Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕಿವಿಗೆ ತಂಪೆರೆಯುವ, ಮನಕ್ಕೆ ಮುದ ನೀಡುವ ಉತ್ತರ ಕರ್ನಾಟಕ ಶೈಲಿಯ ಜಾನಪದ ಗಾಯನವು ಜಾಂಬೂರಿಯಲ್ಲಿ ಗಮನ ಸೆಳೆಯಿತು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಜರುಗುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಅಂಗವಾಗಿ ಗುರುವಾರ ‘ಕೃಷಿಸಿರಿ ವೇದಿಕೆ’ಯಲ್ಲಿ ಮೂಲಕ ಶರಣಪ್ಪ ವಡಿಗೇರಿ ಬಳಗದ ‘ಜಾನಪದ ಗಾಯನ’ ನೆರೆದಿದ್ದವರನ್ನು ಮುದಗೊಳಿಸಿದರು. ಜಾನಪದ ಗಾಯನದ ಜೊತೆಗೆ ವೈಚಾರಿಕ ಸ್ಫೂರ್ತಿ ನೀಡುವ ಅವರ ಸಹಜ ಮಾತುಗಳು ಚಿಂತನೆಯನ್ನೂ ದಾಟಿಸುವಲ್ಲಿ ಯಶಸ್ವಿಯಾದವು. ಸತತ ಒಂದು ಗಂಟೆಯ ಅವಧಿಯಲ್ಲಿ ಐದು ಹಾಡುಗಳನ್ನು ಹಾಡಿದ ಅವರು ಗಾಯನದ ನಡುವೆ ಮೌಲಿಕ ಮಾತುಗಳನ್ನಾಡಿದರು. ಆ ಮಾತುಗಳಿಗೆ ಪೂರಕವಾದ ತಾತ್ವಿಕ ಚಿಂತನೆಯನ್ನು ಹೊಳೆಸುವಂಥ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ‘ಯಾರ ಮನಿ ಯಾರ ಹೊಲ’ ಎಂಬ ಗೀತೆಯುಜನಪ್ರಿಯ ಶೈಲಿಯ ಭಾವುಕತೆಯ ಮೂಲಕ ಅಲ್ಲಿದ್ದವರನ್ನು ಸೆಳೆಯಿತು. ಈ ಹಾಡಿನಲ್ಲಿ ಮನುಷ್ಯನ ಸ್ವಾರ್ಥಬುದ್ಧಿಯಕುರಿತುತೀಕ್ಷ್ಣಟೀಕೆಇತ್ತು. ಬದಲಾದಜಗತ್ತಿನಲ್ಲಿ ಮನುಷ್ಯ ಸಂಬಂಧಗಳು ಸ್ವಾರ್ಥದಕಾರಣಕ್ಕಾಗಿಯೇ ಅರ್ಥ ಕಳೆದುಕೊಳ್ಳುತ್ತಿರುವ ಕೊರಗಿನಧ್ವನಿ ಇತ್ತು. ಮನುಷ್ಯನುಇನ್ನಷ್ಟು ಉದಾತ್ತಗೊಳ್ಳಬೇಕಾದ ಅಗತ್ಯತೆಯನ್ನುಗಾಯನದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಭಾರತ್ ಸೌಟ್ಸ್-ಗೈಡ್ಸ್ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಭಾಗವಾಗಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜಾಂಬೂರಿಯ ಎರಡನೇ ದಿನವಾದ ಗುರುವಾರ 8 ಕಡೆಗಳಲ್ಲಿ ಸುಮಾರು 5,000 ಸ್ಕೌಟ್ಸ್-ಗೈಡ್ಸ್ ಪ್ರಶಿಕ್ಷಾರ್ಥಿಗಳು ಹಾಗೂ ಇನ್ನಿತರ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ಕೈಗೊಂಡರು. ವಿದ್ಯಾರ್ಥಿಗಳ ಜತೆಗೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸ್ಥಳೀಯ ಶಾಲಾ ಕಾಲೇಜುಗಳ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಸ್ವಯಂಸೇವಕರು ಹಾಗೂ ಸಾರ್ವಜನಿಕರು ಸ್ವಚ್ಛತೆಯಲ್ಲಿ ಭಾಗವಹಿಸಿದರು. ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಂ. ಆರ್, ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ಅಕ್ಷಯ್ ಜೈನ್, ನಿತಿನ್, ಕುಮಾರಸ್ವಾಮಿ, ದೀಪಕ್ ಕೊಳಕೆ, ಮೂಸಾ ಶರೀಫ್, ನಿತಿನ್ ಪೂಜಾರಿ, ಅಮರ್ ಕೋಟೆ, ತನ್ವಿ ರೈ, ರಂಜಿತಾ ಆಚಾರ್ಯ, ಸುಧಾಕರ್ ಪೂಂಜಾ ಇನ್ನಿತರರು ಈ ಸ್ವಚ್ಚತಾ ಅಭಿಯಾನದ ನೇತೃತ್ವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ವಿವಿಧೆಡೆ ಓಡಾಡಿ ದಣಿದವರಿಗೆ ಅಲ್ಲಿ ಉತ್ಸಾಹದ ಚಿಲುಮೆಯಿತ್ತು. ದಣಿದಿದ್ದ ಮುಖಗಳಲ್ಲಿ ನಗುವಿನ ಛಾಯೆಯಿತ್ತು. ಅಲ್ಲೆಲ್ಲಾ ನಗುವಿನ ಉತ್ಸಾಹ. ಚಪ್ಪಾಳೆಯ ಸುರಿಮಳೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಎರಡನೇ ದಿನ ಗುರುವಾರ ನುಡಿಸಿರಿ ಆಯೋಜನೆಗೊಂಡಿದ್ದ ‘ಹಾಸ್ಯ ಲಹರಿ’ದ ಪರಿಯಿದು. ಖ್ಯಾತ ಹಾಸ್ಯಕಲಾವಿದರಾದ ಮಹಾಂತೇಶ್ ಹಡಪದ ಮತ್ತು ಸುನೀಲ್ ಗುಡಗುಂಟಿ ಮಠ್ ಅವರ ಹಾಸ್ಯ ನಗುವಿನ ಅಲೆಯನ್ನು ಮೂಡಿಸಿತು. ಮಹಾಂತೇಶ್ ಅವರ ಹಾಸ್ಯದ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಗಿಡ್ಡನೆಯ ವ್ಯಕ್ತಿಗಳಿಗಾಗಬಹುದಾದ ಉಪಯೋಗಗಳನ್ನು ಹಾಸ್ಯಮಯವಾಗಿ ಹೇಳಿದರು. ನಂತರ ಕೋಳಿ, ಕಪ್ಪೆ, ಬೆಕ್ಕು, ನಾಯಿ, ಎಮ್ಮೆ, ಕೋಣ, ಗಿಳಿ ಮತ್ತು ಹಂದಿ ಮುಂತಾದ ಪ್ರಾಣಿಗಳ ನಡುವಿನ ಕಾಲ್ಪನಿಕ ಸಂಭಾಷಣೆ ಜೊತೆಗೆ ಆಂಬುಲೆನ್ಸ್, ಅಗ್ನಿ ಶಾಮಮಕದಳದ ವಾಹನ, ಪೊಲೀಸ್ ವಾಹನದ ಸದ್ದುಗಳನ್ನು ಮಿಮಿಕ್ರಿಯ ಮೂಲಕ ಹಾಸ್ಯಾತ್ಮಕವಾಗಿ ಪ್ರಸ್ತುತಪಡಿಸಿದರು. ‘ದವಾಖಾನೆ ಎಲ್ಲಿ ಬರ್‍ತದ?’ ಎಂಬ ಪ್ರಶ್ನೆಗೆ ‘ಅದು ಎಲ್ಲೂ ಬರಲ್ಲ ನೀವೇ ಅಲ್ಲಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟೀಯ ಜಾಂಬೂರಿಯು ಹಲವಾರು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದೆ. ವಿಜ್ಙಾನ ಮೇಳದ ವೇದಿಕೆಯು ಹೊಸ ಹೊಸ ತಂತ್ರಜ್ಙಾನವನ್ನು ಪರಿಚಯ ಮಾಡುತ್ತಿದೆ. ವಿಜ್ಞಾನ ಮೇಳದಲ್ಲಿ ದಾವಣಗೆರೆಯ ನಾಲ್ವರು ವಿದ್ಯಾರ್ಥಿಗಳು ಮಹಿಳೆಯರ ಸುರಕ್ಷತೆಗಾಗಿ ‘ಫಿಯರ್‌ಲೆಸ್ ಬೆಲ್ಟ್’ ಅನ್ನು ಪರಿಚಯಿಸಿದ್ದಾರೆ. ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯವನ್ನು ತಡೆಯುವ ಸಲುವಾಗಿ ದಾವಣಗೆರೆಯ ಜಿ.ಎಂ.ಐ.ಟಿ ಕಾಲೇಜಿನ ತೃತೀಯ ವರ್ಷದ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್ ವಿದ್ಯಾರ್ಥಿಗಳಾದ ಕಾರ್ತಿಕ್ ಎಸ್.ಆರ್, ದರ್ಶನ್ ಜಿ.ಪಿ, ಜಾಫರ್ ಎಸ್ ಮತ್ತು ದೀಪ್ತಿ, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷಾ ಬೆಲ್ಟ್ ಮಾದರಿಯನ್ನು ರೂಪಿಸಿದ್ದಾರೆ. ಬ್ಯಾಟರಿ ಮೂಲಕ ಚಾಲ್ತಿಯಾಗುವ ಈ ಬೆಲ್ಟ್‌ನಲ್ಲಿ ಮಹಿಳೆಯರ ರಕ್ಷಣೆಗಾಗಿ ಕರೆಂಟ್ ಶಾಕ್ ಮತ್ತು ಜಿ.ಪಿ.ಎಸ್ ಅಳವಡಿಕೆ ಮಾಡಲಾಗಿದೆ. ಮಹಿಳೆಚಿiರಿಗೆ ಅಪಾಯ ಎದುರಾದ ಸಂದರ್ಭದಲ್ಲಿ ಬಟನ್ ಒತ್ತಿದರೆ ದೌರ್ಜನ್ಯ ಎಸಗಲು ಯತ್ನಿಸಿದ ವ್ಯಕ್ತಿಯ ಮೇಲೆ ೫ ವೋಲ್ಟ್ ಕರೆಂಟ್ ಪ್ರವಹಿಸುವ ಮೂಲಕ ಮಹಿಳೆಚಿiರಿಗೆ ಸ್ವರಕ್ಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಲಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಎರಡನೇ ದಿನವಾದ ಗುರುವಾರ ‘ಡಾ.ವಿ.ಎಸ್.ಆಚಾರ್ಯ ಸಭಾಂಗಣ’ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆಯನ್ನು ಚಿತ್ರಿಸುವ ‘ಮಂಜುನಾದ’ ಗೀತಗಾಯನದಿಂದ ಕೇಳುಗರನ್ನು ತನ್ಮಯಗೊಳಿಸಿದವರು ಸುರತ್ಕಲ್‌ನ ‘ಮಣಿಕೃಷ್ಣ ಸ್ವಾಮಿ ಅಕಾಡೆಮಿ’ ಗಾಯಕಿಯರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೊಂಡ ‘ಮಂಜುನಾದ’ ಗೀತಕೃತಿಯನ್ನು ಆಧರಿಸಿ ಗಾಯಕಿಯರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ಒಟ್ಟು ಏಳು ಕಲಾವಿದರ ತಂಡ ಏಳು ಹಾಡುಗಳನ್ನು ಪ್ರಸ್ತುತಪಡಿಸಿತು. ಮೊದಲಿಗೆ ‘ಪ್ರಥಮದಲಿ ವಂದಿಸುವೆನು’ ಎಂದು ವಿಘ್ನವಿನಾಶಕ ಪ್ರಥಮ ಪೂಜಿತ ಗಣೇಶನನ್ನು ಪ್ರಾರ್ಥಿಸುವ ಮೂಲಕ ಗಾಯನವನ್ನು ಆರಂಭಿಸಲಾಯಿತು. ತದನಂತರದಲ್ಲಿ ರೇವತಿ ರಾಗದ ‘ಶ್ರೀ ಧರ್ಮಸ್ಥಳ ಕ್ಷೇತ್ರಾಧಿಪತಿ’, ತೋಡಿ ರಾಗದ ‘ಶ್ರೀ ಮಂಜುನಾಥ ಸ್ವಾಮಿನಮಃ’, ಪಟದೀಪ ರಾಗದ ‘ಎನಿತು ಜನುಮದ ಪುಣ್ಯ ಫಲವೋ’ ಎಂಬ ಗಾಯನವನ್ನು ಸಾದರ ಪಡಿಸಿದರು. ಯಕ್ಷಗಾನದ ಪ್ರಸಂಗದಲ್ಲಿ ಹಾಡಲ್ಪಡುವ ದ್ವಿಜಾವಂತಿ ರಾಗ ಸಂಯೋಜನೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕಲಾಕಾರನಿಗೆ ಇಂತಹದ್ದೇ ಕ್ಯಾನ್ವಾಸ್ ಬೇಕೆಂದಿಲ್ಲ. ಕಲೆಯಲ್ಲಿ ಒಲವಿದ್ದರಾಯ್ತಷ್ಟೇ. ಅಂತಹದ್ದೊಂದು ಒಲವಿಗೆ ಹಣ್ಣುಗಳ ಮೂಲಕವೇ ಮೂರ್ತರೂಪ ದೊರೆತದ್ದು ಕೃಷಿಸಿರಿಯಲ್ಲಿ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಕರಕುಶಲ ವಸ್ತುಪ್ರದರ್ಶನದಲ್ಲಿ ಖ್ಯಾತನಾಮರ ಚಿತ್ರಗಳು ಹಣ್ಣು-ಹಂಪಲುಗಳಲ್ಲಿ ಒಡಮೂಡಿದ್ದವು. ಸುಭಾಷ್‌ಚಂದ್ರ ಭೋಸ್, ಸರ್.ಎಂ. ವಿಶ್ವೇಶ್ವರಯ, ಕುವೆಂಪು, ದ.ರಾ. ಬೇಂದ್ರೆ, ಸಂಗೊಳ್ಳಿ ರಾಯಣ್ಣ, ಪೇಜಾವರ ಶ್ರೀಗಳು, ಪುನೀತ್ ರಾಜ್‌ಕುಮಾರ್ ಚಿತ್ರಗಳು ವಿಶೇಷ ಎನ್ನಿಸಿದವು. ಅಲ್ಲದೇ ನವಿಲು, ಮೀನು, ಬಾತುಕೋಳಿ, ಮಂಗ, ಪಕ್ಷಿಗಳ ವಿನ್ಯಾಸಗಳೂ ಹಣ್ಣು-ಹಂಪಲುಗಳ ರೂಪದಲ್ಲಿ ಕಾಣಿಸಿಕೊಂಡವು. ಹಣ್ಣುಗಳ ವಿನೂತನ ವಿನ್ಯಾಸಗಳಲ್ಲಿ ಶಿವ, ಪಾರ್ವತಿ, ಗಣೇಶ ದೇವರು ಹಾಗೂ ಕಾಂತಾರದ ಪಂಜುರ್ಲಿ ದೈವ, ಕಂಬಳ ದೃಶ್ಯಗಳು ಗಮನಸೆಳೆದವು. ಜೊತೆಗೆ ಒಂದೇ ಜಾತಿಯ ವಿವಿಧ ರೀತಿಯ ತೆಂಗಿನಕಾಯಿಗಳು ಮತ್ತು ಹಣ್ಣುಗಳೂ ಅಲ್ಲಿದ್ದವು. ಅಲ್ಲದೇ ಒಂದೇ ಜಾತಿಯ ಹಲವು ವಿವಿಧ ಹಣ್ಣುಗಳಾದ ಸೀತಾ ಫಲ, ರಾಮ ಸೀತಾ ಫಲ, ಲಕ್ಷ್ಮಣ ಫಲ, ತೆಂಗಿನ ಕಾಯಿಯ ವಿವಿಧ ಜಾತಿಯನ್ನು ಅಲ್ಲಿ ಪ್ರದರ್ಶಿಸಿರುವುದು ನೋಡುಗರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಬಾಳೆ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ ಒಂದಿಲ್ರ್ಲೆಂದು ಪ್ರಭೇದ ಒಬ್ಬೊಬ್ಬರಿಗೆ ರುಚಿಸುತ್ತದೆ. ಇಂಥ ನೂರಾರು ಪ್ರಬೇಧದ ಬಾಳೆಹಣ್ಣುಗಳು ಒಂದೇ ಕಡೆಗೆ ನೋಡಲು ಸಿಕ್ಕರೆ ಹೇಗಿರುತ್ತೆ… ಮೂಡಬಿದಿರೆ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಕೃಷಿಸಿರಿಯಲ್ಲಿ ಹತ್ತು-ಹಲವು ತಳಿಗಳ ಬಾಳೆಹಣ್ಣುಗಳು ಹಣ್ಣುಪ್ರಿಯರನ್ನು ಸೆಳೆಯುತ್ತಿದೆ. ಕೇರಳ ಮೂಲದ ವಿನೋದ್ ಅವರು ಕೃಷಿಮೇಳದ ಸ್ಟಾಲ್‌ನಲ್ಲಿ ನೂರಕ್ಕೂ ಹೆಚ್ಚು ಪ್ರಬೇಧದ ಬಾಳೆ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಪಿಡಿ ಮೂಂಥಂ, ಬಾರ್ಗಿ, ಕೋಟಿಯ, ಮೈಸೂರ್ ಬಾಳೆ, ಲೇಡಿಸ್ ಫಿಂಗರ್ ಬಾಳೆ, ಸಾವಿರ ಫಿಂಗರ್ ಬಾಳೆ, ಬಸರೈ, ಸಿವಿ ರೋಜ್, ಚೋರಾ ಪೋವನ್, ಮತ್ತಿ, ಎನ್ ಸಿ ಆರ್ ೧೭, ಕಾವೇರಿ ಕಲ್ಕಿ, ಯಂಗಂಬಿ, ಹೋಂಡ, ಹೀಗೆ ಸಂಪ್ರದಾಯಿಕ ದೇಶಿ ವೀದೇಶಿ ಬಾಳೆ ಹಣ್ಣುಗಳು ಎಲ್ಲರನ್ನು ಆಕರ್ಷಿಸಿತು. ಒಂದೇ ಗೋನೆಯಲ್ಲಿ ಸಾವಿರ ಹಣ್ಣುಗಳು ಬಿಡುವ ಸಾವಿರ ಫಿಂಗರ್ ಬಾಳೆಗೊನೆ ಪ್ರದರ್ಶನದಲ್ಲಿ ಗಮನ ಸೆಳೆಯಿತು. ವರದಿ: ಐಶ್ವರ್ಯ ಕೋಣನ, ದ್ವಿತೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ದ್ವಂದ್ವಾರ್ಥಗಳಿಲ್ಲದೆಯೂ ಹಾಸ್ಯವನ್ನು ಧ್ವನಿಸಬಹುದು. ಸದಭಿರುಚಿಯ ಹಾಸ್ಯವು ಸಾಮಾಜಿಕ ನ್ಯೂನತೆಗಳನ್ನು ಮೀರಿ ಬದಲಾಗುವ ಸಾಮೂಹಿಕ ಮನಸ್ಥಿತಿಯನ್ನು ಸೃಷ್ಟಿಸುತ್ತದೆ ಎಂಬುದನ್ನು ಖ್ಯಾತ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ಅವರ ’ನಗೆಹಬ್ಬ’ ತಂಡವು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ’ನುಡಿಸಿರಿ’ ವೇದಿಕೆಯಲ್ಲಿ ಶುಕ್ರವಾರ ನಡೆಸಿಕೊಟ್ಟ ಮೂಲಕ ನಿರೂಪಿಸಿತು. ನಗೆಹಬ್ಬ ತಂಡದ ರಿಚರ್ಡ್ ಲೂಯಿಸ್, ಮಿಮಿಕ್ರಿ ದಯಾನಂದ್ ಮತ್ತು ಕಿರ್ಲೋಸ್ಕರ್ ಸತ್ಯ ಅವರು ನಗೆಯ ಅಲೆಯನ್ನು ಸೃಷ್ಟಿಸಿದ್ದಲ್ಲದೇ ಬದುಕಿನ ಅನೇಕ ಮೌಲಿಕ ಅಂಶಗಳನ್ನು ಮನದಟ್ಟು ಮಾಡಿಕೊಟ್ಟರು. ಭಾಷೆಯೇ ಸಕಲ ಕಾರ್ಯಕ್ಕೂ ಮೂಲ ಸಾಧನ. ಭಾಷಾಶುದ್ಧಿ ಕುರಿತಾದ ಪರಿಕಲ್ಪನೆ ಇಲ್ಲವಾದಲ್ಲಿ ಜನರನ್ನು ತಲುಪುವುದು ಕಷ್ಟ. ಜೊತೆಗೆ ಭಾಷಾಭಿಮಾನ ಮತ್ತು ಭಾಷೆಯನ್ನು ಬಳಸಿ, ಬೆಳೆಸುವದೇ ನಿಜವಾದ ಶ್ರೀಮಂತಿಕೆ ಎನ್ನುವ ಅಮೂಲ್ಯ ಸಂದೇಶವನ್ನು ನಗೆಚಟಾಕಿಯ ಮುಖಾಂತರ ರಿಚರ್ಡ್ ಲೂಯಿಸ್ ಸಾರಿದರು. ಮಿಮಿಕ್ರಿ ದಯಾನಂದ್ ಅವರು ವಿವಿಧ ವ್ಯಕ್ತಿತ್ವಗಳ ಮಿಮಿಕ್ರಿಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ಕೆ.ಎಲ್.ಇ ಪದವಿ ಪೂರ್ವ ಕಾಲೇಜು ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಣಮ್ಯ ಹಾಗೂ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಧಾರಿಣಿ ಕೆ. ಎಸ್ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಿರಿಮಂಜೇಶ್ವರ ಗ್ರಾಮದ ಕೊಡೇರಿಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭವು ಡಿ.೧೭ರ ಶನಿವಾರದಂದು ಕೊಡೇರಿ ಶಾಲಾ ಆವರಣದಲ್ಲಿ ಬಹು ವಿಜೃಂಭಣೆಯಿಂದ ಜರಗಿತು. ಪೂರ್ವಾಹ್ನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಧ್ವಜಾರೋಹಣಗೈದು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಉದ್ಘಾಟಿಸಿ ವಾರ್ಷಿಕೋತ್ಸವಕ್ಕೆ ಶುಭ ಕೋರಿದರು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸುರೇಶ ಎಚ್. ಖಾರ್ವಿ ಅಧ್ಯಕ್ಷತೆ ವಹಿಸಿದ್ದರೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೇಖರ ಖಾರ್ವಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಆನಂದ ಪೂಜಾರಿ ಕೊಡೇರಿ, ಕೃಷ್ಣ ಖಾರ್ವಿ, ರಮೇಶ ಖಾರ್ವಿ, ನೇತ್ರಾವತಿ, ಶಶಿಕಲಾ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಕಾರಂತ, ಉದ್ಯಮಿ ಕೆ. ವಿ. ಕಾರಂತ, ವಿಶ್ವನಾಥ ಪೂಜಾರಿ, ಹರಿದಾಸ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರಣ್ ಶಂಕರ್ ಇವರು ಎಲ್ಲಾ ವಿದ್ಯಾರ್ಥಿಗಳಿಗೂ ವಾಟರ್…

Read More