೆಮ್ಮೆ ಪಡುವಂತ ಕೆಲಸ ಮಾಡುವಂತೆ ಕಿವಿ ಮಾತು ಹೇಳಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದಾನಿ ವೆಂಕಟಾಚಲ…

Read More

ಗಂಗೊಳ್ಳಿ : ನಮ್ಮ ಬಗೆಗೆ ಬೇರೆಯವರ ಅಭಿಪ್ರಾಯಗಳಿಗೆ ಕಿವಿಗೊಡುವ ಮುನ್ನ ನಾವು ನಮ್ಮ ವ್ಯಕ್ತಿತ್ವವನ್ನು ಧನಾತ್ಮಕವಾಗಿ ರೂಪಿಸಿಕೊಳ್ಳುವುದರ ಕಡೆಗೆ ಗಮನವನ್ನು ನೀಡಬೇಕು.ನಮ್ಮ ತಂದೆತಾಯಿಗಳ ಅಂತರಾಳವನ್ನು ಅರಿಯುವ ಸಾಮರ್ಥ್ಯ ನಮ್ಮಲ್ಲಿರಬೇಕು. ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಪ್ರಾಯೋಜಿತ ಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆಯ ಹದಿನೈದನೇ ವರುಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಸೆಲ್ಫಿ ಕ್ಲಿಕ್ಕಿಸಿ ಲೈಕುಗಳನ್ನು ಲೆಕ್ಕ ಹಾಕುವುದು ಸಾಧನೆಯಲ್ಲ. ಸ್ವಂತ ಸಾಧನೆಗಳಿಂದ ನಾವು ಗುರುತಿಸಿಕೊಳ್ಳುವಂತಾಗಬೇಕು. ಹಿರಿಯರ ಆದರ್ಶಗಳನ್ನು ಅನುಸರಿಸಿ ನಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಶ್ರಮಪಡಬೇಕು.ದೇಶಭಕ್ತಿಯ ಸಂಕೇತಗಳನ್ನು ಧರಿಸಿ ಹಂಚಿಕೊಂಡರಷ್ಟೆ ಸಾಲದು. ದೇಶದ ಬಗೆಗೆ ತಿಳಿದುಕೊಳ್ಳುವ ನೈಜ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು. ಶ್ರೀ ಮಾತಾ ಆಸ್ಪತ್ರೆ ಕುಂದಾಪುರದ ಮನೋವೈದ್ಯರಾದ ಡಾ.ಪ್ರಕಾಶ್ ತೋಳಾರ್ ಅಧ್ಯಕ್ಷತೆ ವಹಿಸಿದ್ದರು.ಕುಂದಾಪುರ ಕೈರಾಲಿ ಸುಹೃದ್ವೇದಿಯ ಅಧ್ಯಕ್ಷ ಕೆ.ಪಿ.ಶ್ರೀಶನ್, ಗಂಗೊಳ್ಳಿಯ ಉದ್ಯಮಿ…

Read More

ಕುಂದಾಪುರ: ಕಲಿಕೆಯೊಂದಿಗೆ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ವಿಜ್ಞಾನದೆಡೆಗೆ ಆಸಕ್ತಿ ತಳೆಯಬೇಕಾದ ಅಗತ್ಯತೆ ಇದೆ ಎಂದು ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ್ ಹೇಳಿದರು. ಅವರು ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನಲ್ಲಿ ನಡೆದ ವಿಶ್ವ ವಿಜ್ಞಾನ ದಿನಾಚರಣೆಯನ್ನು ಉದ್ಧೇಶಿಸಿ ಮಾತನಾಡಿದರು. ಸತ್ಯವನ್ನು ಹುಡುಕುವುದೇ ವಿಜ್ಞಾನ ಆದರೆ ಸತ್ಯ, ಸುಳ್ಳು, ನಂಬಿಕೆಯ ನಡುವೆ ವಿಜ್ಞಾನವು ಶೇ.೬೦ ರಷ್ಟು ಅಭಿವೃದ್ಧಿಗೊಂಡಿದ್ದು ಇಂದಿನ ಡಿಜಿಟಲ್ ಪ್ರಪಂಚದ ಮೊದಲೇ ನಮ್ಮ ಮೆದುಳಿನಲ್ಲಿ ಜಿಪಿಎಸ್ ತಂತ್ರಾಂಶದ ವ್ಯವಸ್ಥೆ ಹೊಂದಿರುವ ಬಗ್ಗೆ ಆವಿಷ್ಕಾರಗೊಳಿಸಿದ್ದಾರೆ. ಆದರೆ ಮುಂದುವರಿದ ಆಧುನಿಕತೆಯಲ್ಲಿ ನಮ್ಮಲ್ಲಿರುವ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ.ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪೋಷಕರು ಮಕ್ಕಳು ಕೇಳುವ ಪ್ರಶ್ನೆಯನ್ನು ಸಂರಕ್ಷಣೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಜ್ಞಾನ ಬೆಳಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ ಮೆನೇಜಿಂಗ್ ಟ್ರಸ್ಟಿಗಳಾದ ಎಮ್.ಪ್ರಭಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ…

Read More

ಗಂಗೊಳ್ಳಿ: ಕುಂದಾಪುರ ತಾಲೂಕಿನ ಗಂಗೊಳ್ಳಿಯ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಪ್ರಸಿದ್ದ ಉದ್ಯಮಿ ಎಚ್. ಗಣೇಶ್ ಕಾಮತ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸಹಕಾರಿಯ ಎಚ್.ಎಲ್.ಕಾಮತ್ ಸಭಾಂಗಣದಲ್ಲಿ ಚುನಾವಣಾಧಿಕಾರಿ ಸುನೀಲ್ ಕುಮಾರ್ ಸಿ. ಎಂ. ಉಪಸ್ಥಿತಿಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಇವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಔಷಧೋದ್ಯಮಿ ಹಾಗೂ ಸಹಕಾರಿಯ ಹಿರಿಯ ನಿರ್ದೇಶಕರಾದ ಜಿ. ವಿಶ್ವನಾಥ ಆಚಾರ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸಹಕಾರಿಯ ಆಡಳಿತ ಮಂಡಳಿಯ ಚುನಾಯಿತ ನೂತನ ಸದಸ್ಯರಾದ ಜಿ. ವೆಂಕಟೇಶ್ ನಾಯಕ್, ಜಿ. ವೆಂಕಟೇಶ ಶೆಣೈ, ಬಿ. ರಾಘವೇಂದ್ರ ಪೈ, ಜಿ. ಉದಯಶಂಕರ್ ರಾವ್, ವತ್ಸಲಾ ಎಸ್. ಕಾಮತ್, ಮಾಲಾ ಕೆ. ನಾಯಕ್, ನಾರಾಯಣ ಪೂಜಾರಿ, ಮಹಾಬಲ ಪೂಜಾರಿ, ಆನಂದ ಜಿ. ಹಾಗೂ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಗಣೇಶ್ ನಾಯಕ್ ಉಪಸ್ಥಿತರಿದ್ದರು. ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ, ಗಂಗೊಳ್ಳಿ…

Read More

ಕುಂದಾಪುರ: ನೂತನವಾಗಿ ಆರಂಭಗೊಂಡಿರುವ ಬಸ್ರೂರಿನ ಸಂತ ಫಿಲಿಪ್ ನೇರೀ ಸೆಂಟ್ರಲ್ ಸ್ಕೂಲಿನ ಕಟ್ಟಡದ ನಿರ್ಮಾಣಕ್ಕಾಗಿ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ಐವತ್ತು ಸಾವಿರ ರೂಪಾಯಿಗಳ ದೇಣಿಗೆ ನೀಡಲಾಯಿತು. ಬಸ್ರೂರಿನ ಸಂತ ಫಿಲಿಪ್ ನೇರೀ ಚರ್ಚಿನ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫಾಸ್ಕಲ್ ಡಿಸೋಜಾ ಅವರು ಚರ್ಚಿನ ಧರ್ಮಗುರುಗಳಾದ ವಂದನೀಯ ವಿಶಾಲ್ ಲೋಬೋ ಅವರಿಗೆ ದೇಣಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಧರ್ಮಗುರು ವಿಶಾಲ್ ಲೋಬೋ ಅವರು, ಸೊಸೈಟಿ ನೀಡಿದ ಹಣವನ್ನು ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗುವುದು. ನಮ್ಮ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಸೆಂಟ್ರಲ್ ಸ್ಕೂಲ್ ನಿರ್ಮಾಣವಾಗುತ್ತಿದ್ದು, ಇದರಿಂದ ಶೈಕ್ಷಣಿಕ ಉನ್ನತಿಗೆ ಪ್ರಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ ಎಂದರು. ಈ ಸಂದರ್ಭ ಉದ್ಯಮಿ, ಬಸ್ರೂರು ಶಾಖಾ ಸಭಾಪತಿ ಫಿಲಿಪ್ ಡಿಕೋಸ್ತಾ, ಬಸ್ರೂರಿನ ಶಾಖಾಧಿಕಾರಿ ಪ್ರದೀಪ್ ಡಿಕೋಸ್ತಾ ಉಪಸ್ಥಿತರಿದ್ದರು.

Read More

ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲಿ ಕಂಪ್ಯೂಟರ್ ವಿಭಾಗವು ಐಐಟಿ ಮದ್ರಾಸ್ ಇದರೊಂದಿಗೆ ಆಂಡ್ರೋಯ್ಡ್ ಅಪ್ಲಿಕೇಶನ್ ಆಪ್ ಡೆವಲೊಪ್‌ಮೆಂಟ್ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ್ ಶೆಟ್ಟಿ ಮಾತನಾಡಿ ಹೊಸ ತಂತ್ರಜ್ನಾನವನ್ನು ಹೆಚ್ಚೆಚ್ಚು ಉಪಯೋಗಿಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಕಾಲೇಜು ಸಹ ಅವಕಾಶವನ್ನು ಒದಗಿಸಿಕೊಡುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಹೊಸ ತಂತ್ರಜ್ನಾನವನ್ನು ಕಲಿತು ಆಧುನೀಕೃತ ತಾಂತ್ರಿಕ ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನಾರಾಯಣ ತಂತ್ರಿ, ಕಾರ್ಯಕ್ರಮ ಸಂಚಾಲಕರಾದ ಕೆ. ಗಣೇಶ್, ಸಂಪನ್ಮೂಲ ವ್ಯಕ್ತಿಗಳಾದ ಶಿವ ಶ್ರೀವಾಸ್ತವ ಮತ್ತು ಬಂಡನವಾಲ್ ಭಗವಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಆಪ್ ಜನರಲ್ ಎಜುಕೇಶನ್ ಇಅದರ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಮಾತನಾಡಿ ಪಠ್ಯಕ್ರಮದಲ್ಲಿರುವ ವಿಷಯವನ್ನು ಹೊರತುಪಡಿಸಿ ಆಧುನಿಕ ತಾಂತ್ರಿಕ ಜ್ನಾನವನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ್ ಶೆಟ್ಟಿ ಮಾತನಾಡಿ…

Read More

ಕುಂದಾಪುರ: ವಾದ್ಯ ಸಂಗೀತ ಕಲಾವಿದರಾಗಿ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಅಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾದ್ಯ ಸಂಗೀತ ಕಲಾವಿದ ಎಸ್.ಎಂ. ಗೋಪಾಲ ದೇವಾಡಿಗ ಅವರ ಸೇವೆ ಸ್ಮರಣೀಯವಾದುದು ಎಂದು ಭಾಂಡ್ಯದ ಕೆಂಜಿಮನೆ ಶ್ರೀ ಹಾಗುಳಿ ದೈವಸ್ಥಾನದ ಆಡಳಿತ ಮೊಕ್ತೇಸರ ಭಾಂಡ್ಯ ಸುಬ್ಬಣ್ಣ ಶೆಟ್ಟಿ ಹೇಳಿದರು. ಅವರು ಭಾಂಡ್ಯದ ಕೆಂಜಿಮನೆ ಶ್ರೀ ಹಾಗುಳಿ ದೈವಸ್ಥಾನದ ೧೮ನೇ ವರ್ಧಂತ್ಯುತ್ಸವದ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾದ್ಯ ಸಂಗೀತ ಕಲಾವಿದ ಎಸ್.ಎಂ. ಗೋಪಾಲ ದೇವಾಡಿಗ ಅವರನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು. ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಭಾಂಡ್ಯ ಸುಧಾಕರ ಶೆಟ್ಟಿ ಶುಭಾಶಂಸನೆಗೈದರು. ಪ್ರಥಮ ದರ್ಜೆ ಗುತ್ತಿಗೆದಾರ ಭಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಭಾಂಡ್ಯ ಗೋವಿಂದ್ರಾಯ ಪೈ ಉಡುಪಿ, ಭಾಂಡ್ಯ ಸಂಜೀವ ಪೈ ಮಣಿಪಾಲ, ಭಾಂಡ್ಯ ವೆಂಕಟೇಶ ಪೈ ಮಂಗಳೂರು, ಭಾಂಡ್ಯ ನರಸಿಂಹ ಪೈ ಕುಂದಾಪುರ, ಕರಿಯಣ್ಣ ಶೆಟ್ಟಿ ಕ್ಯಾಕೋಡು ಆಜ್ರಿ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಹೊಳ್ಮಗೆ ರಘುನಾಥ ಶೆಟ್ಟಿ…

Read More