ಕುಂದಾಪುರ: ಊರ ಅಭಿವೃದ್ಧಿ ಮತ್ತು ಲೋಕಕಲ್ಯಾಣಾರ್ಥವಾಗಿ ಊರ ಜಾತ್ರೆಯನ್ನು ನಡೆಸಬೇಕು. ಐತಿಹಾಸಿಕ ಜಾತ್ರೆ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕೊಡಿಹಬ್ಬ ಕರಾವಳಿ ಜಿಲ್ಲೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಪುನರುತ್ಥಾನಕ್ಕೆ ಹೊಸ ಆಯಾಮ ನೀಡಿದೆ. ಇಂತಹ ಮಹತ್ವದ ಬಹು ದೊಡ್ಡ ಹಬ್ಬವನ್ನು ಸಾಂಗವಾಗಿ ನೆರವೇರಿಸುವಲ್ಲಿ ಸರ್ವಧರ್ಮದವರ ಸಹಭಾಗಿತ್ವ ಮತ್ತು ಸಹಕಾರ ಅವಶ್ಯಕವಾಗಿದೆ ಎಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಾಲಯ ಪ್ರಧಾನ ಅರ್ಚಕ ಪ್ರಸನ್ನ ಕುಮಾರ ಐತಾಳ ಹೇಳಿದರು. ಅವರು ಕೋಟೇಶ್ವರ ಕೋಡಿಹಬ್ಬದ ಆಹ್ವಾನ ಪತ್ರಿಕೆ ದೇವಳ ವಠಾರದಲ್ಲಿ ಬಿಡುಗಡೆ ಮಾಡಿ, ಮಾತನಾಡಿದರು. ಕೊಡಿಹಬ್ಬದ ಪೂರ್ವಭಾವಿ ತಯಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ದೇವಾಲಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್ ಆಗಮೋಕ್ತ ಪೂಜೆ, ವಿಧಿ ವಿಧಾನಗಳು, ಇಲಾಖೆ ಸಹಕಾರದ ಬಗ್ಗೆ ವಿವರಿಸಿದರು. ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಮಾತನಾಡಿ ನಾನಾ ಕಡೆಗಳಿಂದ ಜಾತ್ರೆಗೆ ಆಗಮಿಸುವ ವಾಹನಗಳಿಗೆ ನಗರ ಪ್ರವೇಶದ ಉತ್ತರ ಮತ್ತು ದಕ್ಷಿಣ ವೈ ಜಂಕ್ಷನ್‌ಗಳಲ್ಲಿ ಹಾಗೂ ಹಾಲಾಡಿ ಜಂಕ್ಷನ್ ನಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಹೊರ…
Author: ನ್ಯೂಸ್ ಬ್ಯೂರೋ
ಕುಂದಾಪುರ: ಪ್ರತಿ ವರ್ಷದ ಆಶ್ವೀಜ ಪೂರ್ಣಿಮೆಯಂದು ಮುಂಬೈ ವೈದಿಕ ವೃಂದದವರಿಂದ ನಡೆಸಲ್ಪಡುವ ಲಘು ವಿಷ್ಣು ಹವನವು ಈ ವರ್ಷ ಚಾತುರ್ಮಾಸ ನಡೆಯುತ್ತಿರುವ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯಿತು. ಮುಂಬೈಯಿಂದ ಆಗಮಿಸಿದ 15 ಮಂದಿ ವೈದಿಕರು ವಿಧಿ ವಿಧಾನಗಳನ್ನು ನೆರವೇರಿಸಿದರು. ಕಾಶೀ ಮಠ ಕಿರಿಯ ಯತಿಗಳಾದ ಶ್ರೀಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪೂರ್ಣಾಹುತಿ ನಡೆಸಿದರು.
ಕುಂದಾಪುರ: ಇಂದು ವಿಶ್ವಮಾನ್ಯತೆಯನ್ನು ಪಡೆದಿರುವ ಯೋಗವನ್ನು ನಮ್ಮ ದಿನನಿತ್ಯದ ಜೀವನಕ್ರಮದಲ್ಲಿ ರೂಢಿಸಿಕೊಂಡು ಆರೋಗ್ಯದಾಯಕ ಜೀವನ ನಡೆಸುವ ಜೊತೆಗೆ ಇಂತಹ ಯೋಗ ಸ್ಪರ್ಧೆಯ ಆಯೋಜನೆಯಿಂದ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಅ.೩೦ರಂದು ರೋಟರಿ ವಲಯ 1ರ ಸದಸ್ಯರಿಗೆ ಏರ್ಪಡಿಸಿದ ಯೋಗ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯದ ಕಾರ್ಯದರ್ಶಿ ಸುದರ್ಶನ ಕೆ.ಎಸ್., ಜೋನಲ್ ಲೆಫ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಕ್ರೀಡೋತ್ಸವ ಸಂಯೋಜಕ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಖ್ಯಾತ ನ್ಯಾಯವಾದಿ ಟಿ. ಬಿ. ಶೆಟ್ಟಿ, ಉದ್ಯಮಿ ಪ್ರಶಾಂತ ತೋಳಾರ್ ಯೋಗ ಸ್ಪರ್ಧಾಳುಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯದರ್ಶಿ ಸಂತೋಷ ಕೋಣಿ ವಂದಿಸಿದರು.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಕಲಾ ಪ್ರೋತ್ಸಾಹಕ ಕರುಣಾಕರ ಪೈ ಹೆಮ್ಮಾಡಿ, ನಿವೃತ್ತ ಹಿರಿಯ ಶಿಕ್ಷಕಿ ಶ್ರೀಮತಿ ಸೆವರಿನ್ ಮೆಂಡೋನ್ಸಾ ಅವರನ್ನು ಸನ್ಮಾನಿಸಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ಸದಾನಂದ ಸೇರುಗಾರ್ ಉಪ್ಪಿನಕುದ್ರು, ಗೊಂಬೆಯಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯು.ವಾಮನ್ ಪೈ, ಕಲಾವಿದ ಮಂಜುನಾಥ ಮೈಪಾಡಿ ಉಪಸ್ಥಿತರಿದ್ದರು. ಅನಂತರ ಶ್ರೀ ದುರ್ಗಾಪರಮೇಶ್ವರಿ ಬಾಲಕಿಯರ ಯಕ್ಷಗಾನ ತಂಡ, ಹೆಮ್ಮಾಡಿ ಇವರಿಂದ ಮಧುರ ಮಹೇಂದ್ರ ಯಕ್ಷಗಾನ ಬಯಲಾಟ ಕಿಕ್ಕಿರಿದು ಸೇರಿದ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ: ಜೇಸಿಐ ಕುಂದಾಪುರದ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷ ದಿನೇಶ್ ಗೋಡೆ ಅವರಿಗೆ ’ಕಮಲಪತ್ರ’ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೇಸಿ ವಲಯ ಉಪಾಧ್ಯಕ್ಷ ಸುಹಾನ್ ಸುಸ್ತಾನ, ವಲಯ ನಿರ್ದೇಶಕ ರತ್ನಾಕರ ಕೆ., ಡಾ| ಕೃಷ್ಣರಾವ್ ಎಚ್. ವಿ., ನಿವೃತ್ತ ಸೈನಿಕ ಅನಂತಪದ್ಮನಾಭ, ಜೇಸಿಐ ಕುಂದಾಪುರದ ಅಧ್ಯಕ್ಷ ಚಂದ್ರ ಇಂಬಾಳಿ, ಕಾರ್ಯದರ್ಶಿ ಅವಿನಾಶ್ ರೈ, ನಿಕಟಪೂರ್ವಾಧ್ಯಕ್ಷ ರವಿರಾಜ್ ಆಚಾರ್, ಸಪ್ತಾಹ ಸಭಾಪತಿ ವಿಷ್ಣು ಕೆ. ಬಿ, ಜೇಸಿರೆಟ್ ಅಧ್ಯಕ್ಷೆ ರೂಪಾ ಚಂದ್ರ ಇಂಬಾಳಿ, ಜೆಜೇಸಿ ಅಧ್ಯಕ್ಷೆ ದೀಕ್ಷಿತಾ ಗೋಡೆ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪುರ: ನಾವಡರಕೇರಿ ನಿವಾಸಿ ವಿ. ಪರಮೇಶ್ವರ ನಾವಡ(80) ಸ್ವಗೃಹದಲ್ಲಿ ಅ.29ರಂದು ನಿಧನರಾದರು. ಮೃತರು ಕೃಷಿಕರಾಗಿದ್ದು ಪರಿಸರದಲ್ಲಿ ಪೌರೋಹಿತ್ಯವನ್ನು ನಡೆಸಿಕೊಂಡು ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಗೆಲಾಕ್ಸಿ ಸ್ಪೋರ್ಟ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ನಾವಡ ಸೇರಿದಂತೆ ನಾಲ್ವರು ಪುತ್ರರು, ಇರ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕರ್ನಾಟಕ ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ. ಕಿಶೋರ್‌ಕುಮಾರ್, ಭಾರತೀಯ ಜೇಸಿಐನ ವಲಯದ ಪದಾಧಿಕಾರಿಗಳು, ಹತ್ತು ಹಲವು ಸಂಘ ಸಂಸ್ಥೆ, ಸಂಘಟನೆಯ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದರು.
ಗಂಗೊಳ್ಳಿ: ರಾಮಾಯಣ ಮತ್ತು ಮಹಾಭಾರತ ಎರಡೂ ಕೃತಿಗಳೂ ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಅತ್ಯಂತ ಅಮೋಘವಾಗಿ ಮತ್ತು ಸಮರ್ಥವಾಗಿ ಜಗತ್ತಿಗೆ ಸಾರಿ ಹೇಳಿದಂತಹ ಅತ್ಯಮೂಲ್ಯ ಕೃತಿಗಳು.ಅವುಗಳು ಭಾರತದ ಹೆಮ್ಮೆ. ಅವುಗಳನ್ನು ಸೃಷ್ಟಿಸಿದ ಮಹಾತ್ಮರನ್ನು ನಾವು ಸ್ಮರಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಎಂದು ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ವಾಲ್ಮೀಕಿ ಜಯಂತಿಯ ಅಂಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಅಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ವಾಲ್ಮೀಕಿ ಸ್ಮರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದರು. ನಾವು ವಾಲ್ಮೀಕಿ ಮಹರ್ಷಿಗಳ ಮೂಲಗಳ ಬಗೆಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರು ರಾಮಾಯಣದಲ್ಲಿ ಪ್ರತಿಪಾದಿಸಿರುವ ಉತ್ತಮ ವಿಚಾರಗಳ ಬಗೆಗೆ ಆಸಕ್ತಿಯನ್ನು ತೋರಬೇಕಿದೆ ಜೊತೆಗೆ ಆ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ‍್ಯ ನಿರ್ವಹಿಸಬೇಕಿದೆ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕಿವೆ.ವಾಲ್ಮೀಕಿಯನ್ನು ಒಂದು ನಿರ್ದಿಷ್ಠ ವರ್ಗಕ್ಕೆ ಅಥವಾ ಧರ್ಮಕ್ಕೆ ಸೇರಿದ ವ್ಯಕ್ತಿಯೆಂದು ಮಾತ್ರ ಪರಿಗಣಿಸುವುದು ನಾವು ಅವರಿಗೆ ಮಾಡುವ ಅವಮಾನ. ಎಂದು ಅವರು ಹೇಳಿದರು. ಸರಸ್ವತಿ…
ಗಂಗೊಳ್ಳಿ: ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ (ರಿ),ಅಮೃತಾ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹನ್ನೊಂದನೆ ವರುಷದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ‍್ಯಕ್ರಮವು ಇತ್ತೀಚೆಗೆ ಮೇಲ್ ಗಂಗೊಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಸಭಾ ಭವನದಲ್ಲಿ ನಡೆಯಿತು. ಮಂಕಿ ಗುಜ್ಜಾಡಿಯ ಕೃಷ್ಣಮೂರ್ತಿ ಭಟ್ ಮತ್ತು ಶ್ರೀಧರ ಭಟ್ ಇವರುಗಳು ಪೌರೋಹಿತ್ಯ ವಹಿಸಿದ್ದರು. ಸ್ಥಳೀಯ ಭಕ್ತಾಧಿಗಳಿಂದ 26 ಕಲಶ ಪೂಜೆ ನಡೆಯಿತು. ವರದಿ : ನರೇಂದ್ರ ಎಸ್ ಗಂಗೊಳ್ಳಿ
ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯತ್‌ನಲ್ಲಿ ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ ನಡೆಯಿತು. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕುಂದಾಪುರ ತಾಲೂಕು ಇದರ ಪ್ರಭಾರ ಸಹಾಯಕ ನಿರ್ದೇಶಕ, ವಂಡ್ಸೆ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್.ವಿ.ಇಬ್ರಾಹೀಂಪುರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ ಆತ್ರಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಉದಯ ಕೆ.ನಾಯ್ಕ್, ಗುಂಡು ಪೂಜಾರಿ ಹರವರಿ, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾ.ಪಂ.ಕಾರ್ಯದರ್ಶಿ ಶಂಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.
ಕುಂದಾಪುರ: ಚಿಕ್ಕನ್‌ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಸಂದರ್ಭ ವಿದಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ. ಕಿಶೋರ್ ಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲಿಜ್ದೇವಳದ ಪ್ರದಾನ ಅರ್ಚಕ ಗಣಪತಿ ಸುವರ್ಣ, ಜಲಜ ಸುವರ್ಣ, ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ರವಿರಾಜ್ ರವಿರಾಜ್ ಖಾರ್ವಿ, ಕೆ. ಬಿ. ಪ್ರಕಾಶ್, ಸೀತಾರಾಮ ಹೇರಿಕುದ್ರು, ವೀಣಾ ಪ್ರಕಾಶ್, ಕೃಷ್ಣಮೂರ್ತಿ, ರಾಜಾ ಮಠದಬೆಟ್ಟು, ಶ್ರೀಧರ ಸುವರ್ಣ, ಚರಣ ಸುವರ್ಣ ಇನ್ನಿತರರು ಉಪಸ್ಥಿತರಿದ್ದರು.
