ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಳಕ್ಕೆ ಮಂಗಳವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ನೀಡಿ ೧೦೦೮ ಕಾಯಿ ಗಣಹೋಮದಲ್ಲಿ ಪಾಲ್ಗೊಂಡರು. ಆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ ವಿಧಾನ ಮಂಡಲ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ನೂತನ ಸಚಿವರಿಗೆ ಇನ್ನೆರಡು ದಿನದಲ್ಲಿ ಖಾತೆ ಹಂಚಿಕೆ ಮಾಡಲಾಗುತ್ತದೆ. ಕರೋನಾ ವೈರಸ್ ಲಾಕ್‌ಡೌನ್ ಇನ್ನಿತರ ಕಾರಣದಿಂದ ಆರ್ಥಿಕ ಹಿನ್ನೆಡೆಯ ಕಾರಣ ಎಚ್ಚರಿಕೆಯಿಂದ ಇತಿಮಿತಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಳೆದ ಎರಡು ದಿನದಿಂದ ಲೋಕಕಲ್ಯಾಣ ಹಾಗೂ ರಾಜ್ಯದ ಮಳೆ ಬೆಳೆ ಸಂಮೃದ್ದಿಗಾಗಿ ಉಡುಪಿ ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸ ಮಾಡಿದ್ದು, ದೇವರ ಬಗ್ಗೆ ವಿಶ್ವಾಸ ಇರುವ ಸಮಾಜ ಬಂಧುಗಳು ನಾವಾಗಿರುವುದರಿಂದ ಜೀವನದ ಪ್ರತಿ ಹಂತದಲ್ಲಿಯೂ ಹೆಜ್ಜೆ ಹೆಜ್ಜೆಗಳಿಗೂ ಇರುವ ಸವಾಲಗಳನ್ನು ಎದುರಿಸಲು ದೇವರ ಮೊರೆ ಹೋಗುತ್ತೇವೆ. ವಿಘ್ನ ನಿವಾರಕನಾದ ಕುಂಭಾಸಿಯ ವಿನಾಯಕನಲ್ಲಿಯೂ ವಿಘ್ನ ನಿವಾರಣೆ ಮಾಡಿ ಲೋಕ ಕಲ್ಯಾಣಾವಾಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವತಿಯಿಂದ ಪ್ರಾಡಕ್ಟ್ ಡೆವಲಪ್ಮೆಂಟ್ & ಪೇಟೆಟಿಂಗ್ ವಿಷಯದ ಮೇಲೆ ವೆಬಿನಾರ್ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಮೇರಿಕಾದ ಕೂಪರ್ ಲೈಟಿಂಗ್ ಸೊಲ್ಯೂಷನ್ಸ್ ಕಂಪನಿಯ ಪ್ರವೀರ್ ಮಂಜಪ್ಪರವರು ಭಾಗವಹಿಸಿದ್ದರು. ತಮ್ಮದೇ ಕಂಪನಿಯ ಉತ್ಪನ್ನಗಳ ಅಭಿವೃದ್ಧಿ ಮತ್ತು ವಿನ್ಯಾಸಗಳ ಮಾಹಿತಿ ನೀಡುತ್ತಾ ಇಂಜಿನಿಯರ್ ಗಳಿಗೆ ಪೆಟೆಂಟ್ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು ಸಂಪನ್ಮೂಲ ವ್ಯಕ್ತಿಯೊಂದಿಗೆ ಪ್ರಶ್ನೆಯೊತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಮತ್ತು ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾರವರ ಉಪಸ್ಥಿತಿಯಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ ತಿಮ್ಮಪ್ಪ ಡಿ. ಎಸ್. ರವರು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಗ್ರಾಮ ಪಂಚಾಯತ್ ಗಂಗೊಳ್ಳಿ ಮತ್ತು ಅಂಗನವಾಡಿ ಕೇಂದ್ರ ಮೇಲ್‌ಗಂಗೊಳ್ಳಿ ಇವರ ಆಶ್ರಯದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಅನ್ನಪ್ರಾಶನ ಕಾರ್ಯಕ್ರಮ ಇಲ್ಲಿನ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿದರು. ಕುಂದಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶ್ವೇತಾ ಮಾಹಿತಿ ನೀಡಿ ಮಾತನಾಡಿದರು. ಅವಿನಾಶ್, ಪತ್ರಕರ್ತ ಬಿ.ರಾಘವೇಂದ್ರ ಪೈ, ಭಾರತೀಯ ವಿಕಾಸ ಟ್ರಸ್ಟ್‌ನ ಮುಖ್ಯ ವ್ಯವಸ್ಥಾಪಕ ಅರುಣ್ ಪಟವರ್ಧನ್ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್ ಸ್ವಾಗತಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನೌಷಧಿ ಅರಿವು ಕಾರ‍್ಯಕ್ರಮ ನಡೆಯಿತು. ಇಂಡಿಯನ್ ರೆಡ್‌ಕ್ರಾಸ್ ಕುಂದಾಪುರ ಘಟಕದ ಅಧ್ಯಕ್ಷರಾದ ಜಯಕರ ಶೆಟ್ಟಿ ಮಾತನಾಡಿ, ದುಬಾರಿ ಔಷಧಿ ಯಾವಾಗಲೂ ಗುಣ ಮಟ್ಟದ ಔಷಧಿಯಾಗಿರಬೇಕೆಂದಿಲ್ಲ, ಜನೌಷಧಿ ಕೇಂದ್ರದಲ್ಲಿ ಶೇಕಡಾ 50-90ರಷ್ಟು ಕಡಿಮೆ ದರದಲ್ಲಿ ದೊರೆಯುವ ಔಷಧಿಗಳು ಬೇರೆ ಕಡೆ ದೊರೆಯುವ ಔಷಧಿಗಳಿಗಿಂತ ಗುಣಮಟ್ಟದ್ದಾಗಿರುತ್ತದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಯುವ ರೆಡ್‌ಕ್ರಾಸ್ ಕುಂದಾಪುರ ಘಟಕದ ಖಜಾಂಚಿಗಳಾದ ಶಿವರಾಮ್ ಶೆಟ್ಟಿ, ಜನೌಷಧಿ ಉಸ್ತುವಾರಿಗಳಾದ ಗಣೇಶ್ ಆಚಾರ್, ಯುವ ರೆಡ್‌ಕ್ರಾಸ್ ಕುಂದಾಪುರದ ಕಾರ್ಯಕ್ರಮ ಸಂಯೋಜಕರಾದ ಸತ್ಯನಾರಾಯಣ ಪುರಾಣಿಕ್, ಕಾಲೇಜಿನ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ್ ಸ್ವಾಗತಿಸಿದರು. ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಹಸಂಯೋಜಕಿ ಸೌಮ್ಯ ಕುಂದರ್ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಥೊಲಿಕ್ ಸಭಾ ವಲಯ ಸಮಿತಿಯ ಆಶ್ರಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ವಿಭಾಗ ಉಡುಪಿ, ಇವರ ಸಂಯೋಕತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮತ್ತು ಆಯುರ್ವೇದ ಸೌಂದರ್ಯ ಮಾಹಿತಿ ಹಾಗೂ ತಪಾಸಣೆ ಶಿಬಿರವು ಕುಂದಾಪುರ ಸೈಂಟ್ ಮೇರಿಸ್ ಪಿ.ಯು.ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ವಲಯ ಪ್ರಧಾನ ಧರ್ಮಗುರು, ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ, ಭಾಹ್ಯ ಬೆಳಕು ಎಷ್ಟೊ ಮುಖ್ಯವೊ ಅಷ್ಟೆ ಅಂತರ್ಯದ ಬೆಳಕು ಅಷ್ಟೆ ಮುಖ್ಯ, ಸೌಂದರ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಅಂತರಾತ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ನೀವು ಸಮಾಜದ ಬೆಳಕಾಗಬೇಕು ಎಂದು ಯೇಸು ಸ್ವಾಮಿ ಹೇಳಿದ್ದು ನೆನಪಿಸಿಕೊಂಡು ನಾವು ಹಾಗೆ ನಡೆಯೋಣ, ಹಾಗೇಯೆ ಇಂತಹ ಶಿಬಿರಗಳಿಂದ ನಾವು ಆರೋಗ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶತಮಾನೋತ್ಸವದ ಸವಿನೆನಪಿಗಾಗಿ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶತಮಾನೋತ್ಸವ ಭವನ ಹಾಗೂ ರಂಗ ಮಂದಿರದ ಉದ್ಘಾಟನೆ ನಡೆಯಿತು. ಉದ್ಘಾಟಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟಿ, ಸರಕಾರ ಶಾಲೆಗಳಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಿದರಷ್ಟೇ ಸಾಲದು. ಮಕ್ಕಳ ದಾಖಲಾತಿ ಕೂಡ ಪ್ರತಿವರ್ಷ ಹೆಚ್ಚಳವಾಗಬೇಕು. ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗಬೇಕು. ಶತಮಾನೋತ್ಸವನ್ನು ಆಚರಿಸಿಕೊಳ್ಳುತ್ತಿರುವ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ತಾಲೂಕಿನಲ್ಲೇ ಅತ್ಯುತ್ತಮವಾದ ಶಾಲೆಯಾಗಿದ್ದು, ಬೈಂದೂರು ವಲಯದಲ್ಲಿ ಅತಿ ಹೆಚ್ಚು ಮಕ್ಕಳ ದಾಖಲಾತಿ ಹೊಂದಿರುವ ಎರಡನೇ ದೊಡ್ಡ ಸರಕಾರಿ ಶಾಲೆಯಾಗಿರುವುದು ಪ್ರಶಂಸನಾರ್ಹವಾದುದು ಎಂದು ಹೇಳಿದರು. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ದಾನಿಗಳ ಸಹಾಯದಿಂದ ಸುಸಜ್ಜಿತವಾದ ಶಾಲಾ ಕೊಠಡಿ, ವಿಸ್ತಾರದ ರಂಗ ಮಂದಿರ, ಸ್ಮಾರ್ಟ್ ಕ್ಲಾಸ್, ಶೌಚಾಲಯ, ಆವರಣ ಗೋಡೆ, ಸಭಾಂಗಣ ನವೀಕರಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದ್ದು, ಎಲ್ಲರ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಯುಕ್ತಾ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಮತ್ತು ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾರವರು ಯುಕ್ತ ಹೊಳ್ಳರವರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಿದರು. ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಕಾರ್ತಿಕ್ ಇವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಂಧರ್ಭದಲ್ಲಿ ಕಾಲೇಜಿನ ಡೀನ್, ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಲಕ್ಷ್ಮೀ ಸ್ವಾಗತಿಸಿ, ಡಿಯೋನ ವಂದಿಸಿದರು, ವರ್ಷ ಮತ್ತು ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಟಕಕಾರ, ಸಾಹಿತಿ, ಶಿಕ್ಷಕ ಕೇಶವ ಶ್ಯಾನುಭಾಗ್ ಅವರು ಬರೆದ ಮಕ್ಕಳ ನಾಟಕಗಳ ಗುಚ್ಚ ‘ಅಮೃತ ಸಂಜೀವಿನಿ’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಮಾರಣಕಟ್ಟೆಯ ವಾಸುಕಿ ಸಭಾಭವನದಲ್ಲಿ ಜರುಗಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳ ಭಾವನೆಗಳನ್ನು ಅರಳಿಸಿ, ಅವರನ್ನು ಸೃಜನಶೀಲರನ್ನಾಗಿಸಲು ನಾಟಕಗಳು ಸಹಕಾರಿಯಾಗಿವೆ. ಒತ್ತಡದೊಂದಿಗೆ ಕೇವಲ ವಿಷಯಗಳ ಅಧ್ಯಯನಕ್ಕಷ್ಟೇ ಸೀಮಿತಗೊಳ್ಳುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ. ವಿವಿಧ ಕಥಾವಸ್ತುಗಳನ್ನು ಒಳಗೊಂಡಿರುವ ಕಿರುನಾಟಕಗಳನ್ನು ಸೇರಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವ ಕೃತಿಕಾರರ ಶ್ರಮ ನಿಜವಾಗಲೂ ಶ್ಲಾಘನೀಯ. ಮಕ್ಕಳ ಸಾಹಿತ್ಯವನ್ನು ಮಕ್ಕಳ ಮನಸ್ಸಿನ ಭಾವನೆ ಹಾಗೂ ಪರಿಧಿಯ ಅರಿವಿನಲ್ಲಿ ಬರೆದಾಗ, ಅದು ಅವರಲ್ಲಿ ಹೊಸಚಿಂತನೆ ಬೆಳೆಯಲು ಪ್ರೇರಪಣೆ ನೀಡುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಕಸಾಪ ಘಟಕದ ಅಧ್ಯಕ್ಷ ಡಾ. ಕಿಶೋರ ಕುಮಾರ ಶೆಟ್ಟಿ ವಹಿಸಿದ್ದರು. ಖ್ಯಾತರಂಗ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಸಂಕ್ರಾಂತಿಯ ನೇತೃತ್ವದಲ್ಲಿ ಮಾರಣಕಟ್ಟೆಯಲ್ಲಿ ಜಾತ್ರೆ ಪ್ರಯುಕ್ತ ನಡೆದ ಪಾವಂಜೆ ಮೇಳದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಭಾಗವತ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸನ್ಮಾನಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಅವಿಭಜಿತ ದ.ಕ ಜಿಲ್ಲೆಯ ಯಕ್ಷಗಾನ ಸ್ಪೂರ್ತಿ ಪಟ್ಲ ಸತೀಶ ಶೆಟ್ಟರು. ಅವರ ಧ್ವನಿಯಲ್ಲಿರುವ ವಿಶೇಷತೆಯ ಸಳೆತದಿಂದ ಪಟ್ಲರ ಅಭಿಮಾನಿಗಳು ಒಂದುಗೂಡುತ್ತಾರೆ ಎಂದು ಹೇಳಿದರು. ಉದ್ಯಮಿ ಗುರ್ಮಿ ಸುರೇಶ ಮಾತನಾಡಿ, ಪಟ್ಲ ಸತೀಶ ಶೆಟ್ಟರು ನಾಡಿನ ಹೆಮ್ಮೆಯ ಯಕ್ಷಗಾಯಕ. ಶ್ರೀಮಂತಿಕೆಗಿಂತ ನೆಮ್ಮದಿಯ ಬದುಕು ಶ್ರೀಮಂತ ಎನ್ನುವುದನ್ನು ತನ್ನ ಗಾಯನದ ಮೂಲಕ ತೋರಿಸಿಕೊಟ್ಟವರು ಎಂದರು. ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ, ಯಕ್ಷಗಾನಕ್ಕೆ 500 ವರ್ಷಗಳ ಇತಿಹಾಸವಿದೆ. ಇನ್ನೂ500 ವರ್ಷವಾದರೂ ಯಕ್ಷಗಾನಕ್ಕೆ ಯಾವುದೇ ಕುಂದು ಬರದು. ಯಕ್ಷಗಾನದ ಶಕ್ತಿ ಅಂತಹದ್ದು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಟ್ಲ ಸತೀಶ ಶೆಟ್ಟಿ, ಅಭಿಮಾನಿಗಳ ಪ್ರೀತಿಯ ಮಧ್ಯೆ ಮಾತು ಮೌನವಾಗುತ್ತದೆ. ಕಲಾವಿದರಿಗೆ ಇಂತಹ ಅಭಿಮಾನವೇ ಸಂಪತ್ತು. ನಿಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಜಿಕೆಡಿಎಚ್ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರಿಗಾಗಿ ಹಮ್ಮಿಕೊಂಡ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ‘ಫಿಶರ್‌ಮ್ಯಾನ್ ಟ್ರೋಫಿ -2021’ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿತು. ಉಡುಪಿ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಯಶಪಾಲ ಸುವರ್ಣ ಅಧ್ಯಕ್ಷತೆಯಲ್ಲಿ ಕುಂದಾಪುರ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ ಪಂದ್ಯಾಟ ಉದ್ಘಾಟಿಸಿದರು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯ ನಾಗರಾಜ ಖಾರ್ವಿ, ಗಂಗೊಳ್ಳಿ ಜಿಕೆಡಿಎಚ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹರೀಶ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು. ನಡೆದ ಅಂತಿಮ ಹಣಾಹಣಿಯಲ್ಲಿ ಮುದ್ರಿಮಾರಿಕಾಂಬ ಕಂಚುಗೋಡು ತಂಡವು ಮಂಗಳಗೌರಿ ಕಂಚುಗೋಡು ತಂಡವನ್ನು ಸೋಲಿಸಿ ಫಿಶರ್‌ಮ್ಯಾನ್ ಟ್ರೋಫಿ-2021ನ್ನು ತನ್ನದಾಗಿಸಿಕೊಂಡಿತು. ಅರುಣ್ ಖಾರ್ವಿ ಸರಣಿ ಶ್ರೇಷ್ಠ ಹಾಗೂ ನಿರಂಜನ ಖಾರ್ವಿ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದುಕೊಂಡರು.…
