ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಾವ ವ್ಯಕ್ತಿಗೆ ನಾಟಕ, ಸಂಗೀತ, ಸಾಹಿತ್ಯ, ಕಲೆ ಮತ್ತು ಪುಸ್ತಕಗಳ ಆಸಕ್ತಿ ಇಲ್ಲವೋ ಆತ ಮನುಷ್ಯನಾಗಿರಲು ಸಾಧ್ಯವಿಲ್ಲ. ಬದುಕಿನ ಅವಕಾಶಗಳನ್ನು ಅರಸಿ ಎಲ್ಲೆಯೋ ನೆಲೆ ಕಾಣಲು ಹೊರಟರೂ ಅಂತಿಮವಾಗಿ ಕಲೆ ಹಾಗೂ ಸಾಹಿತ್ಯ ಮನುಷ್ಯನ ಕೈಹಿಡಿದು ನಡೆಸುತ್ತದೆ. ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ ಲಾವಣ್ಯದ ರಂಗವೈವಿಧ್ಯ-2021 ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೈಂದೂರಿನಲ್ಲಿ ರಂಗಾಸಕ್ತರು, ಕಲಾಭಿಮಾನಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇಲ್ಲಿ ವರ್ಷವಿಡೀ ವಿವಿಧ ಸ್ಥರದ ರಂಗ ಚಟುವಟಿಕೆಗಳು ನಡೆಯುತ್ತಿರುವ ಈ ಪ್ರದೇಶವನ್ನು ರಂಗ ಕಾಶಿ ಎಂದರೂ ಅತಿಶಯೋಕ್ತಿ ಅಗಲಾರದು. ಈ ಸಮಾಜವನ್ನು ನೋಡಿ ಅದನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರಿಯಬೇಕು ಎಂಬ ಮಹದಾಸೆ ಹೊಂದಿರುವ ಸೃಜನಶೀಲ ಪ್ರೇಕ್ಷಕವೃಂದ ಈ ಭಾಗದಲ್ಲಿದೆ. ಕಳೆದ 44 ವರ್ಷಗಳಿಂದ ಒಂದು ಕಲಾಸಂಸ್ಥೆ ಸದೃಢವಾಗಿರುವುದಕ್ಕೆ ಅದರಲ್ಲಿರುವ ಎಲ್ಲಾ ಸದಸ್ಯರು ರಂಗಭೂಮಿ ಹಾಗೂ ರಂಗಪ್ರಕಾರಗಳ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅನಾರೋಗ್ಯದಿಂದ ಬಳಲುತಿದ್ದ 6 ವರ್ಷದ ರಿಷಿಕ್ ಪಡುಕೋಣೆ ಮಗುವಿನ ಚಿಕಿತ್ಸೆಗೆ ‘ದೈವಭಕ್ತರು’ ವಾಟ್ಸಾಪ್ ಗ್ರೂಪ್ನಿಂದ 52,000 ಸಾವಿರ ಚೆಕ್ ನೀಡಿ ಧನಸಹಾಯ ಮಾಡಿದರು. ಪೂಜ್ಯ ಗುರುಗಳು ಚಿಕಿತ್ಸೆ ವೆಚ್ಚವನ್ನು ಕಡಿಮೆ ಮಾಡಿಸುದಾಗಿ ಭರವಸೆ ನೀಡಿದರು. ಧನಸಹಾಯಕ್ಕೆ ಕೈಜೋಡಿಸಿದ ಗ್ರೂಪಿನ ಎಲ್ಲಾ ಸದ್ಯಸರಿಗೆ ಧನ್ಯವಾದ ತಿಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಯೋಗ ಬೃಹ್ಮ ಶ್ರೀ ಋಷಿ ಪ್ರಭಾಕರ ಗುರೂಜಿಯವರ ಆಶೀರ್ವಾದದೊಂದಿಗೆ, ಯೋಗ ಶಿಕ್ಷಕರಾದ ಆಚಾರ್ಯ ಎಮ್ ಗೋಪಾಲಕೃಷ್ಣ ಭಟ್ ಗುರೂಜಿ ಶಿವಮೊಗ್ಗ ಮತ್ತು ಆಚಾರ್ಯ ಕೇಶವ ಗುರೂಜಿ ಬೆಳ್ನಿ ಇವರ ಮಾರ್ಗದರ್ಶನದಲ್ಲಿ ಸಿದ್ದ ಸಮಾಧಿ ಯೋಗ ಬೈಂದೂರು ವಲಯದ ಧ್ಯಾನಿಗಳಿಂದ ಕೊಲ್ಲೂರಿಗೆ ಪಾದಯಾತ್ರೆ ನಡೆಸಿದರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಅರ್ಚಕರು ಅರ್ಚನೆ ಮಂಗಳಾರತಿ ಮಾಡುವುದರೊಂದಿಗೆ ಪಾದಯಾತ್ರೆಗೆ ಚಾಲನೆ ನೀಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಪಾದಯಾತ್ರೆಗೆ ಸಾಥ್ ನೀಡಿದರು. ಬೆಳಿಗ್ಗೆ 9ಗಂಟೆಗೆ ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಭಜನೆ ಸಂಕೀರ್ತನೆಗಳು ನಡೆದೆವು. ಅಲ್ಲಿಯೇ ಯಾತ್ರಿಗಳು ಬೆಳಿಗ್ಗೆಯ ಉಪಹಾರವನ್ನು ಮುಗಿಸಿ ಮತ್ತೆ ಭಜನೆ ಸಂಕೀರ್ತನೆಗಳ ಮೂಲಕ ಯಾತ್ರೆ ಮುಂದುವರೆಸಿದರು. ಮದ್ಯಾಹ್ನ 12:30 ಹೊತ್ತಿಗೆ ಹಾಲ್ಕಲ್ ನಲ್ಲಿರುವ ಸೌಪರ್ಣಿಕಾ ನದಿ ತಟದಲ್ಲಿ ವಿಶ್ರಮಿಸಿದರು. ಅಲ್ಲಿಯೂ ಕೂಡ ಗುರೂಜಿಯವರ ಮಾರ್ಗದರ್ಶನದಲ್ಲಿ ಭಜನೆ ಸಂಕೀರ್ತನೆ ಸತ್ಸಂಗಗಳು ನಡೆದೆವು. ಸಂಜೆ 6 ಗಂಟೆಗೆ ಕೊಲ್ಲೂರು ತಲುಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಕುಂದಾಪುರ ತಾಲೂಕಿನ ನಗರ ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6 (ಎ) ಮತ್ತು 6(ಬಿ) ಅಡಿಯಲ್ಲಿ 28 ಪ್ರಕರಣ ದಾಖಲಿಸಿ 2800 ರೂ. ದಂಡ ವಸೂಲಿ ಮಾಡಲಾಯಿತು. ಅದರಂತೆ ಸೆಕ್ಷನ್ 4, 6 (ಎ) ಮತ್ತು 6(ಬಿ) ನಾಮಫಲಕಗಳನ್ನು ಸದರಿ ದಾಳಿಯಲ್ಲಿ ವಿತರಿಸಲಾಯಿತು. ದಾಳಿಯಲ್ಲಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ್, ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮೇಶ್ ಕುಮಾರ್, ಹಿರಿಯ ಆರೋಗ್ಯ ಸಹಾಯಕ ರಮೇಶ್ ಶೆಟ್ಟಿ, ಜಿಲ್ಲಾ ರಾಷ್ಟ್ರೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ, ಎನ್.ಟಿ.ಸಿ.ಪಿ. ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ, ಪೊಲೀಸ್ ಠಾಣೆಯ ಆರಕ್ಷಕರಾದ ಜಗದೀಶ್ ಮತ್ತು ಬೇಬಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಗೀತವನ್ನು ಆಸ್ವಾದಿಸುವ ಹವ್ಯಾಸವಿದ್ದರೆ ಧೀರ್ಘಾವಧಿಯಲ್ಲಿ ಗುಣವಾಗಬೇಕಾದ ಕಾಯಿಲೆಗಳು ಅಲ್ಪಾವಧಿಯಲ್ಲಿ ಗುಣವಾಗುತ್ತದೆ. ಹಾಗಾಗಿ ಸಂಗೀತವೆನ್ನುವುದು ಸಕಲ ಕಾಯಿಲೆಗೂ ಮದ್ದು ಎಂದು ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಹೇಳಿದರು. ಅವರು ಕಲಾಕ್ಷೇತ್ರ ಕುಂದಾಪುರ ವತಿಯಿಂದ ಹಮ್ಮಿಕೊಳ್ಳಲಾದ ಆಹ್ವಾನಿತ ಹವ್ಯಾಸಿ ಹಾಡುಗಾರರ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಲಾಕ್ಷೇತ್ರ ಕುಂದಾಪುರ ಕಛೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೀರ್ಮಾನಕಾರರಾಗಿ ಹಿರಿಯ ಕಲಾವಿದ ಬಸ್ರೂರು ಭಾಸ್ಕರ ಆಚಾರ್ಯ ಹಾಗೂ ಚೇಂಪಿಯ ವೆಂಕಟೇಶ್ ಭಟ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದಂತ ವೈದ್ಯರಾದ ಡಾ. ರಾಜಾರಾಮ್ ಶೆಟ್ಟಿ, ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಮತ್ತು ಸದಸ್ಯರಾದ ಪ್ರವೀಣ್ ಕುಮಾರ್ ಟಿ. ದಾಮೋದರ್ ಪೈ, ರಾಜೇಶ್ ಕಾವೇರಿ, ಶ್ರೀಧರ್ ಸುವರ್ಣ, ಸಾಯಿನಾಥ್ ಶೇಟ್, ರಾಮಚಂದ್ರ ಬಿ.ಎನ್ ಹಾಗೂ ಡಾ. ಹರಿಪ್ರಸಾದ್ ಶೆಟ್ಟಿ ಹಿರಿಯರಾದ ಮೋಹನ್ ಸಾರಂಗ್, ಭವಾನಿ ಗಂಗಾಧರ್, ಜಯಂತಿ ಸಾಲಿಗ್ರಾಮ, ಪ್ರಕಾಶ್ಚಂದ್ರ ಹೆಗ್ಡೆ, ರಮೇಶ್ ಬಿ. ಶೇಖರ್ ಕೆ.ಜಿ, ಶಂಕರನಾರಾಯಣ , ಪ್ರಶಾಂತ ಸಾರಂಗ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನ ಜೀವಶಾಸ್ತ್ರ ವಿಬಾಗದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸರೋಜ ಎಂ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ಮೈಸೂರು ವಿಶ್ವವಿದ್ಯಾನಿಲಯದ ಡಾ.ಜಿ.ವಿ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ಲೈಟೋಪ್ಲಾಂಕ್ಟೊನ್ ಸ್ಟಡೀಸ್ಆಫ್ ಸೆಲೆಕ್ಟೆಡ್ ಪ್ರೆಶ್ ವಾಟರ್ ಲೇಕ್ಸ್ ಆಫ್ಉಡುಪಿ ಡಿಸ್ಟ್ರಿಕ್ಟ್ (Phytoplankton Studies of Selected Fresh Water Lakes of Udupi District) ಎಂಬ ಮಹಾಪ್ರಬಂಧವನ್ನು ಸಸ್ಯಶಾಸ್ತ್ರ ವಿಷಯದಲ್ಲಿ ಪಿಹೆಚ್.ಡಿ ಪದವಿಗಾಗಿ ಮಂಡಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಹಯೋಗದೊಂದಿಗೆ ‘ಲಿವಿಂಗ್ ವಿದ್ ಸ್ನೇಕ್ಸ್ – ಹಾವು ಕಡಿತ ತಗ್ಗಿಸುವ ಯೋಜನೆ’ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ “ಹಾವು ಮತ್ತು ನಾವು” ಇದರ ಪ್ರಾಜೆಕ್ಟ್ ಮ್ಯಾನೇಜರ್ ಸ್ಪೂರ್ತಿ ಶೆಟ್ಟಿ ಹಾಗೂ ಹಾವು ಕಡಿತದ ಶಿಕ್ಷಣತಜ್ಞ ವಿಪಿನ್ ರಾಯ್, ಹಾವು ಕಡಿತದಿಂದ ಪಾರಾಗುವ ಮಾರ್ಗಗಳು, ಕಡಿತಕ್ಕೊಳಗಾದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ವಿಧಾನಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ಒಟ್ಟು ಎರಡು ಅವಧಿಗಳಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲ ಅವಧಿಯಲ್ಲಿ, ಮಾನವ ಹಾಗೂ ಹಾವಿನ ನಡುವಿನ ಸಂಘ ಮತ್ತು ಹಾವು ಕಡಿತದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ಸರಿಯಾದ ವಿಧಾನಗಳನ್ನು ಸ್ಪೂರ್ತಿ ಶೆಟ್ಟಿ ಪ್ರಾಯೋಗಿಕವಾಗಿ ತಿಳಿಸಿದರು. ಅದಲ್ಲದೆ, ಭಾರತದಲ್ಲಿ ಕಂಡುಬರುವ ವಿಷಪೂರಿತ ಹಾವುಗಳ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಎರಡನೇ ಅವಧಿಯನ್ನು ವಿಪಿನ್ ರಾಯ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸಹಕಾರಿ ಸಂಸ್ಥೆಗಳು ಬೆಳೆಯಬೇಕೆಂದರೆ ಅವು ಸದಸ್ಯರಿಗೆ, ಗ್ರಾಹಕರಿಗೆ ಅಗತ್ಯ ಸೇವೆಗಳನ್ನು ಸುಲಭದಲ್ಲಿ ಒದಗಿಸಬೇಕು. ಅದರ ವ್ಯವಹಾರಗಳು ಪ್ರಾಮಾಣಿಕ ಮತ್ತು ಪಾರದರ್ಶಕ ಆಗಿರಬೇಕು’ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್.ರಾಜೇಂದ್ರಕುಮಾರ್ ಹೇಳಿದರು. ಅವರು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ನ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿ ಪ್ರಧಾನ ಕಚೇರಿ ಮತ್ತು ಮೂರು ಶಾಖೆಗಳ ಮೂಲಕ ಕುಂದಾಪುರ ತಾಲ್ಲೂಕಿನ ಜನರಿಗೆ ಸೇವೆ ನೀಡುತ್ತಿರುವ ಬ್ಯಾಂಕ್, ಮುಂದಿನ 10 ವರ್ಷಗಳಲ್ಲಿ ಇನ್ನೂ 10 ಶಾಖೆಗಳನ್ನು ತೆರೆದು, ರೂ. 100 ಕೋಟಿ ಠೇವಣಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು. ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಗಂಗೊಳ್ಳಿಯಲ್ಲಿ ವ್ಯವಹಾರ ನಡೆಸುವ ಎಲ್ಲ ಆರ್ಥಿಕ ಸಂಸ್ಥೆಗಳು ಉತ್ತುಂಗಕ್ಕೇರಿವೆ. ಸೇವಾ ಸಹಕಾರಿ ಬ್ಯಾಂಕ್ ಅದೇ ದಾರಿಯಲ್ಲಿದೆ ಎಂದರು. ಬ್ಯಾಂಕ್ನಅಧ್ಯಕ್ಷ ಆನಂದ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಎಂ. ಎನ್.ರಾಜೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಶ್ವಕರ್ಮ ಜನಾಂಗ ಪಂಚ ಕಸುಬುಗಳನ್ನು ಮಾಡುವ ಶ್ರೇಷ್ಠ ಜನಾಂಗ. ಬ್ರಾಹ್ಮಣ್ಯ ಮರೆತು, ವಿಶ್ವಕರ್ಮರು ಎಸ್ಟಿ ಮೀಸಲಾತಿಗೆ ಸೇರುವ ಬಗ್ಗೆ ಚಿಂತನೆ ಸಮಾಂಜಸವಲ್ಲ. ವಿಶ್ವಕರ್ಮ ಸಮಾಜ ಮುಂದೆಯೂ ಕೂಡ ವಿಶ್ವಕರ್ಮ ಸಮಾಜವಾಗಿ ಉಳಿಯಬೇಕು. ವಿಶ್ವಕರ್ಮರು ಹಿಂದಿನಿಂದಲೂ ತಮ್ಮ ಜನಾಂಗದ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಹೋರಾಟ ಮಾಡುತ್ತ ಬಂದ ಸಮಾಜ ಎಂದು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀ ಹೇಳಿದರು. ಅವರು ಶ್ರೀ ಕ್ಷೇತ್ರ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದ ಪ್ರತಿಷ್ಠಾ ವರ್ಧಂತ್ಯುತ್ಸವ ಧಾರ್ಮಿಕ ಸಭೆ ಹಾಗೂ ಶ್ರೀ ಕಾಳಿಕಾಂಬಾ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಕೊಡಮಾಡಿದ ವಿದ್ಯಾರ್ಥಿ ವೇತನ ಮತ್ತು ಸನ್ಮಾನ ಸಭೆಯಲ್ಲಿ ಮಾತನಾಡಿದರು. ವಿಶ್ವಕರ್ಮ ಸಮಾಜ ವಿದ್ಯಾರ್ಥಿಗಳಿವೆ ವಿದ್ಯಾರ್ಥಿ ವೇತನ ನೀಡುದರ ಜತೆಯಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ಸುಸಜ್ಜಿತವಾದ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಿ, ವಿದ್ಯಾರ್ಜನೆ ನೀಡುವ ಕೆಲಸವಾಗಬೇಕು. ಉಪ್ರಳ್ಳಿಯ ಶ್ರೀ ಕಾಳಿಕಾಂಬಾ ಎಜ್ಯುಕೇಶನಲ್ ಟ್ರಸ್ಟ್ ವಿದ್ಯಾರ್ಥಿ ವೇತನದ ಜತೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅತ್ಯಂತ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಕಲಾ ಸಂಘಟನೆ ಮಾಡಿ ಅದನ್ನು ಯಶಸ್ವಿಯಾಗಿ ಮುನ್ನೆಡೆಸುವುದು ಸುಲಭದ ಮಾತಲ್ಲ. ನಾಟಕ ಅಭಿರುಚಿಯ ಪ್ರೇಕ್ಷಕರ ಸೃಷ್ಠಿ ಮಾಡುವ ಜತೆಗೆ ನಾಟಕ ವಿಮರ್ಶೆ ಮಾಡುವ ಸೃಜನತ್ಮಕ ಪ್ರೇಕ್ಷಕರ ಹಿಂದೆ ಲಾವಣ್ಯದ ಕ್ರೀಯಾಶೀಲತೆಯಿದೆ ಎಂದು ಮಾಜಿ ಶಾಸಕ ಕೆ. ಲಕ್ಷ್ಮಿನಾರಾಯಣ ಹೇಳಿದರು. ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ ಲಾವಣ್ಯದ ೪೪ನೇ ವಾರ್ಷಿಕೋತ್ಸವ ಹಾಗೂ ರಂಗವೈವಿಧ್ಯ – 2021 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಾಲ್ಕು ದಶಕಗಳ ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡ ಲಾವಣ್ಯ ಮತ್ತೊಂದು ತಲೆಮಾರಿನ ಕಲಾವಿದರ ಹುಟ್ಟಿಗೂ ಕಾರಣವಾಗಿದ್ದು, ಕಲಾದೇವತೆಗೆ ಕೊಟ್ಟ ಕೊಡುಗೆಯಾಗಿದೆ. ಇಂದು ರಾಜ್ಯಾಂದತ ಬೈಂದೂರು ಹೆಸರು ಹೇಳಿದರೆ ಲಾವಣ್ಯದ ಮೂಲಕ ಗುರುತಿಸಿವಷ್ಟು ಸಂಸ್ಥೆ ಎತ್ತರಕ್ಕೆ ಬೆಳೆದಿದೆ ಎಂದರು. ಲಾವಣ್ಯದ ಅಧ್ಯಕ್ಷ ಹರೇಗೋಡು ಉದಯ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ ಪುರಸ್ಕೃತ ಉಪ್ಪುಂದ ಶ್ರೀನಿವಾಸ ಪ್ರಭು, ಜಿಲ್ಲಾ ರಾಜ್ಯೋತ್ಸವ…
